10-12 ದಿನಗಳಲ್ಲಿ ಸೋಂಕಿತರೆಲ್ಲ ಬಿಡುಗಡೆ; ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ
Team Udayavani, Jun 9, 2020, 7:57 AM IST
ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಬಾಧಿತರಾಗಿ ಆಸ್ಪತ್ರೆಯಲ್ಲಿರುವ ಎಲ್ಲರೂ 10-12 ದಿನಗಳಲ್ಲಿ ಗುಣಮುಖರಾಗಿ ಬಿಡುಗಡೆ ಗೊಳ್ಳಲಿದ್ದಾರೆ ಮತ್ತು ಸದ್ಯವೇ ಕೋವಿಡ್ ಮುಕ್ತ ಜಿಲ್ಲೆಯಾಗಿ ರೂಪುಗೊಳ್ಳಲಿದೆ ಎಂದು ಗೃಹ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸೋಮವಾರ ಜಿ.ಪಂ. ಸಭಾಂಗಣದಲ್ಲಿ ಪ್ರಗತಿ ಪರಿಶೀಲನ ಸಭೆ ನಡೆಸಿದ ಬಳಿಕ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇದುವರೆಗೆ ಒಟ್ಟು 274 ಜನರು ಬಿಡುಗಡೆಗೊಂಡಿದ್ದು, 672 ಜನರೂ ಸದ್ಯವೇ ಬಿಡು ಗಡೆಗೊಳ್ಳುವರು. ಅವರಿಗೆ ಬೇಕಾದ ಎಲ್ಲ ಆರೋಗ್ಯ ಸಂಬಂಧಿ ಸೌಲಭ್ಯಗಳನ್ನು ಒದಗಿಸಲಾಗು ವುದು ಎಂದರು.
ಇದುವರೆಗಿನ 946 ಪಾಸಿಟಿವ್ ಪ್ರಕರಣಗಳಲ್ಲಿ ಕೇವಲ 17 ಮಂದಿಗೆ ಮಾತ್ರ ಕೋವಿಡ್ ಲಕ್ಷಣಗಳಿವೆ ಎಂದರು.
ಜಿಲ್ಲಾಡಳಿತಕ್ಕೆ ಮೆಚ್ಚುಗೆ ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಕ್ವಾರಂಟೈನ್ ಕೇಂದ್ರಗಳಲ್ಲಿ 12,530 ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಕ್ವಾರಂಟೈನ್‌ಗೆ ಒಳಗಾದ ಎಲ್ಲರ ಮಾದರಿಗಳನ್ನೂ ಸಂಗ್ರಹಿಸಿದ ಉಡುಪಿ ರಾಜ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದೆ. ದೊಡ್ಡ ಸಂಖ್ಯೆಯಲ್ಲಿ ಬಂದ ಹೊರ ರಾಜ್ಯದವರನ್ನು ಉತ್ತಮ ರೀತಿಯಲ್ಲಿ ಜಿಲ್ಲಾಡಳಿತ ನಿಭಾಯಿಸಿದೆ ಎಂದು ಮೆಚ್ಚುಗೆ ಸೂಚಿಸಿದರು.
ಉಡುಪಿ ಜಿಲ್ಲಾಸ್ಪತ್ರೆಯಲ್ಲಿ 10-12 ದಿನಗಳಲ್ಲಿ ಕೋವಿಡ್ ಪರೀಕ್ಷಾ ಕೇಂದ್ರ ಕಾರ್ಯಾರಂಭಗೊ ಳ್ಳಲಿದೆ ಎಂದು ಸಚಿವ ಬೊಮ್ಮಾಯಿ ತಿಳಿಸಿದರು.
ಸಿಬಂದಿ ನೇಮಕಕ್ಕೆ ಕ್ರಮ
ಕಾರ್ಕಳ ಮತ್ತು ಕುಂದಾಪು ರದ ಆಸ್ಪತ್ರೆಗಳಿಗೂ ಕೋವಿಡ್ ಆಸ್ಪತ್ರೆಗೆ ಇರುವಂತೆ ಸಿಬಂದಿಯ ನೇಮಕಕ್ಕೂ ಆರೋಗ್ಯ ಸಚಿವರಲ್ಲಿ ಮಾತನಾಡಿ ಆದೇಶ ಹೊರಡಿಸಲಾಗುವುದು ಎಂದರು.
ನರೇಗಾ: ಉತ್ತಮ ಸಾಧನೆ
ನರೇಗಾ ಕಾಮಗಾರಿಗಳಲ್ಲಿ ಹೋದ ವರ್ಷಕ್ಕಿಂತ ಈ ವರ್ಷ ಹೆಚ್ಚಿನ ಪ್ರಗತಿಯಾಗಿದೆ. ಕಳೆದ ವರ್ಷ 77,190 ಮಾನವ ದಿನಗಳ
ಕೆಲಸ ನಡೆದರೆ, ಈ ವರ್ಷ ಇದು ವರೆಗೆ 2.1 ಲಕ್ಷ ಮಾನವ ದಿನಗಳ ಕೆಲಸ ನಡೆದಿದೆ ಎಂದರು.
ಜಿಲ್ಲೆಯಲ್ಲಿ 1,640 ಮನೆಗ ಳನ್ನು ಹಿಂದಿನ ಸರಕಾರ ಬ್ಲಾಕ್ ಮಾಡಿತ್ತು. ನಮ್ಮ ಸರಕಾರ ಅವು ಗಳನ್ನು ಅನ್‌ಬ್ಲಾಕ್ ಮಾಡಿದೆ. ಮನೆ ನಿರ್ಮಾಣಕ್ಕೆ ಇನ್ನು ತೊಡಕಿಲ್ಲ ಎಂದರು.
ಶಾಸಕರಾದ ರಘುಪತಿ ಭಟ್, ಸುನಿಲ್ ಕುಮಾರ್, ಸುಕುಮಾರ ಶೆಟ್ಟಿ, ಲಾಲಾಜಿ ಮೆಂಡನ್, ಜಿ.ಪಂ. ಅಧ್ಯಕ್ಷ ದಿನಕರ ಬಾಬು, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಜಿಲ್ಲಾಧಿಕಾರಿ ಜಿ. ಜಗದೀಶ್, ಐಜಿಪಿ ದೇವಜ್ಯೋತಿ ರಾಯ್, ಜಿ.ಪಂ. ಸಿಇಒ ಪ್ರೀತಿ ಗೆಹಲೋತ್ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Chikkamagaluru: ಮದುವೆ ಹಾಲ್ ನಲ್ಲೇ ವಧುವಿನ ಚಿನ್ನ ಎಗರಿಸಿದ ಖದೀಮರು…
T20: ತಿಲಕ್ ವರ್ಮ ಸ್ಫೋಟಕ ಶತಕ… ಭಾರತ ಆರು ವಿಕೆಟಿಗೆ 219
Ranaji Trophy: ಉತ್ತರ ಪ್ರದೇಶ ವಿರುದ್ಧ ಕರ್ನಾಟಕಕ್ಕೆ ಮುನ್ನಡೆ
Alert: ವಾಟ್ಸ್‌ಆ್ಯಪ್‌ನಲ್ಲಿ ಬರುವ ಮದುವೆ ಆಮಂತ್ರಣ ಆ್ಯಪ್ ತೆರೆದೀರಿ ಜೋಕೆ!
Vitla:ಮಾಣಿ -ಮೈಸೂರು ರಾಜ್ಯ ಹೆದ್ದಾರಿಯಲ್ಲಿ ಲಾರಿ ಮೇಲೆ ಮರ ಬಿದ್ದು ರಸ್ತೆ ಸಂಪೂರ್ಣ ಬ್ಲಾಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.