![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jan 24, 2024, 11:51 PM IST
ಹುಬ್ಬಳ್ಳಿ: ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಸತತ ಎಂಟು ಬಾರಿ ಆಯ್ಕೆಯಾಗುವ ಮೂಲಕ ದಾಖಲೆ ಬರೆದಿರುವ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ ಅವರ ಸಾಧನೆ 2024ನೇ ಸಾಲಿನ ಲಿಮ್ಕಾ ಬುಕ್ ಆಫ್ ರೆಕಾರ್ಡ್‌ನಲ್ಲಿ ದಾಖಲಾಗಿದೆ.
1980ರಿಂದ ಇಲ್ಲಿಯವರೆಗೆ ಪಶ್ಚಿಮ ಶಿಕ್ಷಕರ ಕ್ಷೇತ್ರದಿಂದ ಸ್ಪರ್ಧಿಸಿ ಸತತ 8 ಬಾರಿ ಗೆಲ್ಲುವ ಮೂಲಕ ಕರ್ನಾಟಕ ವಿಧಾನ ಪರಿಷತ್ ಸದಸ್ಯರಾಗಿ 43 ವರ್ಷ 201 ದಿನಗಳಾಗಿದ್ದು, ಒಂದೇ ಕ್ಷೇತ್ರದಿಂದ ಸತತ 8 ಬಾರಿ ಆಯ್ಕೆ ಹಾಗೂ ಸುದೀರ್ಘ ಅವಧಿಗೆ ವಿಧಾನ ಪರಿಷತ್ ಸದಸ್ಯರಾಗಿರುವುದು ದೇಶದಲ್ಲಿಯೇ ಇದೇ ಮೊದಲು. ಹೊರಟ್ಟಿ ಅವರ ಜಯದ ಅಂಕಿಅಂಶಗಳು, ಇನ್ನಿತರ ಮಾಹಿತಿಗಳನ್ನು 2024ನೇ ಸಾಲಿನ ಲಿಮ್ಕಾ ಬುಕ್ ರೆಕಾರ್ಡ್ಸ್‌ನಲ್ಲಿ ಪ್ರಕಟಿಸಲಾಗಿದೆ.
ಹೊರಟ್ಟಿಯವರ ಗೆಲುವಿನ ದಾಖಲೆ 2022ರಲ್ಲಿ ಲಂಡನ್‌ನ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರಿತ್ತು. ಜತೆಗೆ ಭಾರತದ ಚುನಾವಣ ಆಯೋಗದಲ್ಲಿ ಇವರ ಸುದೀರ್ಘ ಸೇವಾ ಅವಧಿಯ ದಾಖಲೆಗಳು ಅಂಕಿ ಸಂಖ್ಯಾ ಇಲಾಖೆಯಲ್ಲಿ ದಾಖಲೀಕರಣಗೊಂಡು ಗೆಜೆಟ್‌ನಲ್ಲಿ ಪ್ರಕಟವಾಗಿದೆ.
ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸಿಕ್ಕಿಂ ರಾಜ್ಯದ ಮಾಜಿ ಮುಖ್ಯಮಂತ್ರಿ ಪವನ್ ಕುಮಾರ್ 24 ವರ್ಷ 165 ದಿನಗಳವರೆಗೆ ಮುಖ್ಯಮಂತ್ರಿ ಆಗಿ ಸೇವೆ ಸಲ್ಲಿಸಿರುವುದು ಹಾಗೂ ಪಶ್ಚಿಮ ಬಂಗಾಲದ ಮಾಜಿ ಮುಖ್ಯಮಂತ್ರಿ ಜ್ಯೋತಿ ಬಸು 23 ವರ್ಷ 137 ದಿನಗಳವರೆಗೆ ಸಿಎಂ ಆಗಿ ಸೇವೆ ಸಲ್ಲಿಸಿದ ದಾಖಲೆಯೂ ಸೇರಿದೆ.
You seem to have an Ad Blocker on.
To continue reading, please turn it off or whitelist Udayavani.