ನೆರೆ ಹಾನಿ ಪ್ರಮಾಣ ತಡೆಗೆ ಮೂಲಕಾರಣ ತಂತ್ರಜ್ಞಾನ
Team Udayavani, Aug 8, 2019, 3:08 AM IST
ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಇತಿಹಾಸ ಮರುಕಳಿಸಿದೆ. 2009ರಲ್ಲಿ ಇದೇ ರೀತಿ ನೆರೆ ಹಾವಳಿ ಉಂಟಾಗಿತ್ತು. ಆಗಲೂ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಸರ್ಕಾರವೇ ಇತ್ತು. ಆದರೆ, ವ್ಯತ್ಯಾಸ ಇಷ್ಟೇ-ಇಂದಿಗಿಂತ ಅಂದಿನ ಹಾನಿ ಹತ್ತಾರುಪಟ್ಟು ಹೆಚ್ಚಿತ್ತು. ಪ್ರಸ್ತುತ ಉಂಟಾಗಿರುವ ನೆರೆಯ ಹಾನಿ ಪ್ರಮಾಣ ತಡೆಗೆ ಮೂಲ ಕಾರಣ ತಂತ್ರಜ್ಞಾನ!
ಹವಾಮಾನ ತಂತ್ರಜ್ಞಾನದ ಸಮರ್ಪಕ ಬಳಕೆ ಮತ್ತು ಅಂತರರಾಜ್ಯ ಜಲಾಶಯಗಳ ನಿರ್ವಹಣೆ ಸಂಬಂಧ ಉತ್ತಮ ಸಮನ್ವಯ ಸಾಧಿಸುವಲ್ಲಿ ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿಕಾರ ಯಶಸ್ವಿಯಾಗಿದೆ. ಇದರ ಪರಿಣಾಮ ನೆರೆ ಹಾವಳಿಯ ಅನಾಹುತ ತಡೆಗಟ್ಟಲು ತಕ್ಕಮಟ್ಟಿಗೆ ಸಾಧ್ಯವಾಗಿದೆ. ಇದುವರೆಗೆ 300-400 ಮನೆ ಗಳಿಗೆ ಹಾನಿಯಾಗಿದೆ. ಆದರೆ, 2009ರಲ್ಲಿ ನೆರೆ ಹಾವಳಿಗೆ ಸುಮಾರು 200 ಜನ ಮೃತಪಟ್ಟು, ನಾಲ್ಕು ಸಾವಿರ ಮನೆಗಳು ಜಖಂ ಆಗಿದ್ದವು.
ಇನ್ನೂ ಎರಡು-ಮೂರು ದಿನಗಳು ಉತ್ತರ ಕರ್ನಾಟಕದಲ್ಲಿ ಹೈ ಅಲರ್ಟ್ ಇದೆ. ಆದಾಗ್ಯೂ ದಶಕದ ಹಿಂದಿನ ಅನಾಹುತಕ್ಕೆ ಹೋಲಿಸಿದರೆ, ಈ ಬಾರಿ ಹಾನಿಯ ಪ್ರಮಾಣ ತುಂಬಾ ಕಡಿಮೆ. ಇದಕ್ಕೆ ಹವಾಮಾನ ಕ್ಷೇತ್ರದಲ್ಲಿನ ತಂತ್ರಜ್ಞಾನ ಮತ್ತು ಅದು ನೀಡುವ ದತ್ತಾಂಶಗಳ ವೈಜ್ಞಾನಿಕ ವಿಶ್ಲೇಷಣೆ ಹಾಗೂ ಆ ಮಾಹಿತಿಯನ್ನು ಸಕಾಲದಲ್ಲಿ ಸಂಬಂಧಿತ ರಿಗೆ ತಲುಪಿಸಿದ್ದು ಕಾರಣ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪ್ರಾಧಿ ಕಾರದ ಅಧಿಕಾರಿಯೊಬ್ಬರು ತಿಳಿಸುತ್ತಾರೆ.
ಉತ್ತರದಲ್ಲೇ 2 ಸಾವಿರ ಮಳೆ ಮಾಪನ: ಮಹಾರಾಷ್ಟ್ರದ ಮಳೆಯ ಮುನ್ಸೂಚನೆ ಆಧರಿಸಿ, ಅಲ್ಲಿನ ಜಲಾಶಯಗಳಿಗೆ ಹರಿಯಲಿರುವ ಒಳ ಹರಿವಿನ ಪ್ರಮಾಣವನ್ನು ಮೊದಲೇ ಅಂದಾ ಜಿಸಲಾಗಿತ್ತು. ಅಲ್ಲದೆ, ರಾಜ್ಯದಲ್ಲಿ ಆರು ಸಾವಿರ ಮಳೆಯ ಮಾಪನಗಳಿವೆ. ಇದು ಮಳೆಯ ತೀವ್ರತೆಯನ್ನು ಪ್ರತಿ 15 ನಿಮಿಷಕ್ಕೊಮ್ಮೆ ನೀಡು ತ್ತದೆ. ಇದಲ್ಲದೆ, ಭಾರತೀಯ ಹವಾಮಾನ ಇಲಾಖೆ ಪ್ರತಿ ಮೂರು ಗಂಟೆಗೊಮ್ಮೆ “ನೌ ಕಾಸ್ಟ್’ (ಪ್ರಸ್ತುತ ಮುನ್ಸೂಚನೆ) ಅನ್ನು ಎಲ್ಲ ಜಿಲ್ಲಾ ಧಿಕಾರಿಗಳಿಗೆ ನೀಡುತ್ತದೆ. ಈ ಮಾಹಿತಿಗಳನ್ನು ವಿಶ್ಲೇಷಿಸಿ, ಮೊಬೈಲ್ ಸಂದೇಶದ ಮೂಲಕವೇ “ಅಲರ್ಟ್’ ಹೋಗುತ್ತದೆ. ಇದರಿಂದ ಮುಂಜಾ ಗ್ರತಾ ಕ್ರಮಕ್ಕೆ ಸಾಕಷ್ಟು ಸಮಯ ಸಿಗುತ್ತದೆ.
ಜನ ರನ್ನು ರಕ್ಷಿಸುವಲ್ಲಿಯೂ ಸಾಧ್ಯವಾಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (ಕೆಎಸ್‌ಎನ್‌ಡಿಎಂಸಿ) ಅಧಿಕಾರಿಗಳು ವಿವರಿಸುತ್ತಾರೆ. ಈ ಮಧ್ಯೆ, ಮಹಾರಾಷ್ಟ್ರದ ಜಲಾಶಯಗಳಿಂದ ಗೇಟ್‌ಗಳನ್ನು ತೆರೆಯಲಾಗಿತ್ತು. ಇದರಿಂದ ಲಕ್ಷಕ್ಕೂ ಅಧಿಕ ಜನ ನಿರಾಶ್ರಿತರಾಗಿದ್ದರು. 200ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದರು ಎಂದು ಹವಾಮಾನ ಇಲಾಖೆ ನಿವೃತ್ತ ನಿರ್ದೇಶಕ ಪುಟ್ಟಣ್ಣ ಮತ್ತು ಪ್ರಸ್ತುತ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ಸಿದ್ಧಪಡಿಸಿದ “2009ರ ಕರ್ನಾಟಕ ನೆರೆ’ ಕುರಿತ ಅವಲೋಕನದಲ್ಲಿ ಉಲ್ಲೇಖೀಸಲಾಗಿದೆ.
ಹೊರ ಹರಿವು 8 ದಿನ ಮೊದಲೇ ಗೊತ್ತಿತ್ತು!: ಮಹಾರಾಷ್ಟ್ರ ಮಳೆ ಯಿಂದ ಅಲ್ಲಿನ ಜಲಾಶಯ ಗಳಿಗೆ ಬರಬಹುದಾದ ಒಳ ಹರಿವಿನ ಬಗ್ಗೆ ಮುಂಚಿತವಾಗಿಯೇ ಲೆಕ್ಕಾಚಾರ ಹಾಕಲಾಗಿತ್ತು. ಎಂಟು ದಿನಗಳು ಮುಂಚಿತವಾಗಿಯೇ ಸುಮಾರು ನಾಲ್ಕೂವರೆ ಲಕ್ಷ ಕ್ಯೂಸೆಕ್ ನೀರಿನ ಹೊರಹರಿವನ್ನು ಅಂದಾಜಿಸಲಾಗಿತ್ತು. ಇದನ್ನು ಆಧರಿಸಿ ನೆರೆ ಉಂಟಾಗಬಹುದಾದ ಪ್ರದೇಶ ಗಳಲ್ಲಿನ ಜನರನ್ನು ತೆರವುಗೊಳಿಸಲಾಯಿತು. ತಲಾ 50 ಸೈನಿಕರಿರುವ ಹತ್ತು ಆರ್ಮಿ ಕಾಲಂ ಗಳನ್ನು ನಿಯೋಜಿಸಲಾಯಿತು. ರಾಷ್ಟ್ರೀಯ ಮತ್ತು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಪಡೆಗಳನ್ನೂ ನಿಯೋಜಿಸಲಾಗಿದೆ. ಹಾನಿ ತಗ್ಗಿಸು ವಲ್ಲಿ ಮಾತ್ರ ಯಶಸ್ವಿಯಾಗಿದ್ದೇವೆ ಎಂದು ಕಂದಾ ಯ ಇಲಾಖೆ ಕಾರ್ಯದರ್ಶಿ ಟಿ.ಕೆ.ಅನಿಲ್ ಕುಮಾರ್ ತಿಳಿಸಿದರು.
ನಮ್ಮ ಮಳೆ ಮಾಪನಗಳು ಕಾಲ, ಕಾಲಕ್ಕೆ ಮಳೆಯ ತೀವ್ರತೆಯನ್ನು ಸೂಚಿಸುತ್ತವೆ. ಮತ್ತೂಂ ದೆಡೆ, ಹವಾಮಾನ ಇಲಾಖೆ ನೀಡುವ ಮಳೆ ಮುನ್ಸೂಚನೆ ಮಾಹಿತಿ ಬರುತ್ತದೆ. ಇವೆರಡೂ ದತ್ತಾಂಶಗಳನ್ನು ವಿಶ್ಲೇಷಿಸಿ, ಅದನ್ನು ತ್ವರಿತವಾಗಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಮತ್ತು ಎಲ್ಲಾ ಜಿಲ್ಲಾಧಿಕಾರಿಗಳಿಗೆ ರವಾನಿಸಲಾಯಿತು. ಇದರಿಂದ ಹಾನಿಯ ಪ್ರಮಾಣ ತಡೆಯಲು ಸಾಧ್ಯವಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ನಿರ್ದೇಶಕ ಡಾ.ಜಿ.ಎಸ್. ಶ್ರೀನಿವಾಸ ರೆಡ್ಡಿ ಹೇಳಿದರು.
ಅನುಭವ ಕಲಿಸಿದ ಪಾಠ: ಅನುಭವದಿಂದ ಪಾಠ ಕಲಿತ ಕಂದಾಯ ಇಲಾಖೆಯು ಕಳೆದ ಹತ್ತು ವರ್ಷಗಳಲ್ಲಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ಸ್ಥಾಪಿಸಿದೆ. ವಿಪತ್ತು ನಿರ್ವಹಣಾ ಯೋಜನೆ ರೂಪಿಸುತ್ತಿದೆ. ಪ್ರತಿ ಜಿಲ್ಲೆಗೊಬ್ಬ ಪ್ರೊಫೇಷನಲ್ ಅಧಿಕಾರಿಯನ್ನು ನೇಮಿಸಿದೆ. ಅಷ್ಟೇ ಅಲ್ಲ, ಹೋಬಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಯನ್ನು ನಿಯೋಜಿಸಿದೆ.
ಮಳೆ ಸೃಷ್ಟಿಸಿದ ಆತಂಕ: 2009ಕ್ಕೆ ಹೋಲಿಸಿದರೆ ರಾಜ್ಯದಲ್ಲಿ ಪ್ರಸ್ತುತ ಮಳೆ ಪ್ರಮಾಣ ಕಡಿಮೆ. ಅಂದು ಒಂದೆಡೆ ಮಹಾರಾಷ್ಟ್ರದ ಜಲಾಶಯಗಳಿಂದ ನೀರು ಉಕ್ಕಿ ಬರುತ್ತಿದ್ದರೆ, ಮತ್ತೂಂ ದೆಡೆ, ರಾಜ್ಯದಲ್ಲಿ ಭಾರಿ ಮಳೆ ಆಗುತ್ತಿತ್ತು. ಹಾಗಾಗಿ, ಅದರ ಪರಿಣಾಮ ಅಧಿಕವಾಗಿತ್ತು. ಎರಡು ದಿನಗಳಲ್ಲಿ ರಾಜ್ಯದಲ್ಲಿ ಭಾರಿ ಮಳೆ ನಿರೀಕ್ಷೆ ಇದ್ದು, ಮತ್ತೆ ಆತಂಕ ಸೃಷ್ಟಿಸಿದೆ ಎಂದೂ ಅಧಿಕಾರಿಗಳು ಸ್ಪಷ್ಟಪಡಿಸುತ್ತಾರೆ.
* ವಿಜಯಕುಮಾರ್ ಚಂದರಗಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.