ಬಸ್ರೂರು ಸ್ವಾತಂತ್ರ್ಯ ದಿನಾಚರಣೆ; ಪೋರ್ಚುಗೀಸರ ವಿರುದ್ಧದ ಶಿವಾಜಿ ವಿಜಯೋತ್ಸವಕ್ಕೆ 358 ವರ್ಷ

ಬಸ್ರೂರಿನ ಕೆಳಕೋಟೆ ಎಂದರೆ ಈಗಿನ ಕುಂದಾಪುರದ ಕೆಲವೊಂದು ಭಾಗಗಳಾಗಿದ್ದವು.

Team Udayavani, Feb 13, 2023, 3:06 PM IST

ಬಸ್ರೂರು ಸ್ವಾತಂತ್ರ್ಯ ದಿನಾಚರಣೆ; ಪೋರ್ಚುಗೀಸರ ವಿರುದ್ಧದ ಶಿವಾಜಿ ವಿಜಯೋತ್ಸವಕ್ಕೆ 358 ವರ್ಷ

ಕುಂದಾಪುರ: ಪೋರ್ಚುಗೀಸರ ವಿರುದ್ಧ ಛತ್ರಪತಿ ಶಿವಾಜಿ ಮಹಾರಾಜರು ಪ್ರಥಮ ನೌಕಾ ಯಾನ ಕೈಗೊಂಡು ಬಸ್ರೂರಿನಲ್ಲಿ ವಿಜಯ ಪತಾಕೆ ಹಾರಿಸಿದ ಸವಿ ನೆನಪಿಗಿಂದು (ಫೆ.13) 358 ವರ್ಷ ತುಂಬಿದೆ.

16ನೇ ಶತಮಾನದಲ್ಲಿ ವಸುಪುರ (ಬಸ್ರೂರು) ಕರಾವಳಿಯ ಪ್ರಸಿದ್ಧ ವ್ಯಾಪಾರ ಕೇಂದ್ರವಾಗಿತ್ತು. ಕೆಳದಿಯ ಸಾಮಂತರು ಈ ಬಂದರನ್ನು ಬಳಸುತ್ತಿದ್ದರು. ಇದು ಪೋರ್ಚುಗೀಸರ ವಶವಾಗಿದ್ದು, ಇದರಿಂದ ಆತಂಕಿತನಾದ ಕೆಳದಿಯ ಅರಸ ಛತ್ರಪತಿ ಶಿವಾಜಿಯ ಸಹಾಯ ಕೋರಿದ. 1665 ರ ಫೆಬ್ರವರಿಯಲ್ಲಿ ಸಿಂಧೂ ದುರ್ಗದಿಂದ 50 ಯುದ್ಧ ನೌಕೆ, 3 ಸಣ್ಣ ನೌಕೆ, 4 ಸಾವಿರ ಸೈನಿಕರೊಂದಿಗೆ ನೌಕದಳದ ದಂಡಯಾತ್ರೆ ಹೊರಟ ಶಿವಾಜಿಯು ಸಮುದ್ರ ಮಾರ್ಗವಾಗಿ ಬಸ್ರೂರಿಗೆ ಬಂದು ಪೋರ್ಚುಗೀಸರ ವಿರುದ್ಧ ಯುದ್ಧದಲ್ಲಿ ವಿಜಯ ಸಾಧಿಸಿದ. ಇದಾದ ಕೆಲ ದಿನ ಶಿವಾಜಿ ಗೋಕರ್ಣದಲ್ಲಿ ತಂಗಿ, ಬಳಿಕ ತನ್ನ ದಂಡಯಾತ್ರೆ ಮುಂದುವರಿಸಿದ ಬಗ್ಗೆ ದಾಖಲೆಗಳಲ್ಲಿ ಕಂಡುಬರುತ್ತದೆ.

ಆಳುಪ, ವಿಜಯನಗರ, ಕೆಳದಿಯಂತಹ ರಾಜಮನೆತನಗಳ ಆಳ್ವಿಕೆಯನ್ನು ಬಸ್ರೂರುಕಂಡಿತ್ತು. ಆಳುಪರ ರಾಜಧಾನಿಯಾಗಿ ಬಾರಕೂರು (ಬಾಕನ್ಯಾಪುರ) ಇದ್ದರೂ, ಬಸ್ರೂರು ಮುಖ್ಯ ವ್ಯಾಪಾರದ ಪಟ್ಟಣ ವಾಗಿತ್ತು. ಇವರೆಡು ಅವಳಿ ನಗರವೆಂದು ಕರೆಯಲಾಗುತ್ತಿತ್ತು. ಕ್ರಿ.ಶ. 1569ರಲ್ಲಿ ಬಸ್ರೂರಿನ ಕೆಳಕೋಟೆಯನ್ನು ಪೋರ್ಚು ಗೀಸರು ವಶಪಡಿಸಿಕೊಳ್ಳುತ್ತಾರೆ. ಬಸ್ರೂರಿನ ಕೆಳಕೋಟೆ ಎಂದರೆ ಈಗಿನ ಕುಂದಾಪುರದ ಕೆಲವೊಂದು ಭಾಗಗಳಾಗಿದ್ದವು. ಕ್ರಿ.ಶ 1662
ರಲ್ಲಿ ಡಚ್ಚರು ಬಸ್ರೂರಿನಲ್ಲಿ ವ್ಯಾಪಾರಕ್ಕಾಗಿ ‌ಮ್ಮ ಬಂಡಶಾಲೆ ಆರಂಭಿಸುತ್ತಾರೆ.

ಡಚ್ಚರು ಹಾಗೂ ಪೋರ್ಚುಗೀಸರ ವ್ಯಾಪಾರದ ಪೈಪೋಟಿಯು ಬಸ್ರೂರಿಗರಿಗೆ ಆತಂಕ ಹುಟ್ಟುಹಾಕಿತ್ತು. ಇದಕ್ಕಾಗಿಯೇ ಕೆಳದಿಯ ಅರಸ ಛತ್ರಪತಿ ಶಿವಾಜಿಯ ಸಹಾಯ ಕೋರಿದ್ದ. ವಿದೇಶಿಯರ ವಿರುದ್ಧ ಮೊದಲೇ ಕೆಂಡಕಾರಿದ್ದ ಶಿವಾಜಿಯು ಪೋರ್ಚುಗೀಸರ ವಿರುದ್ಧ ಹೋರಾಡಲು ಕ್ರಿ.ಶ. 1665ರ ಫೆ. 13 ರಂದು 400 – 500 ಹಡಗುಗಳೊಂದಿಗೆ, 4 ಸಾವಿರ ಸೈನಿಕರೊಂದಿಗೆ ಬಸ್ರೂರಿನ ಕಡೆಗೆ ದಂಡೆತ್ತಿ ಬರುತ್ತಾನೆ. ಎರಡು ದಿನಗಳ ಕಾಲ ನಡೆದ ಹೋರಾಟದಲ್ಲಿ ಬಸ್ರೂರನ್ನು ಪೋರ್ಚುಗೀಸರ ಕಪಿಮುಷ್ಠಿಯಿಂದ ಶಿವಾಜಿಯು ಬಂಧಮುಕ್ತಗೊಳಿಸಿದ.

ವೈಭವೋಪೇತ ಪಟ್ಟಣ
ಕ್ರಿ.ಶ. 12ನೇ ಶತಮಾನದಲ್ಲಿ ವೈಭವದ ಪಟ್ಟಣದಂತಿದ್ದ ಬಸ್ರೂರು ಬೃಹತ್‌ ಸಂಪತ್ಭರಿತ ಪ್ರದೇಶವಾಗಿತ್ತು. ಈ ಭಾಗದ ತೆಂಗಿನಕಾಯಿ, ತಾಳೆಮರ, ಲವಂಗ, ದಾಲ್ಚಿನ್ನಿ ಮತ್ತು ಅಕ್ಕಿ, ಧವಸ ಧಾನ್ಯಗಳು ಅತೀ ಹೆಚ್ಚಿನ ಪ್ರಮಾಣದಲ್ಲಿ ವಿದೇಶಗಳಿಗೆ ರಫ್ತಾಗುತ್ತಿತ್ತು. ಇದನ್ನು ವಿದೇಶಿಗರು ಪಡೆದುಕೊಳ್ಳುತ್ತಿದ್ದರು. ಈ ಪ್ರದೇಶಗಳಿಗೆ ಬೇಕಾದ ವಸ್ತುಗಳನ್ನು ಸಹಾ ಆಮದು ಮಾಡಿಕೊಳ್ಳುತ್ತಿದ್ದರು. ಕೆಲ ಹಳೆಯ ಮನೆಗಳಲ್ಲಿ ಪಿಂಗಾಣಿ ಪಾತ್ರೆಗಳು ಇಂದಿಗೂ ಕಂಡು ಬರುತ್ತದೆ. ಚೀನಾದಿಂದ ಪಾತ್ರೆ, ರೇಷ್ಮೆ ವಸ್ತ್ರಗಳಿಗೆ ಈ ಭಾಗದಲ್ಲಿ ಬಹು ಬೇಡಿಕೆಗಳಿತ್ತು. ಚೀನಿಯರು ಇಲ್ಲಿಯ ಕಬ್ಬು ಆಮದು ಮಾಡಿಕೊಳ್ಳುತ್ತಿದ್ದರು.

ಹಟ್ಟಿಕುದ್ರು ಭಾಗದಲ್ಲಿ ಇಂದಿಗೂ ಕಬ್ಬು ಬೆಳೆಯುತ್ತಿದ್ದಾರೆ. ಮಲಬಾರಿಗಳು ತಾಮ್ರ , ತೆಂಗಿನಕಾಯಿ, ಬೆಲ್ಲ, ಕೊಬ್ಬರಿ ಎಣ್ಣೆಯನ್ನು ಇಲ್ಲಿಗೆ ತಂದು ಮಾರುತ್ತಿದ್ದರು. ಹೀಗೆ ವಾಣಿಜ್ಯ ಕ್ಷೇತ್ರಕ್ಕೆ ಬಹು ದೊಡ್ಡ ಕೊಡುಗೆಯನ್ನು ಬಸ್ರೂರು ನೀಡಿತ್ತು. ಇದರಿಂದಲೇ ವಿದೇಶಿಗರು ಇಲ್ಲಿ ಬಂದು ಭದ್ರವಾಗಿ ನೆಲೆಯೂರುವಂತಾಯಿತು. ಫ್ರೆಂಚ್‌ ಪ್ರವಾಸಿಗ ಪಿರಾಲ್ಡ್‌ ಕ್ರಿ.ಶ. 1600 ರಲ್ಲಿ ಮಲಬಾರ್‌ ಕರಾವಳಿಗೆ ಬಂದಿದ್ದಾಗ “ಬಸ್ರೂರು ವ್ಯಾಪಾರ ಮಾಲ್ಡೀವ್ಸ್‌ ದ್ವೀಪದವರೆಗೆ ಹಬ್ಬಿತ್ತು’ ಎಂದು ಉಲ್ಲೇಖಿಸಿದ್ದರು.

ಪ್ರತಿ ವರ್ಷ ಆಚರಣೆ
ದೇಶ ಕಂಡ ಅಪ್ರತಿಮ ಸಾಮ್ರಾಟ, ನೌಕಾ ಸೇನೆಯ ಪಿತಾಮಹ ಎನಿಸಿಕೊಂಡ ಛತ್ರಪತಿ ಶಿವಾಜಿ ಮಹಾರಾಜರು ಮೊದಲ ನೌಕಾ ವಿಜಯ ಸಾಧಿಸಿದ ಸ್ಥಳ ಬಸ್ರೂರು. ಅದು 1665ರ ಫೆ. 13. ಇತಿಹಾಸದ ಪುಟದಲ್ಲಿ ಎಂದಿಗೂ ಮರೆಯಲಾಗದ ದಿನವಾಗಿ ಉಳಿಯುತ್ತದೆ. ಬಸ್ರೂರು ಪೋರ್ಚುಗೀಸರಿಂದ ಬಂಧಮುಕ್ತವಾದ ಆ ದಿನವನ್ನು ಬಸ್ರೂರಿನ ಸ್ವಾತಂತ್ರ್ಯ ದಿನವನ್ನಾಗಿ ಪ್ರತೀ ವರ್ಷ ಆಚರಿಸಲಾಗುತ್ತಿದೆ.
-ಪ್ರದೀಪ್‌ ಕುಮಾರ್‌ ಬಸ್ರೂರು, ಜಿಲ್ಲಾ ಸಂಚಾಲಕ, ಭಾರತೀಯ ಇತಿಹಾಸ ಸಂಕಲನ ಸಮಿತಿ

ಟಾಪ್ ನ್ಯೂಸ್

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

Udupi: 22 ವರ್ಷದ ಬಳಿಕ ಮನೆ ಸೇರಿಕೊಂಡ ವೃದ್ಧ

FIR–Court

FIR Register: ಜಡ್ಜ್ ಹೆಸರಲ್ಲಿ ಲಂಚಕ್ಕೆ ಬೇಡಿಕೆಯ ಆರೋಪ: ವಕೀಲೆ ವಿರುದ್ಧ ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

Koteshwar: ಬೀಜಾಡಿಯ ಯೋಧ ಅನೂಪ್‌ ಪೂಜಾರಿ ಮೃತ್ಯು

arest

Kundapura: ಅರಣ್ಯ ದಳದ ಸಿಬಂದಿಗೆ ಹಲ್ಲೆ: ಮತ್ತೋರ್ವನ ಬಂಧನ

dw

Siddapura: ವಿದ್ಯುತ್‌ ಲೈನಿಗೆ ಕೊಕ್ಕೆ ತಾಗಿ ಕಾರ್ಮಿಕ ಸಾವು

byndoor

Siddapura: ಪಾದಚಾರಿಗೆ ಪಿಕಪ್‌ ವಾಹನ ಢಿಕ್ಕಿ; ಗಂಭೀರ

12-

Kundapura: ಬಸ್‌ನಲ್ಲೇ ಹೃದಯಾಘಾತ; ಸಮಯಪ್ರಜ್ಞೆ ಮೆರೆದ ಬಸ್‌ ಚಾಲಕ, ಸಾರ್ವಜನಿಕರ ಮೆಚ್ಚುಗೆ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Basavaraj-horatti

Negotiation: ಸಿ.ಟಿ.ರವಿ – ಸಚಿವೆ ಹೆಬ್ಬಾಳ್ಕರ್‌ ಸಂಧಾನಕ್ಕೆ ಸಭಾಪತಿ ಹೊರಟ್ಟಿ ಪ್ರಯತ್ನ?

BGV-Gandhi-bharatha

Congress Session: ಬೆಳಗಾವಿಯಲ್ಲಿಂದು, ನಾಳೆ ಗಾಂಧಿ ಮಹಾಧಿವೇಶನ

1-horoscope

Daily Horoscope: ಬೇರೆಯವರ ತಪ್ಪುಗಳನ್ನು ಹುಡುಕಬೇಡಿ, ಜವಾಬ್ದಾರಿ ಕೊಂಚ ಬದಲಾವಣೆ

Munirathna

Politics: ಕುಸುಮಾರನ್ನು ಎಂಎಲ್‌ಎ ಮಾಡಲು ಇಷ್ಟೆಲ್ಲ ಪ್ರಯತ್ನ: ಶಾಸಕ ಮುನಿರತ್ನ ಆರೋಪ

Darshan12

Actor Health: ಸ್ವಲ್ಪ ಜರುಗಿದ ದರ್ಶನ್‌ ಬೆನ್ನುಮೂಳೆ; ತುರ್ತಾಗಿ ಆಪರೇಷನ್‌ ಇಲ್ಲ: ವೈದ್ಯರು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.