ಬಸ್ರೂರು: ಕುಸಿದ ಮೋರಿಯಿಂದ ಸಂಚಾರ ದುಸ್ತರ
Team Udayavani, Oct 31, 2020, 9:33 PM IST
ಬಸ್ರೂರು: ಬಸ್ರೂರು ಕೆಳಪೇಟೆಯಿಂದ ಮಾರ್ಗೋಳಿಗೆ ಹೋಗುವ ಸುಮಾರು 600 ಮೀ.ಉದ್ದದ ರಸ್ತೆ ಮಧ್ಯೆ ದೇವಸ್ಥಾನದ ಸಮೀಪ ನಿರ್ಮಿಸಲಾಗಿದ್ದ ಮೋರಿಯೊಂದು ಕುಸಿದಿದೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ದುಸ್ತರ ಗೊಂಡಿದೆ.
ಕುಸಿದ ಸ್ಥಳದಲ್ಲಿ ಗ್ರಾ.ಪಂ.ನವರು ಒಂದು ಗಿಡ ನೆಟ್ಟು ಎಚ್ಚರಿಕೆಯಿಂದ ಸಂಚರಿಸುವಂತೆ ಸೂಚನೆ ನೀಡಿದ್ದಾರೆ.
ಲಘು ಮತ್ತು ಘನ ವಾಹನಗಳು ಈ ಮಾರ್ಗದಲ್ಲಿ ಸಂಚರಿಸಲು ಸಾಧ್ಯವಿಲ್ಲ ಎಂಬಂತಾಗಿದೆ. ಸಂಬಂಧಪಟ್ಟವರು ಶೀಘ್ರ ಈ ಮೋರಿಯ ದುರಸ್ತಿ ಕಾರ್ಯ ಮಾಡಬೇಕೆಂದು ಸ್ಥಳೀಯರು ಆಗ್ರಹಪಡಿಸಿದ್ದಾರೆ.
ಸಂಚಾರ ಸಂಕಷ್ಟ
ಪ್ರತಿನಿತ್ಯ ಬಸ್ರೂರು ಕೆಳಪೇಟೆ ಯಿಂದ ಈ ರಸ್ತೆಯ ಮೂಲಕ ಕುಂದಾಪುರದ ಅಂಗಡಿಗೆ ಕಾರಿನಲ್ಲಿ ಹೋಗಬೇಕಾಗಿದೆ. ಈಗ ಮೋರಿ ಕುಸಿದಿದ್ದು ಈ ಮಾರ್ಗದಲ್ಲಿ ಈಗ ದ್ವಿಚಕ್ರ ವಾಹನ ಮಾತ್ರ ಸಂಚರಿಸುವಂತಾಗಿದೆ. ಸಂಬಂಧಪಟ್ಟವರು ಶೀಘ್ರ ಈ ಬಗ್ಗೆ ಗಮನಹರಿಸಿ, ಪರಿಹರಿಸಬೇಕು.
-ನಿತ್ಯ ಪ್ರಯಾಣಿಕ
ಮೋರಿ ದುರಸ್ತಿಗೆ ಸೂಚನೆ
ಪ್ರಸ್ತುತ ನಿರ್ಮಾಣವಾಗುತ್ತಿರುವ ಹಟ್ಟಿಕುದ್ರು ಸೇತುವೆ ಕಾಮಗಾರಿಗೆ ಸರಕುಗಳನ್ನು ಹೊತ್ತು ತರುತ್ತಿರುವ ಬೃಹತ್ ವಾಹನ ಈ ರಸ್ತೆಯಲ್ಲಿ ಚಲಿಸುತ್ತಿರುವಾಗ ಈ ರಸ್ತೆಯ ಕಿರಿದಾದ ಮೋರಿಯು ಕುಸಿದಿದೆ. ಮೋರಿ ಕುಸಿದ ವಿಷಯವನ್ನು ಸಂಬಂಧಪಟ್ಟವರಿಗೆ ತಿಳಿಸಿದ್ದು ಅವರೇ ಸರಿಪಡಿಸುವಂತೆ ಸೂಚಿಸಲಾಗಿದೆ.
-ನಾಗೇಂದ್ರ ಜೆ. ಬಸ್ರೂರು ಪಿಡಿಒ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ
ಬಾಲಕಿಯ ಅತ್ಯಾಚಾರ-ಗರ್ಭಪಾತ ಪ್ರಕರಣ: ಅಪರಾಧಿಗೆ 20 ವರ್ಷ ಜೈಲು ಶಿಕ್ಷೆ; 50 ಸಾವಿರ ರೂ. ದಂಡ
Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?
Naxal ಎನ್‌ಕೌಂಟರ್ ತನಿಖೆ ಆರಂಭ; ಉಳಿದವರು ಯಾವ ಕಡೆಗೆ ಪರಾರಿ?
Hebri: ಎನ್‌ಕೌಂಟರ್ ತನಿಖೆ ನಡೆಸುವ ಹೆಬ್ರಿ ಪೊಲೀಸ್ ಠಾಣೆ ಇಲ್ಲಗಳ ಆಗರ!
MUST WATCH
ಹೊಸ ಸೇರ್ಪಡೆ

Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.