BATC: ಪಿ.ವಿ. ಸಿಂಧು ಮರಳಿ ಕಣಕ್ಕೆ
Team Udayavani, Feb 13, 2024, 6:00 AM IST
ಶಾ ಆಲಂ (ಮಲೇಷ್ಯಾ): ಕಳೆದ ಅಕ್ಟೋಬರ್‌ನಿಂದ ಸ್ಪರ್ಧಾತ್ಮಕ ಕೂಟಗಳಿಂದ ದೂರ ಉಳಿದಿದ್ದ ಪಿ.ವಿ. ಸಿಂಧು “ಬ್ಯಾಡ್ಮಿಂಟನ್ ಏಷ್ಯಾ ಟೀಮ್ ಚಾಂಪಿಯನ್‌ಶಿಪ್’ (ಬಿಎಟಿಸಿ) ಮೂಲಕ ಮರಳಿ ಅಂಕಣಕ್ಕೆ ಇಳಿಯಲಿದ್ದಾರೆ. ಈ ಪಂದ್ಯಾವಳಿ ಮಂಗಳವಾರ ಮಲೇಷ್ಯಾದ ಶಾ ಆಲಂನಲ್ಲಿ ಆರಂಭವಾಗಲಿದೆ. ಪ್ಯಾರಿಸ್ ಒಲಿಂಪಿಕ್ಸ್ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಕೂಟವಾಗಿದ್ದು, ಅಮೂಲ್ಯ ಅರ್ಹತಾ ಅಂಕಗಳನ್ನು ಗಳಿಸಬಹುದಾಗಿದೆ.
ಆದರೆ ಈ ಪಂದ್ಯಾವಳಿಯಲ್ಲಿ ಭಾರತದ ಪುರುಷರ ತಂಡವೇ ಪ್ರಧಾನ ಆಕರ್ಷಣೆ ಆಗಿರಲಿದೆ. ಎಚ್.ಎಸ್. ಪ್ರಣಯ್, ಲಕ್ಷ್ಯ ಸೇನ್, ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ – ಚಿರಾಗ್ ಶೆಟ್ಟಿ ಉತ್ತಮ ಪ್ರದರ್ಶನ ನೀಡುವ ಕಾತರದಲ್ಲಿದ್ದಾರೆ.
ವನಿತಾ ತಂಡ “ಡಬ್ಲ್ಯು’ ವಿಭಾಗದಲ್ಲಿದೆ. ಇಲ್ಲಿನ ಇನ್ನೊಂದು ತಂಡ ಚೀನ. ಟ್ರೀಸಾ ಜಾಲಿ-ಗಾಯತ್ರಿ ಗೋಪಿಚಂದ್, ಅಶ್ವಿನಿ ಪೊನ್ನಪ್ಪ-ತನಿಷಾ ಕ್ರಾಸ್ಟೊ ವನಿತಾ ಡಬಲ್ಸ್ ಕಣದಲ್ಲಿದ್ದಾರೆ.
ಫ್ರೆಂಚ್ ಓಪನ್ ವೇಳೆ ಎದುರಾದ ಮಂಡಿನೋವಿ ನಿಂದಾಗಿ ಸಿಂಧು ಸುದೀರ್ಘ ವಿಶ್ರಾಂತಿಯಲ್ಲಿದ್ದರು. ಇವರ ಫಿಟ್‌ನೆಸ್ ಹಾಗೂ ಫಾರ್ಮ್ ಭಾರತದ ಪಾಲಿಗೆ ನಿರ್ಣಾಯಕವಾಗಲಿದೆ.
ಬುಧವಾರ ಭಾರತ ಸ್ಪರ್ಧೆ
ಭಾರತ ಬುಧವಾರ ತನ್ನ ಸ್ಪರ್ಧೆಗಳನ್ನು ಆರಂಭಿಸಲಿದೆ. ಪುರುಷರ ತಂಡ ಹಾಂಕಾಂಗ್ ವಿರುದ್ಧ, ವನಿತಾ ತಂಡ ಚೀನದ ವಿರುದ್ಧ ಆಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
T20 Ranking: ಬರೋಬ್ಬರಿ 69 ಸ್ಥಾನ ಮೇಲಕ್ಕೇರಿದ ಭಾರತೀಯ ಬ್ಯಾಟರ್
BGT 2024: ಮೊದಲ ಪಂದ್ಯಕ್ಕೆ ನಮ್ಮ ಆಡುವ ಬಳಗ ಅಂತಿಮವಾಗಿದೆ ಎಂದ ನಾಯಕ ಬುಮ್ರಾ
BGT 2025: ಶುಕ್ರವಾರದಿಂದ ಟೆಸ್ಟ್ ಸರಣಿ ಆರಂಭ: ಇಲ್ಲಿದೆ ಎಲ್ಲಾ ಪಂದ್ಯಗಳ ವೇಳಾಪಟ್ಟಿ, ಸಮಯ
Hardik Pandya: ಟಿ20 ಆಲ್‌ರೌಂಡರ್… ಹಾರ್ದಿಕ್ ಪಾಂಡ್ಯ ನಂ.1
China Masters 2024: ಥಾಯ್ಲೆಂಡ್‌ನ ಬುಸಾನನ್ ವಿರುದ್ಧ 20ನೇ ಗೆಲುವು ಸಾಧಿಸಿದ ಸಿಂಧು
MUST WATCH
ಹೊಸ ಸೇರ್ಪಡೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Chikkamagaluru;ಹಣಕ್ಕಾಗಿ ಮೊಮ್ಮಗನಿಂದಲೇ ವೃದ್ಧ ದಂಪತಿಯ ಬರ್ಬರ ಹ*ತ್ಯೆ
Thailand ನಲ್ಲಿ ಜೇನಿನ ಆಯುರ್ವೇದ ಔಷಧ ಕಥೆ ಹೇಳಿದ ಅಪ್ಪ,ಮಗಳು
Karnataka;ಕಾರ್ಪೊರೇಟ್ ಸಂಸ್ಥೆಗಳಿಂದ 100 ಇಂಜಿನಿಯರಿಂಗ್ ಕಾಲೇಜುಗಳ ದತ್ತು
Politics: ಬೆಳಗಾವಿ ಅಧಿವೇಶನವೇ ಸಿಎಂ ಸಿದ್ದರಾಮಯ್ಯರ ಕೊನೆಯ ಅಧಿವೇಶನ: ವಿಜಯೇಂದ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.