BBK-11: ಬಿಗ್ ಬಾಸ್ ಮನೆಗೆ ಬಂದ್ರು ಖಡಕ್ ‘ವಕೀಲ್ ಸಾಬ್’
Team Udayavani, Sep 29, 2024, 8:11 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ-11 (Bigg Boss Kannada-11)ರ ಮನೆಗೆ ಒಂದೊಂದೇ ಸ್ಪರ್ಧಿಗಳು ಪ್ರವೇಶ ಪಡೆಯುತ್ತಿದ್ದಾರೆ.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವ್ಯಕ್ತಿಗಳು ಸೇರಿದಂತೆ ವಿವಾದಕ್ಕೆ ತುತ್ತಾಗಿ ಸುದ್ದಿಯಾದ ವ್ಯಕ್ತಿತ್ವಗಳು ದೊಡ್ಮನೆಯೊಳಗೆ ಬಲಗಾಲಿಟ್ಟು ಎಂಟ್ರಿ ಆಗಿದ್ದಾರೆ.
ಕರ್ನಾಟಕದಲ್ಲಿ ಕಳೆದ ಕೆಲ ಸಮಯದಿಂದ ಭಾರಿ ಸುದ್ದಿಯಾಗಿರುವ ಲಾಯರ್ ಜಗದೀಶ್ ಅವರು 7ನೇ ಸ್ಪರ್ಧಿಯಾಗಿ ಎಂಟ್ರಿ ಆಗಿದ್ದಾರೆ.
ನಿನ್ನೆಯೇ ಅವರ ಹೆಸರನ್ನು ರಿವೀಲ್ ಮಾಡಲಾಗಿತ್ತು. ಇದೀಗ ಕಿಚ್ಚನ ಮುಂದೆ ಬಿಗ್ ಬಾಸ್ ವೇದಿಕೆ ಹತ್ತಿ ದೊಡ್ಮನೆಗೆ ಹೋಗಿದ್ದಾರೆ.
ಯಾರು ಈ ಲಾಯರ್ ಜಗದೀಶ್:
ಇತ್ತೀಚೆಗಿನ ವರ್ಷಗಳಲ್ಲಿ ತನ್ನ ಹೇಳಿಕೆಗಳಿಂದಲೇ ಸುದ್ದಿ ಆಗಿರುವ ಜಗದೀಶ್ ಅವರು, ಹಲವು ಪ್ರಕರಣಗಳಲ್ಲಿ ವಕೀಲರಾಗಿದ್ದರು. ಕರ್ನಾಟಕದ ಪ್ರಮುಖ ಸಚಿವರೊಬ್ಬರ ಲೈಂಗಿಕ ಪ್ರಕರಣ, ಮಾಜಿ ಮುಖ್ಯಮಂತ್ರಿಯೊಬ್ಬರ ಪ್ರಕರಣ ಸೇರಿದಂತೆ ವಿವಿಧ ಪ್ರಕರಣಗಳಲ್ಲಿ ಸ್ಪೋಟಕ ಮಾಹಿತಿ ಹಂಚಿಕೊಂಡು ಅವರು ಸುದ್ದಿಯಾಗಿದ್ದರು. ಇದಲ್ಲದೆ ಅನೇಕ ದಾಖಲೆಗಳ ಬಗ್ಗೆಯೂ ಅವರು ಮಾತನಾಡಿ ಸುದ್ದಿಯಾಗಿದ್ದರು.
ವಿವಾದದಿಂದಲೇ ಸುದ್ದಿ..ಖ್ಯಾತಿ..:
ಇತ್ತೀಚೆಗೆ ವಿವಾದದಿಂದಲೂ ಸುದ್ದಿಯಾಗಿರುವ ಅವರನ್ನು ಜಾತಿ ನಿಂದನೆ ಆರೋಪದಲ್ಲಿ ಬಂಧಿಸಲಾಗಿತ್ತು. ರವಿ ಡಿ. ಚನ್ನಣ್ಣನವರ್ ಅವರ ಮೇಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿವಿಲ್ ಕೋರ್ಟ್ ಆವರಣದಲ್ಲಿ ನಡೆದಿದ್ದ ಗಲಾಟೆ ಪ್ರಕರಣದಲ್ಲಿ ವಕೀಲ ಜಗದೀಶ್ ಅವರನ್ನು ಪೊಲೀಸರು ಬಂಧಿಸಿದ್ದರು.
ಇತ್ತೀಚೆಗೆ ಮುಖ್ಯ ಪೇದೆಯೊಬ್ಬರ ಜತೆ ವಾಗ್ವಾದ ನಡೆಸಿದ ವಿಡಿಯೋ ವೈರಲ್ ಆಗಿತ್ತು.
ಇದಲ್ಲದೆ ಅವರ ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ ಪರವಾಗಿ ವಕೀಲ ಜಗದೀಶ್ ಪ್ರತಿಭಟನೆ ನಡೆಸಿದ್ದರು. ಮಾಜಿ ಸಿಎಂ ಹಾಗೂ ಸ್ವಾಮೀಜಿಯೊಬ್ಬರ ವಿರುದ್ಧ ಅವರು ಗಂಭೀರ ಆರೋಪ ಹೊರಿಸಿದ್ದರು.
ಲಾಯರ್ ವೃತ್ತಿಗೂ ಮೊದಲು ಅವರು ಆರ್‌ಟಿಐ ಕಾರ್ಯಕರ್ತ ಆಗಿದ್ದರು. ಅವರಿಗೆ ಪ್ರೇಕ್ಷಕರಿಂದ 15 ನಿಮಿಷದಲ್ಲಿ 2.13 ಲಕ್ಷ ವೋಟಿಂಗ್ ಬಂದಿದೆ. ವೋಟಿಂಗ್ ಆಧಾರದಲ್ಲಿ ಅವರು ಸ್ವರ್ಗಕ್ಕೆ ಹೋಗಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.