BBK11: ಪ್ರತಿದಿನ ಎಂಜಾಯ್ ಮಾಡುತ್ತಿದ್ದೇನೆ.. ಬಿಗ್ ಬಾಸ್ ಬಿಟ್ಟು ಹೋಗಲ್ಲ ಎಂದ ಜಗದೀಶ್
Team Udayavani, Oct 9, 2024, 11:08 PM IST
ಬೆಂಗಳೂರು: ಬಿಗ್ ಬಾಸ್ (Bigg Boss Kannada-11) ಮನೆಯಲ್ಲಿ ಸ್ವರ್ಗ – ನರಕದ ಸ್ಪರ್ಧಿಗಳ ತಂಡಗಳ ನಡುವೆ ಟಾಸ್ಕ್ ವಿಚಾರದಲ್ಲಿ ಪೈಪೋಟಿ ಶುರುವಾಗಿದೆ.
‘ಅಳಿವು ಉಳಿವು’ ಟಾಸ್ಕ್ ನ ನಾಲ್ಕು ಸುತ್ತುಗಳಲ್ಲಿ ನರಕವಾಸಿಗಳ ಮೇಲುಗೈ ಸಾಧಿಸಿದ್ದು, ನರಕ ನಿವಾಸಿಗಳು ನಿಂತುಕೊಂಡು ಇರಬೇಕೆನ್ನುವ ನಿಯಮವನ್ನು ಉಲ್ಲಂಘಿಸಿದ ಜಗದೀಶ್ ಅವರಿಗೆ ಕ್ಯಾಪ್ಟನ್ ಹಂಸಾ ತರಾಟೆ ತೆಗೆದುಕೊಂಡರು. ಆದರೆ ಕ್ಯಾಪ್ಟನ್ ಅವರಿಗೆಯೇ ಜಗದೀಶ್ ಅವರು ಮೊದಲು ನೀವು ರೂಲ್ಸ್ ಫಾಲೋ ಮಾಡಿ ನಂತ್ರ ನಮಗೆ ಹೇಳಿ ಎಂದು ಮರು ಉತ್ತರ ನೀಡಿದರು.
ನಾಮಿನೇಷನ್ ನಿಂದ ನಾಲ್ವರು ಪಾರು:
ಶಿಶಿರ್ ಅವರಿಗೆ ಸಿಕ್ಕ ವಿಶೇಷ ಅಧಿಕಾರದಿಂದ ಶಿಶಿರ್ ತಮ್ಮನ್ನು ಸೇರಿಸಿ ಮೋಕ್ಷಿತಾ ಅವರನ್ನು ನಾಮಿನೇಷನ್ ನಿಂದ ಉಳಿಸಿದ್ದಾರೆ.
ತಿವಿಕ್ರಮ್ ಅವರಿಗೆ ನೀಡಿದ ವಿಶೇಷ ಅಧಿಕಾರವನ್ನು ಬಳಸಿ ತಮ್ಮನ್ನು ಉಳಿಸಿಕೊಂಡು, ಅವರು ಉಗ್ರಂ ಮಂಜು ಅವರನ್ನು ನಾಮಿನೇಷನ್ ನಿಂದ ಪಾರು ಮಾಡಿದ್ದಾರೆ.
‘ಗೊಬ್ಬರದ ಅಬ್ಬರ’ ಟಾಸ್ಕ್ ನಲ್ಲಿ ತಲಾ ಮೂರು ಜೋಡಿ ಸೇರಿ ಆಡಿದ್ದಾರೆ. ಈ ಟಾಸ್ಕ್ ನ ಉಸ್ತುವಾರಿಯನ್ನು ಕ್ಯಾಪ್ಟನ್ ಹಂಸಾ ಅವರು ವಹಿಸಿಕೊಂಡಿದ್ದಾರೆ. ಚೆಂಡುಗಳನ್ನು ತಳ್ಳಿಕೊಂಡು ಹೋಗಬೇಕೆನ್ನುವ ನಿಯಮವಿದ್ದರೂ ಸ್ವರ್ಗ ವಾಸಿಗಳು ಜಂಪ್ ಮಾಡಿಕೊಂಡು ಚೆಂಡನ್ನು ಹಾಕಿದ್ದಾರೆ. ಇದನ್ನು ಗಮನಿಸಿಯೂ ಏನು ಕ್ರಮ ಕೈಗೊಳ್ಳದ ಹಂಸಾ ಮೇಲೆ ನರಕವಾಸಿಗಳು ರೇಗಾಡಿದ್ದಾರೆ.
ಕಣ್ಣಿಲ್ವಾ ನಿನಗೆ ನೋಡೋಕೆ. ಊಟ ಮಾಡೋಕೆ ಇದ್ರೆ ಅವರ ಮನೆಗೆ ಹೋಗಿ ಖುಣ ತೀರಿಸಿ. ಆಟದಲ್ಲಿ ಅಲ್ಲ ಎಂದು ಜಗದೀಶ್ ಕೂಗಾಡಿದ್ದಾರೆ. ಇನ್ನು ಚೈತ್ರಾ ಕ್ಯಾಪ್ಟನ್ ಹಂಸಾ ಮೇಲೆ ಗರಂ ಆಗಿದ್ದು ಯಾವ್ ಸೀಮೆ ಕ್ಯಾಪ್ಟನ್ ನೀವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಿಗ್ ಬಾಸ್ ಇನ್ಮುಂದೆ ನಾವು ಯಾವ್ ಗೇಮ್ ಆಡಲ್ಲ. ಮೋಸ, ಅನ್ಯಾಯವೆಂದು ಸುರೇಶ್ ಹೇಳಿದ್ದಾರೆ.
ಈ ಟಾಸ್ಕ್ ನಲ್ಲಿ ಸ್ವರ್ಗ ನಿವಾಸಿಗಳ ಗೆದ್ದುಕೊಂಡಿದ್ದಾರೆ. ಈ ನಡುವೆ ನಾನು ಯಾವ್ ತಂಡಕ್ಕೂ ಬೆಂಬಲ ನೀಡುತ್ತಿಲ್ಲವೆಂದು ಹಂಸಾ ಅವರು ಕಣ್ಣೀರಿಟ್ಟಿದ್ದಾರೆ.
ನನಗೆ ತುಂಬಾ ಖುಷಿ ಆಗ್ತಾ ಇದೆ. ನಾನು ಇಲ್ಲಿಂದ ಹೋಗಲ್ಲ. ಮೊದಲ ವಾರ ಹೋಗಬೇಕಂಥ ಇದ್ದೆ. ಎರಡನೇ ವಾರ ಹಾಗೆ ಅನ್ನಿಸ್ತಾ ಇಲ್ಲ. ನನ್ನನ್ನು ವಾಪಸ್ ಕರೆಸಿದ ಬಿಗ್ ಬಾಸ್ ನಿರ್ಧಾರ ಸರಿಯಾಗಿತ್ತು. ಇಲ್ಲಿ ಪ್ರತಿ ಸೆಕೆಂಡ್ ಎಂಜಾಯ್ ಮಾಡ್ತಾ ಇದ್ದೇನೆ. ಪ್ರತಿ ದಿನ ಎಂಜಾಯ್ ಮಾಡ್ತಾ ಇದ್ದೇನೆ ಎಂದು ಜಗದೀಶ್ ಕ್ಯಾಮರಾ ಮುಂದೆ ಹೇಳಿದ್ದಾರೆ.
ನರಕ ನಿವಾಸಿಯ ತಂಡದ ಕ್ಯಾಪ್ಟನ್ ಆಗಿ ಮೋಕ್ಷಿತಾ ಅವರು ಆಯ್ಕೆ ಆಗಿದ್ದು, ಸ್ವರ್ಗ ನಿವಾಸಿಗಳ ಕ್ಯಾಪ್ಟನ್ ಆಗಿ ಗೌತಮಿ ಆಯ್ಕೆ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.