BBK11: ಬಿಗ್ ಬಾಸ್ ಪಯಣ ಮುಗಿಸಿದ ಮಾನಸ; ಸ್ಪರ್ಧಿಗಳಿಂದ ಕಣ್ಣೀರಿನ ವಿದಾಯ
Team Udayavani, Nov 3, 2024, 10:53 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ 5ನೇ ವಾರದ ಎಲಿಮಿನೇಷನ್ ನಡೆದಿದೆ. ಇಷ್ಟು ದಿನ ಮನೆಮಂದಿಯ ಜತೆ ಮನರಂಜನೆಯ ಭಾಗವಾಗಿದ್ದ ಮಾನಸ ಅವರು ಮನೆಯಿಂದ ಹೊರಬಂದಿದ್ದಾರೆ.
ಧನರಾಜ್, ಮಾನಸ, ಚೈತ್ರಾ ಅವರಿಗೆ ಮನೆಯಿಂದ ಪತ್ರ ಬಂದಿದೆ. ಇದನ್ನು ಓದಿ ಸದಸ್ಯರು ಖುಷ್ ಆಗಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಹೂಸಿನ ಚರ್ಚೆ..
ಮಂಜು, ಧನರಾಜ್ ತ್ರಿಬಲ್ ಲವ್ ಸ್ಟೋರಿಯ ಪಾತ್ರವನ್ನು ಮಾಡಿ ಕಿಚ್ಚನ ಮುಖದಲ್ಲಿ ನಗು ತರಿಸಿದ್ದಾರೆ.
ಹನುಮಂತು ಅವರು ಬಿಡುವ ಹೂಸಿನ ಲೆಕ್ಕವನ್ನು ಮಾಡುತ್ತೇನೆ ಎಂದು ಧನರಾಜ್ ಹೇಳಿದ್ದು, ಇದನ್ನು ಕೇಳಿದ ಕಿಚ್ಚ ಇಷ್ಟು ವರ್ಷದ ಬಿಗ್ ಬಾಸ್ ಸೀಸನ್ ನಲ್ಲಿ ಹೂಸಿನ ಬಗ್ಗೆ ಮಾತನಾಡ್ತೇನೆ ಅಂಥ ಅನ್ಕೊಂಡೇ ಇರಲಿಲ್ಲವೆಂದು. ನನಗೆ ಈ ಬಗ್ಗೆ ಮಾತನಾಡ್ತೇನೆ ಅಂಥ ನಂಬೋಕೆ ಆಗ್ಗಾ ಇಲ್ಲವೆಂದು ನಕ್ಕಿದ್ದಾರೆ.
ಸರಿಯಾದ ಸಮಯಕ್ಕೆ ಊಟ ಮಾಡದೆ ಇರುವುದಕ್ಕೆ ಹೊಟ್ಟೆಯಲ್ಲಿ ಗ್ಯಾಸ್ ತುಂಬುತ್ತದೆ ಎಂದು ಹನುಮಂತು ಹೇಳಿದ್ದಾರೆ.
ಕಿಚ್ಚ ಅವರು ಮನೆಮಂದಿಗೆ ಫನ್ನಿ ಆಗಿರುವ ಟಾಸ್ಕ್ ವೊಂದನ್ನು ನೀಡಿದ್ದಾರೆ. ಆಯಾ ಸ್ಪರ್ಧಿಗಳು ಪ್ಲೇ ಆಗುವ ಹಾಡಿನ ಸಾಹಿತ್ಯಕ್ಕೆ ತಕ್ಕ ಡ್ಯಾನ್ಸ್ ಮಾಡಿದ್ದಾರೆ. ಕ್ರಿಯೇಟಿವ್ ಡ್ಯಾನ್ಸ್ ಪ್ರದರ್ಶನ ನೀಡಿದ ಎಲ್ಲರಿಗೂ ಕಿಚ್ಚ ಸ್ಪೆಷಲ್ ಉಡುಗೊರೆ ನೀಡುವುದಾಗಿ ಹೇಳಿದ್ದಾರೆ.
ಕೆಲ ಪ್ರಶ್ನೆಗಳನ್ನು ಕೇಳಿ ‘ಎಸ್ & ನೋ’ ಬೋರ್ಡ್ ಹಿಡಿದು ಉತ್ತರ ಹೇಳಲಾಗಿದೆ.
ಶಿಶಿರ್ ಅವರು ಎಲ್ಲರೊಂದಿಗೆ ಒಳ್ಳೆಯವರಾಗುವುದರಲ್ಲೇ ಬ್ಯುಸಿಯಾಗಿದ್ದಾರೆ ಎನ್ನುವ ಪ್ರಶ್ನೆಗೆ, ಇದಕ್ಕೆ ಬಹುತೇಕರು ಹೌದು ಎಂದು ಉತ್ತರಿಸಿದ್ದಾರೆ.
ನಾನು ಮನೆಯಲ್ಲಿ ಯಾರಿಗೂ ಹರ್ಟ್ ಮಾಡಲ್ಲ. ಎಲ್ಲರೊಂದಿಗೆ ಬೆರೆಯುತ್ತೇನೆ. ತಪ್ಪು ಅಂಥ ಅನ್ನಿಸೋಕೆ ಶುರುವಾದಾಗ ಎಲ್ಲರೊಂದಿಗೆ ಚರ್ಚೆ ಮಾಡಿದ್ದೇನೆ. ನಾನು ಎಲ್ಲೂ ಒಳ್ಳೆತನದ ಕಾರ್ಡ್ ಪ್ಲೇ ಮಾಡಿಲ್ಲ ಎಂದು ಶಿಶಿರ್ ಹೇಳಿದ್ದಾರೆ.
ತಿವಿಕ್ರಮ್ ಅವರು ಈ ಮನೆಯ ಗೋಮುಖ ವ್ಯಾಘ್ರ ಎನ್ನುವ ಪ್ರಶ್ನೆಗೆ ಬಹುತೇಕರು ನೋ ಎಂದಿದ್ದಾರೆ. ಮೋಕ್ಷಿತಾ ಅವರು ಒಂದೊಂದು ಪರಿಸ್ಥಿತಿ ಅವರು ಒಂದೊಂದು ರೀತಿ ಇರುತ್ತಾರೆ ಎಂದು ‘ಎಸ್’ ಎಂದಿದ್ದಾರೆ.
ಈ ಮನೆಯಲ್ಲಿ ತಲೆ ಮೇಲೆ ಹೊಡೆದಾಗೆ ಸುಳ್ಳು ಹೇಳುವುದು ಸುರೇಶ್ ಅವರು ಎನ್ನುವ ಪ್ರಶ್ನೆಗೆ ಧನರಾಜ್, ಮಂಜು ಅವರು ಹೌದು ಎಂದಿದ್ದಾರೆ.
ಧರ್ಮ ಅವರಿಗೆ ಆಟ ಆಡೋದಕ್ಕೆ ಮಾತ್ರ ಸರಿಯಾಗಿ ಕಾರಣ ಕೊಟ್ಟು ನಾಮಿನೇಟ್ ಮಾಡೋಕ್ಕೂ ಬರಲ್ಲ ಎನ್ನುವ ಪ್ರಶ್ನೆಗೆ ಬಹುತೇಕರು ಹೌದು ಎಂದಿದ್ದಾರೆ
ತೆಲುಗು ಬಿಗ್ ಬಾಸ್ ನೋಡುವವರು ಕೆಲವವರು ನಾನು ಗ್ಲಾಸ್ ನಲ್ಲಿ ಏನು ಕುಡಿಯುವುದು ಎಂದಿದ್ದಾರೆ ಇದಕ್ಕೆ ಕಿಚ್ಚ ರಮ್, ವಿಸ್ಕಿ ಎಂದು ತಮಾಷೆಯಾಗಿ ತೆಲುಗಿನಲ್ಲೇ ಉತ್ತರಿಸಿದ್ದಾರೆ.
ಎಲಿಮಿನೇಷನ್ ನಿಂದ ಪಾರು ಆದವರು ಯಾರು..
ನಾಮಿನೇಟ್ ಆದ 12 ಮಂದಿಯಲ್ಲಿ ಮೋಕ್ಷಿತಾ, ಐಶ್ವರ್ಯಾ, ಹನುಮಂತು, ಮಂಜು, ಶಿಶಿರ್, ಭವ್ಯ , ಧನರಾಜ್, ಸುರೇಶ್, ಚೈತ್ರಾ ಧರ್ಮ ಎಲಿಮಿನೇಷನ್ ತೂಗುಗತ್ತಿಯಿಂದ ಈ ವಾರ ಬಚಾವ್ ಆಗಿದ್ದಾರೆ.
ಎಲಿಮಿನೇಷನ್ ಪ್ರಕ್ರಿಯೆಯನ್ನು ವಿಭಿನ್ನವಾಗಿ ಈ ವಾರ ನಡೆದಿದೆ. ಟಾಪ್ 2 ನಲ್ಲಿ ಅನುಷಾ, ಮಾನಸ ಅವರಿದ್ದರು. ಮನೆಯಿಂದ ಆಚೆ ಹೋಗುವವರಿಗೆ ಬಾಕಿ ಉಳಿದ ಸ್ಪರ್ಧಿಗಳನ್ನು ಏನು ಮಾತನಾಡದೆ ಕೂರಿಸಲಾಗಿದೆ. ಮಾನಸ ಅವರು ದೊಡ್ಮನೆಯಿಂದ ಆಚೆ ಬಂದಿದ್ದಾರೆ.
ಬಿಗ್ಗಿದಪ್ಪಿಗೆ ಕೊಟ್ಟು ಮಾನಸ ಅವರನ್ನು ಎಲ್ಲರೂ ಕಣ್ಣೀರಿನ ವಿದಾಯ ಹೇಳಿದ್ದಾರೆ.
ಮಾನಸ ಅವರು ಮಂಜು ಅವರನ್ನು ಜೈಲಿನ ವಾಸಕ್ಕೆ ಕಳುಹಿಸಿದ್ದಾರೆ.
ವೇದಿಕೆಯಲ್ಲಿ ಮಾತನಾಡಿದ ಮಾನಸ, ಎಲ್ಲೋ ಒಂದು ಕಡೆ ಎಡವಿಬಿದ್ದೆ ಅನ್ನಿಸುತ್ತದೆ. ನನಗೆ ಅಲ್ಲಿ ಹೇಗೆ ಇರಬೇಕು ಅಂಥ ಗೊತ್ತಾಗಿಲ್ಲ. ನನ್ನಿಂದನೇ ತಪ್ಪು ಆಯಿತು ಅಂಥ ಅನ್ನಿಸುತ್ತದೆ. ನಿರೀಕ್ಷೆ ಇಟ್ಟುಕೊಂಡು ಕಳುಹಿಸಿದ್ದರು ಆದರೆ ಅಂದುಕೊಂಡ ಹಾಗೆ ಇರೋಕೆ ಆಗಿಲ್ಲ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Arrested: 1 ಕೋಟಿಗೆ 5 ಕೋಟಿ ರೂ. ಕೊಡುವುದಾಗಿ 5.75 ಕೋಟಿ ರೂ. ವಂಚನೆ; ಮೂವರ ಸೆರೆ
BJP: ರಾಜ್ಯಾಧ್ಯಕ್ಷ ಚುನಾವಣೆ ಸ್ಪರ್ಧೆಗೆ ನಾನೂ ಸಿದ್ಧ: ಬಿ.ವೈ.ವಿಜಯೇಂದ್ರ ತಿರುಗೇಟು
Kotekar Robbery Case: ದರೋಡೆ ಯೋಜನೆಯ ಹಿಂದೆ ಒಬ್ಬನಲ್ಲ; ಇಬ್ಬರು ಸೂತ್ರಧಾರರು?
Horoscope: ಪರಿಹಾರವಿಲ್ಲದ ಸಮಸ್ಯೆ ಇಲ್ಲ ಎಂಬುದು ನೆನಪಿರಲಿ
India-China: ಮಾನಸ ಸರೋವರ ಯಾತ್ರೆ ಪುನಾರಂಭಕ್ಕೆ ಭಾರತ-ಚೀನಾ ಸಮ್ಮತಿ