![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, May 28, 2020, 11:33 AM IST
ಬಂಟ್ವಾಳ: ಶಿರಾಡಿ ಘಾಟ್ ರಸ್ತೆಯ ಕಾಂಕ್ರೀಟ್ ಕಾಮಗಾರಿಗೆ ಬಳಸಲಾದ ಜಪಾನ್ ತಂತ್ರಜ್ಞಾನದ ಯಂತ್ರವನ್ನು ಉಪಯೋಗಿಸಿ ಇದೀಗ ಬಿ.ಸಿ.ರೋಡ್-ಜಕ್ರಿಬೆಟ್ಟು ಹೆದ್ದಾರಿಯ 3.85 ಕಿ.ಮೀ.ಹೆದ್ದಾರಿಗೆ ಕಾಂಕ್ರೀಟ್ ಕಾಮಗಾರಿ ಪ್ರಾರಂಭಗೊಂಡಿದೆ.
ಪ್ರಸ್ತುತ ಬಿ. ಸಿ. ರೋಡ್- ಪುಂಜಾಲ ಕಟ್ಟೆ 19.85 ಕಿ.ಮೀ. ಹೆದ್ದಾರಿಯಲ್ಲಿ ಜಕ್ರಿಬೆಟ್ಟುವರೆಗೆ ಚತುಷ್ಪಥ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದೆ. ಇದಕ್ಕಾಗಿ ಶಿರಾಡಿಘಾಟ್ ರಸ್ತೆಯ ಕಾಮಗಾರಿ ನಿರ್ವಹಿಸಿದ ಓಶ್ಯನ್ ಕನ್‌ಸ್ಟ್ರಕ್ಷನ್ಸ್ ಸಂಸ್ಥೆಯೇ ಈ ಕಾಮಗಾರಿಯನ್ನೂ ನಿರ್ವಹಿಸಲಿದೆ.
ಮೇ 25ರಿಂದ ಪ್ರಾರಂಭ
ಜಪಾನ್ ತಂತ್ರಜ್ಞಾನದ ಈ ಯಂತ್ರದ ಬಳಕೆಯಿಂದ ದಿನ ವೊಂದಕ್ಕೆ ಸುಮಾರು 900 ಮೀ.ವರೆಗೆ ಕಾಮಗಾರಿ ನಿರ್ವಹಿಸಬಹುದಾಗಿದ್ದು, ಜಕ್ರಿಬೆಟ್ಟು ನಲ್ಲಿ ಮೇ 25ರಂದು ಕಾಂಕ್ರೀಟ್ ಕಾಮಗಾರಿ ಪ್ರಾರಂಭ ಗೊಂಡಿದೆ. ಮೊದಲ ದಿನ 200 ಮೀ.ನಷ್ಟು ಮಾತ್ರ ಕಾಂಕ್ರೀಟ್ ಹಾಕಲಾಗಿದೆ.
ಜಕ್ರಿಬೆಟ್ಟು-ಬಿ.ಸಿ.ರೋಡ್ ಮಧ್ಯೆ ಒಟ್ಟು 14 ಮೀ. ಅಗಲದ ಚತುಷ್ಪಥ ರಸ್ತೆ ಕಾಮಗಾರಿ ನಡೆಯಲಿದ್ದು, ಈ ಯಂತ್ರವು ಒಮ್ಮೆ 3.5 ಮೀ.ಅಗಲಕ್ಕೆ ಕಾಂಕ್ರೀಟ್ ಹಾಕುತ್ತದೆ. ಹೀಗಾಗಿ ಒಟ್ಟು 14 ಮೀ. ಅಗಲಕ್ಕೆ ನಾಲ್ಕು ಹಂತಗಳಲ್ಲಿ ಕಾಮಗಾರಿ ನಡೆಯಬೇಕಿದೆ ಎಂದು ಓಶ್ಯನ್ ಕನ್‌ಸ್ಟ್ರಕ್ಷನ್ಸ್‌ನ ಸಿಬಂದಿ ಹೇಳುತ್ತಾರೆ.
ಪ್ರಾರಂಭದಲ್ಲಿ ಬೆಡ್ ಕಾಂಕ್ರೀಟ್ ಹಾಕಿ ಬಳಿಕ ಕಾಂಕ್ರೀಟ್ ಕಾಮಗಾರಿ ನಡೆಸಲಾಗುತ್ತದೆ. ಒಂದು ವೇಳೆ ಮಳೆ ವಿಳಂಬವಾದರೆ ಜೂನ್‌ನಲ್ಲೇ ಒಂದು ಬದಿಯ 7 ಮೀ.ಗಳ ಕಾಂಕ್ರೀಟ್ ಕಾಮಗಾರಿ ಪೂರ್ತಿಯಾಗಿ ನಡೆದು, ವಾಹನ ಸಂಚಾರಕ್ಕೂ ಅನುಕೂಲ ವಾಗಲಿದೆ.
ಯಂತ್ರದ ಪ್ರಯೋಜನವೇನು?
ಹೈಕ್ವಾಲಿಟಿಯ ಯಂತ್ರದ ಮೂಲಕ ಕಾಮಗಾರಿ ನಡೆಸಿದಾಗ ಹೆದ್ದಾರಿ ಹೆಚ್ಚು ಬಾಳಿಕೆ ಬರುತ್ತದೆ ಎನ್ನಲಾಗುತ್ತದೆ. ಎಲ್ಲ ಕೆಲಸಗಳು ಕೂಡ ಈ ಯಂತ್ರದ ಮೂಲಕ ಅಚ್ಚುಕಟ್ಟಾಗಿ ನಡೆಯುತ್ತವೆ ಕಾಂಕ್ರೀಟ್ ಜತೆಗೆ ಹೆದ್ದಾರಿಯನ್ನು ರಫ್ ಮಾಡುವ ಉದ್ದೇಶದಿಂದ ಸ್ಟ್ರಾಕ್ಚರಿಂಗ್ ಮೆಷಿನ್ ಬಳಕೆ ಮಾಡ ಲಾಗುತ್ತದೆ.
ಹೆದ್ದಾರಿ ಕಾಮಗಾರಿಯಲ್ಲಿ ಬಳಕೆ
ಕಾಮಗಾರಿ ಅಚ್ಚುಕಟ್ಟಾಗಿ ಮತ್ತು ವೇಗವಾಗಿ ನಡೆಯುವುದರಿಂದ ಇಂತಹ ಯಂತ್ರವನ್ನು ಬಳಕೆ ಮಾಡಲಾಗುತ್ತದೆ. ರಾಷ್ಟ್ರೀಯ ಹೆದ್ದಾರಿಗಳ ಕಾಂಕ್ರೀಟ್ ಕಾಮಗಾರಿಯ ವೇಳೆ ಇಂತಹ ಯಂತ್ರಗಳನ್ನೇ ಬಳಕೆ ಮಾಡಲಾಗುತ್ತಿದ್ದು, ಹೆದ್ದಾರಿಗೆ ಹೆಚ್ಚು ಬಾಳಿಕೆಯೂ ಇರುತ್ತದೆ.
– ರಮೇಶ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್, ರಾ.ಹೆ.ಉಪವಿಭಾಗ, ಮಂಗಳೂರು.
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.