ಬಿ.ಸಿ.ರೋಡ್-ಪುಂಜಾಲಕಟ್ಟೆ ಹೆದ್ದಾರಿ :ಅಭಿವೃದ್ಧಿಗೊಂಡ ಹೆದ್ದಾರಿಗೆ ಇಂದು ಉದ್ಘಾಟನೆ ಭಾಗ್ಯ
Team Udayavani, Feb 28, 2022, 2:00 PM IST
ಬಂಟ್ವಾಳ : ರಾಷ್ಟ್ರೀಯ ಹೆದ್ದಾರಿ 234ರ ಬಿ.ಸಿ.ರೋಡ್-ಪುಂಜಾಲಕಟ್ಟೆ ನಡುವಿನ 19.85 ಕಿ.ಮೀ.ಗಳ ಅಭಿವೃದ್ಧಿ ಕಾಮಗಾರಿಯು ಫೆ. 28ರಂದು ಉದ್ಘಾಟನೆ ಗೊಳ್ಳುತ್ತಿದ್ದು, ಮಂಗಳೂರಿನಲ್ಲಿ ನಡೆಯುವ ಸಮಾರಂಭದಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಘಡ್ಕರಿ ಅಲ್ಲಿಂದಲೇ ಕಾಮಗಾರಿ ಉದ್ಘಾಟಿಸಲಿದ್ದಾರೆ.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಮೂಲಕ ಕಾಮಗಾರಿ ಅನುಷ್ಠಾನ ಗೊಂಡಿದ್ದು, ಭೂಸ್ವಾಧೀನ ಪರಿಹಾರವೂ ಸೇರಿ ದಂತೆ ಒಟ್ಟು 159.70 ಕೋ.ರೂ.ಗಳಲ್ಲಿ ಕಾಮಗಾರಿ ನಡೆದಿದೆ. ಬಿ.ಸಿ.ರೋಡ್‌ನಿಂದ ಜಕ್ರಿ ಬೆಟ್ಟು ವರೆಗೆ 3.85 ಕಿ.ಮೀ. ಚತುಷ್ಪಥ ಕಾಂಕ್ರೀಟ್ ಕಾಮಗಾರಿ ಹಾಗೂ 16 ಕಿ.ಮೀ. ದ್ವಿಪಥ ಹೆದ್ದಾರಿ ಡಾಮರು ಕಾಮಗಾರಿ ನಡೆದಿದೆ.
ಕಾಮಗಾರಿ ಹಲವು ಸಮಯಗಳ ಹಿಂದೆ ಪೂರ್ಣಗೊಳ್ಳಬೇಕಿದ್ದರೂ, ಬಂಟ್ವಾಳ ಬೈಪಾಸ್ ಜಂಕ್ಷನ್‌ನಲ್ಲಿ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿತ್ತು. ಬಳಿಕ ವಿಶೇಷ ಭೂಸ್ವಾಧೀನಾಧಿಕಾರಿ ಬಂಟ್ವಾಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಎಂಆರ್‌ಪಿಎಲ್ ಪೈಪ್‌ಲೈನ್ ಶಿಫ್ಟಿಂಗ್ ವಿಳಂಬದಿಂದ ಕಾಮಗಾರಿ ಕೊಂಚ ತಡವಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದರು.
2020ರಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಕೆಲವು ತಿಂಗಳ ಕಾಲ ಕಾಮಗಾರಿ ಸಂಪೂರ್ಣ ನಿಂತು ತೊಂದರೆಯುಂಟಾಗಿತ್ತು. ಇದೀಗ ಕಾಮಗಾರಿ ಬಹುತೇಕ ಮುಗಿದು ಉದ್ಘಾ ಟನೆಯ ಹಂತಕ್ಕೆ ಬಂದಿದೆ.
14 ಮೀ. ಅಗಲದ ಚತುಷ್ಪಥ ಹೆದ್ದಾರಿ
ಬಿ.ಸಿ.ರೋಡ್-ಜಕ್ರಿಬೆಟ್ಟು ಮಧ್ಯದ 3.85 ಕಿ.ಮೀ. ಹೆದ್ದಾರಿಯು ಚತುಷ್ಪಥ ಗೊಂಡಿದ್ದು, ಕಾಂಕ್ರೀಟ್ ಕಾಮಗಾರಿ ಯನ್ನು ಜಪಾನ್ ತಂತ್ರಜ್ಞಾನದ ಯಂತ್ರದ ಮೂಲಕ ನಿರ್ವಹಿಸಲಾಗಿತ್ತು. ಈ ಭಾಗ ದಲ್ಲಿ ತಲಾ 7 ಮೀ. ಅಗಲದ ಎರಡು ರಸ್ತೆಗಳು ನಿರ್ಮಾಣ ಗೊಂಡಿದೆ. ಮಧ್ಯದಲ್ಲಿ ಡಿವೈಡರ್ ಸೇರಿದಂತೆ ತಡೆಬೇಲಿಯಾಗಿ ರೈಲಿಂಗ್ಸ್, ಕಾಂಕ್ರೀಟ್ ಚರಂಡಿ, ಪ್ರಮುಖ ಭಾಗಗಳಲ್ಲಿ ಇಂಟರ್‌ಲಾಕ್ ಇದೆ. ಹೆದ್ದಾರಿಗೆ ಕಾಂಕ್ರೀಟ್ ಅಳವಡಿಕೆ ಪೂರ್ಣಗೊಂಡಿದ್ದರೂ, ಭಂಡಾರಿಬೆಟ್ಟು ನೆರೆ ವಿಮೋಚನ ರಸ್ತೆ ಸೇರುವಲ್ಲಿ ಹಾಗೂ ಕಾಮಾಜೆ ಕ್ರಾಸ್ ಬಳಿ ಹೆದ್ದಾರಿ ಮಧ್ಯದ ಡಿವೈಡರ್ ಕಾಮಗಾರಿ, ರೈಲಿಂಗ್ಸ್ ಅಳವಡಿಕೆ, ಪೈಂಟಿಂಗ್, ಬೀದಿದೀಪ ಅಳವಡಿಕೆ ಮೊದಲಾದ ಕಾಮಗಾರಿಗಳು ಬಾಕಿ ಇವೆ.
ವಾರದೊಳಗೆ ಪೂರ್ಣ
ಶೇ. 5 ದಷ್ಟು ಬಾಕಿ ಇರುವ ಕಾಮಗಾರಿ ಒಂದು ವಾರದೊಳಗೆ ಪೂರ್ಣಗೊಳ್ಳುತ್ತದೆ. ದ್ವಿಪಥ ಡಾಮರು ಅಳವಡಿಕೆ ಪೂರ್ಣಗೊಂಡಿದೆ. ಚತುಷ್ಪಥ ಕಾಮಗಾರಿಯಲ್ಲಿ ಕೆಲವೆಡೆ ರೈಲಿಂಗ್ಸ್, ಡಿವೈಡರ್, ಪೈಂಟಿಂಗ್, ಚರಂಡಿ ಕಾಮಗಾರಿ ಬಾಕಿ ಇದೆ.
– ಕೃಷ್ಣಕುಮಾರ್, ಸಹಾಯಕ ಕಾರ್ಯಪಾಲಕ ಎಂಜಿನಿಯರ್ ರಾ.ಹೆ. ಇಲಾಖೆ, ಮಂಗಳೂರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Belagavi: ಪಿಒಕೆ ಬಗ್ಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಮತ್ತೆ ಹೇಳಬೇಕಿಲ್ಲ: ಡಿಕೆ ಶಿವಕುಮಾರ್
ಮಂಗಳಮುಖಿಯನ್ನು ಪ್ರೀತಿಸಿ ಮದುವೆ ಆಗುತ್ತೇನೆಂದ ಪುತ್ರ; ಅವಮಾನದಿಂದ ಪೋಷಕರು ಆತ್ಮ*ಹತ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.