![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
![IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ](https://www.udayavani.com/wp-content/uploads/2025/02/5-25-415x249.jpg)
Team Udayavani, May 2, 2024, 12:09 AM IST
ಬಂಟ್ವಾಳ/ಉಪ್ಪಿನಂಗಡಿ: ಮದುವೆ ಇನ್ನಿತರ ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಾಹನಗಳು ರಸ್ತೆಗಿಳಿದ ಪರಿಣಾಮ ಬಿ.ಸಿ.ರೋಡ್, ಉಪ್ಪಿನಂಗಡಿ ಸೇರಿದಂತೆ ಕರಾವಳಿಯ ವಿವಿಧೆಡೆ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಬುಧವಾರ ಹಲವು ತಾಸು ಸಂಚಾರ ದಟ್ಟಣೆ ಉಂಟಾಗಿತ್ತು.
ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿಯಲ್ಲಿ ಟ್ರಾಫಿಕ್ ಜಾಮ್ ಪ್ರಾರಂಭಗೊಂಡು ಧರ್ಮಸ್ಥಳ ಹೆದ್ದಾರಿ, ಬಂಟ್ವಾಳ ಪೇಟೆಯ ರಸ್ತೆ ಯೂ ಸೇರಿದಂತೆ ಹೆದ್ದಾರಿ ಎರಡೂ ಭಾಗಗಳಲ್ಲೂ ವಾಹನಗಳು ಸಾಲು ನಿಂತಿದ್ದವು.
ಮಧ್ಯಾಹ್ನ 12ರ ವೇಳೆಗೆ ಪ್ರಾರಂಭ ಗೊಂಡ ಟ್ರಾಫಿಕ್ ಜಾಮ್ ಸಂಜೆ 3.30ರ ವರೆಗೂ ಮುಂದುವರಿದಿತ್ತು.
ಕಾರ್ಮಿಕರ ದಿನದ ಹಿನ್ನೆಲೆಯಲ್ಲಿ ರಜಾ ದಿನವಾದರೂ ಶುಭ ಸಮಾರಂಬ ಭಗಳ ಹಿನ್ನೆಲೆಯಲ್ಲಿ ವಾಹನ ಸಂಚಾರ ಹೆಚ್ಚಿತ್ತು. ಜತೆಗೆ ಬಿ.ಸಿ.ರೋಡಿನ ನಾರಾಯಣ ಗುರು ವೃತ್ತದ ಬಳಿ ಎರಡು ಪ್ರತ್ಯೇಕ ಅಪಘಾತಗಳು ಸಂಭವಿಸಿ ಚಾಲಕರು ರಸ್ತೆಯಲ್ಲೇ ಜಗಳಕ್ಕಿಳಿದದ್ದು ಕೂಡ ಟ್ರಾಫಿಕ್ ಜಾಮ್‌ಗೆ ಕಾರಣವಾಯಿತು.
ಬಂಟ್ವಾಳ ಸಂಚಾರ ಠಾಣಾ ಪಿಎಸ್‌ಐ ಸುತೇಶ್ ಕೆ.ಪಿ. ಹಾಗೂ ಸಿಬಂದಿ ಬಿ.ಸಿ.ರೋಡು ಸರ್ಕಲ್ ಸೇರಿದಂತೆ ಸುತ್ತಮುತ್ತಲ ರಸ್ತೆಗಳಲ್ಲಿ ನಿಂತು ವಾಹನಗಳನ್ನು ನಿಯಂ ತ್ರಿಸಿದರು. ವಾಹನಗಳು ಒಂದು ರಸ್ತೆಯಿಂದ ಮತ್ತೊಂದು ರಸ್ತೆಗೆ ತಿರುವುದಕ್ಕೂ ಅವಕಾಶ ಸಿಗದೆ ಟ್ರಾಫಿಕ್ ಜಾಮ್ ಮೂರು ತಾಸಿನವರೆಗೂ ಮುಂದು ವರಿಯಲು ಕಾರಣವಾಯಿತು.
ಕೆಲವು ಕಡೆ ವಾಹನಗಳಿಗೆ ಒಂದೇ ಸಾಲಿನಲ್ಲಿ ಬರುವಂತೆ ಪೊಲೀಸರು ಸೂಚಿಸಿದರೂ ಅಡ್ಡಾದಿಡ್ಡಿಯಾಗಿ ನುಗ್ಗಿಸಿದ ಪರಿಣಾಮ ಸಾಕಷ್ಟು ಗೊಂದಲ ಉಂಟಾಯಿತು. ಮದುವೆ ಸೇರಿದಂತೆ ಇನ್ನಿತರ ಸಮಾರಂಭಗಳಿಗೆ ಬೇಗ ಹೋಗಬೇಕು, ಎರಡು ಮೂರು ಮದುವೆ ಸುಧಾರಿಸಬೇಕು ಎಂದು ಹೊರಟವರು ಸಂಕಷ್ಟಕ್ಕೊಳಗಾದರು.
ಇತ್ತ ಉಪ್ಪಿನಂಗಡಿಯಲ್ಲಿ ಬೆಳಗ್ಗೆ 11ರಿಂದ ಮಧ್ಯಾಹ್ನ 1.30ರ ವರೆಗೆ ರಾಷ್ಟ್ರೀಯ ಹೆದ್ದಾರಿ 75ರ ಚರ್ತುಷ್ಪಥ ರಸ್ತೆಯಿಂದ ರಾಜ್ಯ ಹೆದ್ದಾರಿ ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ನೇಜಿಕಾರು ತನಕದ 2 ಕಿ.ಮೀ. ಹಾಗೂ ಪಟ್ಟಣದ ಹಳೇ ಬಸ್ ನಿಲ್ದಾಣ, ಪೊಲೀಸ್ ಠಾಣೆ ಮುಂಭಾಗ, ರಥ ಬೀದಿ ಉದ್ದಕ್ಕೂ ವಾಹನಗಳು ಸಾಲು ನಿಂತಿದ್ದವು.
ಉದಯವಾಣಿ ಎಚ್ಚರಿಸಿತ್ತು
ಬಿ.ಸಿ.ರೋಡಿನ ಸರ್ಕಲ್ ಬಳಿ ಹೆದ್ದಾರಿ ಕಾಮಗಾರಿ ಕೂಡ ನಡೆಯುತ್ತಿದ್ದು, ಪ್ರಸ್ತುತ ಅಲ್ಲಿ ಎತ್ತ ಸಾಗಬೇಕು ಎಂಬ ಗೊಂದಲ ಉಂಟಾಗುತ್ತಿರುವುದಿಂದ ಕೂಡ ಟ್ರಾಫಿಕ್ ಜಾಮ್ ಸಮಸ್ಯೆಯ ಜತೆಗೆ ಅಪಘಾತ ಭೀತಿ ಇದೆ ಎನ್ನುವುದರ ಕುರಿತು ಎ. 22ರಂದು ಉದಯವಾಣಿ “ಬಿ.ಸಿ.ರೋಡು ಸರ್ಕಲ್: ಕೊಂಚ ಎಚ್ಚರ ತಪ್ಪಿದರೂ ನೇರ ಹೊಂಡಕ್ಕೆ’ ಎಂಬ ಶೀರ್ಷಿಕೆಯಲ್ಲಿ ವಿಶೇಷ ವರದಿ ಪ್ರಕಟಿಸಿ ಸಂಬಂಧಪಟ್ಟವರನ್ನು ಎಚ್ಚರಿಸಿತ್ತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್‌ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
Congress ಪಕ್ಷಕ್ಕೆ ಮರು ಸೇರ್ಪಡೆಯಾದ ಎಲ್.ಆರ್.ಶಿವರಾಮೇಗೌಡ, ಬ್ರಿಜೇಶ್ ಕಾಳಪ್ಪ
You seem to have an Ad Blocker on.
To continue reading, please turn it off or whitelist Udayavani.