ಬಿಸಿಎಂ ಹಾಸ್ಟೆಲ್‌ನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ಅನಾಹುತ, ತುರ್ತು ನಿರ್ಗಮನ ಇಲ್ಲದ ಕಟ್ಟಡ

Team Udayavani, Jan 15, 2022, 12:16 PM IST

ಬಿಸಿಎಂ ಹಾಸ್ಟೆಲ್‌ನಲ್ಲಿ ಅಗ್ನಿ ಆಕಸ್ಮಿಕ; ತಪ್ಪಿದ ಅನಾಹುತ, ತುರ್ತು ನಿರ್ಗಮನ ಇಲ್ಲದ ಕಟ್ಟಡ

ಕುಂದಾಪುರ : ಇಲ್ಲಿನ ತಾ.ಪಂ. ಬಳಿ ಇರುವ ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮದ ಬಾಲಕಿಯರ ವಸತಿ ನಿಲಯದಲ್ಲಿ ರಾತ್ರಿ ಅಗ್ನಿ ಆಕಸ್ಮಿಕ ಆಗಿದ್ದು ಸಕಾಲಿಕ ಸಮಯ ಚಾತುರ್ಯದಿಂದ ಸಂಭಾವ್ಯ ಅನಾಹುತ ತಪ್ಪಿದೆ. ಆದರೆ ತುರ್ತು ನಿರ್ಗಮನ ಇಲ್ಲದ ಈ ಹಾಸ್ಟೆಲ್‌ ಕಟ್ಟಡದಲ್ಲಿ ಇದ್ದ ಒಂದೇ ಪ್ರವೇಶ ನಿರ್ಗಮನ ದ್ವಾರದಲ್ಲಿ ಏಕಕಾಲದಲ್ಲಿ ನೂರಾರು ವಿದ್ಯಾರ್ಥಿನಿಯರು ಹೊರ ತೆರಳಲು ಪ್ರಯತ್ನಪಟ್ಟ ಕಾರಣ ಸಮಸ್ಯೆ, ಗೊಂದಲ ಉಂಟಾಯಿತು.

ಒಂದೇ ಬಾಗಿಲು
ಕಟ್ಟಡದಲ್ಲಿ ಸಭಾಂಗಣ ಅಥವಾ ಪ್ರಾರ್ಥನಾ ಹಾಲ್‌ ಇದೆ. ಊಟದ ಕೊಠಡಿ, ಅಡುಗೆ ಕೋಣೆ, ಸ್ಟೋರ್‌ ರೂಂ, ಬಟ್ಟೆ ಒಗೆಯಲು ಕೊಠಡಿ, ಶೌಚಾಲಯ, ಸ್ನಾನದ ಕೊಠಡಿಗಳು, ವಾರ್ಡನ್‌ ಕಚೇರಿ ಇವೆ. ವಿಶಾಲ ಗಾಳಿ ಬೆಳಕಿನ ವ್ಯವಸ್ಥೆಗೆ ಬೇಕಾದಂತೆ ಕಟ್ಟಡದ ವಿನ್ಯಾಸ ರೂಪಿಸಲಾಗಿದೆ. ಆದರೆ ಒಂದೇ ಪ್ರವೇಶ ದ್ವಾರ ಇದೆ. ಪ್ರವೇಶ ನಿರ್ಗಮನ ಎರಡೂ ಇದರಲ್ಲೇ.
ರಾಜ್ಯಾದ್ಯಂತ ಏಕವಿನ್ಯಾಸದಲ್ಲಿ ಹಾಸ್ಟೆಲ್‌ ಕಟ್ಟಡಗಳನ್ನು ಇಲಾಖೆಯ ಎಂಜಿನಿಯರ್‌ ವಿನ್ಯಾಸಗೊಳಿಸುವ ಕಾರಣ ಹೀಗಾಗಿದೆ. ವಿದ್ಯಾರ್ಥಿನಿ ನಿಲಯಗಳಾದ ಕಾರಣ ಭದ್ರತೆಯ ದೃಷ್ಟಿಯಿಂದ ಒಂದೇ ಬಾಗಿಲು ಮಾಡಲಾಗುತ್ತದೆ.

ಗೊಂದಲ
ಒಂದೇ ಬಾಗಿಲು ಮಾಡಿರುವುದು ಭದ್ರತೆ ದೃಷ್ಟಿಯಿಂದ ಸೂಕ್ತ. ಆದರೆ ಅಡುಗೆ ಸಾಮಗ್ರಿ, ಅಡುಗೆ ಅನಿಲ ಸೇರಿದಂತೆ ವಸ್ತುಗಳು ಬಂದಾಗ ಲಾರಿ ಕಟ್ಟಡದ ಹಿಂದೆ ವರೆಗೆ ಹೋಗಲು ವ್ಯವಸ್ಥೆ ಇದೆ. ಬಾಗಿಲ ಬಳಿ ಲಾರಿ ನಿಲ್ಲಿಸಲು, ಲಾರಿ ತಲುಪಲು ಅವಕಾಶವೇ ಇಲ್ಲ. ಒಂದೋ ಕಾಂಪೌಂಡ್‌ನ‌
ಹೊರಗೆ ರಸ್ತೆಯಲ್ಲಿ ನಿಲ್ಲಿಸಬೇಕು ಅಥವಾ ಕಾಂಪೌಂಡ್‌ ಒಳಗೆ ತಂದರೆ ಕಟ್ಟಡದ ಹಿಂದೆವರೆಗೆ ಹೋಗಬೇಕು. ಆದರೆ ಮುಂಬಾಗಿಲವರೆಗೆ ಹೊತ್ತು ತರಬೇಕು. ಇದು ಹೆಚ್ಚುವರಿ ಕೆಲಸ.

ಅಗ್ನಿ ಆಕಸ್ಮಿಕ
ಕಟ್ಟಡದಲ್ಲಿ ಒಳಗೆ ಮೇನ್‌ ಸ್ವಿಚ್‌ ಬಳಿ ರಾತ್ರಿ ಇದ್ದಕ್ಕಿದ್ದಂತೆ ವಿದ್ಯುತ್‌ ಶಾರ್ಟ್‌ ಸರ್ಕ್ನೂಟ್‌ ಉಂಟಾಯಿತು. ಭಾರೀ ಪ್ರಮಾಣದಲ್ಲಿ ಹೊಗೆ ಕಾಣಿಸಿಕೊಂಡಿತು. ಆಗ ಹಾಸ್ಟೆಲ್‌ ಒಳಗಿದ್ದ 130 ಮಂದಿ (10 ಮಂದಿ ಇರಲಿಲ್ಲ) ವಿದ್ಯಾರ್ಥಿನಿಯರು ಕಟ್ಟಡದ ಹೊರಹೋಗಲು ಪಡಿಪಾಟಲು ಪಡಬೇಕಾಯಿತು. ಒಂದೇ ಬಾಗಿಲು ಇದ್ದ ಕಾರಣ ನೂಕು ನುಗ್ಗಲಾಯಿತು. ಈ ಮಧ್ಯೆಯೇ ಅದನ್ನು ಸರಿಪಡಿಸುವ, ಆರಿಸುವ ಕೆಲಸವೂ ನಡೆಯಬೇಕಿತ್ತು. ಕಾಲು¤ಳಿತವೂ ಆಯಿತು. ಇಂತಹ ಸಂದರ್ಭದಲ್ಲಿ ಕಟ್ಟಡದಲ್ಲಿ ತುರ್ತು ನಿರ್ಗಮನ ದ್ವಾರ ಒಂದು ಇರಬೇಕು ಎಂಬ ಅಭಿಪ್ರಾಯ ಕೇಳಿ ಬಂತು. ಸ್ಥಳೀಯರು ಸೇರಿ ಬೆಂಕಿ ನಂದಿಸುವ, ಮಕ್ಕಳನ್ನು ಸುರಕ್ಷಿತವಾಗಿ ಹೊರಗೆ ತರುವ ಕೆಲಸ ಮಾಡಿದರು.

ಇಲಾಖೆ ನಿರ್ಲಕ್ಷ್ಯ
ಕಟ್ಟಡಕ್ಕೆ ತಾಗಿಕೊಂಡೇ ವಿದ್ಯುತ್‌ ಹೈ ಟೆಂಷನ್ ಲೈನ್‌ ಹಾದು ಹೋಗಿತ್ತು. ವಿದ್ಯುತ್‌ ಕಂಬ ಸ್ಥಳಾಂತರಿಸಬೇಕಿತ್ತು. ಶಾಸಕರು ಮೆಸ್ಕಾಂಗೆ ಪತ್ರ ಬರೆದಾಗ ಸ್ವಂತ ಅನುದಾನದಲ್ಲಿ ಇದಕ್ಕೆ ಅವಕಾಶ ಇಲ್ಲದ ಕಾರಣ ಬಿಸಿಎಂ ಇಲಾಖೆ ಹಣ ಕಟ್ಟಿದರೆ ಕಂಬ ಸ್ಥಳಾಂತರಿಸಲಾಗುವುದು ಎಂದು ಮೆಸ್ಕಾಂ ಇಲಾಖೆ ಉತ್ತರಿಸಿತ್ತು. ಎರಡು ವರ್ಷಗಳಾದರೂ ಇಲಾಖೆ ಹಣವೂ ಕಟ್ಟಿರಲಿಲ್ಲ, ಸ್ಥಳಾಂತರಕ್ಕೆ ಕ್ರಮವೂ ಕೈಗೊಂಡಿರಲಿಲ್ಲ. ಕೆಲವು ದಿನಗಳ ಹಿಂದೆ ಮರ ಬಿದ್ದು ಕಂಬ ತುಂಡಾಯಿತು. ಅದೃಷ್ಟವಶಾತ್‌ ತಂತಿ ಹಾಸ್ಟೆಲ್‌ ಮೇಲೆ ಬೀಳಲಿಲ್ಲ. ಮೆಸ್ಕಾಂನವರು ಮಾನವೀಯತೆ ನೆಲೆಯಲ್ಲಿ ಕಂಬವನ್ನು ತುಸು ದೂರ ಹಾಕಿದ್ದಾರಾದರೂ ಪೂರ್ಣ ಸುರಕ್ಷಿತವಲ್ಲ. ಹಾಗಿದ್ದರೂ ಬಿಸಿಎಂ ಇಲಾಖೆ ಮೌನಕ್ಕೆ ಶರಣಾಗಿದೆ. ಈಗ ತುರ್ತುನಿರ್ಗಮನ ದ್ವಾರದ ಸರದಿ. ಇಲಾಖೆ ಸ್ಥಳೀಯವಾಗಿ ಇದನ್ನು ಸರಿಪಡಿಸುವಂತಿಲ್ಲ. ಬಾಗಿಲು ಅಳವಡಿಸುವಂತಿಲ್ಲ. ಮೇಲಧಿಕಾರಿಗಳು ಮುತುವರ್ಜಿ ವಹಿಸಬೇಕು. ಹಿರಿಯ ಅಧಿಕಾರಿಗಳಿಂದ ಅನುಮತಿ ಬರಬೇಕು. ಆಗಷ್ಟೇ ಸಾಧ್ಯ. ಇಂತಹ ನಿರ್ಲಕ್ಷ್ಯ ವಿದ್ಯಾರ್ಥಿನಿಯರ ಭವಿಷ್ಯಕ್ಕೆ ತೊಡಕೆಂದು ಯಾಕೆ ಅನಿಸುವುದಿಲ್ಲ.

ಭೇಟಿ ನೀಡಿದ್ದೇನೆ
ವಿದ್ಯಾರ್ಥಿನಿ ನಿಲಯದಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಕ್ಕಳಿದ್ದಾರೆ. ಅಗ್ನಿ ಆಕಸ್ಮಿಕ ನಡೆದ ಬಳಿಕ ಗುರುವಾರ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಏಕರೂಪದ ವಿನ್ಯಾಸ ಇರುವ ಕಾರಣ ಸ್ಥಳೀಯವಾಗಿ ನಾವು ಕಟ್ಟಡದ ವಿನ್ಯಾಸ ಬದಲಿಸುವಂತಿಲ್ಲ. ಹಿರಿಯ ಅಧಿಕಾರಿಗಳ ಗಮನಕ್ಕೆ ತರಲಾಗುವುದು.

-ದೇವೀಂದ್ರ ಎಸ್‌. ಬಿರಾದಾರ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ, ಉಡುಪಿ

ಟಾಪ್ ನ್ಯೂಸ್

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Perla-fire

Disaster: ಪೆರ್ಲದಲ್ಲಿ ಭಾರೀ ಬೆಂಕಿ ದುರಂತ; ಐದು ಅಂಗಡಿಗಳು ಸಂಪೂರ್ಣ ಭಸ್ಮ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Mandya: ಕನ್ನಡ ಹಬ್ಬಕ್ಕೆ ಏಳು ಲಕ್ಷಕ್ಕೂ ಅಧಿಕ ಜನರ ಭೇಟಿ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

Kannada Sahitya Sammelana: ವಿದೇಶದಲ್ಲೂ ಸಮ್ಮೇಳನ ನಡೆಯಲಿ: ಹಕ್ಕೊತ್ತಾಯ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಗೀತಾರ್ಥ ಚಿಂತನೆ 133: ಜವಾಬ್ದಾರಿಯೊಂದಿಗೆ ಅಭಿಮಾನಶೂನ್ಯತೆ ಅತಿಸೂಕ್ಷ್ಮ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

Udupi: ಭಗವದ್ಗೀತೆ ಜೀವನದ ಭಾಗವಾಗಲಿ: ಸುಬ್ರಹ್ಮಣ್ಯ ಶ್ರೀ

dw

Malpe: ಕಲ್ಮಾಡಿ; ಕಟ್ಟಡದಿಂದ ಬಿದ್ದು ಕಾರ್ಮಿಕ ಸಾವು

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

Brahmavar: ಕೊಕ್ಕರ್ಣೆ; ಜುಗಾರಿ ನಿರತನ ಬಂಧನ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

Udupi: ಯುವ ಗೀತೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಕಾರ್ಯಾಗಾರ

SASTHANA-TOLL

Kota: ಸಾಸ್ತಾನ ಟೋಲ್‌: ಡಿ.30ರ ತನಕ ಯಥಾಸ್ಥಿತಿ ಮುಂದುವರಿಕೆಗೆ ಸೂಚನೆ

kejriwal-2

Delhi; ಸ್ತ್ರೀಯರಿಗೆ ಸಹಾಯಧನ: ಮನೆಯಲ್ಲೇ ನೋಂದಣಿ

mob

Samsung Phone; ಫೋಟೋ ಸೋರಿಕೆ: ಕೆಲಸಗಾರರು ವಜಾ?

1-kuu

ಕಾರ್ಗಿಲ್‌ ದಾಳಿ ಮಾಹಿತಿ ಕೊಟ್ಟ ಕುರಿಗಾಹಿ ಸಾವು: ಸೇನೆ ನಮನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.