ಕೋವಿಡ್ ಸೋಂಕು ಮರುಕಳಿಸದಿರಲಿ ಎಚ್ಚರ!

Team Udayavani, Jun 1, 2021, 6:40 AM IST

ಕೋವಿಡ್ ಸೋಂಕು ಮರುಕಳಿಸದಿರಲಿ ಎಚ್ಚರ!

ಕೊರೊನಾ ಸಾಂಕ್ರಾಮಿಕದ ಈ ದಿನಗಳಲ್ಲಿ ಜನರಿಗೆ ತಮ್ಮ ಆರೋಗ್ಯ ಕಾಪಾಡಿಕೊಳ್ಳುವುದೇ ಒಂದು ಸವಾಲಾಗಿ ಬಿಟ್ಟಿದೆ. ಒಂದೆಡೆಯಿಂದ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದರೆ ಸೋಂಕುಪೀಡಿತರಾಗಿ ಚಿಕಿತ್ಸೆಯ ಬಳಿಕ ಗುಣಮುಖರಾದವರನ್ನು ವಿವಿಧ ತೆರನಾದ ಕಾಯಿಲೆಗಳು ಬಾಧಿಸತೊಡಗಿವೆ. ಇದೇ ವೇಳೆ ಕೊರೊನಾದಿಂದ ಗುಣಮುಖರಾದವರನ್ನು ಸೋಂಕು ಮತ್ತೆ ಬಾಧಿಸುತ್ತಿರುವ ಪ್ರಕರಣಗಳೂ ವರದಿಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಕೊರೊನಾದಿಂದ ಗುಣಮುಖರಾದವರು ತಮ್ಮ ಆರೋಗ್ಯವನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬ ಬಗ್ಗೆ ವೈದ್ಯಕೀಯ ತಜ್ಞರು ಹಲವು ಸಲಹೆ, ಸೂಚನೆಗಳನ್ನು ನೀಡುತ್ತಲೇ ಬಂದಿದ್ದಾರೆ. ಇವುಗಳಿಗೆ ಪೂರಕವಾಗಿ ದಂತವೈದ್ಯರು ಕೊರೊನಾದಿಂದ ಗುಣಮುಖರಾದವರು ಕೆಲವೊಂದು ಮುಂಜಾಗ್ರತ ಕ್ರಮಗಳನ್ನು ಅನುಸರಿಸುವುದು ಅತ್ಯಗತ್ಯವಾಗಿದೆ ಎಂದು ಕಿವಿಮಾತು ಹೇಳಿದ್ದಾರೆ.

ಕೋವಿಡ್‌ ಸೋಂಕಿನಿಂದ ಚೇತರಿಸಿಕೊಂಡವರು ತಾವು ದಿನನಿತ್ಯ ಬಳಸುತ್ತಿದ್ದ ಹಲ್ಲುಜ್ಜುವ ಬ್ರಷ್‌ ಮತ್ತು ನಾಲಗೆ ಸ್ವತ್ಛಗೊಳಿಸಲು ಬಳಸುವ ಟಂಗ್‌ ಕ್ಲೀನರ್‌ ಅನ್ನು ಬದಲಿಸಬೇಕು. ಇದರಿಂದ ಮರು ಸೋಂಕು ಬಾರದಂತೆ ತಡೆಗಟ್ಟಬಹುದಾಗಿದೆ ಎಂಬುದು ದಂತವೈದ್ಯರ ಅಭಿಪ್ರಾಯ.

ಸೋಂಕು ಹೇಗೆ ಹರಡುತ್ತದೆ?
ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ) ಪ್ರಕಾರ, ಕೊರೊನಾ ವೈರೆಸ್‌ ಸೋಂಕಿಗೆ ಒಳಗಾದ ವ್ಯಕ್ತಿಯು ಸೀನುವಾಗ, ಕೆಮ್ಮುವಾಗ ಮತ್ತು ಮಾತನಾಡುವಾಗ ಬಾಯಿಯಿಂದ ಹಾರುವ ಸಣ್ಣ ಹನಿಗಳಿಂದ ಇನ್ನೊಬ್ಬರಿಗೆ ಸೋಂಕು ಹರಡಬಹುದು. ಆ ಹನಿಗಳು ಬಿದ್ದ ಸ್ಥಳದ ಮೇಲ್ಮೆಯನ್ನು ಬೇರೊಬ್ಬರು ಸ್ಪರ್ಶಿಸಿ ಅನಂತರ ಕೈಗಳನ್ನು ಕಣ್ಣು, ಮೂಗು, ಬಾಯಿಯನ್ನು ಮುಟ್ಟುವುದರಿಂದ ಸೋಂಕು ಹರಡುತ್ತದೆ. ಇದೇ ರೀತಿಯಾಗಿ ಹಲ್ಲುಜ್ಜುವ ಬ್ರಷ್‌ಗಳನ್ನು ಮುಟ್ಟುವುದು ಅಥವಾ ಸೋಂಕಿತರು ಬಳಸುವ ಬ್ರಷ್‌ಗಳೊಂದಿಗೆ ಮನೆಯ ಇತರ ಸದಸ್ಯರ ಬ್ರಷ್‌ಗಳನ್ನಿಡುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ. ಇವು ಇತರರಿಗೆ ಸೋಂಕು ಹರಡಲು ಅಥವಾ ಆ ವ್ಯಕ್ತಿಗೆ ಮತ್ತೆ ಸೋಂಕು ತಗಲುವ ಸಾಧ್ಯತೆಯನ್ನು ಹೆಚ್ಚಿಸುತ್ತದೆ.

ಮುನ್ನೆಚ್ಚರಿಕೆ ಕ್ರಮಗಳೇನು?
ಕುಟುಂಬದ ಯಾವನೇ ಒಬ್ಬ ಸದಸ್ಯನಿಗೆ ಕೊರೊನಾ ಸೋಂಕು ತಗಲಿದ್ದಲ್ಲಿ ಅಥವಾ ಸೋಂಕಿನಿಂದ ಚೇತರಿಸಿಕೊಂಡಿದ್ದಲ್ಲಿ ಮನೆಯ ಇತರ ಸದಸ್ಯರು ಮತ್ತು ಆ ಸದಸ್ಯ ಕೆಲವು ಮುನ್ನೆಚ್ಚರಿಕ ಕ್ರಮಗಳನ್ನು ತೆಗೆದುಕೊಳ್ಳುವುದು ಉತ್ತಮ.
– ಸೋಂಕಿತ ಅಥವಾ ಸೋಂಕಿನಿಂದ ಗುಣಮುಖರಾದವರು ಬಳಸುವ ಟೂತ್‌ಪೇಸ್ಟ್‌, ಟವೆಲ್‌, ಟೂತ್‌ಬ್ರಷ್‌, ಟಂಗ್‌ ಕ್ಲೀನರ್‌ ಮತ್ತು ಶೌಚಾಲಯದಲ್ಲಿ ದಿನವೂ ಉಪಯೋಗಿಸುವಂತಹ ವಸ್ತುಗಳನ್ನು ಮನೆಯ ಇತರ ಸದಸ್ಯರು ಬಳಸುವ ಈ ವಸ್ತುಗಳ ಜತೆಗಿರಿಸಬೇಡಿ.

– ಸೋಂಕಿತ ಕೋವಿಡ್‌ನಿಂದ ಚೇತರಿಸಿಕೊಂಡ ಅನಂತರ ಆ ವಸ್ತುಗಳನ್ನು ತತ್‌ಕ್ಷಣವೇ ಬದಲಿಸುವುದು ಸೂಕ್ತ. ಏಕೆಂದರೆ ಇದು ಸೋಂಕು ಹರಡುವುದನ್ನು ತಪ್ಪಿಸುತ್ತದೆ.

– ದಿನಕ್ಕೆ ಎರಡರಿಂದ ಮೂರು ಬಾರಿ ಬ್ರಷ್‌ ಮಾಡಿದರೆ ಒಳ್ಳೆಯದು.
– ಸೋಂಕಿನಿಂದ ಚೇತರಿಸಿಕೊಂಡ ಅನಂತರ ನಿಯಮಿತವಾಗಿ ಬಾಯಿಯನ್ನು ತೊಳೆಯುತ್ತಿರಿ.
– ಬ್ರಷ್‌ ಮತ್ತು ಟಂಗ್‌ ಕ್ಲೀನರ್‌ ಅನ್ನು ಆ್ಯಂಟಿಸೆಪ್ಟಿಕ್‌ ಮೌತ್‌ವಾಷ್‌ನಿಂದ ಸ್ವತ್ಛಗೊಳಿಸಿ.
-ಸೋಂಕಿತರು ಮಾತ್ರವಲ್ಲ ಸಾಮಾನ್ಯವಾಗಿ ಜ್ವರ, ಶೀತ, ಕೆಮ್ಮು ಕಾಣಿಸಿಕೊಂಡ ವ್ಯಕ್ತಿ ಗುಣಮುಖನಾದ ಮೇಲೆ ಹಳೆಯ ಬ್ರಷ್‌ ಮತ್ತು ಟಂಗ್‌ ಕ್ಲೀನರ್‌ ಬಳಸದಿರುವುದು ಉತ್ತಮ.
– ಬಾಯಿಯಲ್ಲಿ ಬ್ಯಾಕ್ಟೀರಿಯಾಗಳನ್ನು ಕಡಿಮೆ ಮಾಡಲು ಮೌತ್‌ವಾಶ್‌ ಬಳಸಬಹುದು ಅದರ ಬಳಕೆ ಸಾಧ್ಯವಿಲ್ಲದ ಸಂದರ್ಭದಲ್ಲಿ ಚೆಚ್ಚಗಿನ ನೀರಿನಲ್ಲಿ ಉಪ್ಪು ಬೆರೆಸಿ ಬಾಯಿಯನ್ನು ತೊಳೆಯುವುದರಿಂದಲೂ ಬ್ಯಾಕ್ಟೀರಿಯಾವನ್ನು ನಾಶಪಡಿಸಬಹುದು.

ಟಾಪ್ ನ್ಯೂಸ್

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

Kasaragod: ಫ್ಯಾಶನ್‌ ಗೋಲ್ಡ್‌ ವಂಚನೆ ಪ್ರಕರಣ: ಪೂಕೋಯ ತಂಙಳ್‌ ಮತ್ತೆ ಬಂಧನ

1-kasturi

Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Kannada: ಅಂತರ್ಜಾಲದಲ್ಲಿ ಕನ್ನಡದ ಕುಸುಮ ಮತ್ತಷ್ಟು ಅರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Karnataka: ಕನ್ನಡ ಅಧ್ಯಯನ ಪೀಠಗಳ ವೈಭವದ ದಿನಗಳು ಮರಳಲಿ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Naxal: ನಕ್ಸಲರ ನೆತ್ತರ ಹೆಜ್ಜೆ..: ರಾಜ್ಯದಲ್ಲಿ ನಕ್ಸಲ್‌ ಅಟ್ಟಹಾಸದ ಕರಾಳ ಇತಿಹಾಸ ಇಲ್ಲಿದೆ

Maha-Leaders

Assembly Election: ಮಹಾರಾಷ್ಟ್ರ ಕದನದಲ್ಲಿ ಘಟಾನುಘಟಿಗಳ ಭವಿಷ್ಯ ಪಣಕ್ಕೆ

Ammebala-Subbarao

ಸ್ವಾವಲಂಬಿ ಬದುಕು, ಹೆಣ್ಣು ಮಕ್ಕಳ ಶಿಕ್ಷಣ ಪ್ರವರ್ತಕ ಅಮ್ಮೆಂಬಳ ಸುಬ್ಬರಾವ್‌ ಪೈ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ : ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Kumbhashi: ರಾ.ಹೆ.66 ಭೀಕರ ರಸ್ತೆ ಅಪಘಾತ: ಪ್ರಾಣಾಪಾಯದಿಂದ ಪಾರಾದ ಗಾಯಾಳುಗಳು !

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Udyavara: ಹೊಳೆಯಲ್ಲಿ ತೇಲಿ ಬಂದ ಅಪರಿಚಿತ ಶವ

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Puttur: ಸ್ಕೂಲ್‌ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.