ಕ್ಯಾನ್ಸರ್ ಗೆದ್ದು,ಉದ್ಯಮದಿಂದ ಜೀವನ ಕಟ್ಟಿಕೊಂಡ ತ್ರಿಪುರ ಮಹಿಳೆ
Beating Cancer,Yummy Pickle
Team Udayavani, Jun 11, 2020, 8:13 PM IST
ಆಕೆ 39 ವರ್ಷದ ತ್ರಿಪುರದ ಗೃಹಿಣಿ. ಅಡುಗೆಯಲ್ಲಿ ಎತ್ತಿದ ಕೈ. ಕೈ ರುಚಿಯು ಕೂಡ ಅಷ್ಟೇ ಸೊಗಸು. ಆಗಾಗ ತಾನು ಮಾಡಿದ ಅಡುಗೆಯ ಫೋಟೋಗಳನ್ನು ಸಾಮಾಜಿಕ ಜಾಲತಾಣ ಮತ್ತು ಬ್ಲಾಗ್‌ಗಳಲ್ಲಿ ಹಂಚಿಕೊಳ್ಳುವುದು ಆಕೆಯ ಇಷ್ಟ. ಇದರಿಂದಾಗಿಯೇ ಆಕೆಗೆ ಒಂದಿಷ್ಟು ಜನ ಅಭಿಮಾನಿಗಳಿದ್ದರು.
ಒಂದು ದಿನ ಓರಿಸ್ಸಾದ ಒಬ್ಬ ಆಕೆಯ ಕೈ ರುಚಿಯನ್ನು ಸವಿಯಬೇಕು ಎಂಬ ಆಸೆಯಿಂದ ಆಕೆಯ ಫೋಸ್ಟ್‌ಗೆ ಕೆಮಂಟ್ ಮಾಡಿ, ನನಗೆ ಕಳಿಸಿಕೊಡಿ, ನಿಮ್ಮ ಕೈರುಚಿ ನೋಡಬೇಕು ಎನ್ನುತ್ತಾನೆ. ಅದಕ್ಕೆ ಆ ಗೃಹಿಣಿ ಅವನಿಗೆಂದೇ ತಯಾರಿಸಿದ ವಿಶೇಷ ತ್ರಿಪುರ ದೇಶಿ ಉಪ್ಪಿನಕಾಯಿಯನ್ನು ಕಳಿಸಿಕೊಡುತ್ತಾಳೆ. ಅದರ ರುಚಿ ಸವಿದ ಓರಿಸ್ಸಾದವ ನೀವ್ಯಾಕೆ ಉಪ್ಪಿನಕಾಯಿ ಉದ್ಯಮ ಮಾಡಬಾರದು ಎಂದು ಸರಳವಾಗಿ ಪ್ರಶ್ನಿಸಿ ಬಿಡುತ್ತಾನೆ.
ಆಗಲೇ ಆ ಗೃಹಿಣಿಗೆ ಉಪ್ಪಿನಕಾಯಿ ಉದ್ಯಮ ಆರಂಭಿಸುವ ಯೋಚನೆ ಒಳೆಯುತ್ತದೆ. ಏನೇ ಆಗಲಿ ಇದೊಂದು ಪ್ರಯೋಗ ಮಾಡೋಣಾ ಎಂದು ಉಪ್ಪಿನಕಾಯಿ ಉದ್ಯಮ ಆರಂಭಿಸಿ ಇಂದು ಯಶಸ್ವಿಯಾಗಿ ಮಾದರಿಯಾದ ಮಹಿಳೆಯೇ ತ್ರಿಪುರದ ಪುಷ್ಪಿತಾ ಸಿನ್ಹಾ.
ಪುಷ್ಪಿತಾ ಸಿನ್ಹಾ ಕೇವಲ ಉಪ್ಪಿನಕಾಯಿ ಉದ್ಯಮಿ ಅಷ್ಟೇ ಅಲ್ಲ. ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವೀಧರೆ. ಬಳಿಕ ನಾನಾ ಬಗೆಯ ಉದ್ಯೋಗ ಮಾಡುತ್ತಾಳೆ. 2005ರಲ್ಲಿ ಮದುವೆ ಕೂಡ ನಡೆಯುತ್ತದೆ.
ಗಂಡನ ಉದ್ಯೋಗದ ನಿಮಿತ್ತವಾಗಿ ಮುಂಬಯಿ, ಪುಣೆಗಳಲ್ಲಿ ನೆಲೆಸುತ್ತಾಳೆ. ಈ ಮಧ್ಯೆ ಆಕೆಗೆ ಇಷ್ಟವಾದ ತ್ರಿಪುರ ದೇಶಿಯ ತಿಂಡಿ, ತಿನಿಸು, ಉಪ್ಪಿನಕಾಯಿಗಳನ್ನು ಮಾಡಿ, ತನ್ನ ಬ್ಲಾಗ್‌ಗಳಲ್ಲಿ ಪ್ರಕಟಿಸುವಾಗ ಗೆಳೆಯರ ಪ್ರೋತ್ಸಾಹದೊಂದಿ ಉದ್ಯಮ ಆರಂಭಿಸಲು ಸಲಹೆ ಕೇಳಿಬಂದಾಗ ಆಕೆ ಮುನ್ನುಗುತ್ತಾಳೆ.
2017ರಲ್ಲಿ ಉಪ್ಪಿನಕಾಯಿ ಉದ್ಯಮವನ್ನು ಆರಂಭಿಸುತ್ತಾಳೆ. ತ್ರಿಪುರವು ಸುವಾಸಿತ ಪದಾರ್ಥಗಳ ಸಂಪತ್ತು ಹೊಂದಿರುವ ರಾಜ್ಯವಾಗಿದೆ. ಇಲ್ಲಿ ರುಚಿ ರುಚಿಯಾದ ಭಕ್ಷ್ಯಭೋಜನಗಳನ್ನು ಸವಿಯಬಹುದಾಗಿದ್ದು, ರುಚಿಕರವಾದ ಬಿದಿರಿನ ಚಿಗುರಿನಿಂದ ತಯಾರಿಸುವ ಉಪ್ಪಿನಕಾಯಿಗೆ ದೇಶದೆಲ್ಲೆಡ ಬಹುಬೇಡಿಕೆ. ಇದನ್ನೇ ಬಂಡವಾಳವಾಗಿಸಿಕೊಂಡ ಪುಷ್ಪಿತಾ ಸೌಗಂಧಿತ ಬಿದುರಿನ ಚಿಗುರೆಲೆಗಳಿಂದ ಉಪ್ಪಿನಕಾಯಿ ಉದ್ಯಮ ಆರಂಭಿಸುತ್ತಾಳೆ. ಮೊದಲ ಪ್ರಯತ್ನವಾದರೂ ಕೂಡ ಪರಿಶ್ರಮದಿಂದ ಉದ್ಯಮ ಯಶಸ್ಸಿನತ್ತ ಸಾಗುತ್ತಿರುತ್ತದೆ. ಉದ್ಯಮ ಯಶಸ್ಸಿನತ್ತ ಸಾಗುತ್ತಿರುವಾಗಲೇ ಬರಸಿಡಿಲೊಂದು ಅಪ್ಪಳಿಸುತ್ತದೆ. ಅದು ಅಂತಿಂಥ ಬರಸಿಡಿಲು ಅಲ್ಲ. ಇಡೀ ಜೀವನವನ್ನೇ ಸರ್ವನಾಶ ಮಾಡುವ ಮಹಾಮಾರಿಯೊಂದು ಪುಷ್ಪಿತಾ ದೇಹದೊಳಗೆ ಹೊಕ್ಕಿರುತ್ತದೆ. ಅದುವೇ, ಬ್ರೆಸ್ಟ್ ಕ್ಯಾನ್ಸರ್.
2017ರಲ್ಲಿ ಪುಷ್ಪಿತಾನಿಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ತಿಳಿಯುತ್ತದೆ. ಆದರೆ ಪುಷ್ಪಿತಾ ಎಂದೆಗುಂದುವುದಿಲ್ಲ. ಇದನ್ನು ಗೆಲ್ಲುತ್ತೇನೆ ಎಂಬ ಹಠ ಆಕೆಗೆ ಬರುತ್ತದೆ. ಇದಕ್ಕೆ ಗಂಡ ಧೈರ್ಯ ತುಂಬುತ್ತಾನೆ. ಬಳಿಕ ಹಂತಹಂತವಾಗಿ ಪುಷ್ಪಿತಾ ದೇಹದಲ್ಲಿ ಚೇತರಿಕೆ ಕಾಣಿಸಿಕೊಳ್ಳುತ್ತದೆ. ಇದರಿಂದ ಅವಳಿಗೆ ತುಸು ನೆಮ್ಮದಿಯಾಗುತ್ತಾಳೆ. ಈಮಧ್ಯೆ ಉದ್ಯಮಕ್ಕೆ ಹೊಡೆತ ಬೀಳಬಾರದು ಎಂಬ ದೃಷ್ಟಿಯಿಂದ ಸ್ಪಲ್ಪ ಮಟ್ಟಿಗೆ ಉಪ್ಪಿನಕಾಯಿಗಳ ಆರ್ಡರ್ ತೆಗೆದುಕೊಂಡು ಮಾರಾಟ ಮಾಡುತ್ತಿರುತ್ತಾಳೆ.
ಪುಷ್ಪಿತಾ ಕುಟುಂಬ, ಉದ್ಯಮ ನಿರ್ವಹಣೆಯ ಸಹಿತ ತನ್ನ ಕ್ಯಾನ್ಸರ್‌ಗೆ ಅವಳು ಹಂತ ಹಂತವಾಗಿ ಕಿಮೊಥೆರೆಪಿಗೆ ಒಳಗಾಗುತ್ತಾಳೆ. ಅನಂತರ ಅವಳು ಬ್ರೆಸ್ಟ್ ಕ್ಯಾನ್ಸರ್ ನಿಂದ ಪೂರ್ಣ ಮುಕ್ತಳಾಗುತ್ತಾಳೆ. ಕೇವಲ ಒಂದೇ ಒಂದು ವರ್ಷದಲ್ಲಿ ಅವಳು ಕ್ಯಾನ್ಸರ್‌ನಿಂದ ಮುಕ್ತಳಾಗಿ ಮತ್ತೆ ತನ್ನ ಉದ್ಯಮಕ್ಕೆ ಪೂರ್ಣವಾಗಿ ತೊಡಗಿಸಿಕೊಳ್ಳುತ್ತಾಳೆ.
ಬಳಿಕ ಪುಷ್ಪಿತಾ ಅಂದುಕೊಡಂತೆ ಉದ್ಯಮ ಮತ್ತೆ ಬಿದುರಿರಿನ ಎಲೆಯಿಂದ ಚಿಗುರೊಡೆಯುತ್ತದೆ. ಆಗ ಪುಷ್ಪಿತಾ ಎಂಬ ಹೆಸರಿನ ಉಪ್ಪಿನಕಾಯಿಗಳು ಮಾರುಕಟ್ಟೆಯಲ್ಲಿ ಬಹುಬೇಡಿಕೆ ಪಡೆಯುತ್ತವೆ. ತರೇಹವಾರಿ ಬಿದುರಿನ ಎಲೆಯ ಉಪ್ಪಿನಕಾಯಿ, ಚಿಕನ್ ಉಪ್ಪಿನ ಕಾಯಿ ಸೇರಿ ವಿವಿಧ ಬಗೆಯ ಉಪ್ಪಿನಕಾಯಿಗಗಳನ್ನು ಮಾರಿ ಅವರೀಗ ಸ್ವಾವಲಂಬಿ ಬದುಕು ಕಟ್ಟಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vitla-ಉಕ್ಕುಡ -ಪಡಿಬಾಗಿಲು ಅಂತರ್ ರಾಜ್ಯ ಹೆದ್ದಾರಿಯ ಅವ್ಯವಸ್ಥೆ: ರಸ್ತೆ ತಡೆದು ಪ್ರತಿಭಟನೆ
Renukaswamy Case: ದರ್ಶನ್ ಜಾಮೀನಿಗೆ ಪ್ರಬಲ ವಾದ; ಸಂಜೆ 4ಗಂಟೆಗೆ ಮತ್ತೆ ವಿಚಾರಣೆ
Thirthahalli: ತುಂಗಾ ಕಮಾನು ಸೇತುವೆ ಕೆಳಗೆ ಅಸ್ತಿ ಪಂಜರ ಪತ್ತೆ
RBI ಗವರ್ನರ್ ಶಕ್ತಿಕಾಂತ್ ದಾಸ್ ಚೆನ್ನೈ ಆಸ್ಪತ್ರೆಗೆ ದಾಖಲು; ಶೀಘ್ರವೇ ಡಿಸ್ ಚಾರ್ಜ್
Mundargi: ಲಾರಿ ಹರಿದು 12 ಕುರಿಗಳು ಸಾವು; 30 ಕುರಿಗಳು ಗಂಭೀರ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.