Beauty Tips: ಮುಖದ ಕಾಂತಿ ಹೆಚ್ಚಿಸಲು ಟೊಮ್ಯಾಟೋ ಫೇಸ್‌ ಪ್ಯಾಕ್‌; ಇದರ ಲಾಭವೇನು ಗೊತ್ತಾ?


Team Udayavani, Sep 15, 2024, 9:30 AM IST

Tan removalಗೆ ಟೊಮೆಟೊ ಫೇಸ್‌ ಪ್ಯಾಕ್‌; ನೈಸರ್ಗಿಕ ತ್ವಚೆ ಕಾಳಜಿ

ಇತ್ತೀಚೆಗಂತೂ ದಿನದಲ್ಲಿ ಯಾವಾಗ ಮಳೆ ಬರುತ್ತದೆ ಯಾವಾಗ ಬಿಸಿಲು ಬರುತ್ತದೆ ಎಂದು ಹೇಳುವುದೇ ಕಷ್ಟ. ಒಂದು ಸಲ ಮನೆಯಿಂದ ಹೊರ ಹೋಗುವಾಗ ಧಾರಾಕಾರ ಮಳೆಯಿದ್ದರೆ, ಮತ್ತೊಮ್ಮೆ ಸುಡು ಬಿಸಿಲು. ಇಂತಹ ಸಮಯದಲ್ಲಿ ಬಿಸಿಲಿನ ಬೇಗೆಗೆ ಮುಖವು ಕಾಂತಿ ಹೀನವಾಗುತ್ತದೆ.

ಬಿಸಿಲಿನಿಂದ ಮುಖದ ಬಣ್ಣ ಬದಲಾಗುವುದು ಸಹಜ. ಇಂತಹ ಸಂದರ್ಭದಲ್ಲಿ ತಮ್ಮ ತ್ವಚೆಯ ಮೇಲೆ ವಿಶೇಷ ಕಾಳಜಿ ಹೊಂದಿರುವ ವ್ಯಕ್ತಿಗಳು ಮುಖದ ಕಾಂತಿಯನ್ನು ಕಾಪಾಡಿಕೊಳ್ಳಲು ಹಲವಾರು ದಾರಿಗಳನ್ನು ಹುಡುಕುತ್ತಾರೆ. ಅದರಲ್ಲಿ ಬ್ಯೂಟಿ ಪಾರ್ಲರ್ ಗಳಿಗೆ (Beauty Parlour) ಮೊರೆ ಹೋಗುವುದು ಕೂಡ ಒಂದು. ಅಲ್ಲಿ ಬಹಳಷ್ಟು ಹಣವೂ ಖರ್ಚಾಗುವುದರ ಜೊತೆಗೆ ರಾಸಾಯನಿಕ ಪದಾರ್ಥಗಳಿಂದ ಕೂಡಿದ ಉತ್ಪನ್ನಗಳಿಂದ ಮುಖದ ಕಾಂತಿಯು ಕ್ರಮೇಣ ಕಡಿಮೆಯಾಗುವ  ಸಾಧ್ಯತೆಯೂ ಹೆಚ್ಚು. ಹಾಗಾಗಿ ನೈಸರ್ಗಿಕವಾಗಿ ಮನೆಯಲ್ಲಿಯೇ ತಯಾರಿಸುವಂತಹ ಉತ್ಪನ್ನಗಳನ್ನು ಮುಖಕ್ಕೆ ಬಳಸುವುದು ಉತ್ತಮ.

ಮನೆಯಲ್ಲಿ ಅಡುಗೆಗೆ ಬಳಸುವ ಟೊಮ್ಯಾಟೋವನ್ನು (Tomato) ಬಳಸಿಕೊಂಡು ತಯಾರಿಸುವ ಫೇಸ್ ಪ್ಯಾಕ್ (Face Pack) ಮುಖದ ಕಾಂತಿಯನ್ನು ಮರಳಿ ತರುವಲ್ಲಿ ಸಹಾಯ ಮಾಡುತ್ತದೆ.

ಫೇಸ್‌ ಪ್ಯಾಕ್ ತಯಾರಿಸುವ ವಿಧಾನ
ಎರಡು ಟೇಬಲ್ ಸ್ಪೂನ್ ನಷ್ಟು ಟೊಮ್ಯಾಟೋ ತಿರುಳನ್ನು ತೆಗೆದುಕೊಂಡು ಅದಕ್ಕೆ 2 ರಿಂದ 3 ಬಿಂದುಗಳಷ್ಟು ಲಿಂಬೆ ರಸವನ್ನು ಸೇರಿಸಿ ನಂತರ ಅದಕ್ಕೆ ಒಂದು ಟೇಬಲ್‌ ಸ್ಪೂನ್ ಮೊಸರನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಬೇಕು. ನಂತರ ಅದನ್ನು ಮುಖಕ್ಕೆ ಲೇಪಿಸಿ, 15-20ನಿಮಿಷ ಗಾಳಿಗೆ ಒಣಗಳು ಬಿಟ್ಟು ನಂತರ  ಶುಭ್ರವಾದ ತಣ್ಣಗಿನ ನೀರಿನಲ್ಲಿ ಮುಖ ತೊಳೆಯಬೇಕು. ವಾರಕ್ಕೆ 2ರಿಂದ 3 ಬಾರಿ ಈ ರೀತಿ ಮಾಡುವುದರಿಂದ ಬಿಸಿಲಿನಿಂದ ಉಂಟಾದ ಟ್ಯಾನ್ ತೊಲಗಿಸಲು ಸಾಧ್ಯ.

ಟೊಮ್ಯಾಟೋ ಹೋಳನ್ನು ಮುಖಕ್ಕೆ ಲೇಪಿಸುವುದರಿಂದ ಕೂಡ ಮುಖದ ಕಾಂತಿ ಹೆಚ್ಚಾಗುತ್ತದೆ. ಟೊಮ್ಯಾಟೋ ಹಣ್ಣಿನಲ್ಲಿ ವಿಟಮಿನ್‌ ಸಿ, ಎ, ಕೆ, ಆ್ಯಂಟಿ ಆಕ್ಸಿಡೆಂಟ್, ಆಮ್ಲೀಯತೆ ಹಾಗೂ Lycopene ಹೇರಳವಾಗಿದ್ದು ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ನಿಮ್ಮ ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ.

ಮುಖಕ್ಕೆ ನಿಯಮಿತವಾಗಿ ಟೊಮ್ಯಾಟೋ ಫೇಸ್‌ ಪ್ಯಾಕ್ ಲೇಪಿಸುವುದರಿಂದಾಗುವ ಉಪಯೋಗವೇನು?

ಟೊಮ್ಯಾಟೋಗಳು ಚರ್ಮದ ಡೆಡ್‌ ಸೆಲ್ಸ್ ತೆಗೆದು ಹಾಕಲು ಸಹಾಯ ಮಾಡುತ್ತದೆ.

ಮೊಡವೆಗಳು ಬರದಂತೆ ತಡೆಗಟ್ಟುತ್ತದೆ ಹಾಗೂ ಈಗಾಗಲೇ ಮೂಡಿರುವ ಮೊಡವೆಗಳು ಒಡೆಯುವುದನ್ನು ತಡೆಯುತ್ತದೆ.

ತೇವಭರಿತ ಚರ್ಮ  ಹೊಂದಿದವರಿಗೆ ಮುಖದಲ್ಲಿ ಅತಿಯಾದ ತೇವಾಂಶ ಸ್ರವಿಸುವಿಕೆಯನ್ನು ತಡೆಯುತ್ತದೆ.

ಮುಖದ ಚರ್ಮದಲ್ಲಿನ ತೆರೆದ ರಂಧ್ರಗಳನ್ನು ಬಿಗಿಗೊಳಿಸುವಲ್ಲಿ ಸಹಾಯ ಮಾಡುತ್ತದೆ.

ವಯಸ್ಸಾದಂತೆ ಮುಖದಲ್ಲಿ ಮೂಡುವ ಡಾರ್ಕ್‌ ಸರ್ಕಲ್, ಕಲೆಗಳು, ಸುಕ್ಕುಗಟ್ಟುವಿಕೆಯನ್ನು ಇದು ತಡೆಯುತ್ತದೆ.

ಟೊಮ್ಯಾಟೋ ಲೇಪನದಿಂದಾಗುವ ಅಡ್ಡ ಪರಿಣಾಮಗಳು

ಟೊಮ್ಯಾಟೋ ಲೇಪನವು ಚರ್ಮಕ್ಕೆ ಉತ್ತಮವಾಗಿದ್ದರೂ ಕೆಲವೊಮ್ಮೆ ಇದು ಮುಖಕ್ಕೆ ಹಾನಿ ಉಂಟು ಮಾಡಬಹುದು. ನಿಮ್ಮ ಮುಖದಲ್ಲಿ ಅಲರ್ಜಿ ಆಗಿದ್ದರೆ, ಅಥವಾ ಮುಖದಲ್ಲಿ ಯಾವುದಾದರೂ ಗಾಯಗಳು ಮಾಸದೆ ಹಾಗೆಯೇ ಉಳಿದಿದ್ದರೆ, ಆಮ್ಲೀಯತೆ (acidic) ಅಂಶವುಳ್ಳ ಟೊಮ್ಯಾಟೋವನ್ನು ಲೇಪಿಸುವುದರಿಂದ ನಿಮಗೆ ಕಿರಿಕಿರಿಯುಂಟಾಗಬಹುದು. ಹಾಗೆಯೇ ಇದು ಮುಖದಲ್ಲಿಉರಿತವನ್ನು ಉಂಟು ಮಾಡಬಹುದು. ಅಂತಹ ಸಂದರ್ಭದಲ್ಲಿ ನೀವು ಟೊಮ್ಯಾಟೋವನ್ನು ಬಳಸಿದ ಫೇಸ್‌ ಪ್ಯಾಕ್ ಬಳಸದೇ ಇರುವುದು ಉತ್ತಮ.

ಪೂರ್ಣಶ್ರೀ ಕೆ.

ಟಾಪ್ ನ್ಯೂಸ್

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

20-health

Bronchiolitis: ಮಕ್ಕಳಲ್ಲಿ ಬ್ರೊಂಕೊಲೈಟಿಸ್‌; ಹೆತ್ತವರು ತಿಳಿದಿರಬೇಕಾದ ಅಂಶಗಳು

19-health

Psychiatric ಚಿಕಿತ್ಸೆ; ಅನುಸರಣೆಯ ಅಗತ್ಯಗಳು, ನಿರ್ವಹಿಸುವ ವಿಧಾನಗಳು

18-liver-cancer

Liver cancer: ಯಕೃತ್ತಿನ ಕ್ಯಾನ್ಸರ್‌

14-health

ಗಂಭೀರಕಾಯಿಲೆಗಳಿಂದ ಮಕ್ಕಳಿಗೆ ರಕ್ಷಣೆ-ಬಾಲ್ಯಕಾಲದಲ್ಲಿ ಲಸಿಕೆಹಾಕಿಸಿಕೊಳ್ಳುವುದು ಯಾಕೆಮುಖ್ಯ

13-health

Diabetes ನಿರ್ವಹಣೆ; ನಿಮ್ಮ ಊಟದ ಬಟ್ಟಲು ಸಮತೋಲಿತವಾಗಿರಲಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

1-kalla

Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.