ಬೀಜಿಂಗ್: ಹಬ್ಬುತ್ತಿರುವ ಸೋಂಕು ಅನ್ಯ ರಾಷ್ಟ್ರಗಳಲ್ಲಿ ತಳಮಳ!
Team Udayavani, Jun 19, 2020, 11:41 AM IST
ಬೀಜಿಂಗ್: ಚೀನದ ರಾಜಧಾನಿ ಬೀಜಿಂಗ್‌ನಲ್ಲಿ ಎರಡನೇ ಬಾರಿಗೆ ಕೋವಿಡ್ ಅಪಾಯ ಸೃಷ್ಟಿಸುತ್ತಿರುವ ಬೆನ್ನಲ್ಲೇ ವಿಶ್ವದ ಇತರೆಲ್ಲ ದೇಶಗಳಲ್ಲಿ ತಳಮಳ ಆರಂಭಗೊಂಡಿದೆ.
ವುಹಾನ್‌ನಲ್ಲಿ ವೈರಸ್ ಪತ್ತೆಯಾಗಿ, ಇಡೀ ವಿಶ್ವಕ್ಕೆ ಅಲ್ಲಿಂದ ವೈರಸ್ ಹರಡಿದ ಬಳಿಕ ಆ ಸ್ಥಳದಲ್ಲಿ ವೈರಸ್ ಅನ್ನು ಸಂಪೂರ್ಣವಾಗಿ ನಿಯಂತ್ರಿಸಿದ್ದಾಗಿ ಚೀನ ಹೇಳಿತ್ತು. ಆದರೆ, ಸೋಂಕು ಪ್ರಕರಣಗಳು ಈಗ ಚೀನದ ಇತರ ಭಾಗಗಳಲ್ಲಿ ಕಂಡು ಬರುತ್ತಿರುವುದು, ಕೋವಿಡ್ ರೂಪಾಂತರಗೊಂಡು ಪುನರಾ ವರ್ತನೆಯಾಗುತ್ತದೆ ಎಂಬ ವೈಜ್ಞಾನಿಕ ಅಧ್ಯಯನ ಕಾರರ ಮಾತುಗಳು ವಿವಿಧ ದೇಶಗಳ ಆತಂಕವನ್ನು ಮತ್ತಷ್ಟು ಹೆಚ್ಚು ಮಾಡಿದೆ.
ಮಹಿಳೆಗೆ ಕೋವಿಡ್ : 2 ಕಾಂಪ್ಲೆಕ್ಸ್ ಸೀಲ್‌ಡೌನ್
ಈಗಾಗಲೇ ಹಲವು ದೇಶಗಳಲ್ಲಿ ಸೋಂಕಿನ ಪ್ರಮಾಣ ಏರಿಕೆಯಾಗುತ್ತಲೇ ಇದೆ. ಕೆಲವು ದೇಶಗಳಲ್ಲಿ ನಿತ್ಯದ ಸೋಂಕಿನ ಪ್ರಮಾಣ ಇಳಿಕೆಯಾಗುತ್ತಿದ್ದರೂ ಈಗಾಗಲೇ ಇರುವ ದೊಡ್ಡ ಸಂಖ್ಯೆಯ ಸೋಂಕಿತರಿಂದಾಗಿ ಆರೋಗ್ಯ ವಲಯ ನಿಭಾಯಿಸಲಾಗದೆ ಹಳಿತಪ್ಪಿದೆ.
ಸೋಂಕು ಮತ್ತೆ ಹಾವಳಿ ಮಾಡಬಹುದೆಂಬ ಆತಂಕ ಅಮೆರಿಕದ ಫ್ಲೋರಿಡಾ, ಟೆಕ್ಸಾಸ್, ಅರಿಜೋನಾ, ಇರಾನ್, ಭಾರತವನ್ನೂ ಕಾಡುತ್ತಿದೆ. ಐರೋಪ್ಯ ಒಕ್ಕೂಟದ ದೇಶಗಳೂ ಸಹಿತ ವಿವಿಧ ದೇಶಗಳು ಲಾಕ್‌ಡೌನ್ ಅನ್ನು ಸಡಿಲಿಕೆ ಮಾಡಿದ್ದು ಸೋಂಕು ಪುನರಾವರ್ತನೆಯಾದರೆ? ಎಂಬ ಭೀತಿ ಒಳಗಿಂದಲೇ ಕಾಡುತ್ತಿದೆ. ಬೀಜಿಂಗ್‌ನ ಸದ್ಯದ ಪರಿಸ್ಥಿತಿಯನ್ನು ಅಲ್ಲಿನ ಅಧಿಕಾರಿಗಳು ಅತೀ ಗಂಭೀರ ಮತ್ತು ಎಚ್ಚರಿಕೆಯ ಗಂಟೆಯೂ ಹೌದು ಎಂದಿದ್ದಾರೆ.
ಬೀಜಿಂಗ್‌ನ ಪರಿಸ್ಥಿತಿಯಿಂದಾಗಿ ಅಲ್ಲಿಗೆ ಬರುವ ಸುಮಾರು 1,225 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಅತಿ ಹೆಚ್ಚು ವಿಮಾನಗಳ ಸಂಚಾರವಿರುವ ವಿಶ್ವದ 2ನೇ ಅತಿ ದೊಡ್ಡ ವಿಮಾನ ನಿಲ್ದಾಣ ಬೀಜಿಂಗ್ ಆಗಿದ್ದು, ಅಲ್ಲಿಂದಲೂ ವೈರಸ್ ಹರಡಬಹುದೇ ಎಂಬ ಭೀತಿ ಇದೆ. ಇದೇ ವೇಳೆ ಅಮೆರಿಕದಲ್ಲಿ ಪ್ರಕರಣಗಳು ಸಂಖ್ಯೆ ಏರುತ್ತಿರುವಂತೆ ಹೊಸ ಹೊಸ ಕಡೆಗಳಲ್ಲಿ ಕೇಸುಗಳು ಪತ್ತೆಯಾಗುತ್ತಿವೆ. ಈ ಕಾರಣ ಅಮೆರಿಕದೊಂದಿಗಿನ ಗಡಿ ಯನ್ನು ತುರ್ತು ಬಳಕೆಗಳಲ್ಲದ ವಿಚಾರಗಳಿಗೆ ಮುಚ್ಚುವುದಾಗಿ ಕೆನಡಾ ಹೇಳಿದೆ.
ದ.ಕೊರಿಯಾದಲ್ಲೂ ಹೊಸ 43 ಕೇಸುಗಳೂ ಪುನರಾವರ್ತನೆಯ ಸಾಧ್ಯತೆಗಳನ್ನು ಬೊಟ್ಟು ಮಾಡಿದೆ. ಜನರ ಓಡಾಟ ಹೆಚ್ಚಾಗುತ್ತಿರುವಂತೆ ಪ್ರಕರಣಗಳೂ ಏರತೊಡಗಿರುವುದು ಸಮಸ್ಯೆ ಸೃಷ್ಟಿಸಿದೆ. ನ್ಯೂಜಿಲೆಂಡ್‌ನಲ್ಲೂ ಸಮಸ್ಯೆ ಇದೇ ರೀತಿ ಇದೆ. ಇಲ್ಲೆಲ್ಲ ಸಾರ್ವಜನಿಕರ ಓಡಾಟಕ್ಕೆ, ನೈಟ್‌ಕ್ಲಬ್‌ಗಳು, ಚರ್ಚ್, ರೆಸ್ಟೋರೆಂಟ್‌ಗಳ ತೆರೆಯುವಿಕೆಗೆ ಅವಕಾಶ ಕಲ್ಪಿಸಿ ಮೂರ್‍ನಾಲ್ಕು ದಿನಗಳಾಗುತ್ತಿರವಂತೆ ಸಮ ಸ್ಯೆಗೆ ಕಾರಣವಾಗಿದೆ. ಆರ್ಥಿಕ ವ್ಯವಹಾರ ಉತ್ತೇಜನಕ್ಕೆ ಮಳಿಗೆಗಳನ್ನು ತೆರೆಯುವಂತೆಯೂ ಇಲ್ಲ, ಮುಚ್ಚಲು ಹೇಳುವಂತೆಯೂ ಇಲ್ಲ ಎನ್ನುವ ಸಂಕಷ್ಟ ದೇಶಗಳದ್ದಾಗಿದೆ ಹೆಚ್ಚು ಕಡೆಗಳಲ್ಲಿ ರೋಗ ಲಕ್ಷಣಗಳೇ ಇಲ್ಲದೆ ವೈರಸ್ ಹರಡುತ್ತಿ ರುವುದು, ಪತ್ತೆ ಹಚ್ಚುವಿಕೆ, ನಿಯಂತ್ರಣ ಇನ್ನಷ್ಟು ಸವಾಲಾಗಿದೆ ಎಂದು ಡೆನ್ಮಾರ್ಕ್‌ನ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Father of the Nation: ಬಾಂಗ್ಲಾ ರಾಷ್ಟ್ರಪಿತನಿಗೆ ಪಠ್ಯದಿಂದಲೇ ಕೊಕ್!
Adani Case: ಅದಾನಿ ವಿರುದ್ಧದ 3 ಪ್ರಕರಣಗಳ ಜಂಟಿ ವಿಚಾರಣೆಗೆ ನ್ಯೂಯಾರ್ಕ್ ಕೋರ್ಟ್ ಆದೇಶ
New Virus: ಚೀನದಲ್ಲಿ ಹೊಸ ವೈರಸ್ ಹಬ್ಬುತ್ತಿರುವ ಬಗ್ಗೆ ವದಂತಿ!
Explainer: ಹೊಸ ವರ್ಷದ ಆಘಾತ-27 ಗಂಟೆಯಲ್ಲಿ ಅಮೆರಿಕದ ನೆಲದಲ್ಲಿ 3 ಭಯೋ*ತ್ಪಾದಕ ದಾಳಿ!
Thumbay Group; ಶಾರ್ಜಾದಲ್ಲಿ ಮೊದಲ ಖಾಸಗಿ ಮನೋವೈದ್ಯಕೀಯ ಪುನರ್ ವಸತಿ ಆಸ್ಪತ್ರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
16 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಛೋಟಾ ರಾಜನ್ ಗ್ಯಾಂಗ್‌ನ ಸದಸ್ಯ ಅರೆಸ್ಟ್
Actor Allu Arjun: ಕಾಲ್ತುಳಿತ ಪ್ರಕರಣ-ನಟ ಅಲ್ಲುಗೆ ರೆಗ್ಯುಲರ್ ಜಾಮೀನ ಮಂಜೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.