ಬೆಳಗಾವಿ: ಜಿಲ್ಲೆಯಲ್ಲಿ 184 ಮಂದಿಗೆ ಸೋಂಕು
Team Udayavani, Sep 28, 2020, 11:15 AM IST
ಬೆಳಗಾವಿ: ಜಿಲ್ಲೆಯಲ್ಲಿ ರವಿವಾರ 184 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಐವರು ಮೃತಪಟ್ಟಿದ್ದಾರೆ.
ಇದೇ ವೇಳೆ 148 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಇದುವರೆಗೆ ಜಿಲ್ಲೆಯಲ್ಲಿ 19,008 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಅದರಲ್ಲಿ 16,358 ಜನರು ಗುಣಮುಖರಾಗಿದ್ದಾರೆ.
ಜಿಲ್ಲೆಯಲ್ಲಿ ಈಗ ಒಟ್ಟು 2367 ಸಕ್ರಿಯ ಪ್ರಕರಣಗಳು ಇವೆ. ಇದುವರೆಗೆ ಒಟ್ಟು 283 ಜನರು ಕೊರೊನಾದಿಂದ ಮೃತಪಟ್ಟಿದ್ದಾರೆ ಎಂದು ರಾಜ್ಯ ಸರಕಾರದ ವೈದ್ಯಕೀಯ ಬುಲೆಟಿನ್ ತಿಳಿಸಿದೆ.
ಬೈಲಹೊಂಗಲ: ಪಟ್ಟಣದ ಒಂದು ಸೇರಿದಂತೆ ತಾಲೂಕಿನಲ್ಲಿ ರವಿವಾರ 6 ಕೊರೊನಾ ಪ್ರಕರಣಗಳು ಕಂಡು ಬಂದಿವೆ. ಪಟ್ಟಣದ ಸೋಮವಾರ ಪೇಟೆಯ 53 ವರ್ಷದ ಪುರುಷ, ನಾಗನೂರಿನ 26 ವರ್ಷದ ಪುರುಷ, ದಾಸ್ತಿಕೊಪ್ಪ 43 ವರ್ಷದ ಪುರುಷ, ಕಿತ್ತೂರಿನ ಗುರುವಾರ ಪೇಟೆಯ 81 ವರ್ಷದ ವೃದ್ಧೆ, 62 ವರ್ಷದ ವೃದ್ಧ, ಅಂಬಡಗಟ್ಟಿ ಹಿರೇಮಠ ಓಣಿಯ 38 ವರ್ಷದ
ಪುರುಷನಲ್ಲಿ ಸೋಂಕು ಪತ್ತೆಯಾಗಿವೆ. ಒಟ್ಟು 1265 ಪ್ರಕರಣಗಳಿದ್ದು,90 ಸಕ್ರಿಯ ಪ್ರಕರಣಗಳಿವೆ. ರವಿವಾರ 26 ಜನ ಗುಣಮುಖರಾಗಿ ತೆರಳಿದ್ದಾರೆಂದು ತಾಲೂಕು ಆರೋಗ್ಯಾ ಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.