ಬೆಳಗಾವಿ: ತೋಟಗಳು ಹೆಚ್ಚಿದರೂ ತಗ್ಗಿದ ಮಾವು ಇಳುವರಿ

ಸುಮಾರು ಶೇ. 30ರಿಂದ 40ರಷ್ಟು ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ.

Team Udayavani, Apr 18, 2023, 6:36 PM IST

ಬೆಳಗಾವಿ: ತೋಟಗಳು ಹೆಚ್ಚಿದರೂ ತಗ್ಗಿದ ಮಾವು ಇಳುವರಿ

ಬೆಳಗಾವಿ: ಜಿಲ್ಲೆಯಲ್ಲಿ ಮಾವಿನ ತೋಟಗಳ ವ್ಯಾಪ್ತಿ ಹೆಚ್ಚಾಗುತ್ತಿದ್ದರೂ ಈ ಬಾರಿ ಮಾವು ಇಳುವರಿಯಲ್ಲಿ ಇಳಿಕೆ ಆಗುವ ಸಾಧ್ಯತೆ ಇದ್ದು, ಬೆಳೆಗಾರರು ಚಿಂತೆಗೀಡಾಗಿದ್ದಾರೆ. ಬದಲಾದ ಹವಾಮಾನ ಹಾಗೂ ಇನ್ನೊಂದೆಡೆ ಗಾಳಿ-ಮಳೆಯ
ರಭಸಕ್ಕೆ ಮಾವು ಇಳುವರಿ ಇಳಿಮುಖವಾಗಲಿದೆ. ಅತಿ ಹೆಚ್ಚು ಮಾವು ಬೆಳೆಯುವ ಜಿಲ್ಲೆ ಎಂಬ ಖ್ಯಾತಿ ಗಳಿಸಿರುವ ಬೆಳಗಾವಿ ಜಿಲ್ಲೆಯಲ್ಲಿ ಈ ಬಾರಿ ಉತ್ಪಾದನೆ ಕಡಿಮೆ ಆಗಲಿದೆ. ಕಳೆದ ಸಲಕ್ಕಿಂತಲೂ ಈ ಬಾರಿ ಶೇ. 30ರಿಂದ 40ರಷ್ಟು ಉತ್ಪಾದನೆ ಕಡಿಮೆ ಆಗಲಿದ್ದು, ಬಂಡವಾಳ ಹಾಕಿ ಮಾವು ಬೆಳೆದ ಬೆಳೆಗಾರರು ಚಿಂತಾಕ್ರಾಂತರಾಗಿದ್ದಾರೆ. ಹಂಗಾಮು ಶುರುವಾದಾಗಿನಿಂದಲೂ ಹೂವು ಬಿಡದಿರುವುದರಿಂದ ಪ್ರಮಾಣ ಇಳಿಮುಖವಾಗಲಿದೆ.

ಪ್ರತಿ ಹೆಕ್ಟೆರ್‌ಗೆ ಇಳುವರಿ ಕಡಿಮೆ:
ಜಿಲ್ಲೆಯಲ್ಲಿ 4300 ಹೆಕ್ಟೆರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದ್ದು, 40ರಿಂದ 50 ಹೆಕ್ಟರ್‌ ಮಾವಿನ ತೋಟ ಹೆಚ್ಚುತ್ತಿದೆ. ಪ್ರತಿ ಹೆಕ್ಟೆರ್‌ನಲ್ಲಿ ಸರಾಸರಿ 7ರಿಂದ 20 ಟನ್‌ವರೆಗೆ ಉತ್ಪಾದನೆ ಸಿಗುತ್ತದೆ. ಆದರೆ ಈ ಬಾರಿ ಮಾವು ಹೂ ಕಚ್ಚುವಾಗಲೇ ಕಳೆದ ವರ್ಷಕ್ಕಿಂತ ಕಡಿಮೆ ಬಂದಿತ್ತು. ಪ್ರತಿ ವರ್ಷ ನವೆಂಬರ್‌ ಇಲ್ಲವೇ ಡಿಸೆಂಬರ್‌ನಲ್ಲಿ ಮಾವಿನ ಮರಗಳು ಹೂ ಬಿಡಲು ಶುರು ಮಾಡುತ್ತವೆ. ಹೂವುಗಳು ಕಾಯಿಗಳಾಗಿ ಪರಿವರ್ತನೆಯ ಪ್ರಮಾಣ ಅಂದುಕೊಂಡಂತೆ ಆಗಿರಲಿಲ್ಲ. ಜತೆಗೆ ಅಕಾಲಿಕ ಮಳೆ-ಗಾಳಿಯ ಹೊಡೆತಕ್ಕೆ ಕೆಲವು ಕಡೆಗೆ ಕಾಯಿಗಳು ನೆಲಕ್ಕುರುಳಿದ್ದರಿಂದ ಹಾನಿ ಉಂಟಾಗಿದೆ. ಸುಮಾರು ಶೇ. 30ರಿಂದ 40ರಷ್ಟು ಇಳುವರಿ ಕಡಿಮೆ ಬರುವ ಸಾಧ್ಯತೆ ಇದೆ.

ಖಾನಾಪುರ ಅತಿ ತಾಲೂಕಿನಲ್ಲಿ ಅತಿ ಹೆಚ್ಚು 2855 ಹೆಕ್ಟೆರ್‌ ಮಾವು ಬೆಳೆಯಲಾಗುತ್ತದೆ. ಕಿತ್ತೂರಿನಲ್ಲಿ 870 ಹೆಕ್ಟೆರ್‌, ಬೆಳಗಾವಿ
402 ಹೆಕ್ಟರ್‌, ಸವದತ್ತಿ 72, ಬೆ„ಲಹೊಂಗಲ 67 ಹೆಕ್ಟೆರ್‌, ಅಥಣಿ 63 ಹೆಕ್ಟೆರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಭಾಗದ ಹವಾಮಾನಕ್ಕೆ ಅಲ್ಪಾನ್ಸೋ ಮತ್ತು ಕೇಸರ್‌ ತಳಿಯ ಮಾವು ಉತ್ತಮವಾಗಿ ಬೆಳೆಯುತ್ತವೆ. ಅಲ್ಪಾನ್ಸೋ ತಳಿಯ ಮಾವು ಬಹುತೇಕ ಕಡೆ ಎರಡು ವರ್ಷಕ್ಕೊಮ್ಮೆ ಉತ್ತಮ ಫಸಲು ನೀಡುತ್ತದೆ. ಈ ವರ್ಷ ಉತ್ತಮ ಇಳುವರಿ ಬಂದರೆ ಮುಂದಿನ ವರ್ಷದ ಹಂಗಾಮಿನಲ್ಲಿ ಇಳುವರಿ ಪ್ರಮಾಣ ಕಡಿಮೆ ಆಗುವುದೇ ಈ ತಳಿಯ ಲಕ್ಷಣ ಎನ್ನುತ್ತಾರೆ ತೋಟಗಾರಿಕೆ ಇಲಾಖೆ ಅ ಧಿಕಾರಿಗಳು.

ಮಾವು ಬೆಳೆಯತ್ತ ವಾಲಿದ ರೈತ
ಮಾವಿನ ಹಣ್ಣಿನೊಂದಿಗೆ ಹಸಿ ಮಾವಿನ ಮಾರಾಟವೂ ಹೆಚ್ಚಿನ ಪ್ರಮಾಣದಲ್ಲಿ ಆಗುತ್ತದೆ. ಕೆಲ ವರ್ಷಗಳಿಂದ ಮಾಹಾರಾಷ್ಟ್ರ
ಹಾಗೂ ಗೋವಾದಿಂದಲೂ ಮಾವಿನ ಹಣ್ಣುಗಳು ರಫ್ತಾಗುತ್ತಿವೆ. ವಿಶೇಷವಾಗಿ ಖಾನಾಪುರ ತಾಲೂಕಿನಲ್ಲಿ ವನ್ಯಜೀವಿಗಳ ಕಾಟ
ಹೆಚ್ಚಾಗಿದೆ. ಭತ್ತ, ಕಬ್ಬು , ತರಕಾರಿ ಸೇರಿದಂತೆ ಇತರೆ ಬೆಳೆ ನಷ್ಟವಾಗುತ್ತಿವೆ. ಜತೆಗೆ ಬೆಳೆಗೆ ನೀರಿನ ಅಭಾವವೂ ಉಂಟಾಗುತ್ತಿದೆ.

ಹೀಗಾಗಿ ರೈತರು ಮಾವಿನ ತೋಟಗಳತ್ತ ಒಲವು ತೋರುತ್ತಿದ್ದಾರೆ. ಸ್ಥಳೀಯ ಹವಾಮಾನದಲ್ಲಿ ಕೇಸರ್‌ ಮತ್ತು ಅಲಾನ್ಸೊ
ಮಾವಿನ ಇಳುವರಿ ಅಧಿಕವಾಗುತ್ತಿದೆ. ಜತೆಗೆ ಪಾಯರಿ, ಮಲ್ಲಿಕಾ, ತೋತಾಪುರಿ, ಐಶ್ವರ್ಯ, ಮಾಲಗೋವಾ ಸೇರಿದಂತೆ
ಇತರೆ ತಳಿಗಳ ಮಾವು ಇಳುವರಿ ಹೆಚ್ಚಾಗುತ್ತಿದೆ.

ಜಿಲ್ಲೆಯಲ್ಲಿ ಅಲಾ #ನ್ಸೊ ಮಾವಿನ ತಳಿ ಎರಡು ವರ್ಷಕ್ಕೊಮ್ಮೆ ಅಧಿಕ ಇಳುವರಿ ಕೊಡುತ್ತದೆ. ನಂತರದ ವರ್ಷದಲ್ಲಿ ಇಳುವರಿ ಇಳಿಮುಖ ಆಗುವುದು ಈ ತಳಿಯ ಗುಣಲಕ್ಷಣ. ಈ ವರ್ಷ ಶೇ. 30ರಿಂದ 40ರಷ್ಟು ಮಾವು ಇಳುವರಿ ಇಳಿಕೆ ಆಗಲಿದೆ.
ಮಹಾಂತೇಶ ಮುರಗೋಡ,
ಉಪನಿರ್ದೇಶಕರು, ತೋಟಗಾರಿಕೆ ಇಲಾಖೆ

ಈ ವಾರದಲ್ಲಿ ಸುರಿದ ಅಕಾಲಿಕ ಗಾಳಿ-ಮಳೆಯಿಂದ ಮಾವು ಬೆಳೆಗೆ ಭಾರೀ ಹಾನಿ ಉಂಟಾಗಿದೆ. ಕಿತ್ತೂರು ಭಾಗದ ಬಹುತೇಕ
ಮಾವಿನ ಕಾಯಿಗಳು ನೆಲಕ್ಕುರುಳಿವೆ. ಇನ್ನೂ ಕೆಲವು ಕಡೆಗೆ ಆಲಿಕಲ್ಲು ಮಳೆಯೂ ಆಗಿದೆ. ಈ ಸಲ ಇಳುವರಿ ಕುಂಠಿತಗೊಂಡು ಆರ್ಥಿಕ ನಷ್ಟ ಆಗಲಿದೆ. ಸರ್ಕಾರ ಈ ಬಗ್ಗೆ ಗಮನಹರಿಸಿ, ಪರಿಹಾರ ನೀಡಬೇಕು.
ಅಲ್ತಾಫ ಜಮಾದಾರ, ಮಾವು ಬೆಳೆಗಾರ

*ಭೈರೋಬಾ ಕಾಂಬಳೆ

ಟಾಪ್ ನ್ಯೂಸ್

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

1-sssss

Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dm

Cancer ತೀವ್ರಗತಿಯಲ್ಲಿ ವ್ಯಾಪಿಸುತ್ತಿರುವದು ಕಳವಳಕಾರಿ: ರಾಷ್ಟ್ರಪತಿ ದ್ರೌಪದಿ ಮುರ್ಮು

Congress; Dinner meeting does not need political significance: Satish Jarkiholi

Congress; ಔತಣಕೂಟದ ಸಭೆಗೆ ರಾಜಕೀಯ ಮಹತ್ವ ಬೇಕಿಲ್ಲ: ಸತೀಶ್‌ ಜಾರಕಿಹೊಳಿ

President  ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆ

President ಮುರ್ಮು ಅವರಿಂದ ಇಂದು ಬೆಳಗಾವಿಯಲ್ಲಿ ಕೆಎಲ್‌ಇ ಕ್ಯಾನ್ಸರ್‌ ಆಸ್ಪತ್ರೆ ಉದ್ಘಾಟನೆ

ಮಗಳ ಮೇಲೆ ಎರಗಳು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ

ಮಗಳ ಮೇಲೆ ಎರಗಲು ಹೋದ ಪತಿಯನ್ನೇ ಹತ್ಯೆಗೈದು ದೇಹವನ್ನು ತುಂಡರಿಸಿ ವಿಲೇವಾರಿ ಮಾಡಿದ ಪತ್ನಿ

Butterfly Park: ಬೆಳಗಾವಿಯ ಹಿಡಕಲ್‌ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್‌

Butterfly Park: ಬೆಳಗಾವಿಯ ಹಿಡಕಲ್‌ ಡ್ಯಾಂ ಬಳಿ ಅತಿ ದೊಡ್ಡ ತೆರೆದ ಚಿಟ್ಟೆ ಪಾರ್ಕ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Suraj Revanna ಎಲ್ಲೇ ಹೋದ್ರೂ ಕಿತಾಪತಿ ಮಾಡಿ ಬರ್ತಾರೆ: ಶ್ರೇಯಸ್‌ ಪಟೇಲ್‌

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Karnataka Govt. : ನಾಲ್ವರು ಡಿವೈಎಸ್‌ಪಿಗಳು ವಿವಿಧೆಡೆ ವರ್ಗಾವಣೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.