ಬೆಳಗಾವಿ: ಕೋಟಿ ದಾಟಿದ ಯಲ್ಲಮ್ಮದೇವಿ ಭಕ್ತರ ಸಂಖ್ಯೆ
ನೆರೆ ರಾಷ್ಟ್ರಗಳಿಂದಲೂ ಭಕ್ತರ ಆಗಮನ
Team Udayavani, Dec 1, 2024, 11:43 AM IST
ಉದಯವಾಣಿ ಸಮಾಚಾರ
ಬೆಳಗಾವಿ: ಇತಿಹಾಸ ಪ್ರಸಿದ್ಧ ಸವದತ್ತಿ ರೇಣುಕಾ ಯಲ್ಲಮ್ಮದೇವಿ ಕ್ಷೇತ್ರ ಪ್ರಗತಿಯ ವಿಷಯದಲ್ಲಿ ಹೊಸ ಹೆಜ್ಜೆ ಇಡುತ್ತಿರುವಂತೆ ಭಕ್ತರ ಸಂಖ್ಯೆಯಲ್ಲೂ ಗಮನಾರ್ಹ ಮೈಲಿಗಲ್ಲು ಸ್ಥಾಪಿಸಿದೆ. ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವಂತೆ ಸಂಚಾರ ವ್ಯವಸ್ಥೆ, ಸೌಲಭ್ಯದಲ್ಲಿ ಹೊಸ ಬೇಡಿಕೆಗಳು ಹುಟ್ಟಿಕೊಂಡಿವೆ.
ಕಳೆದ ಕೆಲವು ವರ್ಷಗಳಿಂದ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವ ಭಕ್ತರ ಸಂಖ್ಯೆ ಕೋಟಿ ಸಂಖ್ಯೆ ದಾಟುತ್ತಿದ್ದಂತೆ ಇದಕ್ಕೆ ಪೂರಕವಾಗಿ ನೂತನ ರೈಲು ಮಾರ್ಗಕ್ಕೆ ಬೇಡಿಕೆ ಬಲವಾಗಿದೆ. ಮುಂದಿನ ವರ್ಷದ ಕೇಂದ್ರ ಬಜೆಟ್‌ನಲ್ಲಿ ಈ ಯೋಜನೆಯ ಘೋಷಣೆ ಮತ್ತು ಅನುದಾನ ನಿಗದಿ ಮಾಡುವಂತೆ ರೈಲ್ವೆ ಸಚಿವರ ಮೇಲೆ ಒತ್ತಡ ಹೇರುವ ಪ್ರಕ್ರಿಯೆ ಸಹ ಆರಂಭವಾಗಿದೆ.
ಕಳೆದ ಹತ್ತು ವರ್ಷಗಳ ಚಿತ್ರಣ ಅವಲೋಕನ ಮಾಡಿದರೆ ಸವದತ್ತಿ ಯಲ್ಲಮ್ಮ ದೇವಿ ಕ್ಷೇತ್ರದ ಚಿತ್ರ ಸಾಕಷ್ಟು ಬದಲಾಗಿದೆ. ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಹೊಸ ಗಾಳಿ ಬೀಸುತ್ತಲೇ ಇದೆ. ಸರ್ಕಾರಗಳು ಸಹ ಕ್ಷೇತ್ರದ ಅಭಿವೃದ್ಧಿಯ ಕಡೆಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿವೆ.
ಪ್ರವಾಸೋದ್ಯಮ ದೃಷ್ಟಿಯಿಂದ ಇದನ್ನು ಅಭಿವೃದ್ಧಿಪಡಿಸಬೇಕು ಎಂಬ ಚಿಂತನೆ ಸರ್ಕಾರಕ್ಕೆ ಇದೆ. ಇದರ ಫಲವಾಗಿ ಸವದತ್ತಿ ಯಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರವಾಸೋದ್ಯಮ ಮಂಡಳಿಗಳು ರಚನೆಯಾಗಿವೆ. ವಿಶೇಷವೆಂದರೆ ಈ ದೇವಾಲಯವು ದಕ್ಷಿಣ ಭಾರತದಾದ್ಯಂತ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಕರ್ನಾಟಕ, ಮಹಾರಾಷ್ಟ್ರ, ಗೋವಾ ಹಾಗೂ ಆಂಧ್ರ ಪ್ರದೇಶದಿಂದ ಅಪಾರ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸುತ್ತಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಾಲಯವಾಗಿದೆ. ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ದೂರದ ಊರುಗಳಿಂದ ಭಕ್ತರು ವಾಹನ, ಎತ್ತಿನಗಾಡಿ ಹಾಗೂ ಕಾಲ್ನಡಿಗೆ ಮೂಲಕ ಬರುತ್ತಾರೆ.
ಸಾಂಪ್ರದಾಯಿಕವಾಗಿ ಭಕ್ತರು ಒಂದು ಅಥವಾ ಎರಡು ದಿನಗಳ ಕಾಲ ಸ್ಥಳದಲ್ಲಿ ತಂಗಿ, ಎಡೆ ಮಾಡಿ ದೇವರಿಗೆ ಅರ್ಪಿಸುತ್ತಾರೆ. ವಿಶೇಷವಾಗಿ ಬನದ ಹುಣ್ಣಿಮೆ ಮತ್ತು ಭಾರತ ಹುಣ್ಣಿಮೆಗಳಲ್ಲಿ ಯಲ್ಲಮ್ಮದೇವಿಯ ಸನ್ನಿಧಾನದಲ್ಲಿ ಜನಸಾಗರವನ್ನೇ ಕಾಣಬಹುದು. ಜಾತಿ, ಮತ, ಭಾಷೆ ಬೇಧ ಮರೆತು ಎಲ್ಲ ಭಕ್ತರು ಇಲ್ಲಿ ಮೇಳೈಸುತ್ತಾರೆ. ದೇವಿಗೆ ತಮ್ಮ ಹರಕೆ ಸಲ್ಲಿಸುತ್ತಾರೆ.
ದಾಖಲೆಯ ಭಕ್ತರ ಭೇಟಿ: ಕೊರೊನಾ ಕಾಲಘಟ್ಟದ ನಂತರ 2022ರಲ್ಲಿ ಯಲ್ಲಮ್ಮದೇವಿಯ ಕ್ಷೇತ್ರಕ್ಕೆ ಭೇಟಿ ನೀಡಿದ
ಭಕ್ತರ ಸಂಖ್ಯೆ ಕೋಟಿ ದಾಟುವ ಮೂಲಕ ದಾಖಲೆಯನ್ನೇ ಸೃಷ್ಟಿಸಿದೆ. 2017ರಿಂದ ಐದು ವರ್ಷಗಳ ಅವಧಿಯಲ್ಲಿ ಒಮ್ಮೆಯೂ ಭಕ್ತರ ಸಂಖ್ಯೆ 50 ಲಕ್ಷ ತಲುಪಿರಲಿಲ್ಲ. 2021ರ ಕೊರೊನಾ ಅವಧಿಯಲ್ಲಿ ದೇವಸ್ಥಾನಗಳು ಸಂಪೂರ್ಣ ಮುಚ್ಚಿದ್ದರೂ ಈ ಅವಧಿಯಲ್ಲಿ 11 ಲಕ್ಷ ಭಕ್ತರು ಯಲ್ಲಮ್ಮದೇವಿಯ ಕ್ಷೇತ್ರಕ್ಕೆ ಬಂದು ದೇವಿಯ ದರ್ಶನ ಪಡೆದಿರುವದು ವಿಶೇಷ. 2022ರಲ್ಲಿ ಕ್ಷೇತ್ರದ ಮಟ್ಟಿಗೆ ಒಂದು ದಾಖಲೆ ಎನ್ನಬಹುದು. ಈ ಅವಧಿಯಲ್ಲಿ ಸುಮಾರು 1.16 ಕೋಟಿ ಜನರು ಕ್ಷೇತ್ರಕ್ಕೆ ಭೇಟಿ ನೀಡಿ
ರೇಣುಕಾಯಲ್ಲಮ್ಮ ದೇವಿಯ ದರ್ಶನ ಪಡೆದಿದ್ದಾರೆ.
ಅದರಂತೆ 2023ರಲ್ಲಿ ಅಗಸ್ಟ್‌ವರೆಗೆ 32 ಲಕ್ಷ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡಿದ್ದಾರೆ. ಇತ್ತೀಚಿನ ವರ್ಷಗಳಲ್ಲಿ ವಿದೇಶಿ ಜನರು ಸಹ ಕ್ಷೇತ್ರಕ್ಕೆ ಭೇಟಿ ನೀಡುತ್ತಿರುವುದರಿಂದ ಪ್ರವಾಸೋದ್ಯಮ ದೃಷ್ಟಿಯಿಂದ ಇದು ಮಹತ್ವ ಪಡೆದುಕೊಂಡಿದೆ.
ಪ್ರತಿದಿನ 40 ಸಾವಿರ ಜನ: ಸಾಮಾನ್ಯವಾಗಿ ಹುಣ್ಣಿಮೆ ದಿನ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಕ್ಷೇತ್ರಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿರುತ್ತಿತ್ತು. ಈಗ ವಾರದ ಎಲ್ಲ ದಿನವೂ ಕನಿಷ್ಟ 50 ಸಾವಿರ ಸಂಖ್ಯೆ ತಲುಪಿದೆ. ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಒಂದು ಲಕ್ಷ ಜನರು ದೇವಿಯ ದರ್ಶನಕ್ಕೆ ಬಂದರೆ ಉಳಿದ ನಾಲ್ಕು ದಿನ ಕನಿಷ್ಟ 30ರಿಂದ 40 ಸಾವಿರ ಜನರು ಕ್ಷೇತ್ರಕ್ಕೆ ಬರುತ್ತಿದ್ದಾರೆ. ಇದಲ್ಲದೆ ಸಾಮಾನ್ಯ ಹುಣ್ಣಿಮೆ ದಿನಗಳಂದು 3ರಿಂದ 5 ಲಕ್ಷ ಭಕ್ತರು ಬರುತ್ತಿದ್ದಾರೆ. ಬನದ ಹುಣ್ಣಿಮೆ ದಿನ 10 ಲಕ್ಷ ಜನರು ಹಾಗೂ ಭಾರತ್ ಹುಣ್ಣಿಮೆ ದಿನದಂದು 15 ಲಕ್ಷ ಜನರು ಕ್ಷೇತ್ರಕ್ಕೆ ಬರುತ್ತಿದ್ದಾರೆ.
ಭಕ್ತರ ಆರಾಧ್ಯ ದೈವ ಕ್ಷೇತ್ರ ಸವದತ್ತಿ ಯಲ್ಲಮ್ಮ ಕ್ಷೇತ್ರವನ್ನು ಪ್ರವಾಸೋದ್ಯಮ ದೃಷ್ಟಿಯಿಂದ ಅಭಿವೃದ್ಧಿ ಪಡಿಸಬೇಕು, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರನ್ನು ಆಕರ್ಷಿಸಿ ಅವರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಬೇಕು ಎಂಬ ಉದ್ದೇಶದಿಂದ ಸರ್ಕಾರ ಸವದತ್ತಿ ಯಲ್ಲಮ್ಮದೇವಿ ಪ್ರವಾಸೋದ್ಯಮ ಮಂಡಳಿ ಸಹ ಸ್ಥಾಪಿಸಿ ಹಲವಾರು ಅಭಿವೃದ್ಧಿ ಕಾರ್ಯಗಳನ್ನು
ಕೈಗೊಂಡಿದೆ. ಇದು ಮುಂಬರುವ ದಿನಗಳಲ್ಲಿ ಸುಮಾರು ಎರಡು ಕೋಟಿ ಭಕ್ತರು ಕ್ಷೇತ್ರಕ್ಕೆ ಭೇಟಿ ನೀಡುವ ವಿಶ್ವಾಸ ಮೂಡಿಸಿದೆ.
ವರ್ಷದಿಂದ ವರ್ಷಕ್ಕೆ ಯಲ್ಲಮ್ಮದೇವಿಯ ಕ್ಷೇತ್ರಕ್ಕೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ಮುಖ್ಯವಾಗಿ
ಸರ್ಕಾರದ ಶಕ್ತಿ ಯೋಜನೆ ಭಕ್ತರಿಗೆ ಬಹಳ ಅನುಕೂಲ ಕಲ್ಪಿಸಿದೆ. ಹೀಗಾಗಿ ವಾರದ ಎಲ್ಲ ದಿನವೂ ಸುಮಾರು 50ರಿಂದ 1 ಲಕ್ಷ ಜನರು ಕ್ಷೇತ್ರಕ್ಕೆ ಬಂದು ದರ್ಶನ ಪಡೆಯುತ್ತಿದ್ದಾರೆ. ಭಕ್ತರಿಗೆ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ.
ಮಹೇಶ, ಸವದತ್ತಿ ಯಲ್ಲಮ್ಮ ಅಭಿವೃದ್ಧಿ
ಪ್ರಾಧಿಕಾರದ ಕಾರ್ಯದರ್ಶಿ
*ಕೇಶವ ಆದಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Belagavi: ವಕ್ಫ್ ಹೋರಾಟ ಮಾಡುವುದು ತಪ್ಪಾ..: ವಿಜಯೇಂದ್ರ ದೂರಿನ ಬಗ್ಗೆ ಯತ್ನಾಳ್ ಮಾತು
Belagavi: ಬಿಜೆಪಿಯಲ್ಲಿ ಭಿನ್ನಮತವಿಲ್ಲ, ವಿಜಯೇಂದ್ರ ನಮ್ಮ ಅಧ್ಯಕ್ಷರು: ಪ್ರತಾಪ್ ಸಿಂಹ
ಬೆಳಗಾವಿ: ಸಾರಾಯಿ ಬಿಲ್ ಕೊಡದ್ದಕ್ಕೆ ಹ*ತ್ಯೆಗೈದ ಇಬ್ಬರು ಜೈಲಿಗೆ
Belagavi: ನಾನು ಕಾಂಗ್ರೆಸ್ ಬಿಡಲು ಒಬ್ಬ ಮನುಷ್ಯ ಕಾರಣ: ರಮೇಶ್ ಜಾರಕಿಹೊಳಿ
Belgavi;ಸುವರ್ಣ ವಿಧಾನ ಸೌಧದ ಸುತ್ತ ನಿಷೇಧಾಜ್ಞೆ
MUST WATCH
ಶ್ರೀ ಕೃಷ್ಣನ ಸೇವೆಗೆ ಬದುಕನ್ನೇ ಮುಡಿಪಾಗಿಟ್ಟ ಪ್ರಭಾಕರ ಉಳ್ಳೂರು
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಹೊಸ ಸೇರ್ಪಡೆ
Rajasthan: ಕುಸಿದು ಬಿದ್ದ ನಿರ್ಮಾಣ ಹಂತದ ಸುರಂಗದ ಭಾಗ.. ಓರ್ವ ಕಾರ್ಮಿಕ ಮೃತ್ಯು
Bangla; ಭಾರತೀಯ ಬಸ್ ಮೇಲೆ ಬಾಂಗ್ಲಾದಲ್ಲಿ ದಾಳಿ; ಭಾರತ ವಿರೋಧಿ ಘೋಷಣೆ ಕೂಗಿದ ಸ್ಥಳೀಯರು
Udupi: 125ನೇ ಮನೆ ಪ್ರವೇಶಿಸಿದ ಗ್ರಂಥಾಲಯ ಅಭಿಯಾನ
Udupi: ಎಂಜಿಎಂ ಅಮೃತ ಮಹೋತ್ಸವ ಬೃಹತ್ ಶೋಭಾಯಾತ್ರೆ; 2,000ಕ್ಕೂ ಅಧಿಕ ವಿದ್ಯಾರ್ಥಿಗಳು ಭಾಗಿ
Dharmasthala – 2024ರ ಲಕ್ಷದೀಪೋತ್ಸವಕ್ಕೆ ತೆರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.