ಮಳೆ ಬರುತ್ತದೆ ಎಂದು ನಂಬಿ ಕೊಡೆ ತಂದೆ!
Team Udayavani, Feb 25, 2021, 8:00 AM IST
ದೇವರನ್ನು ನಾವು ಪ್ರಾರ್ಥಿಸಿ ಕೊಳ್ಳುತ್ತೇವೆ, ಅದನ್ನು ಮಾಡಿಕೊಡು, ಇದನ್ನು ನೆರವೇರಿಸಿಕೊಡು ಎಂಬುದಾಗಿ ಇಷ್ಟಾರ್ಥಗಳನ್ನು ಕೇಳಿಕೊಳ್ಳುತ್ತೇವೆ. ಹೀಗೆ ಪ್ರಾರ್ಥಿಸುವಾಗ, ಹರಕೆ ಹೇಳಿ ಕೊಳ್ಳುವಾಗ “… ಇದು ನೆರವೇರಿದರೆ ನಿನಗೆ ಅದನ್ನು ಸಲ್ಲಿಸುತ್ತೇನೆ’, “…ಹೀಗಾದರೆ ನಿನಗೆ ಆ ಸೇವೆ ಸಲ್ಲಿಸುತ್ತೇನೆ’ ಎನ್ನುವುದು ರೂಢಿ.
ಸಮಸ್ಯೆ ಇರುವುದು ಈ “…ರೆ’ಯಲ್ಲಿ. “…ರೆ’ ಎಂಬುದು ನಮ್ಮಲ್ಲಿ ಸಂಶಯದ ಎಳೆಯೊಂದು ಇದೆ ಎಂಬುದರ ಸೂಚನೆಯೇ ಅಲ್ಲವೇ? ಸರ್ವಶಕ್ತನಾದ ಪರ ಮಾತ್ಮನು ನಾವು ಕೇಳಿ ಕೊಂಡದ್ದನ್ನು ಈಡೇರಿ ಸುತ್ತಾನೆಯೋ ಇಲ್ಲವೋ ಎಂಬ ಶಂಕೆ ಈ “ರೆ’ಯಲ್ಲಿದೆ.
ದೇವರು ಇದ್ದಾ ನೆಯೇ ಇಲ್ಲವೇ ಎಂದು ಎರಡು ಗುಂಪುಗಳ ನಡುವೆ ಒಮ್ಮೆ ಜಿಜ್ಞಾಸೆ ಏರ್ಪಟ್ಟಿತ್ತು. ಸಾಕಷ್ಟು ವಾದ- ಪ್ರತಿವಾದಗಳ ಬಳಿಕ ಪರೀಕ್ಷಿಸಿನೋಡಲು ಎರಡೂ ಗುಂಪುಗಳು ನಿರ್ಧರಿಸಿದವು. ಪರೀಕ್ಷೆ ವಿಚಿತ್ರವಾಗಿತ್ತು – ಎರಡೂ ತಂಡಗಳ ತಲಾ ಒಬ್ಬೊಬ್ಬ ದೇವರನ್ನು ಪ್ರಾರ್ಥಿಸುತ್ತ ಬೆಟ್ಟದ ಮೇಲಿನಿಂದ ಕೆಳಕ್ಕೆ ಹಾರಬೇಕು.
ಪರೀಕ್ಷೆ ಮೊದಲಾಯಿತು. ದೇವರು ಇದ್ದಾನೆ ಎಂದು ನಂಬಿದವರ ತಂಡದ ಒಬ್ಬ, “ದೇವರೇ ನನ್ನನ್ನು ರಕ್ಷಿಸು’ ಎಂದು ಪ್ರಾರ್ಥಿಸಿಕೊಳ್ಳುತ್ತ ಹಾರಿದ. ದೇವರು ಅವನನ್ನು ರಕ್ಷಿಸಿದ. ಇನ್ನೊಂದು ತಂಡ ದೇವರ ಅಸ್ತಿತ್ವದ ಬಗ್ಗೆ ಸಂಶಯ ಹೊಂದಿದ್ದವರದ್ದು. ಅವರಲ್ಲಿ ಒಬ್ಬ “ದೇವರೇ ನೀನು ಇರುವುದೇ ಆಗಿದ್ದರೆ ನನ್ನನ್ನು ರಕ್ಷಿಸು’ ಎಂದು ಕೇಳಿಕೊಳ್ಳುತ್ತ ಹಾರಿದ. ಕೆಳಗೆ ಬಿದ್ದು ಸತ್ತ.
ಇದು ಸರ್ವಶಕ್ತನೊಬ್ಬನಿದ್ದಾನೆ ಮತ್ತು ಆತ ನಮ್ಮನ್ನು ರಕ್ಷಿಸುತ್ತಾನೆ ಎಂದು ಆತ್ಯಂತಿಕ ನಂಬುಗೆಯೊಂದಿಗೆ ಇರು ವುದು ಮತ್ತು ಸಂಶಯದೊಂದಿಗೆ ಇರುವುದರ ನಡುವಣ ವ್ಯತ್ಯಾಸ.
ಇಲ್ಲೊಂದು ಕಥೆಯಿದೆ. ಒಂದು ರಾಜ್ಯದಲ್ಲಿ ಒಮ್ಮೆ ಬರಗಾಲ ಆರಂಭ ವಾಯಿತು. ವರ್ಷಾನುಗಟ್ಟಲೆ ಮಳೆ ಬರಲಿಲ್ಲ. ಎಲ್ಲೆಡೆಯೂ ಕ್ಷಾಮ, ಹಾಹಾ ಕಾರ. ಕೊನೆಗೆ ಎಲ್ಲರೂ ಸೇರಿ ಮುನಿ ಯೊಬ್ಬರ ಬಳಿಗೆ ಹೋದರು. ಅವರು ಒಂದು ಒಳ್ಳೆಯ ದಿನ ಗೊತ್ತುಪಡಿಸಿ ರಾಜಧಾನಿಯಲ್ಲಿ ಎಲ್ಲರೂ ಜತೆಗೂಡಿ ಪ್ರಾರ್ಥನೆ ಮಾಡಬೇಕು ಎಂದು ಸೂಚಿಸಿದರು.
ಆ ಸುದಿನ ಬಂತು. ಎಲ್ಲರೂ ನಗರ ದಲ್ಲಿ ಸೇರಿದರು. ಒಂದು ಮಗು ಮಾತ್ರ ಕೊಡೆ ಹಿಡಿದುಕೊಂಡು ಬಂದಿತ್ತು.
ಮಗುವಿನ ಕೈಯಲ್ಲಿ ಛತ್ರಿ ಕಂಡು ಎಲ್ಲರೂ ನಗುವವರೇ. ಮಳೆ ಬಾರದೆ ವರ್ಷಗಳೇ ಸಂದಿವೆ, ಆಗಸದಲ್ಲಿ ಮೋಡಗಳ ಸುಳಿವು ಕೂಡ ಇಲ್ಲ; ಇಂತಹ ಹೊತ್ತಿನಲ್ಲಿ ಕೊಡೆ ಹಿಡಿದು ಬರು ವುದು ಎಂದರೆ ನಗು ಬಾರದೆ ಇರುತ್ತದೆಯೇ!
ಅಲ್ಲಿ ಸೇರಿದ್ದವರಲ್ಲಿ ಒಬ್ಬರು ಹೇಳಿದರು, “ಅಯ್ಯೋ ಮಗಾ! ಯಾಕೆ ಕೊಡೆ ತಂದಿದ್ದೀ? ಎಲ್ಲರೂ ನಿನ್ನನ್ನು ನೋಡಿ ನಗುತ್ತಿದ್ದಾರಲ್ಲ’.
ಮಗು ಮುಗ್ಧವಾಗಿ ಉತ್ತರಿಸಿತು, “ಅಲ್ಲಲ್ಲ, ನೀವು ಪ್ರಾರ್ಥನೆ ಮಾಡು ತ್ತೀರಲ್ಲ? ಅದು ಮಳೆ ಬರಲಿ ಎಂದೇ ತಾನೇ? ಹಾಗಾಗಿ ಮಳೆ ಬಂದೇ ಬರು ತ್ತದೆ ಎಂದುಕೊಂಡು ಕೊಡೆ ತಂದೆ!’
ಎಲ್ಲರೂ ಪ್ರಾರ್ಥನೆ ನಡೆಸಿದರು. ಆದರೆ ಮಳೆ ಬರಲಿಲ್ಲ. ಕೊನೆಗೆ ಕೊಡೆ ತಂದ ಮಗು ಕೋರಿಕೊಂಡಾಗ ಆಗಸದಲ್ಲಿ ಮೋಡಗಳು ದಟ್ಟೈಸಿ ಮಳೆಗರೆದವಂತೆ.
ಪೂರ್ಣ ನಂಬಿಕೆ, ವಿಶ್ವಾಸ, ಏಕಾಗ್ರತೆ ಇವೆಲ್ಲವಕ್ಕೂ ಇದು ಅನ್ವಯವಾಗುತ್ತದೆ – ಅದು ಸಂಪೂರ್ಣವಾಗಿರಬೇಕು. ಸಂಶಯದ ಕೂದಲೆಳೆ ಇದ್ದರೂ ಅದು ಆತ್ಯಂತಿಕವಲ್ಲ, ಸಂಪೂರ್ಣವಲ್ಲ. ಕೊಡೆ ಹಿಡಿದು ಬಂದ ಮಗುವನ್ನು ಕಂಡು ನಕ್ಕವರು ಮೂರ್ಖರಾಗಿದ್ದರು; ಮುನಿ ಹೇಳಿದ ಮಾತಿನ ಮೇಲೆ, ತಾವು ಸಲ್ಲಿಸಲಿರುವ ಪ್ರಾರ್ಥನೆಯ ಮೇಲೆ ಪೂರ್ಣ ವಿಶ್ವಾಸ ಹೊಂದಿದವರಾಗಿ ರಲಿಲ್ಲ. ಆದರೆ ಮಗು ಮಾತ್ರ ಮಳೆ ಬಂದೇ ಬರುತ್ತದೆ ಎಂದು ನಂಬಿತ್ತು, ಹಾಗಾಗಿಯೇ ಛತ್ರಿ ತಂದಿತ್ತು.
ನಾವು ಕೂಡ ಹಲವು ಬಾರಿ ಹೀಗೆಯೇ ಪ್ರಾರ್ಥಿಸುತ್ತೇವೆ ಮತ್ತು ಬೇಡಿಕೆ ಈಡೇರದಾಗ, “ನನಗೆ ಇದು ಸಾಧ್ಯವೇ ಇಲ್ಲ ಎಂದು ಮೊದಲೇ ಗೊತ್ತಿತ್ತು’ ಎಂದು ಹೇಳಿಕೊಳ್ಳುತ್ತೇವೆ!
( ಸಾರ ಸಂಗ್ರಹ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bandipur: ಆನೆಮರಿಯನ್ನೇ ಬೇಟೆಯಾಡಿ ಕೊಂದ ಹುಲಿ… ಅರಣ್ಯ ಅಧಿಕಾರಿಗಳಿಂದ ಪರಿಶೀಲನೆ
Suzuki; ಆಟೋಮೊಬೈಲ್ ಕ್ಷೇತ್ರದ ದಿಗ್ಗಜ ಒಸಾಮು ಸುಜುಕಿ ವಿಧಿವಶ
Hubli: ವರೂರಿನ ನವಗ್ರಹ ತೀರ್ಥ ಕ್ಷೇತ್ರದಲ್ಲಿ ಜ. 15ರಿಂದ 26ರವರೆಗೆ ಮಹಾಮಸ್ತಕಾಭಿಷೇಕ
Punjab: ನಿಯಂತ್ರಣ ತಪ್ಪಿ ನದಿಗೆ ಬಿದ್ದ ಬಸ್… 8 ಮಂದಿ ಮೃತ್ಯು, ಹಲವರಿಗೆ ಗಾಯ
Hubli; ಅಯ್ಯಪ್ಪ ಶಿಬಿರದಲ್ಲಿ ಸಿಲಿಂಡರ್ ಸ್ಪೋಟ ಪ್ರಕರಣ; ನಾಲ್ಕಕ್ಕೇರಿದ ಮೃತರ ಸಂಖ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.