ಬೆಳ್ತಂಗಡಿ : ಅವ್ಯವಹಾರ ಆರೋಪಕ್ಕೆ ಕಾಳಜಿ ಲೆಕ್ಕ : ಬ್ಯಾಂಕ್ ಖಾತೆಯಲ್ಲಿದೆ 2.59 ಕೋ.ರೂ
Team Udayavani, Aug 26, 2020, 3:28 PM IST
ಬೆಳ್ತಂಗಡಿ: ಪ್ರವಾಹದ ಹೆಸರಲ್ಲಿ ಕಾಳಜಿ ರಿಲೀಫ್ ಫಂಡ್ ತೆರೆದು ಬೆಳ್ತಂಗಡಿ ಶಾಸಕರು ಅವ್ಯವಹಾರ ಎಸಗಿದ್ದಾರೆ ಎಂಬ ಮಾಜಿ ಶಾಸಕ ವಸಂತ ಬಂಗೇರ ಇತ್ತೀಚೆಗಿನ ಆರೋಪಕ್ಕೆ ಕಾಳಜಿ ಬೆಳ್ತಂಗಡಿ ಫ್ಲಡ್ ರಿಲೀಫ್ ಫಂಡ್ ನ ಕಾರ್ಯದರ್ಶಿ ಬಿ.ಕೆ. ಧನಂಜಯ ರಾವ್ ಬುಧವಾರ ಲೆಕ್ಕ ನೀಡಿದ್ದಾರೆ.
ಬುಧವಾರ ಪ್ರವಾಸಿ ಬಂಗಲೆಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಾಳಜಿ ರಲೀಫ್ ಫಂಡ್ ಗೆ ಈವರೆಗೆ ಒಟ್ಟು 2,59,04,503.85 ಕೋ.ರೂ. ಸಂಗ್ರಹವಾಗಿದೆ.
ನಗದು ರೂಪದಲ್ಲಿ 25, 44,180.00 ಲಕ್ಷ ರೂ. ಸಂಗ್ರಹವಾಗಿದೆ.
ಚೆಕ್/ ಡಿಡಿ/ ನೆಫ್ಟ್/ ಆರ್ಟಿಜಿಎಸ್ / ಪೇಟಿಮ್ ಮೂಲಕ 2,27,62,785.75 ಕೋ.ರೂ. ಸಂಗ್ರಹವಾಗಿದೆ.
ಒಟ್ಟು 2,53,06,965.75 ಜಮೆಯಾಗಿದ್ದು, ಇದಕ್ಕೆ ಬಡ್ಡಿ ರೂಪದಲ್ಲಿ 5,97,538.10 ಲಕ್ಷ ಬಂದಿರುವುದಾಗಿ ಸ್ಪಷ್ಟಪಡಿಸಿದರು.
ಬ್ಯಾಂಕ್ ವತಿಯಿಂದ ಸೇವಾ ಶುಲ್ಕ ರೂಪದಲ್ಲಿ 39 ರೂ. ಹೊರತು ಪಡಿಸಿ ಖಾತೆಯಿಂದ ಯಾವುದೇ ಹಣ ಹಿಂಪಡೆದಿಲ್ಲ ಎಂಬುದಕ್ಕೆ ಬ್ಯಾಂಕ್ ಬ್ಯಾಲೆನ್ಸ್ ಸರ್ಟಿಫಿಕೇಟ್ ಸಹಿತ ದಾಖಲೆ ಪತ್ರ ನೀಡಿದರು.
ಯಾರೇ ಬಂದು ಮಾಹಿತಿ ಕೇಳಿದರೂ ಸಂಪೂರ್ಣ ದಾಖಲೆ ನೀಡಲು ಸಿದ್ಧ. ತಾಲೂಕಿನಲ್ಲಿ ಮನೆಕಳೆದುಕೊಂಡ 298 ಮಂದಿಗೂ ನಮ್ಮ ಪರಿಹಾರ ಮೊತ್ತ ತಲುಪಲಿದೆ. ಆದರೆ ಸಹಾಯಸ್ತ ವಿತರಿಸುವಾಗ ಸರಕಾರದಿಂದ ಎ,ಬಿ,ಸಿ ಕೆಟಗರಿಯಲ್ಲಿ ಹಾನಿಯಾದ ಮನೆಗಳ ಅನುಪಾತಕ್ಕೆ ಸರಿಯಾಗಿ ಧನ ಸಹಾಯ ನೇರವಾಗಿ ಅವರ ಖಾತೆಗೆ ತಲುಪಲಿದೆ.
ಕೋವಿಡ್ ನಿಂದ 298 ಮಂದಿಯನ್ನು ಒಂದೆಡೆ ಸೇರಿಸಲು ಅಸಾಧ್ಯ. ಕಾನೂನಾತ್ಮಕವಾಗಿ ಪರಿಹಾರ ವಿತರಿಸುವ ಸಲುವಾಗಿ ಜಿಲ್ಲಾಧಿಕಾರಿ ಅನುಮತಿ ಪಡೆದೇ ವಿತರಣೆ ನಡೆಸುವೆವು ಎಂದು ಸ್ಪಷ್ಟಪಡಿಸಿದರು.
ಪ್ರವಾಹದ ಸಂದರ್ಭದಲ್ಲಿ ಜನರ ಕಷ್ಟಕ್ಕೆ ನೇರ ಸ್ಪಂದಿಸುವ ಹಂಬಲದಿಂದ ಕಾಳಜಿ ರಿಲೀಫ್ ಫಂಡ್ ಸಮಾನ ಮನಸ್ಕರು ಒಗ್ಗೂಡಿ ತಾಲೂಕಿನಲ್ಲಿ ಬೇರೆ ಬೇರೆ ವೃತ್ತಿಯಲ್ಲಿದ್ದವರು ಸೇರಿಕೊಂಡು ಕಟ್ಟಿದ ತಂಡ.
ನಮ್ಮ ಇಂಗಿತ ಶಾಸಕರ ಗಮನಕ್ಕೆ ಬಂದು ಅವರು ನಮ್ಮ ಜತೆಗೂಡಿ ನೆರವಿಗೆ ಮುಂದಾಗಿದ್ದಾರೇ ಹೊರತು ಶಾಸಕರು ಸಮಿತಿ ರಚಿಸಿಲ್ಲ. ತಾಲೂಕಿನ ಶಾಸಕರಾಗಿದ್ದರಿಂದ ಅವರನ್ನು ಅಧ್ಯಕ್ಷರಾಗಿ ನೇಮಕ ಮಾಡಬೇಕಾಯಿತೆ ಹೊರತು ಇದರಲ್ಲಿ ರಾಜಕೀಯವಿಲ್ಲ.
ಸಮಾಜದ ಹಿತ ದೃಷ್ಟಿಯಿಂದ ಸಾರ್ವಜನಿಕರ ಹಿತದೃಷ್ಟಿಯಿಂದ ಸಮಾಜದ ಒಕ್ಕೂಟದಲ್ಲಿ ದಾನಿಗಳು ಸೇರಿ ಮಾಡಿದ ಚಿಂತನೆ.
ನಿರಾಧಾರ ಆರೋಪ ಮಾಡುವ ಮಾಜಿ ಶಾಸಕ ವಸಂತ ಬಂಗೇರ ಅವರಿಗೆ ಗೌರವಯುತವಾಗಿ ನಮ್ಮ ಕರ್ತವ್ಯ ನಿರ್ವಹಿಸಿದ್ದೇವೆ ಎಂದು ಪ್ರತಿಕ್ರೀಯೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Puttur: ವಿದ್ಯುತ್ ಕಂಬ ಏರುವ ತರಬೇತಿ!; ಪವರ್‌ಮನ್ ಉದ್ಯೋಗಕ್ಕೆ ಸ್ಥಳೀಯರಿಗೆ ಪ್ರೋತ್ಸಾಹ
Belthangady: ಗ್ರಾಮೀಣ ರಸ್ತೆಗಳಲ್ಲೂ ಗುಂಡಿ
Bantwal: ತುಂಬೆ ಶ್ರೀಮಹಾಲಿಂಗೇಶ್ವರ ದೇವಸ್ಥಾನಕ್ಕೆ ಕನ್ನ; ಲಕ್ಷಾಂತರ ಮೌಲ್ಯದ ನಗನಗದು ಲೂಟಿ
Puttur: ಮಾದಕ ವಸ್ತು ಎಂಡಿಎಂಎ ಸಾಗಾಟ ಪ್ರಕರಣ; ಆರೋಪಿಗೆ ಜಾಮೀನು
Rain: ಸುಬ್ರಹ್ಮಣ್ಯದಲ್ಲಿ ಭಾರೀ ಮಳೆ; ರಸ್ತೆಗೆ ಬಿದ್ದ ಮರ; ತಪ್ಪಿದ ಭಾರೀ ಅನಾಹುತ
MUST WATCH
ಹೊಸ ಸೇರ್ಪಡೆ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
New Delhi: 5ಜಿ ಸೇವೆಗಾಗಿ ಬಿಎಸ್‌ಎನ್ಎಲ್‌ನಿಂದ ಟೆಂಡರ್ ಆಹ್ವಾನ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
J&K: ವಾಜಪೇಯಿ ಬದುಕಿದ್ದರೆ ಜಮ್ಮು ಕಾಶ್ಮೀರ ಕೇಂದ್ರಾಡಳಿತ ಪ್ರದೇಶವಾಗುತ್ತಿರಲಿಲ್ಲ: ಒಮರ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.