Belthangady ಪುದುವೆಟ್ಟು: ಪೆಟ್ರೋಲಿಯಂ ಪೈಪ್ ಲೈನಿಗೆ ಕನ್ನ ಕೊರೆದು ಇಂಧನ ಕಳವು
Team Udayavani, Mar 23, 2024, 1:05 AM IST
ಬೆಳ್ತಂಗಡಿ: ಪುದುವೆಟ್ಟಿನಲ್ಲಿ ಪೆಟ್ರೋಲಿಯಂ ಪೈಪ್ ಲೈನ್‌ಗೆಕನ್ನ ಕೊರೆದು ಲಕ್ಷಾಂತರ ರೂ. ಮೌಲ್ಯದ ಇಂಧನ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದ್ದು, ಈ ಬಗ್ಗೆ ಕಂಪೆನಿಯವರು ನೀಡಿರುವ ದೂರಿನಂತೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪೆಟ್ರೋನೆಟ್ ಎಂ.ಎಚ್.ಬಿ. ಲಿ.ನ ನೆರಿಯದ ಸ್ಟೇಶನ್ ಇನ್ ಚಾರ್ಜ್ ಆಗಿರುವ ರಾಜನ್ ಅವರು ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದ್ದು, ಮಂಗಳೂರು- ಹಾಸನ- ಬೆಂಗಳೂರು ಪೆಟ್ರೋನೆಟ್ ಪೈಪ್ ಮೂಲಕ ಪೆಟ್ರೋಲಿಯಂ ವಸ್ತುಗಳು ಸಾಗಾಟವಾಗುತ್ತಿದ್ದು, ಪುದುವೆಟ್ಟು ಗ್ರಾಮದ ಆಲಡ್ಕ ಎಂಬಲ್ಲಿ ಮಾ. 16ರಿಂದ 19ರ ವರೆಗೆ ಕಳ್ಳರು ಪೆಟ್ರೋಲಿಯಂ ಪೈಪ್ ಲೈನ್‌ಗೆ ಕನ್ನ ಕೊರೆದು 2.5 ಇಂಚಿನ ಎಚ್.ಡಿ.ಪಿ.ಇ. ಪೈಪ್ ಅಳವಡಿಸಿ ಅದರ ಮೂಲಕ 12 ಸಾವಿರ ಲೀ.ಗೂ ಅಧಿಕ ಇಂಧನವನ್ನು ಕಳವು ಮಾಡಿದ್ದು, ಇದರ ಅಂದಾಜು ಮೌಲ್ಯ ಸುಮಾರು 9,60,000 ರೂ. ಆಗಬಹುದು ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ನೆಲದಿಂದ ಸುಮಾರು 3 ಅಡಿ ಆಳದಲ್ಲಿರುವ ಪೈಪ್ ಲೈನನ್ನು ಅಗೆದು ಪೈಪ್‌ಗೆ ರಂಧ್ರ ಕೊರೆದು ಕಳ್ಳತನ ನಡೆಸಲಾಗಿದೆ.
ಇದರಲ್ಲಿ ಸ್ಥಳೀಯರ ಸಹಕಾರವೂ ಇರುವ ಶಂಕೆ ಇದ್ದು, ದೊಡ್ಡ ಮಟ್ಟದ ಇಂಧನ ಕಳ್ಳತನ ಜಾಲ ಇರುವ ಅನುಮಾನ ವ್ಯಕ್ತವಾಗಿದೆ. ಹೆಚ್ಚಿನ ಮಾಹಿತಿಗಳು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
New Year: ಸ್ನೇಹಿತರ ಮನೆಗೆ ಪಾರ್ಟಿಗೆಂದು ಹೋದ ಬಾಲಕಿಯ ಮೇಲೆ ಅತ್ಯಾ*ಚಾರ
Miraculous; ಎರಡು ಬಸ್ ಗಳ ಮಧ್ಯ ಸಿಲುಕಿದರೂ ವ್ಯಕ್ತಿ ಬಚಾವ್: ವೈರಲ್ ವಿಡಿಯೋ
China; ಭಾರತದ ಭೂಭಾಗದಲ್ಲಿ ಎರಡು ಕೌಂಟಿಗಳು: ಕೇಂದ್ರದಿಂದ ಬಲವಾದ ಪ್ರತಿಭಟನೆ
Sharan; ಹೆದರಿಸಿ ನಗಿಸಲು ಬರುತ್ತಿದೆ ʼಛೂ ಮಂತರ್ʼ
Retirement: ವೃತ್ತಿ ನಿವೃತ್ತಿ ವ್ಯಕ್ತಿಯಲ್ಲಿ ಖಿನ್ನತೆಗೆ ಕಾರಣವಾಗುವುದೇ? ಇಲ್ಲಿದೆ ಮಾಹಿತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.