Muskmelon Fruit: ಕರ್ಬೂಜ ಹಣ್ಣು ಸೇವಿಸುವುದರಿಂದ ಆರೋಗ್ಯಕ್ಕೆ ಹಲವು ಉಪಯೋಗವಿದೆ…
Team Udayavani, Apr 11, 2023, 5:40 PM IST
ಕಲ್ಲಂಗಡಿಯಂತೆಯೇ ಹೆಚ್ಚಿನ ನೀರಿನಾಂಶವನ್ನು ಹೊಂದಿರುವ ಹಣ್ಣು ಕರ್ಬೂಜ . ಹೊರಗಿನಿಂದ ಬೂದು, ಹಸಿರು ಮಿಶ್ರಿತ ಸಿಪ್ಪೆ ಹಾಗೂ ಕಿತ್ತಳೆ ಬಣ್ಣದ ತಿರುಳಿನೊಂದಿಗೆ ಕೂಡಿರುತ್ತದೆ.
ಬೇಸಿಗೆಯ ನಿರ್ಜಲೀಕರಣ ದೂರ ಮಾಡುವ ವಿಶೇಷ ಗುಣ ಈ ಹಣ್ಣು ಹೊಂದಿದೆ. ಈ ಹಣ್ಣಿನಲ್ಲಿ ವಿಟಮಿನ್ ಎ, ವಿಟಮಿನ್ ಸಿ, ವಿಟಮಿನ್ ಬಿ 6, ಪೊಟ್ಯಾಶಿಯಂ, ಬೀಟಾ ಕ್ಯಾರೋಟೀನ್, ಕಬ್ಬಿಣ, ಮ್ಯಾಂಗನೀಸ್, ಫೋಲಿಕ್ ಆಮ್ಲ ಮತ್ತು ಅಧಿಕ ನಾರಿನಂಶ ಹಾಗೂ ಇತರ ಪ್ರಮುಖ ಪೋಷಕಾಂಶಗಳನ್ನು ಹೊಂದಿದೆ.
ಈ ಹಣ್ಣಿನಲ್ಲಿ ಪೋಷಕಾಂಶಗಳು ಹೆಚ್ಚಿದ್ದರೂ ಕ್ಯಾಲೋರಿಯು ಕಡಿಮೆ ಇರುವ ಕಾರಣದಿಂದಾಗಿ ಕೊಬ್ಬಿನಾಂಶ ಹೆಚ್ಚಿಸದೆ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ. ಇದರ ಸೇವನೆಯಿಂದ ಅನೇಕ ಪ್ರಯೋಜನಗಳಿವೆ.
ಕಿಡ್ನಿ ಸಮಸ್ಯೆ ನಿವಾರಣೆ:
ಮೂತ್ರ ಕೋಶದಲ್ಲಿ ಕಲ್ಲಿರುವವರು ಈ ಹಣ್ಣಿನ ರಸ ಕುಡಿಯಬೇಕು. ಮಲಬದ್ದಿತೆ ಇರುವವರು ಈ ಹಣ್ಣನ್ನು ಸೇವಿಸುವುದು ಒಳ್ಳೆಯದು. ಈ ಹಣ್ಣಿನ ಬೀಜದ ತಿರುಳು ಮೂತ್ರಪಿಂಡ ಮತ್ತು ಯಕೃತ್ತಿನ ತೊಂದರೆಗಳ ನಿವಾರಣೆಗೆ ಉಪಯುಕ್ತ. ದೀರ್ಘಕಾಲದಲ್ಲಿ ಜ್ವರದ ನಿವಾರಣೆಗೂ ಇದು ಉಪಯುಕ್ತ. ಕಿಡ್ನಿ ಸಮಸ್ಯೆ ಇರುವವರಿಗೆ ಈ ಹಣ್ಣು ಅತ್ಯುತ್ತಮ ಮೂತ್ರವರ್ಧಕ ಶಕ್ತಿ ಹೊಂದಿದೆ. ಹಾಗಾಗಿ ಇದು ಮೂತ್ರಕೋಶದ ಸಂಬಂಧಿ ಕಾಯಿಲೆ ಮತ್ತು ಇತರ ಅಪಾಯಕಾರಿ ಕಾಯಿಲೆ ಬರದಂತೆ ತಡೆಯುತ್ತವೆ. ನಿಂಬೆಹಣ್ಣಿನ ಜೊತೆಗೆ ಕರ್ಬೂಜ ಹಣ್ಣನ್ನು ಸೇವಿಸುವುದರಿಂದ ಸಂಧಿವಾತ ಗುಣಪಡಿಸಬಹುದು.
ಕ್ಯಾನ್ಸರ್ ರೋಗ ತಡೆಗಟ್ಟಲು:
ಕ್ಯಾನ್ಸರ್ ಬರುವುದರಿಂದ ರಕ್ಷಣೆ ಒದಗಿಸುತ್ತದೆ. ಇದರಲ್ಲಿರುವ ವಿಟಮಿನ್ ಸಿ ಹಾಗೂ ಬೀಟಾ ಕ್ಯಾರೋಟೀನ್ ಎಂಬ ಆಂಟಿ ಆಕ್ಸಿಡೆಂಟ್ ಹೊಂದಿದೆ. ಇದು ದೇಹದಲ್ಲಿ ಕ್ಯಾನ್ಸರ್ ಉಂಟುಮಾಡಬಹುದಾದ ಫ್ರೀ ರ್‍ಯಾಡಿಕಲ್ ಎಂಬ ಕಣಗಳನ್ನು ಹಿಮ್ಮೆಟ್ಟಿಸುವ ಕ್ಷಮತೆ ಹೊಂದಿದ್ದು, ಈ ಮೂಲಕ ದೇಹದ ಜೀವಕೋಶಗಳಿಗೆ ಈ ಕಣಗಳು ಹಾನಿ ಮಾಡುವುದರಿಂದ ರಕ್ಷಿಸುತ್ತದೆ. ಈ ಹಾನಿ ಮುಂದುವರೆದರೆ ಕ್ಯಾನ್ಸರ್ ಗೂ ತಿರುಗಬಹುದು. ಈ ಮೂಲಕ ಕರ್ಬೂಜದ ಹಣ್ಣು ಕ್ಯಾನ್ಸರ್ ಬರುವುದರಿಂದಲೂ ರಕ್ಷಣೆ ಒದಗಿಸುತ್ತದೆ.
ಮಧುಮೇಹ ಸಮಸ್ಯೆ:
ಮಧುಮೇಹ ರೋಗಿಗಳಿಗೆ ಕರ್ಬೂಜ ಹಣ್ಣಿನ ಜ್ಯೂಸ್ ಪೂರಕ ಆಹಾರ. ವೈದ್ಯರು ಮಧುಮೇಹಿಗಳಿಗೆ ಸ್ವಲ್ಪ ಕಹಿಯಾದ ಕರ್ಬೂಜ ಹಣ್ಣಿನ ರಸವನ್ನು ತೆಗೆದುಕೊಳ್ಳಲು ಸೂಚಿಸುತ್ತಾರೆ. ಏಕೆಂದರೆ ಇದು ಮಧುಮೇಹಿಗಳ ದೇಹದಲ್ಲಿರುವ ಸಕ್ಕರೆಯಂಶವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.
ರೋಗ ನಿರೋಧಕ ಶಕ್ತಿ ಹೆಚ್ಚಳ:
ಈ ಹಣ್ಣು ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಕ್ಷಮತೆ ಹೊಂದಿದ್ದು ಇದಕ್ಕೆ ಈ ಹಣ್ಣಿನಲ್ಲಿರುವ ವಿಟಮಿನ್ ಸಿ ಪ್ರಮುಖ ಕಾರಣ. ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳನ್ನು ಉತ್ಪತ್ತಿಸಲು ಸಾಧ್ಯವಾಗುತ್ತದೆ.
ಜೀರ್ಣಶಕ್ತಿಗೆ ಸಹಕಾರಿ:
ಕರ್ಬೂಜ ಜಠರದಲ್ಲಿ ಪಚನ ಕ್ರಿಯೆಯನ್ನು ಉದ್ದೀಪಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಏನಾದರು ತೊಂದರೆ ಇದ್ದಲ್ಲಿ ಕರ್ಬೂಜ ಹಣ್ಣು ಸೇವಿಸಬೇಕು . ಆಗ ಜೀರ್ಣಕ್ರಿಯೆ ಸರಾಗವಾಗುತ್ತದೆ. ಕರ್ಬೂಜದಲ್ಲಿರುವ ನೀರಿನಂಶ ಜೀರ್ಣಕ್ರಿಯೆಗೆ ನೆರವು ನೀಡುತ್ತದೆ. ಇದರಲ್ಲಿರುವ ಖನಿಜಾಂಶವು ದೇಹದಲ್ಲಿನ, ಅದರಲ್ಲೂ ಮುಖ್ಯವಾಗಿ ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಆಮ್ಲೀಯತೆ (ಅಸಿಡಿಟಿ) ಯನ್ನು ನಿವಾರಿಸುತ್ತದೆ. ಊಟದ ನಂತರ ಈ ಹಣ್ಣನ್ನು ಸೇವಿಸುವುದರಿಂದ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ.
ಗರ್ಭಿಣಿಯರಿಗೆ ಉತ್ತಮ:
ಗರ್ಭಾವಸ್ಥೆಯಲ್ಲಿ ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದ್ದು ಗರ್ಭಿಣಿಯ ದೇಹಕ್ಕೆ ಅಗತ್ಯ ಪೋಷಣೆ ಒದಗಿಸಲು ಸಹಾಯ ಮಾಡುತ್ತದೆ. ಗರ್ಭಿಣಿಯಾಗಬಯಸುವ ಮಹಿಳೆಯರಲ್ಲಿ ಒಂದು ವೇಳೆ ಗರ್ಭನಾಳದ ತೊಂದರೆ ಇದ್ದು ಗರ್ಭ ನಿಲ್ಲದೇ ಇದ್ದರೆ ಈ ಹಣ್ಣಿನ ಸೇವನೆಯಿಂದ ಗರ್ಭ ನಿಲ್ಲುವ ಸಾಧ್ಯತೆ ಹೆಚ್ಚುತ್ತದೆ. ಬಾಣಂತಿಯರು ಈ ಹಣ್ಣನ್ನು ಸೇವಿಸಿದರೆ. ಎದೆಹಾಲಿನ ಉತ್ಪತ್ತಿ ಕೂಡಾ ಹೆಚ್ಚಿಸಲು ಉತ್ತಮ ಆಹಾರ.
ಸೌಂದರ್ಯಕ್ಕೆ ಸಹಕಾರಿ:
ಒಂದು ಮಧ್ಯಮ ಗಾತ್ರದ ಖರ್ಬೂಜದ ಹಣ್ಣಿನ ಕಾಲುಭಾಗದ ತಿರುಳು, ಮೂರು ಸ್ಟ್ರಾಬೆರಿ ಹಣ್ಣು, ಒಂದು ದೊಡ್ಡ ಚಮಚ ಓಟ್ಸ್, ಸ್ವಲ್ಪ ಜೇನುತುಪ್ಪ ಸೇರಿಸಿ ಚೆನ್ನಾಗಿ ಬೆರೆಸಿ ಲೇಪನ ತಯಾರಿಸಿಕೊಳ್ಳಿ. ಈ ಲೇಪನವನ್ನು ಮುಖ, ಕುತ್ತಿಗೆ, ಕೈ ಕಾಲುಗಳಿಗೆ ಹಚ್ಚಿ ಸುಮಾರು ಹದಿನೈದು ನಿಮಿಷ ಬಿಟ್ಟು ತಣ್ಣೀರಿನಿಂದ ತೊಳೆದುಕೊಳ್ಳಿ. ಈ ಲೇಪನದ ಮೂಲಕ ಚರ್ಮ ಪೋಷಕಾಂಶಗಳನ್ನು ಪಡೆದು ಕೋಮಲತೆ ಮತ್ತು ಕಾಂತಿ ಪಡೆಯುತ್ತದೆ.
ಕಣ್ಣಿನ ಆರೋಗ್ಯಕ್ಕೆ :
ಉತ್ತಮ ದೃಷ್ಟಿ ಕಾಪಾಡಿಕೊಳ್ಳಲು ಬೀಟಾ ಕೆರೋಟಿನ್ ಎಂಬ ಅಂಶ ಈ ಹನ್ಣಿನಲ್ಲಿದೆ. ಈ ಬೀಟಾ ಕೆರೊಟಿನ್ ಗಳು ವಿಟಮಿನ್ ಎ ಆಗಿ ಮಾರ್ಪಾಡಾಗಿ ಕಣ್ಣಿನ ಪೊರೆ ಮತ್ತು ದೃಷ್ಟಿ ಸುಧಾರಿಸುವಲ್ಲಿ ಸಹಾಯ ಮಾಡುತ್ತದೆ. ಉತ್ತಮ ವಿಟಮಿನ್ ಹೊಂದಿರುವ ಆಹಾರಗಳನ್ನು ಸೇವಿಸುವುದರಿಂದ ಶೇಕಡಾ 40 ರಷ್ಟು ಕಣ್ಣಿನ ಪೊರೆಯ ಅಪಾಯ ತಡೆಗಟ್ಟಬಹುದು ಎಂದು ಸಂಶೋಧನೆಗಳಿಂದ ತಿಳಿದು ಬಂದಿದೆ. ಈ ಹಣ್ಣಿನಲ್ಲಿ ವಿಟಮಿನ್ ‘ಎ’ ಅಧಿಕವಿರುವುದರಿಂದ ಮಕ್ಕಳಲ್ಲಿ ರಾತ್ರಿ ಕುರುಡಿನ ಪ್ರಾರಂಭಿಕ ಲಕ್ಷಣಗಳು ಕಂಡಕೂಡಲೇ ಈ ಹಣ್ಣನ್ನು ಅಧಿಕವಾಗಿ ಸೇವಿಸಲು ಕೂಡಬೇಕು.
*ಕಾವ್ಯಶ್ರೀ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Year Ender 2024: ಈ ವರ್ಷ ಅತೀ ಹೆಚ್ಚು ಗಳಿಕೆ ಕಂಡ ಭಾರತೀಯ ಸಿನಿಮಾಗಳ ಪಟ್ಟಿ ಇಲ್ಲಿದೆ..
BGT 24: ಆತುರದ ನಿರ್ಧಾರ ಮಾಡಿದ್ರಾ ಅಶ್ವಿನ್ : ಟೀಂ ಇಂಡಿಯಾದಲ್ಲಿ ಕೊಹ್ಲಿ ಬೆಲೆ ಇಷ್ಟೇನಾ?
OneNation, OneElection Bill: 31 JPC ಸದಸ್ಯರ ಕಾರ್ಯವ್ಯಾಪ್ತಿ ಏನು?ಸಲಹೆ ನೀಡುವವರು ಯಾರು
Winter: ಚಳಿಗಾಲದಲ್ಲಿ ಆರೋಗ್ಯಕರವಾಗಿರಲು ಸೇವಿಸಬೇಕಾದ ಆಹಾರಗಳು ಇವು…
Zakir Hussain ; ಸರಸ್ವತಿ, ಗಣಪತಿಯ ಆರಾಧಕರಾಗಿದ್ದರು ತಬಲಾ ಮಾಂತ್ರಿಕ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬಗ್ಗೆ ಅವಹೇಳನಕಾರಿ ಪದಬಳಕೆ: ಪ್ರಸಾದ್ ರಾಜ್ ಕಾಂಚನ್ ಖಂಡನೆ
Puttur: ತೆಂಕಿಲದಲ್ಲಿ ರಿಕ್ಷಾ ಅಪಘಾತ: ಚಾಲಕ ಸಾವು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
N Kannaiah Naidu ಅವರಿಗೆ ಗೌರವಧನ ನೀಡಲು ಮರೆತ ತುಂಗಭದ್ರಾ ಬೋರ್ಡ್, ಜಲಸಂಪನ್ಮೂಲ ಇಲಾಖೆ
Mumbai: ಕಾರು ಢಿಕ್ಕಿ; ರಸ್ತೆ ಬದಿ ಆಡುತ್ತಿದ್ದ 4ರ ಬಾಲಕ ಸ್ಥಳದಲ್ಲೇ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.