Health Tips: ಸ್ಕಿಪ್ಪಿಂಗ್‌ನಿಂದ ದೇಹಕ್ಕಾಗುವ ಲಾಭಗಳ ಬಗ್ಗೆ ತಿಳಿದಿದೆಯೇ
ದೇಹ ಆರೋಗ್ಯವಾಗಿಡಲು ಆಹಾರ ಸೇವನೆ ಎಷ್ಟು ಮುಖ್ಯವೋ ವ್ಯಾಯಾಮ ಕೂಡಾ ಅಷ್ಟೇ ಮುಖ್ಯ
Team Udayavani, Apr 25, 2023, 5:40 PM IST
ದೇಹ ಆರೋಗ್ಯವಾಗಿರಬೇಕೆಂದು ಎಲ್ಲರೂ ಬಯಸುತ್ತಾರೆ. ಆದರೆ ವ್ಯಾಯಾಮ ಮಾಡಲು ಹಿಂಜರಿಯುವವರೆ ಹೆಚ್ಚು. ದೇಹ ಫಿಟ್ ಆಗಿರಲು ವ್ಯಾಯಾಮ ಅಗತ್ಯ. ದೇಹ ಆರೋಗ್ಯವಾಗಿಡಲು ಆಹಾರ ಸೇವನೆ ಎಷ್ಟು ಮುಖ್ಯವೋ ವ್ಯಾಯಾಮ ಕೂಡಾ ಅಷ್ಟೇ ಮುಖ್ಯ.
ಅದರಲ್ಲೂ ಸ್ಕಿಪ್ಪಿಂಗ್ ಮಾಡುವುದು ತುಂಬಾ ಉಪಕಾರಿ ಎಂದೇ ಹೇಳಲಾಗುತ್ತದೆ. ಇದು ದೇಹಕ್ಕೆ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗಿದೆ. ಏಕೆಂದರೆ ಇದು ದೇಹಕ್ಕೆ ಸಂಪೂರ್ಣ ವ್ಯಾಯಾಮ ನೀಡುವ ಕಾರಣದಿಂದಾಗಿ ದೇಹ ಫಿಟ್ ಆಗಿರುತ್ತದೆ.
ಒಂದು ಹಗ್ಗವನ್ನು ಹಿಡಿದುಕೊಂಡು ಅದನ್ನು ತಿರುಗಿಸುತ್ತಾ ಜಿಗಿಯುವುದಕ್ಕೆ ಸ್ಕಿಪ್ಪಿಂಗ್ ಎನ್ನಲಾಗುತ್ತದೆ. ಸ್ಕಿಪ್ಪಿಂಗ್ ಮಾಡುವುದರಿಂದ ಪ್ರತಿ ನಿಮಿಷಕ್ಕೆ 10-15 ಕ್ಯಾಲೋರಿ ಕರಗಿಸಬಹುದು. ದೇಹದಲ್ಲಿ ಇರುವ ಹೆಚ್ಚಿನ ತೂಕವನ್ನು ಇಳಿಸಿ, ಫಿಟ್ ಆಗಲು ಸ್ಕಿಪ್ಪಿಂಗ್ ಸಹಾಯ ಮಾಡುತ್ತದೆ.
ಸ್ಕಿಪ್ಪಿಂಗ್ ಮಾಡುವಾಗ ಭುಜಗಳನ್ನು ತಿರುಗಿಸುವುದು, ಮೇಲೆ ಹಾರುವುದರಿಂದ ದೇಹ ಫ್ಲೆಕ್ಸಿಬಲ್ ಆಗಿರುತ್ತದೆ. ಇದು ದೇಹದ ಅಂಗಗಳ ಚಲನೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಪ್ರತಿದಿನ ಸ್ಕಿಪ್ ಮಾಡುವುದರಿಂದ ಸ್ನಾಯುಗಳು ಮತ್ತು ತೊಡೆಗಳು ಬಲಗೊಳ್ಳುತ್ತವೆ.
ಸ್ಕಿಪ್ಪಿಂಗ್ ಮಾಡುವುದರಿಂದಾಗುವ ಇತರ ಲಾಭಗಳು ಯಾವುದೆಂದು ತಿಳಿದುಕೊಳ್ಳೋಣ
ಶ್ವಾಸಕೋಶ ಆರೋಗ್ಯ:
ಸ್ಕಿಪ್ಪಿಂಗ್ ಮಾಡಿದ ನಂತರ ಉಸಿರಾಟ ವೇಗವಾಗುತ್ತದೆ. ಇದರಿಂದ ಶ್ವಾಸಕೋಶಗಳ ಆರೋಗ್ಯ ಕಾಪಾಡಿಕೊಳ್ಳಬಹುದು.
ತೂಕ ಇಳಿಕೆಗೆ ಸಹಕಾರಿ:
ಅಧಿಕ ತೂಕ ಹೊಂದಿರುವವರಿಗೆ ಸ್ಕಿಪ್ಪಿಂಗ್ ತುಂಬಾ ಉಪಯುಕ್ತ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡಿದರೆ ದೇಹದಲ್ಲಿ ಸಂಗ್ರಹವಾಗಿರುವ ಅನಗತ್ಯ ಕೊಬ್ಬು ಕರಗುತ್ತದೆ. ಪ್ರತಿದಿನ ಕನಿಷ್ಠ ಅರ್ಧ ಗಂಟೆ ಸ್ಕಿಪ್ಪಿಂಗ್ ಆಡಿದರೆ 300 ಕ್ಯಾಲೋರಿ ಬರ್ನ್ ಆಗುತ್ತದೆ ಎನ್ನಲಾಗಿದೆ. ತೂಕ ಇಳಿಸಿಕೊಳ್ಳಲು ಬಯಸುವವರು ಸ್ಕಿಪ್ಪಿಂಗ್ ಅಭ್ಯಾಸ ಮಾಡುವುದರಿಂದ ಉತ್ತಮ ಫಲಿತಾಂಶ ಕಂಡುಕೊಳ್ಳಬಹುದು. ಹತ್ತು ನಿಮಿಷ ಸ್ಕಿಪ್ಪಿಂಗ್ ಮಾಡುವುದು 2 ಕಿ.ಮೀ ದೂರ ಓಡುವುದಕ್ಕೆ ಸಮ ಎನ್ನುತ್ತಾರೆ ಆರೋಗ್ಯ ತಜ್ಷರು.
ಹೃದಯದ ಆರೋಗ್ಯ:
ಸ್ಕಿಪ್ಪಿಂಗ್ ಮಾಡುವುದು ಹೃದಯದ ಆರೋಗ್ಯಕ್ಕೆ ಕೂಡಾ ಒಳ್ಳೆಯದು. ಇದು ಹೃದಯ ಬಡಿತ ಹೆಚ್ಚಿಸುತ್ತದೆ. ಇದರಿಂದ ಹೃದಯ ಆರೋಗ್ಯಕರವಾಗಿರುತ್ತದೆ. ಪ್ರತಿನಿತ್ಯ ಸ್ಕಿಪ್ಪಿಂಗ್ ಮಾಡುವುದರಿಂದ ಬಹುತೇಕ ಹೃದಯದ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡಬಹುದು.
ಮೆದುಳು ಕ್ರಿಯಾಶೀಲವಾಗುತ್ತದೆ: ಸ್ಕಿಪ್ಪಿಂಗ್, ಮೆದುಳಿನ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಪ್ರತಿದಿನ ತಪ್ಪದೆ ಸ್ಕಿಪ್ಪಿಂಗ್ ಮಾಡಿದರೆ ಮೆದುಳಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ದೇಹದ ಮೂಳೆ ಆರೋಗ್ಯಕ್ಕೆ:
ದೇಹದ ಮೂಳೆಗಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಇದರಿಂದ ಮಣಿಗಂಟುಗಳಿಗೆ ಗಾಯ ಮತ್ತು ಇತರ ಯಾವುದೇ ಗಾಯದ ಸಮಸ್ಯೆ ನಿವಾರಣೆ ಮಾಡುತ್ತದೆ.
ಒತ್ತಡ ನಿವಾರಣೆ:
ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಮಾನಸಿಕ ಸಮಸ್ಯೆ ಎದುರಿಸುತ್ತಿದ್ದಾರೆ. ಸ್ಕಿಪ್ಪಿಂಗ್ ಮಾಡುವುದರಿಂದ ಒತ್ತಡ ನಿವಾರಿಸಬಹುದು. ಆದ್ದರಿಂದ ದಿನದ ಅರ್ಧ ಗಂಟೆ ಸ್ಕಿಪ್ಪಿಂಗ್ ಮಾಡಲು ಮೀಸಲಿಡಿ. ಖಿನ್ನತೆ ಮತ್ತು ಆತಂಕದಂತಹ ಮಾನಸಿಕ ಅಸ್ವಸ್ಥತೆಗಳನ್ನು ಸುಧಾರಿಸಲು ಸಹಾಯ ಮಾಡುತ್ತದೆ.
ಸೂಚನೆ: ಹೃದಯದ ಸಮಸ್ಯೆ, ಯಾವುದೇ ಶಸ್ತ್ರಚಿಕಿತ್ಸೆ, ಅಧಿಕ ರಕ್ತದೊತ್ತಡವಿದ್ದರೆ ಅಥವಾ ಗಂಭೀರ ಗಾಯಗೊಂಡ ಬಳಿಕ ಸ್ಕಿಪ್ಪಿಂಗ್ ಅಭ್ಯಾಸ ಮಾಡಬಾರದು. ವೈದ್ಯರು ಅನುಮತಿ ಮುಂದುವರೆಯುವುದು ಉತ್ತಮ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Border Gavaskar Trophy: ಕಾಂಗರೂ ಚಾಲೆಂಜ್ ಗೆ ಅಣಿಯಾದ ಭಾರತ; ಹೇಗಿದೆ ತಂಡದ ಬಲಾಬಲ
Tulsi Health Benefits: ತುಳಸಿ ಗಿಡದ ಔಷಧೀಯ ಗುಣಗಳ ಮಾಹಿತಿ ಇಲ್ಲಿವೆ…
Naxal: ನ.17 ಈದು ಎನ್‌ಕೌಂಟರ್- ನ.18 ಕಬ್ಬಿನಾಲೆ ಶೂಟೌಟ್: 21 ವರ್ಷದ ಹಿಂದೆ ನಡೆದಿದ್ದೇನು?
ಈ ಎಲೆಯಿಂದ ಮಾಡುವ ಖಾದ್ಯ ಆರೋಗ್ಯಕ್ಕೂ ಉತ್ತಮ… ಅದ್ಯಾವ ಎಲೆ ಅಂತೀರಾ ಇಲ್ಲಿದೆ ರೆಸಿಪಿ…
ಕಿರುತೆರೆ To ಹಿರಿತೆರೆ.. ಧಾರಾವಾಹಿಯಿಂದ ನೇಮ್ ಪಡೆದು ಸಿನಿಮಾದಲ್ಲಿ ಫೇಮ್ ಆದ ಕಲಾವಿದರು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.