Bengaluru: ಪಟಾಕಿ ಸಿಡಿದು 54 ಮಂದಿಗೆ ಗಾಯ
ಬೇರೆಯವರು ಸಿಡಿಸಿದ ಪಟಾಕಿಗಳಿಂದ ಗಾಯಗೊಂಡವರೇ ಹೆಚ್ಚು
Team Udayavani, Nov 2, 2024, 9:25 AM IST
ಬೆಂಗಳೂರು: ನಗರದಲ್ಲಿ ಪಟಾಕಿ ಅವಘಡಗಳಿಂದ ಮಕ್ಕಳು ಸೇರಿ 54 ಮಂದಿ ಗಾಯಗೊಂಡಿದ್ದಾರೆ.
ಮಿಂಟೋ ಆಸ್ಪತ್ರೆಯಲ್ಲಿ 10, ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ 12, ಅಗರ್ವಾಲ್ ಆಸ್ಪತ್ರೆಯಲ್ಲಿ 9, ನಾರಾಯಣ ನೇತ್ರಾಲಯದಲ್ಲಿ 23 ಮಂದಿ ಚಿಕಿತ್ಸೆ ಪಡೆದಿದ್ದಾರೆ. ಇವುಗಳಲ್ಲಿ ಬೇರೆಯವರು ಸಿಡಿಸಿದ ಪಟಾಕಿಯಿಂದ ಕಣ್ಣಿನ ತೊಂದರೆಗೆ ಒಳಗಾದವರೇ ಹೆಚ್ಚು.
ಶುಕ್ರವಾರ ಓರ್ವ ವಯಸ್ಕ ಸೇರಿದಂತೆ 10 ಮಕ್ಕಳು ಪಟಾಕಿ ಅವಘಡಗಳಿಗೆ ತುತ್ತಾಗಿ ಮಿಂಟೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. 6 ಮಂದಿ ಹೊರರೋಗಿ ವಿಭಾಗದಲ್ಲಿ ಹಾಗೂ ನಾಲ್ವರು ಇತರೆ ವಿಭಾಗದಲ್ಲಿ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. 4 ಮಕ್ಕಳಿಗೆ ತೀವ್ರ ಹಾಗೂ 2 ಮಕ್ಕಳಿಗೆ ಸಾಮಾನ್ಯ, ಒಂದು ಮಗುವಿಗೆ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಶಂಕರ ಕಣ್ಣಿನ ಆಸ್ಪತ್ರೆಯಲ್ಲಿ ಶುಕ್ರವಾರ ಪಟಾಕಿ ಅವಗಢ ಸಂಬಂ ಧಿಸಿದಂತೆ 12 ಪ್ರಕರಣ ವರದಿಯಾಗಿದೆ.
ಅದರಲ್ಲಿ 8 ಮಕ್ಕಳು ಹಾಗೂ 4 ವಯಸ್ಕರು ಇದ್ದಾರೆ. ಕಾರ್ನಿಯಾ ಗಾಯ ಸೇರಿದಂತೆ ಇತರೆ ಗಂಭೀರ ಗಾಯಗಳಾ ಗಿರುವುದು ವರದಿಯಾಗಿದೆ. ಇನ್ನೂ ಅಗರ್ವಾಲ್ ಆಸ್ಪತ್ರೆಯಲ್ಲಿ 9, ನಾರಾಯಣ ನೇತ್ರಾಲಯದಲ್ಲಿ 23 ಪ್ರಕರಣ ವರದಿಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣದ ಸಿಬಂದಿಗೆ ಬೆದರಿಕೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Bengaluru: ಕೇಂದ್ರದ ತೆರಿಗೆ ಅನ್ಯಾಯ ಮಧ್ಯೆಯೂ ಅಭಿವೃದ್ಧಿ: ಸಿಎಂ
Bengaluru: ಕನ್ನಡ ಬದುಕಿನ ಭಾಷೆಯಾಗಿಸುವುದೇ ನಮ್ಮ ಗುರಿ: ಡಿ.ಕೆ. ಶಿವಕುಮಾರ್
MUST WATCH
ಹೊಸ ಸೇರ್ಪಡೆ
Taliban; ಮಹಿಳೆಯರ ಪ್ರಾರ್ಥನೆ ವಿಚಾರದಲ್ಲಿ ಮತ್ತೊಂದು ವಿಲಕ್ಷಣ ನಿಯಮ!!
Bengaluru: ಬ್ಯಾಗ್ ಪರಿಶೀಲನೆ ವೇಳೆ ವಿಮಾನ ನಿಲ್ದಾಣದ ಸಿಬಂದಿಗೆ ಬೆದರಿಕೆ
High Court: ಕ್ರಿಮಿನಲ್ ಕೇಸ್ ಡೈರಿ ಪ್ರತೀ ಪುಟಕ್ಕೆ ಸಹಿ:ಅರ್ಜಿ ವಜಾಗೊಳಿಸಿದ ಹೈಕೋರ್ಟ್
Prashant Kishor; ಸಲಹೆ ನೀಡಲು ಒಂದು ಚುನಾವಣೆಗೆ ಪಡೆಯುಯುತ್ತಿದ್ದ ಶುಲ್ಕ ಬಹಿರಂಗ!
Bengaluru: ಸುವರ್ಣ ಸಂಭ್ರಮದಲ್ಲಿ ರಾಜ್ಯೋತ್ಸವ ವೈಭವ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.