Bengaluru-Kannur ರೈಲು ಕೋಯಿಕ್ಕೋಡ್‌ಗೆ ವಿಸ್ತರಣೆ ಬೇಡ- ಸಂಸದ ನಳಿನ್ ಆಗ್ರಹ
Team Udayavani, Feb 2, 2024, 1:22 AM IST
ಮಂಗಳೂರು: ಬೆಂಗ ಳೂರು-ಮಂಗಳೂರು-ಕಣ್ಣೂರು ಎಕ್ಸ್‌ಪ್ರೆಸ್ (16511/12) ರೈಲು ಕೋಯಿಕ್ಕೋಡ್‌ಗೆ ವಿಸ್ತರಿಸಿರುವುದು ಸರಿಯಲ್ಲ, ಇದರಿಂದ ಮಂಗಳೂರು ಪ್ರದೇಶದ ರೈಲ್ವೇ ಪ್ರಯಾಣಿಕರಿಗೆ ಅನ್ಯಾಯ ಆಗಲಿದೆ. ಹಾಗಾಗಿ ಮಧ್ಯ ಪ್ರವೇಶಿಸಿ, ಯಥಾ ಸ್ಥಿತಿ ಮುಂದುವರಿಸುವಂತೆ ಸಂಸದ ನಳಿನ್ ಕುಮಾರ್ ಕಟೀಲು ಅವರು ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಮೂಲಕ ಆಗ್ರಹಿಸಿದ್ದಾರೆ.
ಈ ರೈಲು ಮಂಗಳೂರು ಮತ್ತು ಬೆಂಗಳೂರು ಮಧ್ಯೆ ಆರಂಭವಾಗಿತ್ತು. ಬಳಿಕ ಈ ಭಾಗದ ಜನರ ವಿರೋಧದ ನಡುವೆಯೇ ರೈಲನ್ನು ಕೇರಳದ ಕಣ್ಣೂರಿಗೆ ವಿಸ್ತರಿಸಲಾಗಿತ್ತು. ಪ್ರಸ್ತುತ ರೈಲು ಮಂಗಳೂರು- ಬೆಂಗಳೂರನ್ನು ಸಂಪರ್ಕಿಸುತ್ತಿದ್ದು, ಬಹುಬೇಡಿಕೆಯ ರೈಲಾಗಿದೆ. ಬಹುತೇಕ ದಿನಗಳಲ್ಲೂ ವೈಟಿಂಗ್ ಲಿಸ್ಟ್‌ನಲ್ಲೇ ಇರುತ್ತದೆ. ಹಾಗಾಗಿ ಕಣ್ಣೂರಿನಿಂದಲೂ ದಕ್ಷಿಣಕ್ಕೆ ಕೋಯಿಕ್ಕೋಡ್‌ಗೆ ಈ ರೈಲು ವಿಸ್ತರಣೆ ಮಾಡಿರುವುದಕ್ಕೆ ಜನರಿಂದ ತೀವ್ರ ಪ್ರತಿರೋಧ ಬಂದಿದೆ. ಜನರ ದೂರು ಸಹಜವಾಗಿದ್ದು, ಪರಿಗಣಿಸಲೇಬೇಕು, ಈ ವಿಸ್ತರಣೆಯಿಂದಾಗಿ ಮಂಗಳೂರು ಭಾಗದ ಪ್ರಯಾಣಿಕರಿಗೆ ಟಿಕೆಟ್ ಲಭ್ಯವಾಗುವ ಪ್ರಮಾಣ ಕಡಿಮೆಯಾಗಲಿದೆ. ಅಲ್ಲದೆ ಪ್ರಸ್ತುತ 16527/28 ರೈಲು ಕಣ್ಣೂರು-ಬೆಂಗಳೂರು ಮಧ್ಯೆ ಕೋಯಿಕ್ಕೋಡ್ ಮೂಲಕವಾಗಿ ಸಂಚರಿಸುತ್ತಿದ್ದು ಕೋಯಿಕ್ಕೋಡ್ ಭಾಗದವರಿಗೆ ಸೇವೆಯಲ್ಲಿದೆ. ಹಾಗಾಗಿ ಈ ಹೊಸ ವಿಸ್ತರಣೆ ಅಗತ್ಯವಿರುವುದಿಲ್ಲ ಎಂದು ಪತ್ರದಲ್ಲಿ ನಳಿನ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕುಖ್ಯಾತ ರೌಡಿಶೀಟರ್ ದಾವೂದ್ ಬಂಧಿಸಿದ ಸಿಸಿಬಿ ಪೊಲೀಸರು
Surathkal: ಎಐಯಿಂದ ಉದ್ಯೋಗ, ನಂಬಿಕೆಗೆ ಕುತ್ತು: ಪ್ರೊ| ಗೋವಿಂದನ್ ರಂಗರಾಜನ್
Mangaluru: ಗೊಂದಲ ಮೂಡಿಸುವ ಬಿಜೆಪಿಗೆ ತಕ್ಕ ಪಾಠ: ಕೆಪಿಸಿಸಿ ಪ್ರ.ಕಾರ್ಯದರ್ಶಿ ಪದ್ಮರಾಜ್
Putturu: ಬಜೆಟ್‌ನಲ್ಲಿ ಹೊರಡಿಸಿರುವ ಆದೇಶ ಅನುಷ್ಠಾನಿಸದೆ ಕೃಷಿಕರಿಗೆ ವಂಚನೆ: ಮಠಂದೂರು
Manya: ಭಜನ ಮಂದಿರದಿಂದ ಕಳವು ಆರೋಪಿಗಳಿಂದ ಮಾಹಿತಿ ಸಂಗ್ರಹ
MUST WATCH
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.