ಬೆಂಗಳೂರು: 25 ವರ್ಷದ ಹಿಂದೆ ಕಳವಾಗಿದ್ದ ತಂದೆಯ ಬೈಕ್ ಹುಡುಕಿದ ಮಗ

ಟೆಕ್ಕಿಯ 15 ವರ್ಷಗಳ ಅವಿರತ ಶ್ರಮ ಯಶಸ್ವಿ

Team Udayavani, Feb 1, 2022, 8:06 PM IST

1–dweqe

ಬೆಂಗಳೂರು: ತಂದೆಯ ಕಳವಾಗಿದ್ದ ರಾಯಲ್ ಎನ್ ಫೀಲ್ಡ್ ಬೈಕ್ ಪತ್ತೆ ಹಚ್ಚಲು ನಗರ ಮೂಲದ ಟೆಕ್ಕಿಯೊಬ್ಬರು 15 ವರ್ಷಗಳ ಕಾಲ ಅವಿರತ ಶ್ರಮಿಸಿ ಅದರಲ್ಲಿ ಯಶಸ್ವಿಯೂ ಆಗಿದ್ದಾರೆ.

ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿರುವ ಟೆಕ್ಕಿ ಅರುಣ್, 15 ವರ್ಷಗಳ ಪರಿಶ್ರಮದ ನಂತರ ತನ್ನ ತಂದೆಯ ಕಳವಾವಾಗಿದ್ದ ಬೈಕನ್ನು ಕಂಡುಕೊಂಡಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ನಿವೃತ್ತ ಬ್ಯಾಂಕ್ ಅಧಿಕಾರಿ ಎನ್ ಶ್ರೀನಿವಾಸನ್ ಅವರು 1971ರಲ್ಲಿ ರಾಯಲ್ ಎನ್ ಫೀಲ್ಡ್ ಬೈಕ್ ಖರೀದಿಸಿ ಅದರ ಬಗ್ಗೆ ವಿಶೇಷ ಒಲವು ತೋರಿದ್ದರು. ಅದಕ್ಕೆ ಭಾರೀ ಕಾಳಜಿ ತೋರಿ ನಿರ್ವಹಣೆ ಮಾಡುತ್ತಿದ್ದರು. ಆದರೆ 1996ರಲ್ಲಿ ಹೆಬ್ಬಾಳದ ಅವರ ಮನೆಯ ಮುಂದೆ ನಿಲ್ಲಿಸಿದ್ದ ಬೈಕ್ ಏಕಾಏಕಿ ಕಳ್ಳತನವಾಗಿ ಹೃದಯವನ್ನೇ ಭೇದಿಸಿದಂತಾಗಿ ತ್ತು. ಬೈಕ್ ಹುಡುಕಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಶ್ರೀನಿವಾಸನ್ ಯಾವಾಗಲೂ ಬೈಕ್ ಅನ್ನು ನೆನಪಿಸಿಕೊಳ್ಳುತ್ತಿದ್ದರಾದರೂ ಅದನ್ನು ಕಂಡುಕೊಳ್ಳುವ ಭರವಸೆಯನ್ನು ಕಳೆದುಕೊಂಡಿದ್ದರು. ಆದರೆ ಅವರ ಮಗ ಅರುಣ್ ಬೈಕ್ ಹುಡುಕಲು ನಿರ್ಧರಿಸಿದರು.

1972 ರಲ್ಲಿ ತೆಗೆದ ಹಳೆಯ ಕಪ್ಪು ಮತ್ತು ಬಿಳಿ ಛಾಯಾಚಿತ್ರದೊಂದಿಗೆ ಅರುಣ್ ನೋಂದಣಿ ಸಂಖ್ಯೆ MYH 1731 ರ ಬೈಕ್‌ಗಾಗಿ ಹುಡುಕಿದರು. ಅವರು ರಾಜ್ಯದಾದ್ಯಂತ ಹಳೆಯ ಬೈಕ್‌ಗಳನ್ನು ರಿಪೇರಿ ಮಾಡುವ ಗ್ಯಾರೇಜ್‌ಗಳಿಗೆ ಭೇಟಿ ನೀಡಿದರು. ಪೊಲೀಸ್ ಮತ್ತು ಪ್ರಾದೇಶಿಕ ಸಾರಿಗೆ ಕಚೇರಿಗಳಲ್ಲಿ ವಿಚಾರಣೆ ನಡೆಸಿದರು. ಅವರು 2006 ರಿಂದ ಬೈಕ್‌ಗಾಗಿ ಹುಡುಕುತ್ತಲೇ ಇದ್ದರು ಮತ್ತು ಅಂತಿಮವಾಗಿ 2021 ರಲ್ಲಿ ಪ್ರಗತಿಯನ್ನು ಸಾಧಿಸಿಯೇ ಬಿಟ್ಟರು.

ಆರ್‌ಟಿಒ ದಾಖಲೆಗಳ ಡಿಜಿಟಲೀಕರಣವು ತನ್ನ ತಂದೆಯ ಬೈಕ್‌ನ ಅಸ್ತಿತ್ವಕ್ಕೆ ಮೊದಲ ಸುಳಿವು ನೀಡಿತು. ಟೆಕ್ಕಿಯು ಟಿ . ನರಸೀಪುರದ ರೈತರೊಬ್ಬರ ಹೆಸರಿನಲ್ಲಿ RTO ನ ಪರಿವಾಹನ್ ಸೇವಾ ಪೋರ್ಟಲ್‌ನಲ್ಲಿ ಹೊಂದಾಣಿಕೆಯ ನೋಂದಣಿ ಸಂಖ್ಯೆಗಳೊಂದಿಗೆ ಸಕ್ರಿಯ ವಿಮಾ ಪಾಲಿಸಿಯನ್ನು ಕಂಡುಕೊಂಡಿದ್ದಾರೆ. ಕದ್ದ ಮತ್ತು ಕೈಬಿಟ್ಟ ವಾಹನಗಳಿಗಾಗಿ ಪೊಲೀಸ್ ಹರಾಜಿನಲ್ಲಿ ಖರೀದಿಸಿದ ಡೀಲರ್‌ನಿಂದ ರೈತ ಬೈಕ್ ಖರೀದಿಸಿದ್ದಾನೆ ಎಂದು ನಂತರ ತಿಳಿದುಬಂದಿದೆ.

ಅರುಣ್ ರೈತನ ಬಳಿ ತೆರಳಿ ಬೈಕನ್ನು ಮಾರಾಟ ಮಾಡಲು ಮನವರಿಕೆ ಮಾಡಿಕೊಟ್ಟರು, ಅದನ್ನು ರಿಪೇರಿ ಮಾಡಿದರು. ನವೀಕರಿಸಿದ ಬೈಕನ್ನು ಅದರ ನಿಜವಾದ ಮಾಲೀಕ ಎನ್ ಶ್ರೀನಿವಾಸನ್ ಅವರ ಕೈಗೆ ಮರಳಿ ಸೇರಿಸುವಲ್ಲಿ ಯಶಸ್ವಿಯಾದರು.

ಶ್ರೀನಿವಾಸನ್ ತನ್ನ ಬಹುಕಾಲದಿಂದ ಕಳೆದುಹೋದ ಸ್ನೇಹಿತನಾಗಿದ್ದ, ತಾನು ಸವಾರಿ ಮಾಡಿದ ಬೈಕನ್ನು ಮತ್ತೆ ಕಂಡು ಫುಲ್ ಖುಷ್ ಆಗಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Uttar Pradesh: ತಪ್ಪು ದಾರಿ ತೋರಿದ ಜಿಪಿಎಸ್‌: ನದಿಗೆ ಬಿದ್ದು ಮೂವರ ಸಾವು

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Jharkhand: ಬಿಜೆಪಿ ಗೆದ್ದೇ ಗೆಲ್ಲುತ್ತದೆ ಎಂದಿಲ್ಲ: ಅಸ್ಸಾಂ ಸಿಎಂ ಬಿಸ್ವಾ ವಾದ

Darshan (3)

Renukaswamy ಹ*ತ್ಯೆ ಸ್ಥಳದಲ್ಲಿ ದರ್ಶನ್‌ ಇದ್ದ ಚಿತ್ರ ಲಭ್ಯ: ಪರಂ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

Commissioner: ಗೂಂಡಾ ವರ್ತನೆ ತೋರಿದರೆ ಕ್ರಮ; ಕಮಿಷನರ್‌ ಎಚ್ಚರಿಕೆ

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

FIR: ಮಹಿಳಾ ಉದ್ಯಮಿ ಆತ್ಮಹತ್ಯೆ ಕೇಸ್‌: ಲೇಡಿ ಡಿವೈಎಸಿ ವಿರುದ್ಧ ಎಫ್ಐಆರ್‌

1

Arrested: ಉದ್ಯಮಿ ಅಪಹರಣ: ಪ್ರೇಯಸಿ ಸೇರಿ 7 ಮಂದಿ ಸೆರೆ

3-darshan

Renukaswamy Case: ಹತ್ಯೆ ಸ್ಥಳದಲ್ಲಿ ನಟ ದರ್ಶನ್‌: ಫೋಟೋ ಸಾಕ್ಷ್ಯ

10-bng

Bengaluru: ಠಾಣೆಯಲ್ಲಿ ಪೊಲೀಸ್‌ ಸಿಬ್ಬಂದಿ ನಡುವೆ ಜಗಳ: ವಿಡಿಯೋ ವೈರಲ್‌

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

Udupi: ಗೀತಾರ್ಥ ಚಿಂತನೆ-104: “ಅಂತಃಸ್ಫೂರ್ತಿ’ಯಿಂದ ತೊಂದರೆ ಇದಿರಿಸುವ ಶಕ್ತಿ

aus-rohit

Australia: ಪರ್ತ್‌ಗೆ ಆಗಮಿಸಿದ ರೋಹಿತ್‌ ಶರ್ಮ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Pro Kabaddi League: ಬೆಂಗಾಲ್‌ ವಾರಿಯರ್ ಮೇಲೆ ಪುಣೇರಿ ಪಲ್ಟಾನ್‌ ಸವಾರಿ

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

Kolkata: ತಮ್ಮದೇ ಪ್ರತಿಮೆ ಅನಾವರಣ ಮಾಡಿದ ಪಶ್ವಿ‌ಮ ಬಂಗಾಲ ಗವರ್ನರ್‌

1-ewew

ಸಂಗೀತ ವಿವಿಯಲ್ಲಿ ಕೋರ್ಸ್‌ ಆರಂಭ: ಕುಲಪತಿ ನಾಗೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.