ಬೆಂಗಳೂರು ಗಲಭೆಗೆ ಒಂದು ವರ್ಷ
ಕಾಡುಗೊಂಡನಹಳ್ಳಿ ಮತ್ತು ದೇವರ ಜೀವನಹಳ್ಳಿಯಲ್ಲಿ ನಡೆದಿದ್ದ ದುರ್ಘಟನೆ
Team Udayavani, Aug 12, 2021, 2:09 PM IST
ಬೆಂಗಳೂರು: ನಗರದ ಇತಿಹಾಸದಲ್ಲೇ ಕಾಡುಗೊಂಡನ ಹಳ್ಳಿ ಮತ್ತು ದೇವರ ಜೀವನಹಳ್ಳಿ ಗಲಭೆ ಪ್ರಕರಣ ಅಚ್ಚಳಿಯದೆ ಉಳಿದುಕೊಂಡಿದೆ. ಈ ದುರ್ಘಟನೆಗೆ ಆ.11ಕ್ಕೆ ಒಂದು ವರ್ಷ.
ಅನ್ಯಧರ್ಮದ ಗುರುಗಳ ಬಗ್ಗೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿದ ಆರೋಪದ ಮೇಲೆ ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಸೋದರ ಅಳಿಯ ನವೀನ್ ವಿರುದ್ಧ ಆ.11ರ ರಾತ್ರಿ ದೂರು ದಾಖಲು ನೀಡುವ ನೆಪದಲ್ಲಿಕೆ.ಜಿ.ಹಳ್ಳಿಮತ್ತುಡಿ.ಜೆ.ಹಳ್ಳಿ
ಠಾಣೆಗಳಿಗೆ ಬಂದ ಕೆಲವರು ಒಳಗಡೆ ನುಗ್ಗಿ ದಾಂಧಲೆ ನಡೆಸಿದರು. ಅಲ್ಲದೆ, ಎರಡು ಠಾಣೆಗಳ ಮೇಲೆ ಬೆಂಕಿ ಹಾಕಿದರು. ಅದೇ ವೇಳೆ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ, ಸೋದರ ಅಳಿಯ ನವೀನ್ ಮನೆ,ಕಚೇರಿಗಳ ಮೇಲು ದಾಳಿ ನಡೆಸಿ ಬೆಂಕಿ ಹಾಕಿದ್ದರು. ಜತೆಗೆ ರಸ್ತೆ ಪಕ್ಕದಲ್ಲಿ ನಿಂತಿದ್ದ ವಾಹನಗಳಿಗೂ ಬೆಂಕಿ ಹಚ್ಚಿದ್ದರು.
ಈ ಸಂಬಂಧ ಸ್ಥಳೀಯರ ಪೊಲೀಸರು 400ಕ್ಕೂ ಅಧಿಕ ಮಂದಿಯನ್ನು ಬಂಧಿಸಿದ್ದರು. ಅನಂತರ ಎನ್‌ಐಎ ತನಿಖೆಕೈಗೊಂಡು 250ಕ್ಕೂ ಅಧಿಕ ಮಂದಿ ಯನ್ನು ಬಂಧಿಸಿತ್ತು. ಜತೆಗೆ ಎಸ್‌ಡಿಪಿಐ ಸಂಘಟನೆ ಕಚೇರಿಗಳ ಮೇಲೆ ದಾಳಿ ನಡೆಸಿ,ಕೆಲ ಸದಸ್ಯರನ್ನು ಬಂಧಿಸಿತ್ತು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಪುಲಕೇಶಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಅಖಂಡ ಶ್ರೀನಿವಾಸಮೂರ್ತಿ, ನಮ್ಮ ಮನೆಗೆ ಹಾಗೂ ಪೊಲೀಸ್ ಠಾಣೆಗಳಿಗೆ ಬೆಂಕಿ ಇಟ್ಟು ಒಂದು ವರ್ಷ ಅಗಿದೆ. ನಡೆಯಬಾರದ ಘಟನೆ ಅಂದು ನಡೆದು ಹೋಗಿತ್ತು. ಈ ವಿಚಾರದಲ್ಲಿ ತೀವ್ರ ನೋವು ಅನುಭವಿಸಿದ್ದೇನೆ ಘಟನೆಯಲ್ಲಿ ಭಾಗಿಯಾದ ಆರೋಪಿಗಳ ಬಂಧನಕ್ಕೆ ಸಂಬಂಧಿಸುವ ಮೂಲಕ ನ್ಯಾಯ ಸಿಕ್ಕಿದೆ . ಇನ್ನು
ಸಂಪೂರ್ಣ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದೇನೆ. ಆದರೆ ನಮ್ಮ ಪಕ್ಷದಿಂದ ಇದುವರೆಗೂ ನ್ಯಾಯ ಸಿಕ್ಕಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ:ಸಾಕು ನಾಯಿ ಪ್ರವೇಶಕ್ಕೆ ಬಿಬಿಎಂಪಿ ಷರತ್ತು
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿದೆ. ಆರೋಪಿ ಸ್ಥಾನಲ್ಲಿರುವ ಮಾಜಿ ಮೇಯರ್ ಸಂಪತ್ ರಾಜ್ ಅವರನ್ನು ಪಕ್ಷದಿಂದ ಉಚ್ಚಾಟಿಸುವಂತೆ ಮನವಿ ಮಾಡಿದ್ದೇನೆ ಎಂದರು.ಗಲಭೆ ಪ್ರಕರಣದಲ್ಲಿ ಭಾಗಿಯಾಗಿರುವ ಸಂಪತ್ ರಾಜ್,ಮಾಜಿ ಕಾರ್ಪೋರೇಟರ್ ಜಾಕಿರ್ ಹುಸೇನ್, ಸಂಪತ್ ರಾಜ್ ಆಪ್ತ ಅರುಣ್ ರಾಜ್‌ಗೆ ಹೈಕೋರ್ಟ್
ನೀಡಿರುವ ಜಾಮೀನು ರದ್ದು ಮಾಡುವಂತೆ ಕೋರಿ ಸುಪ್ರೀಂಕೋರ್ಟ್‌ಗೆ ಅರ್ಜಿ ಹಾಕಲಾಗಿದೆ. ಅದೇ ತಿಂಗಳು 23ಕ್ಕೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬರಲಿದೆ. ಇನ್ನು ನನಗೆ ಸಂಪೂರ್ಣ ನ್ಯಾಯ ಸಿಕ್ಕಿಲ್ಲ. ಪಕ್ಷದಿಂದ ನ್ಯಾಯಾ ಸಿಗಬೇಕಿದೆ ಎಂದರು.
ಠಾಣೆ ನವೀಕರಣ ಕೆಲಸ ಆಗಿಲ್ಲ
ಕಿಡಿಗೇಡಿಗಳಿಂದ ಹಾಳಾಗಿದ್ದ ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯನ್ನು ನವೀಕರಿಸುವುದಾಗಿ ಸರ್ಕಾರ ಭರವಸೆ ನೀಡಿ ವರ್ಷ ಕಳೆದರೂ ಠಾಣೆಯಲ್ಲಿ
ಯಾವುದೇ ರೀತಿಯಲ್ಲಿ ನವೀಕರಣ ಕೆಲಸ ಆಗಿಲ್ಲ. ಅದಕ್ಕೆ ಅನುದಾನ ಸರ್ಕಾರ ಅನುದಾನ ಬಿಡುಗಡೆಯಾಗಿಲ್ಲ ಎಂದು ಹೇಳಲಾಗುತ್ತಿದೆ. ಘಟನೆಗೆ ಸಾಕ್ಷಿ ಎಂಬಂತೆ ಪಾರ್ಕಿಂಗ್ ಕಾರಿಡಾರ್ ಗೋಡೆ ಹಾಗೂ ಠಾಣೆಯ ಮೊದಲ ಮಹಡಿಯ ಗೋಡೆಗಳೆಲ್ಲ ಇನ್ನೂಕಪ್ಪಾಗಿಯೆ ಇವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Agumbe Ghat: ಟ್ರಾಫಿಕ್ ಜಾಮ್, ವಾಹನ ಸವಾರರ ಪರದಾಟ..!
Mohan Bhagwat; ತಿಳುವಳಿಕೆಯ ಕೊರತೆಯಿಂದ ಧರ್ಮದ ಹೆಸರಿನಲ್ಲಿ ಶೋಷಣೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.