ನಿತ್ಯ ಶಂಖನಾದದಿಂದ ಪ್ರಾಣಾಯಾಮದ ಲಾಭ


Team Udayavani, Jun 21, 2021, 6:50 AM IST

ನಿತ್ಯ ಶಂಖನಾದದಿಂದ ಪ್ರಾಣಾಯಾಮದ ಲಾಭ

ಸನಾತನ ಧರ್ಮದ ಹಲವು ಆಚರಣೆಗಳು ವೈಜ್ಞಾನಿಕ ಮಹತ್ವ ಹಾಗೂ ತಳಹದಿಯನ್ನು ಹೊಂದಿವೆ. ಅವುಗಳಲ್ಲಿ ಆಧ್ಯಾತ್ಮಿಕ ಸ್ಥಾನ ಪಡೆದ ಶಂಖನಾದವೂ ಒಂದು. ವಾಸ್ತು, ಫೆಂಗ್‌ ಶೂ ಹೆಸರಿನಲ್ಲಿಯೋ ಭಯದ ಕಾರಣದಿಂದಲೋ ಸಾಕಷ್ಟು ದುಬಾರಿ ವಸ್ತುಗಳು ಮನೆಯಲ್ಲಿ ಸ್ಥಾನ ಪಡೆದಿವೆ. ಆದರೆ ಎಷ್ಟು ಮನೆಗಳಲ್ಲಿ ಶಂಖವಿದೆ?. ಹದಿನಾಲ್ಕು ರತ್ನಗಳಲ್ಲಿ ಒಂದಾಗಿರುವ ಶಂಖವು ಮನೆಯಲ್ಲಿದ್ದರೆ ವಾಸ್ತು ದೋಷ ನಿವಾರಣೆ, ಋಣಾತ್ಮಕ ಶಕ್ತಿ ಉಪಶಮನದೊಂದಿಗೆ ಪರಿಸರದಲ್ಲಿ ಧನಾತ್ಮಕ ಕಂಪನ್ನು ಉಂಟುಮಾಡುತ್ತದೆ.

ಅರವತ್ತು ವಿಧದ ವಿವಿಧ ಬಣ್ಣದ ಮೃದ್ವಂಗಿ ಜಾತಿಯ ಸಮುದ್ರ ಜೀವಿಯಿಂದ ನಿರ್ಮಿತವಾಗುವ ಶಂಖವು ಇಂಡೋಪೆಸಿಫಿಕ್‌ ಸಮುದ್ರದಲ್ಲಿ ಹೆಚ್ಚಾಗಿ ಸಿಗುತ್ತದೆ. ಶಂಖ ಎರಡು ಪ್ರಕಾರವಾಗಿ ಬಳಕೆಯಲ್ಲಿದೆ. ಊದುವ ಹಾಗೂ ಪೂಜಾದಿ ಅಭಿಷೇಕಕ್ಕೆ ಬಳಸುವ ಶಂಖ. ಎಡಮುರಿ ಊದಲು ಹಾಗೂ ಬಲಮುರಿ ಶಂಖ ಧಾರ್ಮಿಕ ಕಾರ್ಯಕ್ಕೆ ಬಳಸ ಲಾಗುತ್ತದೆ. ಅಲ್ಲದೇ ಶಂಖಗಳನ್ನು ಅಲಂಕಾರಿಕ ವಸ್ತುವಾಗಿಯೂ ಬಳಸಲಾಗುತ್ತಿದೆ.

ಶಂಖನಾದದ ಪ್ರಯೋಜನಗಳು
ಶಂಖದಿಂದ ಹೊರಡುವ ಧ್ವನಿತರಂಗಗಳು ಓಂಕಾರವೇ ಆಗಿದೆ. ಹೀಗಾಗಿ ಎಲ್ಲಿ ನಿರಂತರ ಶಂಖನಾದ ಮೊಳಗುವುದೋ ಅಲ್ಲಿ ಧನಾತ್ಮಕ ವಾತಾವರಣ, ಮನೋಧೈರ್ಯ ನಿರ್ಮಾಣವಾಗುವುದು. ವೈರಸ್‌ನಂತಹ ಕೀಟಾಣುಗಳು ನಾಶವಾಗುವುದು. ಶಂಖವನ್ನು ಯಾರು ಬೇಕಾದರೂ ಎಷ್ಟು ಬಾರಿಯಾದರೂ ಊದಬಹುದು. ಅದು ಅವರವರ ಸಾಮರ್ಥ್ಯಕ್ಕೆ ಅನುಗುಣವಾಗಿರುತ್ತದೆ. ಹೆಚ್ಚು ಒತ್ತಾಯಪೂರ್ವಕವಾಗಿ ಶಂಖ ಊದಬಾರದು. ಇದು ಪ್ರತಿಕೂಲ ಪರಿಣಾಮ ಬೀರುವುದು. ಸಾಮಾನ್ಯವಾಗಿ ಸಂಧಿಕಾಲ ದಲ್ಲಿ ಅಂದರೆ ಬೆಳಗ್ಗೆ, ಮಧ್ಯಾಹ್ನ, ಸಂಜೆ ವೇಳೆಗೆ ಶಂಖ ಊದುವುದು ಒಳ್ಳೆಯದು.

ಅತ್ಯುತ್ತಮ ವ್ಯಾಯಾಮ
ನಿಯಮಿತವಾಗಿ ಶಂಖ ಊದುವುದರಿಂದ ಶ್ವಾಸಕೋಶಕ್ಕೆ ಅತ್ಯುತ್ತಮ ವ್ಯಾಯಾಮ ಲಭಿಸುವುದು. ಏದುಸಿರು, ಅಸ್ತಮಾ, ಶ್ವಾಸ ಸಂಬಂಧಿ ಕಾಯಿಲೆಗಳು ದೂರವಾಗುವುದು. ಶ್ವಾಸಕೋಶದ ಸಾಮರ್ಥ್ಯ ಹೆಚ್ಚುವುದು ಜತೆಗೆ ಉಗ್ಗುವಿಕೆ ದೂರೀಕರಿಸಲು ಸಹಕಾರಿ. ನಿಯಮಿತ ಶಂಖನಾದದಿಂದ ಅಸ್ತಮಾ ದೂರವಾಗುವುದು. ಅಸ್ತಮಾ ಇನ್‌ಹೇಲರ್‌ ಹಾಗೂ ರೆಸ್ಪಿರೋಮೀಟರ್‌ನಿಂದಲೂ ಮುಕ್ತಿ ಪಡೆಯಬಹುದು.

ಶಂಖ ಮುಖೇನ ಮಾಡಿದ ಸಾಲಿಗ್ರಾಮ ಅಭಿಷೇಕ ಎಲ್ಲ ಪುಣ್ಯನದಿಗಳ ಪವಿತ್ರ ಸಂಗಮವಾಗಿದೆ. ಈ ತೀರ್ಥ ಸೇವನೆಯಿಂದ ಎಲುಬು, ಹಲ್ಲುಗಳಿಗೆ ಸಂಬಂಧಿತ ಸಮಸ್ಯೆಗಳು ನಿವಾರಣೆಯಾಗುವುದಲ್ಲದೇ ಆಯಾಸ ಪರಿಹಾರವಾಗಲು, ನಿರುತ್ಸಾಹ ದೂರೀಕರಿಸಲು ಇದು ಪ್ರೇರಕವಾಗಿದೆ.

ಮನೋಬಲ ವೃದ್ಧಿ
ಶಂಖ ಊದಲು ಮಕ್ಕಳಿಗೆ ಪ್ರೋತ್ಸಾಹಿಸುವುದರಿಂದ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಎದುರಿಸಲು ಮನೋಬಲ ಲಭಿಸುವುದು. ಆರೋಗ್ಯ ಉತ್ತಮಗೊಂಡು ಸದಾಚಾರ ಬದುಕಿಗೆ ಪೂರಕವಾಗುವುದು. ಮಕ್ಕಳು ತಮ್ಮ ಸಂಸ್ಕೃತಿಯೊಂದಿಗೆ ಒಡ ನಾಟದಿಂದ ಇರಲು ಇದು ಸಹಕಾರಿ.

ಗರ್ಭವತಿಯರು ಶಂಖದ ನೀರನ್ನು ಸೇವಿಸುವುದರಿಂದ ಹುಟ್ಟುವ ಮಗುವಿಗೂ ಲಾಭಕರ. ಪೋಲಿಯೋ, ಮೂಗ, ಕಿವುಡುತನ ಬರುವುದಿಲ್ಲ. ಮಾತು ಸ್ಪಷ್ಟ, ವಾಣಿ ಸಿಹಿಯಾಗುವುದು. ವಾಕಟುತ್ವ ಪ್ರಾಪ್ತವಾಗುವುದು.

ಬೌದ್ಧಿಕ ಕ್ಷಮತೆ ವೃದ್ಧಿ
ಯೌಗಿಕ ಪರಿಣಾಮವಾಗಿ ಶಂಖನಾದವು ಷಟ್‌ಚಕ್ರ ಶುಚಿತ್ವಕ್ಕೆ ವಿವಿಧ ಚಕ್ರಗಳ ಏರುಪೇರು ಸಮತೋಲನಕ್ಕೆ ಸಹಕಾರಿ. ನಿರಂತರ ಅಭ್ಯಾಸ ದಿಂದ ಪ್ರಾಣಾಯಾಮದ ಲಾಭವನ್ನು ನಿಶ್ಚಯವಾಗಿ ಪಡೆಯಬಹುದು. ಬೌದ್ಧಿಕ ಕ್ಷಮತೆಯೂ ಹೆಚ್ಚುವುದು. ಶಂಖದಲ್ಲಿಟ್ಟ ಹಾಲು ಕ್ಯಾಲ್ಸಿಯಂ ತೊಂದರೆ ದೂರ ಮಾಡಿ ಸ್ಮರಣಶಕ್ತಿ ವರ್ಧನೆ, ಕಣ್ಣಿನ ದೋಷ ನಿವಾರಣೆಗೆ ಸಹಕಾರಿಯಾಗಿದೆ.

“ಬ್ರಾಹ್ಮಿ ಮೂಹೂರ್ತೆ ಉತ್ತಿಷ್ಠೆàತ್‌ ಉಷಃಪಾನಂ’ ಎಂಬುದು ಆಯುರ್ವೇದ ದಿನಚರ್ಯೆಯ ಸೂತ್ರ. ಪ್ರತೀದಿನ ಬೆಳಗ್ಗೆ ಎದ್ದ ಕೂಡಲೇ ಉಷಃಪಾನ ಮಾಡುವುದರಿಂದ ಸಂಧಿವಾತ, ಎಸಿಡಿಟಿ, ಮಲಬದ್ಧತೆ, ಅರೆತಲೆ ನೋವು ನಿವಾರಣೆಯಾಗುವುದು. ಉಷಃ ಪಾನಕ್ಕೆ ಮಣ್ಣಿನ, ತಾಮ್ರದ, ಬೆಳ್ಳಿಯ ಅಥವಾ ಬಂಗಾರದ ಪಾತ್ರೆ ಬಳಸುತ್ತಾರೆ. ಆದರೆ ಶಂಖದ ನೀರನ್ನು ಸೇವಿಸುವುದರಿಂದ ಮೂರು ಧಾತುಗಳ ಲಾಭಸಿಗಲಿದೆ. ನಿತ್ಯ ನಿರಂತರ ಶಂಖಾನುಸಂಧಾನದಿಂದ ವೃದ್ಧಾಪ್ಯ ಸಮಸ್ಯೆ ಬರುವುದಿಲ್ಲ, ಕಾಯಕಲ್ಪ
ಸಿದ್ಧಿ ಲಭಿಸುವುದು.

ಇವಿಷ್ಟೇ ಅಲ್ಲದೇ ನವಗ್ರಹ ದೋಷ ನಿವಾರಣೆಗೆ ವಿವಿಧ ಶಂಖ ದಾನ, ಹಲವು ಕಡೆ ಅಕ್ಕಿಯ ಮೇಲೆ ಇಟ್ಟು ಧಾನ್ಯಲಕ್ಷಿ$¾àಯ ವಾಸ ಸ್ಥಾನ ಎಂಬ ಶ್ರದ್ಧೆಯಿಂದ ಪೂಜಿಸುವ ಪದ್ಧತಿಯಿದೆ ಹಾಗೂ ನಿತ್ಯ ಶಂಖಾನು ಸಂಧಾನದಿಂದ ಸರಸ್ವತಿ ಅನುಗ್ರಹ ಪ್ರಾಪ್ತಿಯಾಗುವುದು ಎನ್ನುವ ನಂಬಿಕೆಯೂ ಇದೆ.

– ಡಾ| ಕೆ.ರಾಘವೇಂದ್ರ ಪೈ, ಕಾರ್ಯದರ್ಶಿ, ಶ್ರೀ ವೇದವ್ಯಾಸ ಯೋಗ ಪ್ರತಿಷ್ಠಾನ, ಮೈಸೂರು

ಟಾಪ್ ನ್ಯೂಸ್

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

1-weewq

Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ

1-bgg

BGT ಸೋಲು; ಇಂಗ್ಲೆಂಡ್ ವಿರುದ್ದದ ಸರಣಿಗೆ ಕೊಹ್ಲಿ ಸ್ಥಾನ ಉಳಿಸಿಕೊಳ್ಳಲು ಸಾಧ್ಯವೇ?

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ

Readers: ಓದುವ ಬಾರಾ ಓ ಜೊತೆಗಾರ… (ಅ)ಪರಿಚಿತ ಓದುಗರ ಕಥಾ ಕಾಲಕ್ಷೇಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-asssaa

ನುಡಿ ನಮನ: ಸಾಮಾಜಿಕ ಚಿಂತಕ, ಎಲ್ಲರ ಮನಗೆದ್ದ ಶ್ರೇಷ್ಠ ಪ್ರಾಧ್ಯಾಪಕ ಪ್ರೊ.ಅಸ್ಸಾದಿ

5-spcl

India- China border: ಭಾರತದ ಗಡಿಯಲ್ಲಿ ಚೀನ ದುಸ್ಸಾಹಸ !

4-ed

Unique Achiever: ಗಡಿನಾಡಿನ ಅನನ್ಯ ಸಾಧಕ ಪ್ರೊ| ಪಿ. ಶ್ರೀಕೃಷ ಭಟ್‌

Explainer: HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

Explainer:HMPV ಮಹಾಮಾರಿಗೆ ಕಂಗೆಟ್ಟ ಚೀನಾ-ಏನಿದು ಕೋವಿಡ್‌ ಮಾದರಿಯ ಎಚ್‌ ಎಂಪಿವಿ ವೈರಸ್?‌

6-spcl

Story Of Generations: ಪೀಳಿಗೆಗಳ ವೃತ್ತಾಂತ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Byrathi–CM

Kanaka Jayanthi: ಮುಂದಿನ ಮೂರುವರೆ ವರ್ಷವೂ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ: ಸಚಿವ ಭೈರತಿ

1-wewq

Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು

1-gambhir

Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ

1

Kasaragod: ಬಟ್ಟಿಪದವು; ಪ್ಲೈವುಡ್‌ ಮಿಲ್ಲಿಗೆ ಬೆಂಕಿ

Cheluvaraya-swamy

Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.