Udupi; ಭಗವದ್ಗೀತೆಯ ಮೂಲ ರಹಸ್ಯ ಯೋಗಶಾಸ್ತ್ರ ಅನಾವರಣ
Team Udayavani, Aug 13, 2024, 10:25 PM IST
ಉಡುಪಿ: ಭಗವದ್ಗೀತೆಯಲ್ಲಿನ ಯೋಗಶಾಸ್ತ್ರವನ್ನು ಅಧ್ಯಯನ ಮಾಡಿ ಸಾಧಿಸಿದರೆ ಸಾಧನೆಯ ಶಿಖರವೇರಬಹುದು. ಯೋಗಿಯಾಗಬಹುದು ಎಂದು ಬ್ರಹ್ಮಋಷಿ ಕೆ.ಎಸ್. ನಿತ್ಯಾನಂದ ಸ್ವಾಮೀಜಿ ಹೇಳಿದರು.
ಚಿಕ್ಕಮಗಳೂರಿನ ವೇದವಿಜ್ಞಾನ ಮಂದಿರದಲ್ಲಿ ಮೂಲ ರಹಸ್ಯವನ್ನೊಳ ಗೊಂಡ ಭಗವದ್ಗೀತೆಯ ಮೊದಲ ಅಧ್ಯಾಯದ ಕೃತಿಯನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.
ಭಗವದ್ಗೀತೆ ಸಂಪಾದಕ ಮಂಡಳಿಯ ಸದಸ್ಯ ಚಿಕ್ಕಮಗಳೂರಿನ ಸುಬ್ರಹ್ಮಣ್ಯ ಕೆ.ಎಸ್. ಮಾತನಾಡಿ, ಎಷ್ಟೋ ಕಾಲದಿಂದ ಮುಚ್ಚಿಟ್ಟಲ್ಪಟ್ಟಿದ್ದ ಭಗವದ್ಗೀತೆಯ ಮೂಲ ರಹಸ್ಯ ಈಗ ಪುಸ್ತಕ ರೂಪದಲ್ಲಿ ಲಭ್ಯವಾಗಿದೆ. ಪ್ರತೀ ತಿಂಗಳು ಭಗವದ್ಗೀತೆಯ ಒಂದೊಂದು ಅಧ್ಯಾಯದಂತೆ 18 ಅಧ್ಯಾಯಗಳ ಮಂಥನ ನಡೆಸಿ ಅಲ್ಲಿ ಅನಾವರಣಗೊಂಡ ವಿಚಾರವನ್ನು ಪುಸ್ತಕ ರೂಪದಲ್ಲಿ ಹೊರ ತರಲಾಗುತ್ತಿದೆ.ಅಲ್ಲಿಯವರೆಗೆ ಸ್ವತಃ ಅಧ್ಯಯನ ಮಾಡಿ ಯಶಸ್ಸು ಪಡೆಯಿರಿ. ಒಂದು ವರ್ಷಗಳವರೆಗೆ ವಾಚಕರಾಗಿ, ಪ್ರವಚಕರಾಗದಿರಿ ಎಂದರು.
ವೇದವಿಜ್ಞಾನ ಡಾಟ್ ಇನ್ ಅಂತರ್ಜಾಲವನ್ನು ಅನಾವರಣ ಗೊಳಿಸ ಲಾಯಿತು. ಭಗವದ್ಗೀತೆ ಸಂಪಾದಕ ಮಂಡಳಿಯ ಸದಸ್ಯರಾದ ನಾಗೇಶ್ ಎಚ್.ಜಿ. ಬೇಲೂರು, ಚಂದ್ರಶೇಖರ ಸುರ್ಭಟ್ ಬೆಂಗಳೂರು, ಮದನ್ ಕುಮಾರ್ ಕೆ.ಎನ್. ಚಿಕ್ಕಮಗಳೂರು, ನಾಗೇಶ್ ಅಡಿಗ ಚಿಕ್ಕಮಗಳೂರು, ಡಾ| ಮಾಲತಿ ಕೆ. ಮಣಿಪಾಲ, ಗಿರೀಶ್ ವಿ.ಎಸ್. ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.