Bharat: “ಭಾರತ” ಇನ್ನು ಅಧಿಕೃತ- ಕೇಂದ್ರ ಸರಕಾರಿ ದಾಖಲೆಗಳಲ್ಲಿ ಹೊಸ ಹೆಸರು
Team Udayavani, Sep 7, 2023, 10:10 PM IST
ಹೊಸದಿಲ್ಲಿ: ಆಂಗ್ಲರ “ಇಂಡಿಯಾ’ ಎಂಬ ಹೆಸರನ್ನು “ಭಾರತ’ ಆಗಿ ಬದಲಾವಣೆ ಮಾಡಲಾಗುತ್ತದೆ ಎಂಬ ವಾದ-ಪ್ರತಿವಾದಗಳ ನಡುವೆಯೇ ಹೊಸ ವಿಚಾರ ಸರಕಾರದ ಕಡೆಯಿಂದ ಹೊರಬಿದ್ದಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಅಧಿಕೃತ ದಾಖಲೆಗಳಲ್ಲಿ “ಭಾರತ’ ಎಂಬ ಹೆಸರೇ ಮುದ್ರಿತವಾಗಲಿದೆ. ಆದರೆ ಇದಕ್ಕೆ ಯಾವುದೇ ರೀತಿಯ ದಿನಾಂಕ ನಿಗದಿ ಮಾಡಲಾಗಿಲ್ಲ.
ಅಧಿಕೃತ ದಾಖಲೆಗಳಲ್ಲಿ “ಭಾರತ’ ಎಂಬ ಹೆಸರನ್ನು ಬಳಕೆ ಮಾಡುವುದರಿಂದ ಕಾನೂನ್ಮಾಕವಾಗಿ ಯಾವುದೇ ಸಮಸ್ಯೆ ಉಂಟಾಗಲಾರದು. “ಇಂಡಿಯಾ’, “ಭಾರತ’ ಎಂಬ ಹೆಸರುಗಳು ಈಗಾಗಲೇ ಬಳಕೆಯಲ್ಲಿ ಇವೆ. ಪಾಸ್‌ಪೋರ್ಟ್‌ನಲ್ಲಿ “ರಿಪಬ್ಲಿಕ್ ಆಫ್ ಇಂಡಿಯಾ’ ಮತ್ತು “ಭಾರತ್ ಸರಕಾರ್’ ಎಂದು ಹಿಂದಿಯಲ್ಲಿ ಮುದ್ರಿತವಾಗಿದೆ. ಹೀಗಿರುವುದರಿಂದ ಸಾಂವಿಧಾನಿಕ ಅಥವಾ ಕಾನೂನಾತ್ಮಕ ಅಂಶಗಳನ್ನು ಉಲ್ಲಂ ಸುವ ವಿಚಾರ ಉದ್ಭವವಾಗುವುದಿಲ್ಲ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಕೋರಿಕೆ ಬಂದರೆ ಪರಿಗಣನೆ: ವಿಶ್ವಸಂಸ್ಥೆ
ದೇಶದಲ್ಲಿ ಹೆಸರು ಬದಲಾವಣೆಯ ಕೋಲಾಹಲ ಬಿರುಸಾಗಿರುವಂತೆಯೇ ವಿಶ್ವಸಂಸ್ಥೆಯಿಂದ ಅಚ್ಚರಿಯ ಪ್ರತಿಕ್ರಿಯೆ ಹೊರಬಿದ್ದಿದೆ. ಭಾರತ ಸರಕಾರದ ವತಿಯಿಂದ ಹೆಸರು ಬದಲಾವಣೆಗೆ ಕೋರಿಕೆ ಸಲ್ಲಿಕೆಯಾದರೆ ಅದನ್ನು ಪರಿಗಣಿಸುತ್ತೇವೆ ಎಂದು ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಆ್ಯಂಟೊನಿಯೋ ಗುಟೆರೆಸ್ ಅವರ ಉಪ ವಕ್ತಾರ ಫರ್ಹಾನ್ ಹಕ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Old cars ಬಿಕರಿಗೆ ಶೇ.18 ಜಿಎಸ್ಟಿ! ; ವಿತ್ತ ಸಚಿವೆ ನೇತೃತ್ವದ ಜಿಎಸ್ಟಿ ಸಭೆ ತೀರ್ಮಾನ
Maharashtra; ಫಡ್ನವೀಸ್ ಬಳಿ ಗೃಹ, ಶಿಂಧೆಗೆ ನಗರಾಭಿವೃದ್ಧಿ ಸೇರಿ 3 ಪ್ರಮುಖ ಖಾತೆ!
Mumbai; ಚುನಾವಣೆಗೆ ಏಕಾಂಗಿ ಸ್ಪರ್ಧೆ: ಉದ್ಧವ್ ಶಿವಸೇನೆ ಇಂಗಿತ!
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.