BJP ರಾಜಕಾರಣದಿಂದ ಭಾರತಮಾತೆ ಹತ್ಯೆ: ಕೇಂದ್ರದ ವಿರುದ್ಧ ಮುಗಿಬಿದ್ದ ರಾಹುಲ್‌ ಗಾಂಧಿ

ಮಣಿಪುರ ದೇಶದ ಭಾಗ ಎಂದು ಪರಿಗಣಿಸದ ಪ್ರಧಾನಿ

Team Udayavani, Aug 10, 2023, 5:51 AM IST

rahul gandhi

ನವದೆಹಲಿ: ಬಿಜೆಪಿಯ ರಾಜಕೀಯದಿಂದಾಗಿ ಮಣಿಪುರದಲ್ಲಿ ಭಾರತ ಮಾತೆಯ ಹತ್ಯೆಯಾಗಿದೆ. ಈಶಾನ್ಯ ರಾಜ್ಯದಲ್ಲಿನ ಪರಿಸ್ಥಿತಿಯನ್ನು ಸೂಕ್ತಯಾಗಿ ನಿಭಾಯಿಸಲೇ ಇಲ್ಲ ಎಂದು ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ, ವಯನಾಡ್‌ ಸಂಸದ ರಾಹುಲ್‌ ಗಾಂಧಿ ಉಗ್ರವಾಗಿ ಟೀಕಿಸಿದ್ದಾರೆ.

ಪ್ರತಿಪಕ್ಷಗಳು ಸರ್ಕಾರದ ವಿರುದ್ಧ ಮಂಡಿಸಿದ ಅವಿಶ್ವಾಸ ಗೊತ್ತುವಳಿಯ ಬಗೆಗಿನ ಎರಡನೇ ದಿನ ಬುಧವಾರದ ಚರ್ಚೆಯನ್ನು ಆರಂಭಿಸಿ ಮಾತನಾಡಿದ ಅವರು, “ಪ್ರಧಾನಿ ನರೇಂದ್ರ ಮೋದಿಯವರು ಹಿಂಸೆಯಿಂದ ತತ್ತರಿಸಿದ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಲೇ ಇಲ್ಲ. ಏಕೆಂದರೆ ಆ ರಾಜ್ಯವನ್ನು ಮೋದಿಯವರು ದೇಶದ ಒಂದು ಭಾಗ ಎಂದು ಪರಿಗಣಿಸಿಯೇ ಇಲ್ಲ’ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮೋದಿ ಕುಲನಾಮ ಪ್ರಕರಣದಲ್ಲಿ ವಿಧಿಸಲಾಗಿದ್ದ ಅನರ್ಹತೆ ಶಿಕ್ಷೆಗೆ ಸುಪ್ರೀಂಕೋರ್ಟ್‌ ತಡೆಯಾಜ್ಞೆ ನೀಡಿ, ಮತ್ತೆ ಸಂಸತ್‌ ಸದಸ್ಯತ್ವವನ್ನು ಪಡೆದ ಬಳಿಕ ಲೋಕಸಭೆಯಲ್ಲಿ ರಾಹುಲ್‌ ಅವರ ಮೊದಲ ಭಾಷಣ ಇದಾಗಿದೆ.

“ನೀವು ದೇಶದ್ರೋಹಿಗಳು’ ಎಂದು ಬಿಜೆಪಿಯವರನ್ನು ಜರೆದ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ “ಭಾರತ ಎಂದರೆ ಧ್ವನಿ, ಅದು ಹೃದಯದ ಧ್ವನಿ. ಅದನ್ನು ನೀವು ಮಣಿಪುರದಲ್ಲಿ ಕೊಂದು ಹಾಕಿದ್ದೀರಿ. ಈಶಾನ್ಯ ರಾಜ್ಯ ಮಣಿಪುರದಲ್ಲಿ ನೀವು ಭಾರತ ಮಾತೆಯನ್ನು ಹತ್ಯೆ ಮಾಡಿದ್ದೀರಿ. ನನ್ನ ತಾಯಿ ಇಲ್ಲಿ ಕುಳಿತಿದ್ದಾರೆ. ಆದರೆ, ಮಣಿಪುರದಲ್ಲಿ ನನ್ನ ಮತ್ತೂಬ್ಬ ತಾಯಿ ಭಾರತ ಮಾತೆಯನ್ನು ಕೊಂದಿದ್ದೀರಿ. ಇದೇ ಕಾರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ಮಣಿಪುರಕ್ಕೆ ಭೇಟಿ ನೀಡುತ್ತಿಲ್ಲ, ನೀವು ಭಾರತ ಮಾತೆಯ ರಕ್ಷಕರೇ ಅಲ್ಲ, ಹತ್ಯೆ ಮಾಡುವವರು’ ಎಂದು ಕಠೊರವಾಗಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಿಜೆಪಿಯಿಂದ ವಿಭಜನೆ:
ಈಶಾನ್ಯ ರಾಜ್ಯವನ್ನು ಬಿಜೆಪಿ ವಿಭಜಿಸಿದೆ ಎಂದು ಆರೋಪಿಸಿದ ರಾಹುಲ್‌, ಆ ರಾಜ್ಯವನ್ನು ಭಾರತದ ಭಾಗ ಎಂದು ಪ್ರಧಾನಿ ಪರಿಗಣಿಸುತ್ತಿಲ್ಲ. ಹೀಗಾಗಿಯೇ ಅಲ್ಲಿನ ಪರಿಸ್ಥಿತಿ ಅವಲೋಕಿಸಲು ಹೋಗಲೇ ಇಲ್ಲ ಎಂದು ಹೇಳಿದ್ದಾರೆ. ಸೇನೆಯನ್ನು ಆ ರಾಜ್ಯಕ್ಕೆ ಕಳುಹಿಸುವ ಮೂಲಕ ತೆಷಮಯ ಪರಿಸ್ಥಿತಿಯನ್ನು ನಿಯಂತ್ರಿಸಲು ಕೇಂದ್ರಕ್ಕೆ ಸಾಧ್ಯವಿದೆ.

ಕೇಂದ್ರ ಸರ್ಕಾರಕ್ಕೆ ಆ ರೀತಿ ಮಾಡಲು ಮನಸ್ಸೇ ಇಲ್ಲ ಎಂದರು. ಆ ಸಂದರ್ಭದಲ್ಲಿ ಆಡಳಿತ ಪಕ್ಷದ ಸದಸ್ಯರು ಭಾರೀ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಈಶಾನ್ಯ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ನಿರಾಶ್ರಿತರ ಶಿಬಿರದಲ್ಲಿ ಮಹಿಳೆಯರು, ಮಕ್ಕಳನ್ನು ಭೇಟಿ ಮಾಡಿ ಅವರ ನೋವು ಆಲಿಸಿದ್ದೆ. ಆ ಕೆಲಸವನ್ನು ಪ್ರಧಾನಿ ಮೋದಿಯವರು ಮಾಡಬೇಕಿತ್ತು ಎಂದರು ರಾಹುಲ್‌ ಗಾಂಧಿ.

ರಾಮಾಯಣವನ್ನು ಉಲ್ಲೇಖೀಸಿದ ರಾಹುಲ್‌, “ರಾಮ ರಾವಣನನ್ನು ಕೊಲ್ಲಲಿಲ್ಲ. ಹನುಮಂತ ಲಂಕೆಯನ್ನು ಸುಡಲಿಲ್ಲ. ಎರಡೂ ಘಟನೆಗಳು ಉಂಟಾದದ್ದು ಆತನ ಅಹಂಕಾರದಿಂದ’ ಎಂದರು. “ನೀವು ಎಲ್ಲೆಡೆ ಸೀಮೆ ಎಣ್ಣೆ ಸುರಿದಿದ್ದೀರಿ, ಮಣಿಪುರದಲ್ಲಿ ಬೆಂಕಿ ಹಚ್ಚಿದ್ದೀರಿ. ಅದನ್ನೇ ಹರ್ಯಾಣದಲ್ಲಿ ಪುನರಾವರ್ತಿಸಲು ಮುಂದಾಗಿದ್ದೀರಿ’ ಎಂದು ಆಕ್ರೋಶಭರಿತರಾಗಿ ಮಾತನಾಡಿದರು. ಅವರ ಈ ಮಾತುಗಳಿಗೆ ಬಿಜೆಪಿ ಸದಸ್ಯರು ಪ್ರಬಲ ಆಕ್ಷೇಪ ಮಾಡಿ, ಕ್ಷಮೆ ಕೇಳಬೇಕೆಂದು ಒತ್ತಾಯಿಸಿದ್ದಾರೆ.

ಅದಾನಿ ಜತೆ…:
“ಪ್ರಧಾನಿ ಮೋದಿ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಮತ್ತು ಉದ್ಯಮಿ ಗೌತಮ್‌ ಅದಾನಿ ಅವರ ಮಾತುಗಳನ್ನು ಮಾತ್ರ ಕೇಳುತ್ತಾರೆ’ ಎಂದು ಹೇಳಿದ ರಾಹುಲ್‌, ಇಬ್ಬರು ವಿಮಾನದಲ್ಲಿ ಕುಳಿತಿದ್ದ ಹಳೆಯ ಫೋಟೋ ಪ್ರದರ್ಶಿಸಿದರು. ಆ ಸಂದರ್ಭದಲ್ಲಿ ಕೂಡ ಬಿಜೆಪಿ ಸದಸ್ಯರು ಗದ್ದಲ ಎಬ್ಬಿಸಿದರು. ಈ ಸಂದರ್ಭದಲ್ಲಿ ಸ್ಪೀಕರ್‌ ಓಂ ಬಿರ್ಲಾ ಸದನ ನಿಯಮಗಳನ್ನು ಉಲ್ಲೇಖೀಸಿ ಸಂಯಮ ಕಾಯ್ದುಕೊಂಡು ಮಾತನಾಡುವಂತೆ ಸೂಚಿಸಿದರು.

ಯಾತ್ರೆ ಇನ್ನೂ ನಿಂತಿಲ್ಲ:
ಭಾರತ್‌ ಜೋಡೋ ಯಾತ್ರೆ ಮುಕ್ತಾಯವಾಗಿಲ್ಲ ಎಂದು ಹೇಳಿದ ರಾಹುಲ್‌ ಗಾಂಧಿ, “ನಾನು ಯಾವ ಕಾರಣಕ್ಕಾಗಿ ಯಾತ್ರೆ ಶುರು ಮಾಡಿದ್ದೆ ಎನ್ನುವುದು ಆರಂಭದಲ್ಲಿ ಗೊತ್ತಾಗಲಿಲ್ಲ. ದೇಶವನ್ನು ತಿಳಿದುಕೊಳ್ಳುವ ನಿಟ್ಟಿನಲ್ಲಿ ಅದನ್ನು ಆರಂಭಿಸಿದೆ” ಎಂದರು. ತಮ್ಮ ಲೋಕಸಭಾ ಸದಸ್ಯತ್ವವನ್ನು ಪುನಸ್ಥಾಪಿಸಿದ್ದಕ್ಕೆ ಸ್ಪೀಕರ್‌ಗೆ ಕೃತಜ್ಞತೆ ಸಲ್ಲಿಸಿದ್ದಾರೆ.

“ಹಿಂದಿನ ಬಾರಿ ಮಾತನಾಡಿದ್ದ ವೇಳೆ ನಿಮಗೆ (ಸ್ಪೀಕರ್‌) ನೋವು ಉಂಟಾಗುವಂತೆ ಮಾತನಾಡಿದ್ದೆ. ಅದಾನಿಯವರನ್ನು ಕೇಂದ್ರೀಕರಿಸಿ ಮಾತನಾಡಿದ್ದೆ. ಹಿರಿಯ ನಾಯಕರಾಗಿರುವ ನಿಮಗೆ ಅದರಿಂದ ನೋವಾಗಿದೆ. ಅದಕ್ಕಾಗಿ ಕ್ಷಮೆ ಯಾಚಿಸುತ್ತೇನೆ’ ಎಂದರು. “ನಾನು ಯಾವತ್ತೂ ಸತ್ಯವನ್ನೇ ಮಾತನಾಡುತ್ತೇನೆ. ಇವತ್ತಿನ ನನ್ನ ಭಾಷಣದಿಂದ ಬಿಜೆಪಿಯ ಸ್ನೇಹಿತರು ಭಯಪಡಬೇಕಾಗಿಲ್ಲ. ಕರಾವಳಿಯಿಂದ ಕಾಶ್ಮೀರದ ಹಿಮಾಚ್ಛಾದಿತ ಪರ್ವತದ ವರೆಗೆ ನಾನು ನಡೆದಿದ್ದೇನೆ. ಆ ಸಂದರ್ಭದಲ್ಲಿ ನನ್ನ ಗುರಿ ಏನು ಎಂದು ಪ್ರಶ್ನಿಸಿದ್ದರು. ಅಂದ ಹಾಗೆ ಯಾತ್ರೆ ಇನ್ನೂ ಪೂರ್ತಿಯಾಗಿಲ್ಲ’ ಎಂದರು.

ರಾಹುಲ್‌ ಕೋಟ್‌ಗಳು
ಮಣಿಪುರದಲ್ಲಿ ಭಾರತ ಮಾತೆಯನ್ನು ನೀವು ಸಾಯಿಸಿದ್ದೀರಿ. ನಿಮ್ಮ ರಾಜಕೀಯ ಮಣಿಪುರವನ್ನು ಮಾತ್ರ ಕೊಂದಿಲ್ಲ, ಅದು ಭಾರತವನ್ನೇ ಆ ರಾಜ್ಯದಲ್ಲಿ ಬಲಿ ಪಡೆದಿದೆ. ನೀವು ಭಾರತ ಮಾತೆಯ ರಕ್ಷಕರಲ್ಲ. ನೀವು ಆಕೆಯ ಹಂತಕರು.

ರಾವಣ ಮೇಘನಾದ ಮತ್ತು ಕುಂಭಕರ್ಣನ ಮಾತುಗಳನ್ನು ಮಾತ್ರ ಕೇಳುತ್ತಿದ್ದ. ಅದೇ ರೀತಿ. ಮೋದಿಯವರು ಅದಾನಿ ಮತ್ತು ಅಮಿತ್‌ ಶಾ ಅವರ ಮಾತುಗಳನ್ನು ಮಾತ್ರ ಕೇಳುತ್ತಾರೆ.

ರಾಮ ರಾವಣನನ್ನು ಕೊಲ್ಲಲಿಲ್ಲ. ಹನುಮಂತ ಲಂಕೆಯನ್ನು ಸುಡಲಿಲ್ಲ. ಎರಡೂ ಘಟನೆಗಳು ಉಂಟಾದದ್ದು ಆತನ ಅಹಂಕಾರದಿಂದ.

ನೀವು ದೇಶವನ್ನು ಬೆಂಕಿಗೆ ಒಡ್ಡಲು ಮುಂದಾಗಿದ್ದೀರಿ. ಮಣಿಪುರದಲ್ಲಿ ಮೊದಲ ಬಾರಿಗೆ ಕಿಚ್ಚು ಹಚ್ಚಲು ಶುರು ಮಾಡಿದ್ದೀರಿ. ನಂತರ ಹರ್ಯಾಣದಲ್ಲಿ ಮುಂದುವರಿಸಿದ್ದೀರಿ. ಈಗ ದೇಶಕ್ಕೇ ಕಿಚ್ಚು ಹಚ್ಚಲು ಸಿದ್ಧತೆ ನಡೆಸಿದ್ದೀರಿ.

ನನ್ನ ತಾಯಿಯೊಬ್ಬರು ಇಲ್ಲಿ ಕುಳಿತಿದ್ದಾರೆ. ಆದರೆ, ನನ್ನ ಮತ್ತೂಬ್ಬ ತಾಯಿಯನ್ನು ಮಣಿಪುರದಲ್ಲಿ ಕೊಂದಿದ್ದೀರಿ. ಈ ದೇಶದ ಸೇನೆಗೆ ಮಾತ್ರ ಅಲ್ಲಿ ಶಾಂತಿ ಸ್ಥಾಪಿಸಲು ಸಾಧ್ಯವಾಗಿದೆ. ನೀವು ಈ ಪ್ರಯತ್ನದಲ್ಲಿ ಇಲ್ಲ.

ಟಾಪ್ ನ್ಯೂಸ್

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

2-biggboss

BBK11: ಸೆಡೆಗಳನ್ನೆಲ್ಲ ಕಳ್ಸಿಯೇ ನಾನು ಮನೆಗೆ ಹೋಗೋದು- ಮತ್ತೆ ಗುಡುಗಿದ ರಜತ್

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ

1-horoscope

Daily Horoscope: ಉದ್ಯೋಗ ಸ್ಥಾನದಲ್ಲಿ ಹಲವು ಬಗೆಯ ಅವಕಾಶಗಳು, ಆರೋಗ್ಯ ವೃದ್ಧಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

adani

Adani ವಿರುದ್ಧ ಲಂಚ ಆರೋಪ; ಏನಿದು ಪ್ರಕರಣ? ಅಮೆರಿಕದಲ್ಲಿ ಪ್ರಕರಣ ಏಕೆ?

1-mahayu

Mahayuti ಗೆಲುವು: ಆ್ಯಕ್ಸಿಸ್‌ ಮೈ ಇಂಡಿಯಾ, ಚಾಣಕ್ಯ ಸಮೀಕ್ಷೆ ಭವಿಷ್ಯ

Khalisthan

Khalistan; ಕೆನಡಾ ಹಿಂದೂಗಳ ಮೇಲೆ ದಾಳಿ: ಉಗ್ರರ ಹೊಸ ಬೆದರಿಕೆ

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

4-siruguppa

Siruguppa: ಜೋಡೆತ್ತಿನ ಬಂಡಿಗೆ ಡಿಕ್ಕಿ ಹೊಡೆದ ಬಸ್‌; ಎತ್ತು ಸಾವು

Amazon Employee: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

Tragedy: ಸ್ನೇಹಿತನ ಮದುವೆ ಮಂಟಪದಲ್ಲೇ ಕುಸಿದು ಬಿದ್ದು ಅಮೆಜಾನ್ ಉದ್ಯೋಗಿ ಮೃತ್ಯು

3-yellapur

Yellapur: ಕಣ್ಣಿಗೆ ಖಾರಾಪುಡಿ ಎರಚಿ ಹಣ, ಸ್ಕೂಟಿ ದರೋಡೆ; ಆರೋಪಿಗಳ ಬಂಧನ

venkatesh-gowda

Ramanagara: ಹೃದಯಾಘಾತದಿಂದ ಕಾವೇರಿ ನೀರಾವರಿ ನಿಗಮದ ಮಾಜಿ ಎಂಜಿನಿಯರ್ ನಿಧನ

Three Nation Trip: ಮೂರು ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Three Nation Trip: 5 ದಿನದಲ್ಲಿ 3 ದೇಶಗಳ ಪ್ರವಾಸ ಮುಗಿಸಿ ತವರಿಗೆ ಮರಳಿದ ಪ್ರಧಾನಿ ಮೋದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.