ಬಲಗೈ ಸಾಧಕ ಭರತ್‌ಕುಮಾರ್
Team Udayavani, Jul 19, 2020, 7:44 PM IST
ಕಣ್ಣ ತುಂಬಾ ಕನಸು ಸಾಧಿಸುವ ಛಲ ಹೊಂದಿದವರಿಗೆ ಅಡ್ಡಿಗಳು ಲೆಕ್ಕವೇ ಇಲ್ಲವಂತೆ. ಎಷ್ಟೋ ಸಾಧಕರು ತಾವು ಬಂದ ಹಾದಿ ಮರೆಯದೆ ಅದನ್ನೇ ಜೀವನ ಹೊತ್ತಿಗೆಯ ಪಾಠವೆಂದು ಇತರ ವ್ಯಕ್ತಿಗೆಗಳಿಗೆ ಉತ್ತಮ ಮಾರ್ಗದರ್ಶಿಯಾಗಿ ಬೆಳೆದಿದ್ದಾರೆ.
ಬಹುತೇಕರಿಗೆ ನಿಕೊಲಸ್ ಜೆಮ್ಸ್ ಬಗ್ಗೆ ತಿಳಿದಿರಬಹುದು. ಕೈ ಇಲ್ಲ, ಕಾಲು ಇಲ್ಲ , ಚಿಂತೆಯೂ ಇಲ್ಲ ಎಂಬ ಅವರ ನಡೆ ವಿಶ್ವಕ್ಕೆ ಒಂದು ಪ್ರೇರಣೆ ಇದ್ದಂತೆ. ಅದರಂತೆ ಭಾರತದಲ್ಲಿಯೂ ಅಂಗವೈಕಲ್ಯ ಹೊಂದಿದ ಅನೇಕರ ಸಾಧನೆ ನಮ್ಮ ನಿಮ್ಮಂತವರಿಗೆ ಹೆಮ್ಮೆಯ ವಿಚಾರವೂ ಆಗಿದೆ. ಜೀವನ ಸವಾಲುಗಳನ್ನು ಎದುರಿಸಿದ ಹೆಮ್ಮೆಯ ಸಾಧಕರಲ್ಲಿ ಭರತ್ ಕುಮಾರ್ ಒಬ್ಬರು.
ಹರಿಯಾಣ ಮೂಲದ ಭರತ್‌ಗೆ ಹುಟ್ಟುತ್ತಲೆ ಎಡಗೈ ಇರಲಿಲ್ಲ. ಕುಟುಂಬದವರ ಪ್ರೀತಿ, ಸಹಕಾರ ಮುಂದೆ ತನಗೆ ಎಡಗೈ ಇಲ್ಲ ಎಂಬ ಕೊರತೆ ಅವರನ್ನು ಬಾಧಿಸಲೇ ಇಲ್ಲ. ಕ್ರೀಡೆಯಲ್ಲಿ ತಾನು ಬೆಳೆಯಬೇಕು, ಏನಾದರೂ ಸಾಧಿಸಬೇಕು ಎನ್ನುವ ಹಂಬಲ ಇವರಲ್ಲೂ ಇತ್ತು. ಆದರೆ ವಾಲಿಬಾಲ್, ತ್ರೋ ಬಾಲ್, ಖೋ-ಖೋ ಆಟಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗದಿದ್ದರೂ ಈಜಿನಲ್ಲಿ ಸಾಧಿಸಬೇಕೆಂಬ ಹೆಬ್ಬಯಕೆ ಸದಾ ಹಸುರಾಗಿತ್ತು.
ಸಾಧನೆಯ ಕನಸಿಗೆಲ್ಲಿದೆ ಬಡತನ?
ತಂದೆ ತಾಯಿ ಕೂಲಿ ಕಾರ್ಮಿಕರಾದ ಕಾರಣ ಭರತ್‌ಗೆ ಆರ್ಥಿಕ ಸಂಕಷ್ಟ ಇತ್ತು. ಪಾಲಕರಿಗೆ ಮಗನ ಕನಸಿನ ಅರಿವಿದ್ದರೂ ಅದಕ್ಕೆ ಪೂರಕ ವಾತಾವರಣ ಕಲ್ಪಿಸಲು ಸಾಧ್ಯವಾಗಲಿಲ್ಲ ಎಂಬ ಕೊರಗು. ಹೀಗಿದ್ದರೂ ಈಜು ಪಟುವಾಗುವ ಕನಸನ್ನು ಬೆನ್ನಟ್ಟಿದ ಭರತ್ ಈಜು ಕಲಿತದ್ದು ವಿಶೇಷ. ಎಮ್ಮೆಯ ಬಾಲವನ್ನು ಬಲಗೈಯಲ್ಲಿ ಹಿಡಿದು ಈಜಿನ ಅಭ್ಯಾಸ ಮಾಡಿದರು. 2004ರಲ್ಲಿ ದೆಹಲಿಯ ಜವಹರ್‌ಲಾಲ್ ನೆಹರೂ ಕ್ರೀಡಾಂಗಣದಲ್ಲಿ ಈಜು ಸೇರಿದಂತೆ ಇತರ ಕ್ರೀಡೆಯನ್ನು ಅಭ್ಯಾಸ ಮಾಡಿದರು. ಆದರೆ ವಯಸ್ಸಾದ ತಂದೆ ತಾಯಿ, ಜತೆಗೆ ಸರಕಾರದ ಸೌಲಭ್ಯದ ಅಲಭ್ಯತೆ ಇವರ ಕನಸನ್ನು ಸ್ವಲ್ಪ ಮಟ್ಟಿಗೆ ಅಡ್ಡಿಪಡಿಸಿತ್ತು. ಕಾರು ತೊಳೆಯುವ, ಸಣ್ಣ ಪುಟ್ಟ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದ ಭರತ್, ಬಳಿಕ ಪ್ಯಾರಾ ಈಜು ಸ್ಪರ್ಧೆಯಲ್ಲಿ ಭಾಗವಹಿಸಿದ ಪದಕಕ್ಕೆ ಕೊರಳೊಡ್ಡಿದರು. 2010ರಲ್ಲಿ 40 ದೇಶೀಯ ಮತ್ತು 2 ಅಂತಾಷ್ಟ್ರೀಯ ಪದೆಸಸ್ತಿ ಪಡೆದರು.
ಐರ್‌ಲ್ಯಾಂಡ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ ಒಂದು ಬೆಳ್ಳಿ ಒಂದು ಚಿನ್ನ ಸೇರಿದಂತೆ 40ಕ್ಕೂ ಅಧಿಕ ರಾಷ್ಟ್ರಮಟ್ಟದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಕ್ರೀಡೆಯೊಂದಿಗೆ ದೆಹಲಿ ವಿ.ವಿ.ಯಲ್ಲಿ ಪದವಿ ಪಡೆದ ಭರತ್ ಸಾಧನೆ ಚೀನ, ಮಲೇಷ್ಯಾ, ಇಂಗ್ಲೆಂಡ್, ಹಾಲೆಂಡ್ ದೇಶಗಳಲ್ಲೂ ಹಬ್ಬಿದೆ.
-ರಾಧಿಕಾ, ಕುಂದಾಪುರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.