ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾದ ಕೋಲಾಟ ಕಲಾವಿದ ಭೂಮಿಗೌಡ
Team Udayavani, Jan 4, 2021, 6:08 PM IST
ಮಂಡ್ಯ: ಮಳವಳ್ಳಿ ತಾಲೂಕಿನ ದೇವಿಪುರ ಗ್ರಾಮದ ಕೋಲಾಟ ಕಲಾವಿದ ಭೂಮಿಗೌಡ ಅವರು 2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಭಾಜನರಾಗಿದ್ದಾರೆ.
90 ವರ್ಷದ ಭೂಮಿಗೌಡ ಅವರು, ಮಧ್ಯಮ ವರ್ಗದ ಕುಟುಂಬದಿoದ ಬಂದು ಕೋಲಾಟ ಕಲೆಗಾಗಿ ಐದು ದಶಕಗಳಿಂದ ತಮ್ಮ ಜೀವನ ಸವೆಸಿದ್ದಾರೆ. ಮಳವಳ್ಳಿ ತಾಲ್ಲೂಕಿನ ದೇವಿಪುರ ಗ್ರಾಮದ ಕಥೆಗಾರ ಚನ್ನೇಗೌಡ ಪುತ್ರರಾಗಿ ಜನಿಸಿದ ಭೂಮಿಗೌಡರು ತಮ್ಮ 23 ವಯಸ್ಸಿನಿಂದ ಕೋಲಾಟ ಕಲೆಯನ್ನು ಮೈಗೂಡಿಸಿಕೊಂಡರು.
4ನೇ ತರಗತಿ ವಿದ್ಯಾಭ್ಯಾಸ ಮಾಡಿರುವ ಭೂಮಿಗೌಡ ಅವರ ಬಳಿ ಆರಂಭದಲ್ಲಿ 2-3 ಮಂದಿ ಬಂದು ಕೋಲಾಟ ಕಲೆ ಕಲಿಯಲು ಪ್ರಾರಂಭಿಸಿದರು. ನಂತರದ ದಿನಗಳಲ್ಲಿ ಜಾನಪದ ಕಲೆಗಳಲ್ಲಿ ಒಂದಾದ ಕೋಲಾಟ ಕಲೆಯನ್ನು ಜಿಲ್ಲೆಯಲ್ಲಿ ವಿಸ್ತರಿಸಲು ಹಳ್ಳಿ-ಹಳ್ಳಿಗಳಲ್ಲಿ ಸುತ್ತಿ ಕೋಲಾಟ ಕಲೆ ಕಲಿಸುವ ಮೂಲಕ 63 ತಂಡಗಳನ್ನು ಹುಟ್ಟು ಹಾಕಿರುವ ಕೀರ್ತಿ ಅವರಿಗೆ ಸಲ್ಲುತ್ತದೆ.
ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ರಾತ್ರಿ ಪೂರ್ತಿ ಕಥೆಯೊಂದಕ್ಕೆ ಜಾನಪದ ಹಾಡು ಕಟ್ಟಿ ಕೋಲಾಟ ನೃತ್ಯ ಪ್ರದರ್ಶನ ಮಾಡುತ್ತಾ ಜನ ಮನ್ನಣೆ ಗಳಿಸಿದ್ದಾರೆ. ಪ್ರದರ್ಶನದ ವೇಳೆ ಜನರಿಗೆ ಕೊಂಚವೂ ನಿರಾಸೆಯಾಗದಂತೆ ತಮ್ಮ ತಂಡದ ಮೂಲಕ ಮನರಂಜನೆ ನೀಡುತ್ತಾ ಬಂದಿದ್ದಾರೆ.
ಇದನ್ನೂ ಓದಿ:ಚಾಮರಾಜನಗರದ ಸೋಬಾನೆ ಪದದ ಹೊನ್ನಮ್ಮ ಅವರಿಗೆ ಜಾನಪದ ಅಕಾಡೆಮಿ ಪ್ರಶಸ್ತಿ
ತಮ್ಮಲ್ಲಿನ ಕೋಲಾಟ ಕಲೆಯನ್ನು ಬೇರೆಯವರಿಗೂ ಕಲಿಸುತ್ತಾ ಜಿಲ್ಲೆಯ ಕೊತ್ತತ್ತಿ, ಕೀಲಾರ, ಮದ್ದೂರು, ಶ್ರೀರಂಗಪಟ್ಟಣದ ಸೇರಿದಂತೆ ವಿವಿಧೆಡೆ ತಮ್ಮ ಅಪಾರ ಶಿಷ್ಯ ಬಳಗವನ್ನು ಹೊಂದಿದ್ದಾರೆ.
ಬೆನ್ನು ಮೂಳೆ ಮುರಿತ:
ಜಿಲ್ಲೆಯಲ್ಲಿ 23 ಮಂದಿ ಶಿಷ್ಯರನ್ನು ಹೊಂದಿರುವ ಅವರಿಗೆ ಕಳೆದ 8 ವರ್ಷಗಳ ಹಿಂದೆ ಸ್ವಗ್ರಾಮದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕೆಳಗೆ ಬಿದ್ದು ಬೆನ್ನು ಮೂಳೆ ಮುರಿದಿದ್ದು, ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಆದರೆ ಕಲೆಯನ್ನು ಮುಂದುವರೆಸುವ ಆಸೆ ಹೊಂದಿರುವ ಅವರು ತಮ್ಮ ಶಿಷ್ಯರ ಮೂಲಕ ಕೋಲಾಟ ಕಲೆಯನ್ನು ಇಂದಿನ ಮಕ್ಕಳವರೆಗೂ ಪರಿಚಯಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ:2020ನೇ ಸಾಲಿನ ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿ ಪ್ರಕಟ
ಸ್ವಗ್ರಾಮದಲ್ಲಿಯೇ ಕಲಾ ತಂಡವನ್ನು ರಚಿಸಿರುವ ಅವರ ಶಿಷ್ಯ ಶೇಖರ್ ಎಂಬುವರು ಪುಟ್ಟ ಮಕ್ಕಳಿಂದ ಹಿಡಿದು ಮಧ್ಯವಯಸ್ಕರವರೆಗೂ ಕೋಲಾಟ ಕಲೆಯನ್ನು ಭೂಮಿಗೌಡರ ಮಾರ್ಗದರ್ಶನದಲ್ಲಿ ಮುಂದುವರಸಿದ್ದಾರೆ.
ಅಪಾರವಾದ ಶ್ರೀಮಂತಿಕೆ ಇಲ್ಲದಿದ್ದರೂ ಮಧ್ಯಮ ವರ್ಗದ ಕುಟುಂಬದವರಾದ ಭೂಮಿಗೌಡರು ಯಾವುದೇ ಗುರುದಕ್ಷಿಣೆ ಇಲ್ಲದೆ ಸಾವಿರಾರು ಮಂದಿಗೆ ಕೋಲಾಟ ಕಲೆ ಕಲಿಸಿದ್ದು, ಸುಮಾರು 50ಕ್ಕೂ ಹೆಚ್ಚು ಸಂಘ-ಸoಸ್ಥೆಗಳು ಇವರ ಕಲೆ ಗುರುತಿಸಿ ಪ್ರಶಸ್ತಿ ನೀಡಿ ಗೌರವಿಸಿವೆ. ಇದೀಗ ಅವರ ಕಲಾ ಸೇವೆ ಗುರುತಿಸಿರುವ ಕರ್ನಾಟಕ ಜಾನಪದ ಅಕಾಡೆಮಿ 2020ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡುವ ಮೂಲಕ ಗೌರವ ಸಲ್ಲಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bird Flu: ಹಕ್ಕಿ ಜ್ವರಕ್ಕೆ 3 ಹುಲಿ, 1 ಚಿರತೆ ಸಾ*ವು… ಪ್ರಾಣಿಗಳಿಗೆ ಕ್ವಾರಂಟೈನ್
540 ಅಡಿ ಆಳದ ಬೋರ್ವೆಲ್ಗೆ ಬಿದ್ದ ಯುವತಿ: ಯುವಕನ ಜತೆ ಮನಸ್ತಾಪದಿಂದ ಆತ್ಮಹತ್ಯೆಗೆ ಯತ್ನ?
Delhi Assembly Election: ದೆಹಲಿ ವಿಧಾನಸಭೆ ಚುನಾವಣೆಗೆ ಇಂದು ದಿನಾಂಕ ನಿಗದಿ
ಬೆಳ್ಳಂಬೆಳಗ್ಗೆ ತುಮಕೂರಿನಲ್ಲಿ ಭೀಕರ ಅಪಘಾತ… ಬೈಕ್ ನಲ್ಲಿದ್ದ ಮೂವರು ಸ್ಥಳದಲ್ಲೇ ಮೃತ್ಯು
ಏಕಕಾಲದಲ್ಲಿ ಭಾರತ ಸೇರಿ 3 ದೇಶಗಳಲ್ಲಿ ಕಂಪಿಸಿದ ಭೂಮಿ… ಟಿಬೆಟ್‌ನಲ್ಲಿ 7.1 ತೀವ್ರತೆ ಭೂಕಂಪ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.