ಬೀದರ್ ನಗರದೆಲ್ಲೆಡೆ ಭಗವಾ ಧ್ವಜ ಹಾರಾಟ
Team Udayavani, Aug 6, 2020, 11:45 AM IST
ಬೀದರ: ಅಯೋಧ್ಯೆಯಲ್ಲಿ ನೂತನ ಶ್ರೀರಾಮ ಮಂದಿರಕ್ಕೆ ಶಿಲಾನ್ಯಾಸ ಕಾರ್ಯ ಹಿನ್ನೆಲೆಯಲ್ಲಿ ಬುಧವಾರ ಬೀದರ ಸಂಪೂರ್ಣ ರಾಮಮಯ ಆಗಿತ್ತು. ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ನಡೆದು ಸಂಭ್ರಮ ಮನೆ ಮಾಡಿತ್ತು.
ನಗರದ ರಾಮ ಮಂದಿರ ಸೇರಿದಂತೆ ವಿವಿಧ ದೇಗುಲಗಳು ವಿದ್ಯುತ್ ದೀಪಾಲಂಕಾರ, ಭಗವಾ ಧ್ವಜದಿಂದ ಕಂಗೊಳಿಸುತ್ತಿದ್ದವು. ರಾಮ-ಹನುಮಾನ ವೃತ್ತ ಹಾಗೂ ಅನೇಕ ಮನೆಗಳ ಮೇಲೆಯೂ ಧ್ವಜಗಳು ಹಾರಾಡಿದವು. ಮಂದಿರ ಮತ್ತು ಮನೆಗಳಲ್ಲಿ ಭಕ್ತರು
ಮರ್ಯಾದೆ ಪುರುಷೋತ್ತಮನ ಭಾವಚಿತ್ರಕ್ಕೆ ವಿಶೇಷ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಿದರು. ರಾಮ-ಹನುಮ ದೇವರ ಜಯ ಘೋಷಗಳು ಮೊಳಗಿದವು. ಹನುಮಾನ ಮಂದಿರದಲ್ಲಿ ವಿಶ್ವ ಹಿಂದು ಪರಿಷತ್‌ನ ಕಾರ್ಯದರ್ಶಿ ಸತೀಶ ನೌಬಾದೆ ಮತ್ತು ಬಜರಂಗ ದಳದ ಸಂಯೋಜಕ ಸುನೀಲ ದಳವೆ ನೇತೃತ್ವದಲ್ಲಿ ಪೂಜೆ ನೆರವೇರಿಸಲಾಯಿತು. ಬಳಿಕ ಸಿಹಿ ಹಂಚಿ ಸಂಭ್ರಮಿಸಲಾಯಿತು.
ನಗರದ ಓಲ್ಡ್ ಸಿಟಿಯ ರಾಮ ಮಂದಿರದಲ್ಲಿ ನಗರ ಬಿಜೆಪಿ ವತಿಯಿಂದ ಧಾರ್ಮಿಕ ಕೈಂಕರ್ಯಗಳು ನಡೆದವು. ಸಂಸದ ಭಗವಂತ ಖೂಬಾ, ಬಾಬು ವಾಲಿ, ವಿಭಾಗೀಯ ಸಹ ಪ್ರಭಾರಿ ಈಶ್ವರ ಸಿಂಗ್ ಠಾಕೂರ್ ನೇತೃತ್ವದಲ್ಲಿ ಪೂಜೆ, ಪ್ರಾರ್ಥನೆ ಕಾರ್ಯಕ್ರಮಗಳು
ಜರುಗಿದವು. ಎನ್.ಆರ್.ವರ್ಮಾ, ಬಾಬುರಾವ ಕಾರಬಾರಿ, ಗುರುನಾಥ್ ಜಾತೀಕರ, ಅಶೋಕ ಹೊಕ್ರಾಣೆ, ಹಣಮಂತ ಬುಳ್ಳಾ, ರಾಜಕುಮಾರ ಚಿದ್ರಿ ಇತರರಿದ್ದರು. ನಗರದ ಸಿದ್ಧಾರೂಢ ಮಠದಲ್ಲಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಶ್ರೀ ಶಿವಕುಮಾರ ಸ್ವಾಮಿಗಳು ಪೂಜೆ ಸಲ್ಲಿಸಿ ಸಿಹಿ ಹಂಚಿದರು.
ನಗರದ ನೌಬಾದ ಬಸವೇಶ್ವರ ವೃತ್ತದಲ್ಲಿ ರಾಮನ ಭಾವಚಿತ್ರಕ್ಕೆ ಪುಷ್ಪಾರ್ಚನೆ, ಭಗವಾ ಧ್ವಜ ಹಾರಿಸಿ ಜಯ ಘೋಷ
ಮೊಳಗಿಸಲಾಯಿತು. ಶ್ರೀ ದಯಾನಂದ್ ಸ್ವಾಮಿ, ಶಿವರಾಜ ಮಾಳಗೆ, ಸೋಮನಾಥ ಭಂಗೂರೆ ಮತ್ತಿತರರಿದ್ದರು. ವಿಎಚ್
ಪಿಯಿಂದ ನಗರದ ವಿವಿಧ ಕಡೆ ಮತ್ತು ಸುತ್ತಲಿನ ಗ್ರಾಮಗಳಾದ ವಿದ್ಯಾನಗರ ಕಾಲೋನಿ, ಕುಂಬಾರವಾಡಾ, ಹಳ್ಳದಕೇರಿ, ಮೈಲೂರ್, ಯದಲಾಪೂರ, ರೇಕುಳಗಿ, ವಾಲದೊಡ್ಡಿ, ದದ್ದಾಪೂರ, ಚಿಟ್ಟಾ, ಘೋಡಂಪಳ್ಳಿ, ಮರಖಲ್ ಮತ್ತು ಅಲಿಯಂಬರ್‌ನಲ್ಲಿ ಪೂಜೆ ಮತ್ತು ದೀಪೋತ್ಸವ ಕಾರ್ಯಕ್ರಮಗಳು ನಡೆದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಬಿಜೆಪಿಯವರು ಅಧಿಕಾರಕ್ಕಾಗಿ ಏನು ಮಾಡಲೂ ಹೇಸದವರು: ಈಶ್ವರ್ ಖಂಡ್ರೆ
Bidar: ದೇಶದ ಆರ್ಥಿಕತೆಗೆ ‘ಸಹಕಾರʼದ ಕೊಡುಗೆ ಶ್ರೇಷ್ಠ: ಸಚಿವ ಈಶ್ವರ ಖಂಡ್ರೆ
Bidar: ವಾಂತಿ-ಭೇದಿ… ವಸತಿ ಶಾಲೆಯ 50ಕ್ಕೂ ಹೆಚ್ಚು ಮಕ್ಕಳು ಆಸ್ಪತ್ರೆಗೆ ದಾಖಲು
Lokayukta Raid: ಜಿಲ್ಲಾ ತರಬೇತಿ ಕೇಂದ್ರದ ಅಧಿಕಾರಿ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ
Waqf Issue: ಬೀದರ್ ರೈತ ಸಂಘ, ಬಿಜೆಪಿಯಿಂದ ಬೃಹತ್ ಪ್ರತಿಭಟನೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.