Bidar Lok Sabha constituency; 18 ಸಲ ಚುನಾವಣೆಯಾದರೂ ಸಂಸದರಾಗಿದ್ದು ಆರೇ ಮಂದಿ
: 11 ಸಲ ಕಾಂಗ್ರೆಸ್‌ಗೆ ಗೆಲುವು, 7 ಬಾರಿ ಬಿಜೆಪಿಗೆ ಜಯ
Team Udayavani, Mar 21, 2024, 7:15 AM IST
ಬೀದರ್: ಕರ್ನಾಟಕದ ಮುಕುಟ ಬೀದರ ಲೋಕಸಭೆ ಕಾಂಗ್ರೆಸ್ ಮತ್ತು ಬಿಜೆಪಿಗೆ ಸಮಾನ ನೆಲೆ ಒದಗಿಸಿದ ಕ್ಷೇತ್ರ. ಸತತ ಐದು ಬಾರಿ, ಹ್ಯಾಟ್ರಿಕ್ ಗೆಲುವು ಮತ್ತು ಮಾಜಿ ಸಿಎಂ ಸೇರಿ ಘಟಾನುಘಟಿಗಳ ಸ್ಪರ್ಧೆಯಿಂದ ರಾಜಕಾರಣದ ಗಮನ ಸೆಳೆದಿರುವ ಈ ಕ್ಷೇತ್ರ ಈವರೆಗೆ 18 ಚುನಾವಣೆಗಳನ್ನು ಎದುರಿಸಿದ್ದು, ಆಯ್ಕೆಯಾದದ್ದು ಕೇವಲ 6 ಜನರಷ್ಟೇ. ಈ ಸಲ ಎರಡೂ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಂದ ಅಖಾಡಕ್ಕೆ ಯಾರು ಇಳಿಯುತ್ತಾರೆ ಎಂಬುದು ಕುತೂಹಲ ಇದೆ.
ಕಲಬುರ್ಗಿ ಜಿಲ್ಲೆಯ ಎರಡು ಕ್ಷೇತ್ರ ಸೇರಿ ಒಟ್ಟು 8 ಕ್ಷೇತ್ರಗಳನ್ನು ಒಳಗೊಂಡಿರುವ ಬೀದರ್ ಲೋಕಸಭಾ ಕ್ಷೇತ್ರದಲ್ಲಿ ಐವರು ಬಿಜೆಪಿ ಮತ್ತು ಮೂವರು ಕಾಂಗ್ರೆಸ್ ಶಾಸಕರಿದ್ದಾರೆ. 2019ರಲ್ಲಿ ನಾಲ್ಕು ಕ್ಷೇತ್ರಗಳಲ್ಲಿ ಕಾಂಗ್ರೆಸ್, ತಲಾ ಒಂದು ಕ್ಷೇತ್ರದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಶಾಸಕರಿದ್ದರು.
ಐವತ್ತು ವರ್ಷಗಳ ಕಾಲ ಮೀಸಲು ಕ್ಷೇತ್ರವಾಗಿದ್ದ ಬೀದರ್ ಲೋಕಸಭೆ ಭಾರತೀಯ ಸಂಸತ್ತಿನಲ್ಲಿ ಹಲವು ದಾಖಲೆಗಳಿಂದ ಗುರುತಿಸಿಕೊಂಡಿದೆ. ಸಂವಿಧಾನ ರಚನೆ ಅನಂತರದ 1952ರ ಮೊದಲ ಚುನಾವಣೆಯಲ್ಲಿ ಜವಾಹರಲಾಲ್ ನೆಹರೂ ಅವರ ಆಪ್ತ ಗೆಳೆಯ ಶೌಕತುಲ್ಲಾ ಶಾ ಅನ್ಸಾರಿ ಗೆದ್ದಿದ್ದರು. ಎರಡು ಗಡಿ ರಾಜ್ಯಗಳನ್ನು ಹಂಚಿಕೊಂಡಿರುವ ಈ ಕ್ಷೇತ್ರದಲ್ಲಿ ಒಟ್ಟು 18 ಚುನಾವಣೆಗಳಲ್ಲಿ 11 ಬಾರಿ ಕಾಂಗ್ರೆಸ್, 7 ಬಾರಿ ಬಿಜೆಪಿ ಗೆಲುವು ಸಾಧಿಸಿದೆ.
ಸತತ 10 ಬಾರಿ ಗೆದ್ದು ಕಾಂಗ್ರೆಸ್ ಭದ್ರಕೋಟೆ ಎನಿಸಿಕೊಂಡಿದ್ದ ಕ್ಷೇತ್ರದಲ್ಲಿ ಅನಂತರ ದಿ| ರಾಮಚಂದ್ರ ವೀರಪ್ಪ ಸತತ ಐದು ಬಾರಿ ಕಮಲ ಅರಳಿಸಿದ್ದರು. ಬಳಿಕ ಕಾಂಗ್ರೆಸ್ ಮತ್ತು ಬಿಜೆಪಿ ತಲಾ ಎರಡು ಬಾರಿ ಕ್ಷೇತ್ರದಲ್ಲಿ ಹಿಡಿತ ಸಾಧಿ ಸಿವೆ. ಸದ್ಯ ಕೇಂದ್ರದಲ್ಲಿ ಸಚಿವರಾಗಿರುವ ಭಗವಂತ ಖೂಬಾ ಕ್ಷೇತ್ರದ ಸಂಸದರಾಗಿದ್ದಾರೆ. ಶೌಕತುಲ್ಲಾ ಅನ್ಸಾರಿ (ಒಂದು ಬಾರಿ), ಶಂಕರದೇವ (ಮೂರು), ರಾಮಚಂದ್ರಪ್ಪ ವೀರಪ್ಪ (7 ಬಾರಿ), ನರಸಿಂಗರಾವ್ ಹುಲ್ಲಾ (ನಾಲ್ಕು ಬಾರಿ), ಧರಂಸಿಂಗ್ (ಒಂದು ಬಾರಿ) ಮತ್ತು ಭಗವಂತ ಖೂಬಾ ಎರಡು ಬಾರಿ ಗೆದಿದ್ದಾರೆ.
ಬಿಜೆಪಿ ಪಕ್ಷ ಜೆಡಿಎಸ್‌ನ ಬೆಂಬಲದೊಂದಿಗೆ ಮತ್ತೆ ಕ್ಷೇತ್ರವನ್ನು ತನ್ನದಾಗಿಸಿಕೊಳ್ಳುವ ಉತ್ಸಾಹದಲ್ಲಿದ್ದರೆ, ಕಾಂಗ್ರೆಸ್ ತನ್ನ ಹಿಡಿತ ಸಾಧಿಸಲು ತಂತ್ರ ರೂಪಿಸುತ್ತಿದೆ.
ಜಾತಿ ಲೆಕ್ಕಾಚಾರ ಹೇಗಿದೆ?
ಪ್ರಮುಖ ಎಲ್ಲ ಧರ್ಮಿಯರಿಗೆ ಸಂಸತ್ ಪ್ರವೇಶಿಸಲು ಕ್ಷೇತ್ರ ಅವಕಾಶ ನೀಡಿದೆ. ಕ್ಷೇತ್ರದಲ್ಲಿ ಅಧಿ ಕ ಸಂಖ್ಯೆಯಲ್ಲಿ ಇರುವ ಲಿಂಗಾಯತ, ಪರಿಶಿಷ್ಟ ಜಾತಿ ಮತ್ತು ಪಂಗಡದವರು ಹೆಚ್ಚು ಪ್ರಾಬಲ್ಯ ಹೊಂದಿದ್ದಾರೆ. ಈ ಎರಡು ಸಮುದಾಯ ಯಾವ ಪಕ್ಷದ ಕಡೆಗೆ ಒಲವು ತೋರಿಸುತ್ತದೆಯೋ ಅವರಿಗೆ ಗೆಲುವು ಖಚಿತ. ಈ ಬಾರಿ ಎರಡೂ ಪಕ್ಷಗಳಿಂದ ಲಿಂಗಾಯತ ಅಭ್ಯರ್ಥಿಗಳೇ ಮುಖಾಮುಖೀಯಾಗುವುದಂತು ನಿಶ್ಚಿತ.
-ಶಶಿಕಾಂತ ಬಂಬುಳಗೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Bidar:ವಿ*ಷ ಸೇವಿಸಿ ಆತ್ಮಹ*ತ್ಯೆಗೆ ಯತ್ನಿಸಿದ ಕಾರಂಜಾ ಸಂತ್ರಸ್ತರು
Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ
Bidar: ಕಾರಂಜಾ ಸಂತ್ರಸ್ತರಿಂದ ಆತ್ಮಹ*ತ್ಯೆ ಅಣಕು ಪ್ರದರ್ಶನ: ಹಲವರು ವಶಕ್ಕೆ
Bidar: ಹಿಂದೂ ಸಮಾವೇಶಕ್ಕೆ ನಿರ್ಬಂಧ ಹೇರಿದ ಜಿಲ್ಲಾಡಳಿತದ ವಿರುದ್ದ ಆಕ್ರೋಶ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kudur: ಮನೆ ಕಳ್ಳತನ ಪ್ರಕರಣ; 24ಗಂಟೆಯಲ್ಲೇ ಕಳ್ಳರ ಹೆಡೆಮುರಿ ಕಟ್ಟಿದ ಕುದೂರು ಪೊಲೀಸರು
Allu Arjun: ನಟ ಅಲ್ಲು ಅರ್ಜುನ್ ಮನೆ ಮೇಲೆ ಕಲ್ಲು ತೂರಾಟ; ದಾಳಿಗೆ ಯತ್ನ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.