BBK11: ಆ ನಾಲ್ವರ ಒಂದು ತಪ್ಪಿನಿಂದ ಇಡೀ ಬಿಗ್ ಬಾಸ್ ಮನೆಗೆ ದೊಡ್ಡ ಶಿಕ್ಷೆ.. ಏನದು?
Team Udayavani, Oct 8, 2024, 11:06 PM IST
ಬೆಂಗಳೂರು: ಬಿಗ್ ಬಾಸ್ ಕನ್ನಡ (Bigg Boss Kannada-11)ದಲ್ಲಿ ಎರಡನೇ ವಾರದ ನಾಮಿನೇಷನ್ ಪ್ರಕ್ರಿಯೆ ಶುರುವಾಗಿದೆ.
ಆಯಾ ಸ್ಪರ್ಧಿಗಳು ಯಾಕೆ ಮನೆಯಲ್ಲಿ ಇರಬೇಕು ಇರಬಾರದು. ತಮ್ಮ ಸಾಮರ್ಥ್ಯದ ಬಗ್ಗೆ ಮಾತನಾಡಿದ್ದು, ಎದುರಾಳಿ ಸ್ಪರ್ಧಿ ತಾವು ಅವರಿಗಿಂತ ಯಾಕೆ ಬೆಸ್ಟ್ ಎನ್ನುವ ಸಮರ್ಥನೆ ನೀಡಿದರು.
ನಾಮಿನೇಟ್ ಪ್ರಕ್ರಿಯೆ ಸಂದರ್ಭದಲ್ಲಿ ಕಾರಣಗಳನ್ನು ನೀಡಿ ಕೆಲ ಸ್ಪರ್ಧಿಗಳು ಕಣ್ಣೀರಿಟ್ಟರು.
ಗೌತಮಿ ಹಾಗೂ ರಂಜಿತ್ ನಡುವೆ ಅರ್ಹತೆ ವಿಚಾರದಲ್ಲಿ ಕೆಲ ಹೊತ್ತು ವಾಗ್ವಾದ ನಡೆಯಿತು. ನಾನು ನೀವು ಹೇಳಿದ್ದನ್ನು ಒಪ್ಪಲ್ಲ. ನೀವು ನನ್ನನ್ನು ಶಕ್ತಿಹೀನಳೆಂದು (ಎನರ್ಜಿ ಇಲ್ಲದವಳು) ಗೌತಮಿ ರಂಜಿತ್ ಮಾತಿಗೆ ಉತ್ತರಿಸಿದರು.
ನಾಮಿನೇಟ್ ಆದವರಿಗೆ ಮುಖಕ್ಕೆ ಕಪ್ಪು ಮಸಿಯನ್ನು ಹಾಕಲಾಗಿದೆ.
ಮಧ್ಯರಾತ್ರಿ ಚಪಾತಿಗೆ ಬೇಡಿಕೆಯಿಟ್ಟ ನರಕ ವಾಸಿಗಳು:
ಸ್ವರ್ಗ ನಿವಾಸಿಗಳಿಂದ ನರಕ ವಾಸಿಗಳು ಮಧ್ಯರಾತ್ರಿ ಚಪಾತಿ ಮಾಡಿಕೊಡಲು ಹೇಳಿ ಸತಾಯಿಸಿದರು. ಬೆಳಗ್ಗೆ 4 ಗಂಟೆಗೆ ಚಹಾ ಮಾಡಿಕೊಡಿ ಎಂದು ಜಗದೀಶ್ ಕ್ಯಾಪ್ಟನ್ ಬಳಿ ಹೇಳಿದರು. ಆದರೆ ಚಹಾ ಮಾಡಿಕೊಡದ್ದಕ್ಕೆ ಜಗದೀಶ್ ಕ್ಯಾಪ್ಟನ್ ಅವರ ಮೇಲೆ ಗರಂ ಆದರು. ನೀವು ಹೇಳಿದ್ದನೆಲ್ಲ ಮಾಡಿಕೊಟ್ಟಿದ್ದೇವೆ. ಆದ್ರೆ ಯೋಗ್ಯತೆ ಅದು ಇದು ಅಂಥ ಮಾತನಾಡ್ಬೇಡಿ ಹಾಗೆ ಮಾಡಿದ್ರೆ ಶಿಕ್ಷೆ ಕೊಡುವುದು ಖಚಿತವೆಂದು ಕ್ಯಾಪ್ಟನ್ ಹಂಸಾ ಜಗದೀಶ್ ಅವರಿಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಕ್ಯಾಪ್ಟನ್ ಗೆ ಕ್ವಾಟ್ಲೆ ಕೊಟ್ಟ ಜಗದೀಶ್:
ಜಗದೀಶ್ ಅವರನ್ನು ಮನೆ ಕೆಲಸಕ್ಕೆ ಕರೆದುಕೊಂಡು ಬರಲು ಕ್ಯಾಪ್ಟನ್ ಹಂಸಾ ಅವರು ಅನ್ನಿಸುತ್ತಿದೆ ಹಾಡಿಗೆ ಎದೆಯ ಮೇಲೆ ಕಾಲಿಟ್ಟು ನಡೆದ ಪ್ರಸಂಗಕ್ಕೆ ಇಡೀ ಮನೆಮಂದಿಯ ನಗುವಿಗೆ ಕಾರಣವಾಯಿತು. ಮನೆಯವರನ್ನು ತನ್ನ ನೃತ್ಯದ ಮೂಲಕ ಜಗದೀಶ್ ಮನರಂಜನೆ ನೀಡಿದರು.
ನಿಯಮ ಉಲ್ಲಂಘನೆ; ಸ್ಪರ್ಧಿಗಳಿಗೆ ಶಾಕ್ ಕೊಟ್ಟ ಬಿಗ್ ಬಾಸ್ :
ಟಾಸ್ಕ್ ತಯಾರಿ ನಡೆಸುತ್ತಿದ್ದ ಸಂದರ್ಭದಲ್ಲಿ ಹಾಕಿದ್ದ ಬಿಳಿ ಬಣ್ಣದ ಪರೆದಯನ್ನು ಸ್ಪರ್ಧೆಯೊಬ್ಬರು ಇಣುಕಿ ನೋಡಿದ ಪರಿಣಾಮ ಬಿಗ್ ಬಾಸ್ ನಿಯಮ ಉಲ್ಲಂಘಿಸಿದ್ದಕ್ಕಾಗಿ ಇಡೀ ಮನೆಗೆ ಬಿಗ್ ಬಾಸ್ ನಾಮಿನೇಟ್ ಶಿಕ್ಷೆಯನ್ನು ನೀಡಿದ್ದಾರೆ.
ಸುರೇಶ್ ಅವರು ಪರದೆ ಆಚೆ ರೆಡಿಯಾಗುತ್ತಿರುವ ಸ್ಪರ್ಧೆಯನ್ನು ನೋಡಿ ಬಾ ಎಂದು ಮಾನಸ ಅವರಿಗೆ ಹೇಳಿದ್ದಾರೆ. ಮಾನಸ ಹೋದ ಬಳಿಕ ಜಗದೀಶ್ ಕೂಡ ಪರದೆ ಆಚೆ ಹೋಗಿದ್ದಾರೆ. ಇದಕ್ಕೂ ಮೊದಲು ಶಿಶಿರ್, ಮೋಕ್ಷಿತಾ ಅವರು ಪರದೆ ಆಚೆ ಇಣುಕಿ ನೋಡಿದ್ದಾರೆ. ಆ ಮೂಲಕ ಮುಖ್ಯವಾದ ನಿಯಮದ ಉಲ್ಲಂಘನೆ ಆಗಿದೆ.
ಕ್ಯಾಪ್ಟನ್ ಇದನ್ನು ನೋಡಿಯೂ ಯಾವ ಕ್ರಮವನ್ನು ತೆಗೆದುಕೊಳ್ಳದೆ ಇರುವುದರಿಂದ ಮನೆಯ ಎಲ್ಲರನ್ನೂ ನಾಮಿನೇಟ್ ಮಾಡಿದ್ದಾರೆ. ಕ್ಯಾಪ್ಟನ್ ಹಂಸಾ ಅವರಿಗೆ ಶಿಕ್ಷೆ ಕೊಟ್ಟು ಎಚ್ಚರಿಕೆ ಕೊಟ್ಟಿದ್ದಾರೆ. ಬಿಗ್ ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಕ್ಯಾಪ್ಟನ್ ಒಬ್ಬರ ವಿಶೇಷ ಅಧಿಕಾರ ಇದರಿಂದ ಕಳೆದುಕೊಂಡಂತಾಗಿದೆ.
ಮೊದಲು ನಾಮಿನೇಟ್ ಆದವರು ಯಾರು..?
ಜಗದೀಶ್ ಅವರು ಕ್ಯಾಪ್ಟನ್ ಅವರಿಂದ ನೇರವಾಗಿ ನಾಮಿನೇಟ್ ಆಗಿದ್ದು, ತಿವಿಕ್ರಮ್, ಅನುಷಾ,ಧನರಾಜ್, ಐಶ್ವರ್ಯಾ, ಮಾನಸ, ರಂಜಿತ್ ಅವರು ನಾಮಿನೇಟ್ ಆಗಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
Kiccha Sudeepa; ತಾಯಿಯನ್ನು ಉಳಿಸಿಕೊಳ್ಳಲಾಗದ ಆ ಕ್ಷಣ ನಾನು ಯೂಸ್‌ಲೆಸ್ ಅನಿಸಿತು…
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.