BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

Team Udayavani, Nov 28, 2024, 11:07 PM IST

BBK11: ಆರಂಭದಿಂದಲೂ ಮಂಜು ಮೋಸದಿಂದಲೇ ಆಡುತ್ತಾ ಬರುತ್ತಿದ್ದಾರೆ.. ಮೋಕ್ಷಿತಾ ಕಣ್ಣೀರು

ಬೆಂಗಳೂರು: ದೊಡ್ಮನೆಯಲ್ಲಿ ಮಹಾರಾಜ – ಯುವರಾಣಿ ಅವರ ತಂಡಕ್ಕೆ ವಾರದ ಮೊದಲ ಟಾಸ್ಕ್ ನೀಡಲಾಗಿದೆ. ಟಾಸ್ಕ್ ವಿಚಾರದಲ್ಲಿ ಎರಡು ತಂಡಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಜೇಡಿ ಮಣ್ಣನ್ನು ಒಟ್ಟು‌ ಮಾಡುವ ವಿಚಾರದಲ್ಲಿ ರಜತ್ – ತ್ರಿವಿಕ್ರಮ್ ತುಂಬಾನೇ ಆಕ್ರಮಣಕಾರಿಯಾಗಿ ಆಡಿದ್ದಾರೆ.

ಹೆಣ್ಮ ಕುತ್ತಿಗೆ,ಮೈ ಮುಟ್ಟಿದರೆ ಎಲ್ಲರಿಗೂ ಫಾಲ್ ಕೊಡ್ತೇನೆ ಎಂದು ಎಂದು ಎಚ್ಚರಿಕೆ ನೀಡಿದ್ದಾರೆ.

ಮಂಜು – ಮೋಕ್ಷಿತಾ ಅವರ ಬಣಕ್ಕೆ ʼಮಣ್ಣಿನ ಅಸ್ತ್ರʼ ಎನ್ನುವ ಟಾಸ್ಕ್‌ ನೀಡಲಾಗಿದೆ. ಈ ಟಾಸ್ಕ್‌ನಲ್ಲಿ ಮಂಜು – ರಜತ್‌ ನಡುವೆ ವಾಗ್ವಾದ ನಡೆದಿದೆ. ಯಾರಾದ್ರು ತಳ್ಳಿದರೆ ಸರಿಯಾಗಿ ತಳ್ಳುತ್ತೇನೆ. ಬುರುಡೆ ಹೊಡೆಯುತ್ತೇನೆ ಎಂದು ರಜತ್‌ ಹೇಳಿದ್ದಾರೆ. ಇದಕ್ಕ ಮಂಜು ನೀನ್‌ ದೊಡ್ಡ ರೌಡಿನಾ ಬುರುಡೆ ಹೊಡಿಯೋಕೆ ಎಂದು ಮಾತಿಗೆ ಮಾತು ಬೆಳೆಸಿ ಹಲ್ಲೆಗೆ ಬರುವಂತೆ ವಾಗ್ವಾದ ನಡೆಸಿದ್ದಾರೆ.

ನಾನು ಆಟ ನಾನು ಆಡ್ತಾ ಇದ್ದೇನೆ ನಾನು ಇರೋದೆ ಹೀಗೆ ಎಂದು ರಜತ್ ಹೇಳಿದ್ದಾರೆ. ಇದಕ್ಕೆ ‌ಮಂಜು ನಿನ್ನೆ ಮೊನ್ನೆ ಬಂದಿರೋ ನಿನ್ನ ಹತ್ರ ನಾನೇನು ಕಲಿಯಬೇಕಿಲ್ಲ ಎಂದಿದ್ದಾರೆ.

ಮಂಜು ಅವರು ನಮ್ಮದು ಒಂಬತ್ತು ಇದೆ ಎಂದಿದ್ದಾರೆ. ಇದಕ್ಕೆ ಮೋಕ್ಷಿತಾ ನಮ್ಮದು ಒಂದನ್ನು ಹಾಳು ಮಾಡಿದ್ದಾರೆ. ನಮ್ಮದು ಕೂಡ ಒಂಬತ್ತು ಇದೆ ಎಂದಿದ್ದಾರೆ.

ನಾವು ಕೊಟ್ಟಿರೋ ಭಿಕ್ಷೆ ಎಂದು ಮೋಕ್ಷಿತಾಗೆ ಹೇಳಿದ್ದಾರೆ. ಇದಕ್ಕೆ ಮೋಕ್ಷಿತಾ ನೀವು ಕೊಟ್ಟಿರೋದು ಅಲ್ಲ. ನನಗೆ ಬಿಹ್ ಬಾಸ್ ಕೊಟ್ಟಿರುವುದು ಎಂದು ವಾದಿಸಿದ್ದಾರೆ. ಮಂಜು – ಮೋಕ್ಷಿತಾ ನಡುವೆ ಯೋಗ್ಯತೆ ಬಗ್ಗೆ ಚರ್ಚೆ ನಡೆದಿದೆ.

ನನ್ನ ಎಮೋಷನ್ ಜತೆ ಆಡ್ತಾರೆ ಅಲ್ವಾ ಇವರಿಗೆ ಗೊತ್ತಾಗುತ್ತದೆ. ನಾನು ಇಷ್ಟು ದಿನ ಸೈಲೆಂಟ್ ಆಗಿದ್ದಕ್ಕೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಎನ್ನುವಂತಿದ್ದೇನೆ ಎಂದು ಮೋಕ್ಷಿತಾ ಹೇಳಿದ್ದಾರೆ.

ಫಲಿತಾಂಶ ಘೋಷಿಸದ ಕಾರಣ, ಬಿಗ್ ಬಾಸ್ ಈ ಟಾಸ್ಕ್ ನ್ನೇ ರದ್ದು ಮಾಡಿದ್ದಾರೆ.

ನನಗೆ ಏನು ಅನ್ನಿಸುತ್ತದೆ ಅದನ್ನು ನಾನು ಮಾಡಿದ್ದೀನಿ. ಇದರಿಂದ ನಿಮಗೆ ಏನು ಅನ್ನಿಸಿದರೂ ನಾನೇನು ಮಾಡುವ ಆಗಿಲ್ಲವೆಂದು ಮೋಕ್ಷಿತಾ ಹೇಳಿದ್ದಾರೆ.

ಅಣ್ಣ – ತಂಗಿಯರ ಆಟದಿಂದ ನಮ್ಮ ಆಟವೂ ಹಾಳಾಯಿತೆಂದು ಸ್ಪರ್ಧಿಗಳು ಮಂಜು – ಮೋಕ್ಷಿತಾ ಅವರಿಗೆ ಪ್ರಶ್ನಿಸಿದ್ದಾರೆ.

ಈ ಟಾಸ್ಕ್ ನಾಮಿನೇಟ್ ವಿಚಾರದಲ್ಲಿ ಮಹತ್ವವಾದ ಕಾರಣ ಟಾಸ್ಕ್ ರದ್ದಾದಕ್ಕೆ ಕೆಲ ಸ್ಪರ್ಧಿಗಳು ಮೋಕ್ಷಿತಾ ಅವರಲ್ಲಿ ಪ್ರಶ್ನಿಸಿದ್ದಾರೆ. ಆದರೆ ಮೋಕ್ಷಿತಾ ಸರಿಯಾಗಿ ಉತ್ತರಿಸದೆ ಇದ್ದಾಗ ಕೆಲ ಸ್ಪರ್ಧಿಗಳು ಕಣ್ಣೀರಿಟ್ಟಿದ್ದಾರೆ.

ಟಾಸ್ಕ್ ಫಲಿತಾಂಶದ ವಿಚಾರವಾಗಿ ನೀವೆಲ್ಲ ಧೋರಣೆ ತೋರಿದ್ದೀರಿ. ವೀಕ್ಷಕರಿಗೆ ನೀವು ತೋರಿದ ಅಗೌರವ. ನಿಮ್ಮ ಹಾಗೂ ಸಹ ಸ್ಪರ್ಧಿಗಳ ಪರಿಶ್ರಮಕ್ಕೆ ನೀವು ನಿರ್ಲಕ್ಷ್ಯ ತೋರಿಸಿದ್ದೀರಿ. ನಿಮ್ಮಲ್ಲಿ ಕೆಲವರು ಉಡಾಫೆತನ ತೋರಿದ್ದೀರಿ ಹೀಗಾಗಿ ಈ ಟಾಸ್ಕ್ ರದ್ದು ಮಾಡಲಾಗಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.

ಮಂಜು – ಮೋಕ್ಷಿತಾ ಅವರು ಈ ವಾರದ ಕ್ಯಾಪ್ಟನ್ಸಿ ಓಟದಿಂದ ಒಬ್ಬೊಬ್ಬ ಸ್ಪರ್ಧಿಯನ್ನು ಹೊರಗಿಡಬೇಕೆಂದು ಬಿಗ್‌ ಬಾಸ್‌ ಹೇಳಿದ್ದಾರೆ.

ಮೋಕ್ಷಿತಾ ಅವರು ತ್ರಿವಿಕ್ರಮ್‌ ಅವರಿಗೆ ಇಲ್ಲಿಂದ ಅಲ್ಲಿ, ಅಲ್ಲಿಂದ ಇಲ್ಲಿ ಹೇಳುವ ಬುದ್ದಿಯಿದೆ ಎಂದಿದ್ದಾರೆ. ಇದನ್ನು ಕೇಳಿ ಗರಂ ಆಗಿರುವ ತ್ರಿವಿಕ್ರಮ್‌ ಅವರು ಈ ತರ ಗೋಸುಂಬೆ ಆಟ ಆಡೋದಾಗಿದ್ರೆ ನಾವು ಇನ್ನೊಂದು ಆಟ ಆಡುತ್ತಾ ಇದ್ದೀವಿ ಎಂದಿದ್ದಾರೆ.

ರಜತ್‌ ತನಗೆ ಮಂಜು ಕೊಟ್ಟ ಕಾರಣವನ್ನು ಕೇಳಿ ಮಂಜು ಮೇಲೆಯೇ ರೇಗಾಡಿದ್ದಾರೆ. ಇವನು ಆಗಲೇ ಫಿಕ್ಸ್‌ ಆಗಿ ಬಿಟ್ಟಿದ್ದಾನೆ. ವಿನ್ನರ್‌ ಇವನು. ರನ್ನರ್‌ ಫಿಕ್ಸ್‌ ಮಾಡಿ ಬಿಟ್ಟಿದ್ದಾನೆ ಇವನು. ಆಚೆ ಬರೋಕೆ ಎಲ್ಲಿಂಟು ಮುಖ. ಅಲ್ಲೇ ಕೂತಿರುತ್ತಾನೆ ಬೆಡ್‌ ಶೀಟ್‌ ಹಾಕ್ಕೊಂಡು ಒಳ್ಳೆ ರೋಗಿಷ್ಠನ ತರ. ರೋಗಿಷ್ಠ ರಾಜ. ನಿನಗೆ ಭಯ. ಈ ತರ ಸೆಡೆ ಆಟ ಎಂದು ಆಕ್ರೋಶದ ಮಾತುಗಳನ್ನು ಆಡಿದ್ದಾರೆ.

ರಜತ್ – ತ್ರಿವಿಕ್ರಮ್ ಅವರನ್ನು ಈ ವಾರ ಕ್ಯಾಪ್ಟನ್ಸಿ ಟಾಸ್ಕ್ ನಿಂದ ಹೊರಗಿಡಲಾಗಿದೆ.

ಮಂಜು ಅವರು ಮೋಕ್ಷಿತಾ ಅವರು ಸಹೋದರತ್ವ ಪ್ರೀತಿಯಿಂದ ಹಾಡಿದ ‘ಆಕಾಶದಲ್ಲಿ..’ ಹಾಡನ್ನು ವ್ಯಂಗ್ಯವಾಗಿ ಹಾಡಿದ್ದಕ್ಕೆ ಮೋಕ ಕ್ಯಾಮರಾದ ಮುಂದೆ ಕಣ್ಣೀರಿಟ್ಟಿದ್ದಾರೆ.

ನಾನೇದರೂ‌ ಕೇಳಿದ್ನಾ ಬಿಗ್ ಬಾಸ್. ಇದರಲ್ಲಿ ನನ್ನದು ಏನಾದರೂ ತಪ್ಪು ಇದ್ಯಾ? ಇದನ್ನು ಅವರು ಆಟವಾಗಿ ನೋಡಿಲ್ಲ. ಎಲ್ಲವನ್ನೂ ವೈಯಕ್ತಿಕವಾಗಿಯೇ ಮಾತನಾಡಿದ್ದಾರೆ. ನನ್ನ ಎಮೋಷನ್ಸ್ ಫೇಕ್ ಅಂತಾರೆ. ನನ್ನ ಭಾವನೆಗಳನ್ನಿಟ್ಟುಕೊಂಡು ತಮಾಷೆ ಮಾಡುತ್ತಾರೆ.

ಮೊದಲಿನಿಂದಲೂ ಅವರು‌ ಮೋಸದಿಂದಲೇ ಆಡುತ್ತಾ ಬಂದಿದ್ದಾರೆ. ಈ‌ ಮನೆಯಲ್ಲಿ ಇರುವವರೆ ನಾನು ಆ ಹಾಡನ್ನು ಹಾಡಲ್ಲ ಎಂದು ಕಣ್ಣೀರಿಟ್ಟಿದ್ದಾರೆ.

ಟಾಪ್ ನ್ಯೂಸ್

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

1-pak

ODI; ಜಿಂಬಾಬ್ವೆ ಎದುರು ಪಾಕ್‌ಗೆ 2-1 ಸರಣಿ

1-wqewqe

Pro Kabaddi:ಯುಪಿ, ತೆಲುಗು ಜಯಭೇರಿ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

Udupi: ಪ್ರಧಾನಮಂತ್ರಿ ಬೆಳೆ ವಿಮೆ: ನೋಂದಣಿಗೆ ಅಧಿಸೂಚನೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

BBK11: ಮಂಜುವನ್ನು ರೋಗಿಷ್ಠ ರಾಜ ಎಂದ ರಜತ್; ಜೋರಾಗಿ ನಕ್ಕ ಶಿಶಿರ್, ಐಶ್ವರ್ಯಾ

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ಮಂಜುಗೆ ʼಥೂ..ʼ ಎಂದು ಉಗಿದ ಮೋಕ್ಷಿತಾ; ದೊಡ್ಮನೆಯಲ್ಲಿ ಜೋರಾಯಿತು ಯೋಗ್ಯತೆ ಮಾತು

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ನಿಮ್ಮನ್ನು ಆಚೆ ಕಳ್ಸಿಯೇ ನಾನು ಹೋಗೋದು ಚೈತ್ರಾ ವಿರುದ್ಧ ಗುಡುಗಿದ ರಜತ್

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಮೋಕ್ಷಿತಾ ಎರಡು ತಲೆ ನಾಗರಹಾವು ಎಂದ ತ್ರಿವಿಕ್ರಮ್; ನಾಮಿನೇಟ್‌ ವಿಚಾರವಾಗಿ ವಾಗ್ವಾದ

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

BBK11: ಧರ್ಮ ಬಿಗ್‌ ಬಾಸ್‌ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್‌ ಹೀರೋʼ ಎಡವಿದ್ದೆಲ್ಲಿ?

MUST WATCH

udayavani youtube

ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

ಹೊಸ ಸೇರ್ಪಡೆ

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

Illegal sand mining: ರಾ. ಹಸುರು ಪ್ರಾಧಿಕಾರದಿಂದ ಸ್ವಯಂಪ್ರೇರಿತ ದೂರು ದಾಖಲು

1-sindu

Badminton; ಸಯ್ಯದ್‌ ಮೋದಿ ಇಂಟರ್‌ನ್ಯಾಶನಲ್‌: ಸಿಂಧು, ಸೆನ್‌ ಕ್ವಾರ್ಟರ್‌ಫೈನಲಿಗೆ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

Udupi: ಕಿಂಡಿ ಅಣೆಕಟ್ಟೆಗೆ ಹಲಗೆ ಹಾಕುವ ಪ್ರಕ್ರಿಯೆ ಆರಂಭ

1-skk

Cricket; ವೇಗಿ ಸಿದ್ದಾರ್ಥ್ ಕೌಲ್‌ ನಿವೃತ್ತಿ

ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Winter session: ರಾಜ್ಯದ ಕರಾವಳಿಯ 73.4 ಕಿ.ಮೀ. ಕಡಲ್ಕೊರೆತದಿಂದ ಹಾನಿ: ಸಚಿವ ಸಿಂಗ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.