BBK11: ನಾನು ಆಚೆ ಹೋದರೆ ಜಗತ್ತಿನಲ್ಲಿರುವ ಎಲ್ಲ ದೇವರಿಗೆ ಹರಕೆ ಇಡುತ್ತೇನೆ: ಚೈತ್ರಾ ಗರಂ
Team Udayavani, Dec 12, 2024, 11:08 PM IST
ಬೆಂಗಳೂರು: ದೊಡ್ಮನೆಯಲ್ಲಿ ಈ ವಾರದ ಟಾಸ್ಕ್ ಗಳು ಮುಕ್ತಾಯ ಕಂಡಿದೆ.
ಹನುಮಂತು ಹಾಗೂ ಗೌತಮಿ ಅವರ ತಂಡದ ನಡುವೆ ಕ್ಯಾಪ್ಟನ್ಸಿ ಓಟಕ್ಕಾಗಿ ನಡೆದ ಟಾಸ್ಕ್ ಗಳಲ್ಲಿ ಗೌತಮಿ ಅವರ ತಂಡ ಸೋತಿದ್ದು ಪರಿಣಾಮ ಅವರ ತಂಡದ ಎಲ್ಲರೂ ಕ್ಯಾಪ್ಟನ್ಸಿ ಓಟದಿಂದ ಹೊರಗುಳಿದಿದ್ದಾರೆ. ಇನ್ನೊಂದು ಕಡೆ ಹನುಮಂತು ಅವರ ತಂಡದ ಎಲ್ಲ ಸದಸ್ಯರು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಿದ್ದಾರೆ.
ತಮಗೆ ಆಡಲು ಅವಕಾಶ ಕೊಡಲಲ್ಲವೆಂದು ಚೈತ್ರಾ ಅವರು ತಮ್ಮ ತಂಡದ ವಿರುದ್ಧವೇ ಅಸಮಾಧಾನ ಹೊರಹಾಕಿದ್ದಾರೆ.
“ಆಡೋಕೆ ಕೊಡಲ್ಲ. ಉಸ್ತುವಾರಿ ಮಾಡಲ್ಲ ಅಂತೀನಿ ಹಟ ಕಟ್ಟಿ ಉಸ್ತುವಾರಿ ಕೊಡುತ್ತಾರೆ. ಎಲಿಮಿನೇಟ್ ಆಗಿ ವಾಪಾಸ್ ಬಂದಿದ್ದೀನಿ. ಇಡೀ ವಾರ ಆಟ ಆಡಿಲ್ಲ. ಕುಗ್ಗಿಸುತ್ತಾರೆ. ಆಡುತ್ತೀನಿ ಅಂದ್ರೆ ಆಡೋಕೆ ಕೊಡಲ್ಲ. ಆಮೇಲೆ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾರೆ” ಎಂದು ಬಿಕ್ಕಿ ಬಿಕ್ಕಿ ಅಳುತ್ತಾ ಚೈತ್ರಾ ಸಹ ಸ್ಪರ್ಧಿಗಳ ಜತೆ ಹೇಳಿಕೊಂಡಿದ್ದಾರೆ.
ಈ ವಾರ ಆಚೆ ಹೋದರೆ ಜಗತ್ತಿನಲ್ಲಿರುವ ಎಲ್ಲ ದೇವರಿಗೆ ಹರಕೆ ಇಡುತ್ತೇನೆ ಎಂದು ಚೈತ್ರಾ ಕಣ್ಣೀರಿಡುತ್ತಲೇ ಹೇಳಿದ್ದಾರೆ.
ಸೋತ್ರು ಪರವಾಗಿಲ್ಲ ಕೊನೆ ಪಕ್ಷ ಆಡೋಕ್ಕಾದ್ರು ಕೊಡಬೇಕಿತ್ತು. ಎಲಿಮಿನೇಟ್ ಆಗಿ ಬಂದಿದ್ದೀನಿ. ಒಂದೇ ಒಂದು ಟಾಸ್ಕ್ ಆಡೋಕೆ ಕೊಟ್ಟಿಲ್ಲ ಅಂದ್ರೆ ಜನ ಯಾವ ಆಧಾರದ ಮೇಲೆ ಈ ವಾರ ನನಗೆ ವೋಟ್ ಹಾಕಬೇಕೆಂದು ಚೈತ್ರಾ ಕೇಳಿದ್ದಾರೆ.
ನೀವು ಆಡುತ್ತೀನಿ ಅಂಥ ಹೇಳಿದ್ರೆ ನಾನು ಕೂರಿಸುತ್ತಾ ಇರಲಿಲ್ಲ ಎಂದು ಗೌತಮಿ ಚೈತ್ರಾ ಅವರ ಮನವೊಲಿಸುವ ಪ್ರಯತ್ನ ಮಾಡಿದ್ದಾರೆ. ನಾನು ಕೊನೆ ಗೇಮ್ ಆಡುತ್ತೇನೆ ಹೇಳಿದ್ದೆ. ಆದರೆ ಅವಕಾಶ ಕೊಡಲಿಲ್ಲವೆಂದು ಚೈತ್ರಾ ಹೇಳಿದ್ದಾರೆ.
ಇವರಿಗೆ ಅವಕಾಶ ಸಿಗದಕ್ಕೆ ನಾನು ಕಾರಣ ಅಂತೆ ಅದಕ್ಕೆ ದೇವರ ಹತ್ರ ಶಾಪ ಹಾಕುತ್ತಾರೆ. ಇವರ ಹತ್ರ ಸ್ಪೋರ್ಟ್ಸ್ ಮ್ಯಾನ್ ಶಿಪ್ ಕಲಿಯೋಕೆ ನಾನು ಬಂದಿಲ್ಲವೆಂದು ತ್ರಿವಿಕ್ರಮ್ ಹೇಳಿದ್ದಾರೆ. ಇದಕ್ಕೆ ಗೌತಮಿ ದೇವರ ಹತ್ರ ಶಾಪ ಎಲ್ಲಾ ವರ್ಕೌಟ್ ಆಗಲ್ಲವೆಂದಿದ್ದಾರೆ.
ಎಲ್ಲರೂ ಸೇಫ್ ಆದ್ರು ನೀನು ಮಾತ್ರ ಬಕ್ರಾ ಆಗೋದೆ ಎಂದು ರಜತ್ ತ್ರಿವಿಕ್ರಮ್ ಗೆ ಹೇಳಿದ್ದಾರೆ.
ಇನ್ನೊಂದು ಕಡೆ ಇದು ನನ್ನ ಬ್ಯಾಡ್ ಡೇ. ಕ್ಯಾಪ್ಟನ್ ಆಗಿ ನನ್ನ ತಂಡದಿಂದ ಒಬ್ಬರು ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಿಲ್ಲ. ಬೇಜಾರ್ ಆಗುತ್ತಿದೆ ಎಂದು ಗೌತಮಿ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Team India: ಹೊಸ ಕೋಚ್ ನೇಮಕಕ್ಕೆ ಮುಂದಾದ ಬಿಸಿಸಿಐ: ರೇಸ್ ನಲ್ಲಿ ಪೀಟರ್ಸನ್
Maha Kumbh Mela 2025: ಭಕ್ತರ ಗಮನ ಸೆಳೆಯುತ್ತಿರುವ “ಮುಳ್ಳಿನ ಮೇಲೆ ಮಲಗುವ ಸಾಧಕ!
ಮಾದರಿ ಸಂಘವಾಗಿ ಗುರುತಿಸಿಕೊಂಡ ಉಡುಪಿ ಸವಿತಾ ಸಮಾಜ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ
Udupi: ಸಂಘದ ಉತ್ತಮ ಸಾಧನೆಗಾಗಿ ಉಡುಪಿ ಜಿಲ್ಲಾ ಪತ್ರಕರ್ತರ ಸಂಘಕ್ಕೆ ರಾಜ್ಯ ಪ್ರಶಸ್ತಿ ಗರಿ
Udupi: ಎರಡೇ ದಿನದಲ್ಲಿ ಬರಲಿದೆ, ವಾರಾಹಿ ನೀರು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.