BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್


Team Udayavani, Nov 22, 2024, 11:07 PM IST

BBK11: ಚೈತ್ರಾ ಅವರೇ ನನ್ನ ಬಾಸ್.. ಅವರ ಹೆಜ್ಜೆ ಫಾಲೋ ಮಾಡ್ತೇನೆ ಎಂದ ರಜತ್

ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳ ಅಸಲಿ ಆಟ ಶುರುವಾದ ಬೆನ್ನಲ್ಲೇ ಕಳಪೆ ಸ್ಪರ್ಧಿ ಯಾರೆಂದು ಎಲ್ಲರೂ ಕಾರಣವನ್ನು ಕೊಟ್ಟು ಅಭಿಪ್ರಾಯವನ್ನು ತಿಳಿಸಿದ್ದಾರೆ.

ಡ್ರಮ್‌ಗೆ ನೀರು ತುಂಬಿಸಿರುವ ಆಟದಲ್ಲಿ ಶೋಭಾ ಅವರ ಕೆಂಪು ತಂಡ ಗೆದ್ದಿದೆ. ಗೆದ್ದ ಬಳಿಕ ಸಿಕ್ಕ 3000 ರೂಪಾಯಿ ಹಂಚಿಕೆಯ ವಿಚಾರದಲ್ಲಿ ತಂಡದಲ್ಲೇ ಚರ್ಚೆ ನಡೆದಿದೆ. ಆಡಿದವರಿಗೆ ಮಾತ್ರ ಹಣ ಕೊಡಬೇಕೆಂದು ಕೆಲವರು ವಾದಿಸಿದ್ದಾರೆ.

ಸದಸ್ಯರು ತಮಗೆ ಸಿಕ್ಕಿರುವ ಬಿಬಿ ಪಾಯಿಂಟ್ಸ್ ಎಷ್ಟಿದೆ ಎನ್ನುವುದನ್ನು ಹೇಳಿದ್ದಾರೆ. ಈ ಪೈಕಿ ಮಂಜು ಅವರಿಗೆ ಹೆಚ್ಚು ಬಿಬಿ ಪಾಯಿಂಟ್ಸ್ ಸಿಕ್ಕಿದೆ.

ಶೋಭಾ, ಮಂಜು, ರಜತ್, ಹನುಮಂತು, ಚೈತ್ರಾ ಅವರು ಕ್ಯಾಪ್ಟನ್ಸಿ ಅಭ್ಯರ್ಥಿಗಳಾಗಿ ಆಯ್ಕೆ ಆಗಿದ್ದಾರೆ.

ತಿವಿಕ್ರಮ್ ತುಂಬಾ ಸ್ಮಾರ್ಟ್ & ಸಾಫ್ಟ್ ಆಗಿ ಗೇಮ್ ಆಡಿತ್ತಾರೆ. ಎದುರಾಳಿಗಳು ಸ್ಟ್ರಾಟರ್ಜಿ ನೋಡಿ ಅವರೊಂದಿಗೆ ಒಳ್ಳೆಯವರಂತೆ ಇದ್ದು ಸ್ಮಾರ್ಟ್ ನಂತೆ ಆಡುತ್ತಾರೆ ಎಂದು ಮೋಕ್ಷಿತಾ ಹೇಳಿದ್ದಾರೆ.

ನಾವು ಸ್ಟ್ರಾಂಗ್ ಇದ್ದೇವೆ ಐಶ್ವರ್ಯಾ. ಬೇರೆಯವರನ್ನು ಫುಶ್ ಮಾಡುತ್ತಿದ್ದೇವೆ.‌ನನಗಂತೂ ಈ ಕ್ಯಾಪ್ಟನ್ಸಿ ಅಭ್ಯರ್ಥಿಗಳು ಇಷ್ಟವಿಲ್ಲ ಎಂದು ಮೋಕ್ಷಿತಾ ಅವರು ಹೇಳಿದ್ದಾರೆ.

ಮನೆಯ ಸಾಮಾಗ್ರಿಗಳು ಯಾರಿಗೆಲ್ಲ ಸಿಗಬೇಕೆಂದು ಕ್ಯಾಪ್ಟನ್ಸಿ ಅಭ್ಯರ್ಥಿಗಳು ಒಮ್ಮತದ ನಿರ್ಧಾರ ಮಾಡಿ,  ಗೌತಮಿ ಹಾಗೂ ಧನರಾಜ್ ಅವರ ಹೆಸರನ್ನು ಹೇಳಿದ್ದಾರೆ. ಉಳಿದವರಿಗೆ ಈ ವಾರ ವಾರದ ಸಾಮಾಗ್ರಿಗಳನ್ನು ಬಳಸುವಂತಿಲ್ಲ.

ಸುದೀಪ್ ಅವರಿಂದ ಕಿಚ್ಚನಿಂದ ಸ್ಪೆಷಲ್ ಗಿಫ್ಟ್:
ಕಿಚ್ಚ ಸುದೀಪ್ ಅವರು ಹನುಮಂತು ಅವರಿಗೆ ಪತ್ರವೊಂದನ್ನು ಬರೆದು ಅಂಗಿ – ಲುಂಗಿ ಉಡುಗೊರೆ ಆಗಿ ನೀಡಿದ್ದಾರೆ.

ಈ ಗಿಫ್ಟ್ ನೋಡಿ ಹನುಮಂತು ಅವರು ಒಂದು ಕ್ಷಣ ಭಾವುಕರಾಗಿ ಸುದೀಪ್ ಅವರಿಗೆ ಧನ್ಯವಾದ ಸಲ್ಲಿಸಿದ್ದಾರೆ.

ಕ್ಯಾಪ್ಟನ್ಸಿ ಟಾಸ್ಕ್ ನಲ್ಲಿ ವಾದ – ವಾಗ್ವಾದ:
ಕ್ಯಾಪ್ಟನ್ಸಿ ಟಾಸ್ಕ್ ಕ್ಯಾಪ್ಟನ್ಸಿ ಅಭ್ಯರ್ಥಿಗಳಿಗೆ ‌ನೀಡಲಾಗಿದೆ. ಬಿಲ್ಲೆಗಳ ಮುಂದೆ ಫೋಟೋಗಳನ್ನು ‌ಇಟ್ಟು ಕ್ಯಾಪ್ಟನ್ ಆಯ್ಕೆ ಮಾಡುವ ಪ್ರಕ್ರಿಯೆ ನಡೆದಿದೆ.

ಮೊದಲು ಟಾಸ್ಕ್ ಮುಗಿಸಿದವರು ತಮ್ಮಲ್ಲಿ ಯಾರನ್ನು ಹೊರಗೆ ಇಡಬೇಕು ಎನ್ನುವುದನ್ನು ಹೇಳಬೇಕು.

ರಜತ್ ಅವರು ಚೈತ್ರಾ ಅವರನ್ನು ಕ್ಯಾಪ್ಟನ್ಸಿ ಆಟದಿಂದ ಹೊರಗಿಟ್ಟಿದ್ದಾರೆ. ಆ ಮೂಲಕ ಚೈತ್ರಾ ಅವರು ಕ್ಯಾಪ್ಟನ್ಸಿ ಓಟದಿಂದ ಹೊರಗುಳಿದಿದ್ದಾರೆ.

ಟೀಮ್ ಮೆಂಬರ್ ಏನೇ ಮಾಡಿದ್ರೂ ಅವರಿಗೆ ಕ್ರೆಡಿಟ್ ನೀಡಲ್ಲವೆಂದು ಶೋಭಾ ಅವರು ಮಂಜು ಅವರ ಫೋಟೋ ಬೀಳಿಸಲು ಯತ್ನಿಸಿದ್ದಾರೆ. ಆದರೆ ಫೋಟೋ ಬೀಳದೆ ಅವರು ವಿಫಲರಾದ ಕಾರಣ ಶೋಭಾ ಅವರೇ ಟಾಸ್ಕ್ ನಿಂದ ಹೊರಬಿದ್ದಿದ್ದಾರೆ.

ರಜತ್ ಮಂಜು ಅವರನ್ನು ಟಾಸ್ಕ್ ನಿಂದ ಹೊರಗೆ ಇಡುವುದಾಗಿ ಹೇಳಿ ಬಿಲ್ಲೆಗಳನ್ನು ಬೀಳಿಸಿದ್ದಾರೆ. ಆದರೆ ಅವರು ಕೂಡ ವಿಫಲರಾದ ಕಾರಣ ಕ್ಯಾಪ್ಟನ್ಸಿ ರೇಸ್ ನಿಂದ ಹೊರಬಿದ್ದಿದ್ದಾರೆ.

ಅಂತಿಮವಾಗಿ ಮಂಜು ಹಾಗೂ ಹನುಮಂತು ಅವರ ಮಂಜು ಅವರು ಟಾಸ್ಕ್ ಗೆದ್ದು ಮನೆಯ ಕ್ಯಾಪ್ಟನ್ ಆಗಿದ್ದಾರೆ.

ಮೋಕ್ಷಿತಾ ಅವರು ತಮಗೆ ಯಾವ ಕೆಲಸವನ್ನು ನೀಡಿಲ್ಲ ಅದಕ್ಕೆ ಅವರು ನನ್ನನ್ನು ನಾಮಿನೇಟ್ ಮಾಡಿದ್ದಾರೆ. ನಾನೇ ಈ ವಾರ ಆಚೆ ಹೋಗ್ತೇನೆ ಅಂಥ ನನಗೆ ಯಾವ ಕೆಲಸವನ್ನು ಕೊಟ್ಟಿಲ್ಲ. ನಿಮ್ಮೆಲ್ಲರಿಗಿಂತ ಮಂಜಣ್ಣ ಹೇಗೆ ಅಂಥ ನನಗೆ ಗೊತ್ತು ಎಂದು ಮೋಕ್ಷಿತಾ ಹೇಳಿದ್ದಾರೆ.

ಒಂದೇ ವಾರದಲ್ಲಿ ಕಳಪೆ ಪಟ್ಟಿ ಪಡೆದುಕೊಂಡ ರಜತ್:
ರಜತ್ ಅವರು ಟಾಸ್ಕ್ ಸಮಯದಲ್ಲಿ ಸುರೇಶ್ ಅವರೊಂದಿಗೆ ನಡೆದುಕೊಂಡ ರೀತಿಗೆ ಮನೆಮಂದಿ ರಜತ್ ಅವರಿಗೆ ಕಳಪೆ ‌ಪಟ್ಟಿ ನೀಡಿ ಜೈಲಿಗೆ ಕಳುಹಿಸಿದ್ದಾರೆ.

ಮೋಕ್ಷಿತಾ, ಹನುಮಂತು, ,ಸುರೇಶ್, ಶೋಭಾ, ಶಿಶಿರ್, ಐಶ್ವರ್ಯಾ, ಚೈತ್ರಾ ಅವರು ರಜತ್ ಅವರಿಗೆ ಈ ವಾರದ ಕಳಪೆ ‌ನೀಡುತ್ತೇವೆ ಎಂದಿದ್ದಾರೆ.

ಒಂದಷ್ಟು ಪದಗಳನ್ನು ಬಳಸಿದ್ದಾರೆ. ಅದು ನಮಗೆ ಅರಗಿಸಿಕೊಳ್ಳಲು ಆಗುತ್ತಿಲ್ಲವೆಂದು ಸ್ಪರ್ಧಿಗಳು ಹೇಳಿದ್ದಾರೆ.

ನೀವು ‌ಮಾತನಾಡೋದೆ ಹಾಗೆ ಅಂಥ ಹೇಳಿದ್ದೀರಾ ಆದರೆ ಈ ಮನೆಗೆ ಅದು ಸೂಕ್ತವಾಗಲ್ಲವೆಂದು ಶಿಶಿರ್ ಕಾರಣವನ್ನು ನೀಡಿದ್ದಾರೆ.

ಸೆಡೆ ನನ್ಮಗ ಅಂದ್ರೆ ಯಾರು. ವೈಯಕ್ತಿಕವಾಗಿ ಬಂದ ಮಾತನ್ನು ತೆಗೆದುಕೊಳ್ಳಲು ಆಗಿಲ್ಲವೆಂದು ಸುರೇಶ್ ಹೇಳಿದ್ದಾರೆ.

ಎಲ್ಲರ ಕಾರಣವನ್ನು ಕೇಳಿ ರಜತ್ ಗರಂ ಆಗಿದ್ದಾರೆ.‌ ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದ್ದಷ್ಟು  ಸುಲಭವಲ್ಲ ಬಿಗ್ ಬಾಸ್ ಗೆಲ್ಲೋದು. ಸೆಡೆಗಳನ್ನು ಕಳ್ಸಿಯೇ ನಾನು ‌ಮನೆಗೆ ಹೋಗುವುದು. ಹುಟ್ಟಿದಾಗಿನಿಂದ ಹೀಗೆಯೇ ಇರೋದು. ಮುಂದೆಯೂ‌ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ತ್ರಿಬಲ್ ಮಾತನಾಡುತ್ತೇನೆ. ಇನ್ಮುಂದೆ ಆಟ ಶುರುವೆಂದಿದ್ದಾರೆ.

ಮೋಕ್ಷಿತಾ ಅವರಿಗೆ ಉತ್ತಮದ ಪದಕ ಸಿಕ್ಕಿದೆ. ಇನ್ಮೇಲೆ ಆಟ ಶುರು. ಇವರನ್ನೆಲ್ಲ‌‌ ಮನೆಗೆ ಕಳಿಸದ್ದೇ ನಾನು ಹೋಗಲ್ಲ. ಅಖಾಡಕ್ಕೆ ಇಳಿಯದವರೆಲ್ಲ ನನ್ನ ಬಗ್ಗೆ ಮಾತನಾಡುತ್ತಾರೆ. ಹುಡುಗಿಯರ ಕೈಗೆ ಓಡಾಡುತ್ತಾರೆ. ನಾನು ಶಿಶಿರ್ ಬಗ್ಗೆ ಮಾತನಾಡುತ್ತಿದ್ದೇನೆ. ಸುಮ್ಮನೆ ನಾನು ಮನೆಗೆ ಹೋಗಲ್ಲ. ಚೈತ್ರಾ ಅವರು ನಾನು ಬಾಸ್. ಅವರ ಹಾಕಿದ ಹೆಜ್ಜೆಯನ್ನು ನಾನು ಫಾಲೋ‌ ಮಾಡುತ್ತೇನೆ ಎಂದು ರಜತ್ ಹೇಳಿದ್ದಾರೆ

ಟಾಪ್ ನ್ಯೂಸ್

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

CTR-Wife-pallavi

ಸುಮ್ನೆ ಬ್ಯಾಂಡೇಜ್‌ ಹಾಕಿಕೊಳ್ಳಲು ಯಾರಿಗೂ ತಲೆ ಕೆಟ್ಟಿಲ್ಲ: ಸಿ.ಟಿ.ರವಿ ಪತ್ನಿ ಪಲ್ಲವಿ

CKM-CTR

ಬಿಜೆಪಿ, ಕಾಂಗ್ರೆಸ್‌ಗೆ ಪ್ರತ್ಯೇಕ ಕಾನೂನಿಲ್ಲ, ನನ್ನ ದೂರಿಗೆ ಕ್ರಮವಿಲ್ಲವೇಕೆ?: ಸಿ.ಟಿ.ರವಿ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Ankola; ಕಾರು ಢಿಕ್ಕಿ: ಪಾದಚಾರಿ ಮೃತ್ಯು; ಮೂವರಿಗೆ ಗಾಯ

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Road Mishap: ಬೈಕ್‌- ಬಸ್ ಡಿಕ್ಕಿ; 8 ವರ್ಷದ ವಿದ್ಯಾರ್ಥಿನಿ ಸಾವು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು

Missing Case ಶಿರ್ವ: ವ್ಯಕ್ತಿ ನಾಪತ್ತೆ; ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rachel David hope on Unlock Raghava Movie

Unlock Raghava Movie: ರಾಘವನ ಮೇಲೆ ಕಣ್ಣಿಟ್ಟ ರಚೆಲ್‌

Shivanna cinema in Vallarasu director’s film

N.Maharajan: ವಲ್ಲರಸು ನಿರ್ದೇಶಕರ ಚಿತ್ರದಲ್ಲಿ ಶಿವಣ್ಣ ಸಿನಿಮಾ

FIR 6 to 6 Kannada movie

FIR 6to6 movie: ಆ್ಯಕ್ಷನ್‌ ಚಿತ್ರದಲ್ಲಿ ವಿಜಯ ರಾಘವೇಂದ್ರ

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Darshan; ಶೂಟಿಂಗ್‌ ಗೆ ಡೆವಿಲ್ ರೆಡಿ; ಸತತ ಚಿತ್ರೀಕರಣಕ್ಕೆ ತಂಡ ನಿರ್ಧಾರ?

Gurunandan

Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್‌ ಬಾಂಡ್‌’ ಚಿತ್ರ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

police crime

Gangolli, Ajekaru; ಮಹಿಳೆಯರಿಗೆ ಜೀವ ಬೆದರಿಕೆ

Bengal

Filmmaker Died: ಖ್ಯಾತ ಸಿನಿಮಾ ನಿರ್ದೇಶಕ ಶ್ಯಾಂ ಬೆನಗಲ್‌ ವಿಧಿವಶ

death

Belthangady : ಸೊಪ್ಪು ತರಲು ಹೋಗಿದ್ದ ವ್ಯಕ್ತಿ ಆಕಸ್ಮಿಕ ಸಾ*ವು

baby

Sullia: ಒಂಟಿಯಾಗಿ ಪತ್ತೆಯಾದ ಮಗು ಪೋಷಕರ ಮಡಿಲಿಗೆ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Mangaluru: ವಿಎ ತಾತ್ಕಾಲಿಕ ಆಯ್ಕೆ ಪಟ್ಟಿ ಪ್ರಕಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.