BBK11: ಬಿಗ್ ಬಾಸ್ ಮನೆಯಲ್ಲಿ ಮದುವೆ ಸಂಭ್ರಮ: ಭಾವುಕರಾದ ಸ್ಪರ್ಧಿಗಳು.!
Team Udayavani, Nov 14, 2024, 11:10 PM IST
ಬೆಂಗಳೂರು: ಶಿಶಿರ್ ಅವರು ಚೈತ್ರಾ ಅವರು ತಮ್ಮಿಂದ ಜೋಡಿಯಾಗಲು ಹಿಂದೇಟು ಹಾಕಿದ ವಿಚಾರಕ್ಕೆ ಗರಂ ಆಗಿದ್ದಾರೆ.
ನಾನು ನನ್ನದು ಎನ್ನುವವರ ಜತೆ ನಾನು ಇರಲು ಇಷ್ಟಪಡಲ್ಲ. ನಾಮಿನೇಷನ್ ಅಂಥ ಬಂದಾಗ ಅಯ್ಯೋ ಅಯ್ಯೋ ಅಂಥ ಆಳ್ತಾ ಬರುತ್ತಾರೆ. ಇಷ್ಟು ವರ್ಷ ಇರುವವರು ನಾವಲ್ಲ ಆ್ಯಕ್ಟರ್, ಇವರು ಆ್ಯಕ್ಟರ್ ಎಂದು ಶಿಶಿರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀವು ಶಿಶಿರ್ ಅವರನ್ನು ಬಲಿಪಶು ಮಾಡಿದ್ದೀರಿ. ನೀವು ಮಾಡಿದ್ದು ತಪ್ಪು ಎಂದು ಚೈತ್ರಾ ಅವರ ಮೇಲೆ ಐಶ್ವರ್ಯಾ ಅವರು ಗರಂ ಆಗಿದ್ದಾರೆ.
ಐಶ್ವರ್ಯಾ ಅವರು ಹರಸಾಹಸ ಪಟ್ಟು ಶಿಶಿರ್ ಅವರ ಮನವೋಲಿಸಿದ್ದಾರೆ. ಮನಸ್ಸಿಲ್ಲದ ಮನಸ್ಸಿನಿಂದ ಶಿಶಿರ್ ಅವರ ಜತೆ ಜೋಡಿಯಾಗಿದ್ದಾರೆ.
ನನಗೆ ಜೋಡಿ ಮುರಿದು ಹೀಗೆ ಮಾಡ್ತಾರೆ ಅಂಥ ಗೊತ್ತಿರಲಿಲ್ಲ. ಹೊಸ ಆಟಗಾರ ಬರುತ್ತಾರೆ ಅನ್ಕೊಂಡೆ ಎಂದು ಚೈತ್ರಾ ಹೇಳಿದ್ದಾರೆ.
ಚೈತ್ರಾ ಅವರು ತುಂಬಾ ಚೆನ್ನಾಗಿ ನಾಟಕ ಮಾಡುತ್ತಾರೆ ಎಂದು ಮೋಕ್ಷಿತಾ ಹೇಳಿದ್ದಾರೆ. ಇನ್ನೊಂದು ಕಡೆ ಶಿಶಿರ್ ಅವರ ಸಿಟ್ಟಿನ ಮಂಜು ಅವರು ಬೆಂಬಲಿಸಿ ಉರಿಯುವ ಬೆಂಕಿಗೆ ತುಪ್ಪ ಹಾಕಿದಂತೆ ಮಾತನಾಡಿದ್ದಾರೆ.
ಚೈತ್ರಾ ಅವರು ಅಣ್ಣ ಮುಖ ನೋಡಿ ಮಾತನಾಡಿ, ಇನ್ಮುಂದೆ ಈ ರೀತಿ ಮಾಡಲ್ಲ. ಹೀಗೆ ಇದ್ರೆ ಆಡೋಕೆ ಆಗಲ್ಲ ಎಂದಿದ್ದಾರೆ. ಇದಕ್ಕೆ ಶಿಶಿರ್ ಅವರು ನನ್ನ ಆಟ ನಾನು ಆಡುತ್ತೇನೆ ಮುಖ ನೋಡದೆಯೇ ಉತ್ತರ ಹೇಳಿದ್ದಾರೆ.
ಇನ್ನೊಂದೆಡೆ ವಾಗ್ವಾದದಿಂದ ಪರಸ್ಪರ ಮುನಿಸು ಮಾಡಿಕೊಂಡಿದ್ದ ಧರ್ಮ – ಅನುಷಾ ಅವರು ಕೊನೆಗೂ ಮುನಿಸು ಮರೆತು ಆಪ್ತವಾಗಿ ಮಾತನಾಡಿದ್ದಾರೆ. ಆ ಕ್ಷಣದಲ್ಲಿ ಹೀಗೆಲ್ಲ ಆಯಿತೆಂದು ಅನುಷಾಳ ಬಳಿ ಧರ್ಮ ಕ್ಷಮೆ ಕೇಳಿದ್ದಾರೆ.
ಕಾಲ್ ಕಾಲಿನಲ್ಲಿ ಆಟದಲ್ಲಿ ಮೊದಲಿಗೆ ಚೈತ್ರಾ- ಶಿಶಿರ್ ಅವರು ಹೊರಬಿದ್ದರು. ಆ ಬಳಿಕ ಧರ್ಮ – ಐಶ್ವರ್ಯಾ ನಂತರ ಮೋಕ್ಷಿತಾ – ಧನರಾಜ್, ಸುರೇಶ್ – ಅನುಷಾ ಹೊರಬಿದ್ದರು. ಅಂತಿಮವಾಗಿ ಗೌತಮಿ – ಹನುಮಂತು ಜೋಡಿ ಟಾಸ್ಕ್ ಗೆದ್ದರು. ಅವರಿಗೆ 200 ಅಂಕಗಳು ಸಿಕ್ಕಿವೆ.
ದೊಡ್ಮನೆಗೆ ಬಂದ್ರು ‘ರಾಮಾಚಾರಿ’ ದಂಪತಿ:
ಬಿಗ್ ಬಾಸ್ ಮನೆಗೆ ‘ರಾಮಾಚಾರಿ’ ಧಾರಾವಾಹಿ ಖ್ಯಾತಿಯ ಚಾರು ಹಾಗೂ ರಾಮಾಚಾರಿ ಅತಿಥಿಯಾಗಿ ಬಂದಿದ್ದಾರೆ.
ಹನುಮಂತು ಅವರು ಚಾರು ಅವರಿಗಾಗಿ ಹಾಡೊಂದನ್ನು ಹಾಡಿ, ಗುಲಾಬಿ ಹೂವನ್ನು ನೀಡಿದ್ದಾರೆ.
ಮಕ್ಕಳ ದಿನಾಚರಣೆ ಪ್ರಯುಕ್ತ ಸ್ಪರ್ಧಿಗಳ ಹಳೆಯ ಫೋಟೋಗಳನ್ನು ಟಿವಿಯಲ್ಲಿ ಹಾಕಲಾಗಿದೆ. ಫೋಟೋಗಳನ್ನು ನೋಡಿ ಸ್ಪರ್ಧಿಗಳು ಆ ದಿನಗಳನ್ನು ಸ್ಮರಿಸಿದ್ದಾರೆ.
ನಾಲ್ಕನೇ ಟಾಸ್ಕ್ ನೀಡಿದ್ದು ಇದರಲ್ಲಿ ಜೋಡಿಗಳು ಡ್ಯಾನ್ಸ್ ಅಭ್ಯಾಸ ಮಾಡಿ ಅದನ್ನು ಪ್ರದರ್ಶನ ಮಾಡಿದ್ದಾರೆ.
ರಕ್ಕಮ್ಮ ಹಾಡಿಗೆ ಧರ್ಮ – ಐಶ್ವರ್ಯಾ ಅವರು ಸಕಥ್ ಆಗಿ ಸ್ಟೆಪ್ ಹಾಕಿದ್ದಾರೆ.
ಶಿಶಿರ್ – ಚೈತ್ರಾ ಅವರು ಮುತ್ತಾಣ್ಣ ಪೀಪಿ ಊದುವ ಹಾಡಿಗೆ ನೃತ್ಯ ಮಾಡಿದ್ದಾರೆ. ಈ ನೃತ್ಯವನ್ನು ನೋಡಿ ಸಹ ಸ್ಪರ್ಧಿಗಳು ಭಾವುಕರಾಗಿದ್ದಾರೆ. ಚೈತ್ರಾ ಅವರನ್ನು ಗಂಡನ ಮನೆಗೆ ಕಳುಹಿಸಿದ ದೃಶ್ಯ ನೋಡಿ ಸಹ ಸ್ಪರ್ಧಿಗಳು ಭಾವುಕರಾಗಿದ್ದಾರೆ. ಮಂಜು ಅವರು ಇದನ್ನು ನೋಡಿ ಕಣ್ಣೀರಿಟ್ಟಿದ್ದಾರೆ.
ಮಂಜು ಅವರು ತಮ್ಮ ಮೂವರು ತಂಗಿಯರನ್ನು ನೆನೆದು ಕಣ್ಣೀರಿಟ್ಟಿದ್ದಾರೆ.
ತೀರ್ಪುಗಾರರಾಗಿ ಚಾರು – ರಾಮಾಚಾರಿ ಅಂಕಗಳನ್ನು ನೀಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
BBK11: ವೀಕ್ಷಕರಿಗೆ ಸರ್ಪ್ರೈಸ್; ಮತ್ತೆ ಬಿಗ್ ಬಾಸ್‌ಗೆ ಗೋಲ್ಡ್ ಸುರೇಶ್
BBK11: ಫಿನಾಲೆಗೆ ಬರುತ್ತಾರೆ ಎನ್ನಲಾಗುತ್ತಿದ್ದ ದೈತ್ಯ ಸ್ಪರ್ಧಿಯೇ ಬಿಗ್ ಬಾಸ್ ನಿಂದ ಔಟ್?
BBK11: ನಿಮ್ಮ ಉಸ್ತುವಾರಿ ನೋಡಿ ಹೇಸಿಗೆ ಆಯಿತು.. ಚೈತ್ರಾ ಬಾಯಿ ಮುಚ್ಚಿಸಿದ ಕಿಚ್ಚ
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.