BBK11: ಇಷ್ಟು ಬೇಗ ಬರುತ್ತೇನೆ ಅನ್ಕೊಂಡಿರಲಿಲ್ಲ- ಬಿಗ್ ಬಾಸ್ ಜರ್ನಿ ಮುಗಿಸಿದ ಅನುಷಾ

Team Udayavani, Nov 17, 2024, 10:49 PM IST

rai

ಬೆಂಗಳೂರು: ಬಿಗ್ ಬಾಸ್ ಆಟ 50 ದಿನಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಕಿಚ್ಚನ ದೊಡ್ಮನೆಗೆ ಇಬ್ಬರು ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಆಗಿದ್ದಾರೆ.

ಅನುಷಾ ಅವರು ಚೈತ್ರಾ ಮನಸ್ಸಿಗೆ ಸಮಾಧಾನವಾಗುವ ಮಾತುಗಳನ್ನು ಹೇಳಿ ಧೈರ್ಯ ತುಂಬಿದ್ದಾರೆ. ನಿಮ್ಮದು ಒಬ್ಬರದೇ ತಪ್ಪಲ್ಲ. ಕೇಳಿಸಿಕೊಂಡ ನಮ್ಮದು ತಪ್ಪಿದೆ ಎಂದು ಚೈತ್ರಾ ಅವರ ಬಳಿ ಅನುಷಾ ಹೇಳಿದ್ದಾರೆ.

ನಾನು ‌ಮನೆಗೆ ಹೋಗಬೇಕೆಂದು ವಾಶ್ ರೂಮ್ ಕಣ್ಣೀರಿಡುತ್ತಾ ಚೈತ್ರಾ ಅವರು ಭವ್ಯರ ಬಳಿ ಹೇಳಿದ್ದಾರೆ. ಇದಕ್ಕೆ ಭವ್ಯ ನೀವು ಕಷ್ಟಪಟ್ಟು ಇಲ್ಲಿಗೆ ಬಂದಿದ್ದೀರಿ ಎಂದು ಧೈರ್ಯ ತುಂಬಿದ್ದಾರೆ.

ಹನುಮಂತು ಯಾಕೆ ದಿನ ಸ್ನಾನ ಮಾಡಲ್ಲ..?
ಇಲ್ಲಿ ಬಟ್ಟೆ ಒಗೆಯೋಕೆ ಜನರಲಿಲ್ಲ. ನಾನೇ ಒಗಿಬೇಕು ಹಾಗಾಗಿ ಪ್ರತಿ ದಿಜ ಸ್ನಾನ ಮಾಡಲ್ಲ. ಇರೋದು 10 ಜೋಡಿ ಬಟ್ಟೆ ಅಷ್ಟೇ ಎಂದು ಹನುಮಂತು ಅವರು ಕಿಚ್ಚನ ಬಳಿ ಹೇಳಿದ್ದಾರೆ.

ಜೋಡಿಗಳಾಗಿ ಆಡಿದ ಸ್ಪರ್ಧಿಗಳು ತಮ್ಮ ಅನುಭವ ಹೇಗಿತ್ತು ಏನೆಲ್ಲಾ ತಪ್ಪುಗಳಾಯಿತು ಎನ್ನುವುದನ್ನು ಮುಕ್ತವಾಗಿ ಸ್ಪರ್ಧಿಗಳು ಮಾತನಾಡಿದ್ದಾರೆ.

ತ್ರಿವಿಕ್ರಮ್ ಅವರು ಇಡೀ‌ ಮನೆಗೆ ಬ್ರೈನ್ ವಾಶ್ ಮಾಡುತ್ತಿದ್ದಾರೆ ಎನ್ನುವ ಪ್ರಶ್ನೆಗೆ ಧನರಾಜ್, ಚೈತ್ರಾ ಅವರು ಹೌದು ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಅನುಷಾ ಅವರನ್ನು ಆಟದಲ್ಲಿ ಎಚ್ಚರಿಸಲು ಇರಬೇಕೆನ್ನುವ ಪ್ರಶ್ನೆಗೆ ಧನರಾಜ್, ಐಶ್ವರ್ಯಾ ಹೌದು ಎಂದಿದ್ದಾರೆ.

ಹೀರೋ ಆಗಿ ಪರಿಚಯವಾ ಶಿಶಿರ್ ಈಗ ಜೀರೋ ಆಗ್ತಾ ಇದ್ದಾರೆ ಎನ್ನುವ ಪ್ರಶ್ನೆಗೆ ಧನರಾಜ್ ಹೌದು ಎಂದಿದ್ದಾರೆ. ಮಂಜು ಇಲ್ಲವೆಂದಿದ್ದಾರೆ.

ನಾನು ಜೀರೋ ಅನ್ನೋದನ್ನು ಒಪ್ಪಿಕೊಳ್ಳಲ್ಲವೆಂದು ಶಿಶಿರ್ ಹೇಳಿದ್ದಾರೆ.

ವೈಲ್ಡ್ ಕಾರ್ಡ್ ಸ್ಪರ್ಧಿಗಳ ಎಂಟ್ರಿ:
ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಬಿಗ್ ಬಾಸ್ ಮನೆಗೆ ಕಿರುತೆರೆ ನಟ ರಜತ್ ಕಿಶನ್, ನಟಿ ಶೋಭಾ ಶೆಟ್ಟಿ ಬಂದಿದ್ದಾರೆ.

ತೆಲುಗು ಬಿಗ್ ಬಾಸ್ ಸೀಸನ್ – 7 ನಲ್ಲಿ ಕೊನೆಯವರೆಗೂ ಹೋಗಿ ಸಖತ್ ಆಗಿ ಆಟ ಆಡಿದ ಶೋಭಾ ಶೆಟ್ಟಿ ಕನ್ನಡ ಬಿಗ್ ಬಾಸ್ ಗೆ ಬಂದಿದ್ದಾರೆ.

ಶೋಭಾ ಶೆಟ್ಟಿ ಅವರ ಬಳಿ ಕಿಚ್ಚ ಅವರು ಒಳಗಡೆ ಇರುವವರು ಯಾರು ನಿಮಗೆ ಟಫ್‌ ಅಂಥ ಅನ್ನಿಸುತ್ತದೆ ಎಂದು ಕೇಳಿದ್ದಾರೆ. ಇದಕ್ಕೆ ಅವರು ಯಾರೂ ಇಲ್ಲ ಎಂದಿದ್ದಾರೆ.

ಶೋಭಾ ಶೆಟ್ಟಿ ಹೇಳಿದ್ದೇನು?:
100% ನಾನಿಲ್ಲಿ ತೆಲುಗು ಬಿಗ್ ಬಾಸ್ ನಲ್ಲಿ ಮಿಸ್ ಆದದ್ದನ್ನು ಇಲ್ಲಿ ಪೂರ್ತಿ ಮಾಡುತ್ತೇನೆ.ಕನ್ನಡದಲ್ಲಿ ನನಗೆ ಕಂಬ್ಯಾಕ್ ಮಾಡಲು ಕನ್ನಡ ಬಿಗ್ ಬಾಸ್ ನನಗೆ ಸಹಕಾರಿ ಆಗುತ್ತದೆ ಎಂದು ಕಾನ್ಫಿಡೆನ್ಸ್ ನಿಂದ ಮಾತನಾಡಿದ್ದಾರೆ.

ರಜತ್ ಹೇಳಿದ್ದೇನು?:
ರಿಯಾಲಿಟಿ ಶೋ ಮೂಲಕ ಖ್ಯಾತಿ ಆಗಿರುವ ರಜತ್ ಅವರು ಕಿಚ್ಚ ಅವರನ್ನು ಎಕ್ಸೈಟ್ ಆಗಿದ್ದಾರೆ.

ರಜತ್‌ ಅವರ ಬಳಿ ಕಿಚ್ಚ ಹೇಗೆ ಅನ್ನಿಸುತ್ತದೆ ನಿಮಗೆ ಸ್ಪರ್ಧಿಗಳು ಎಂದು ಕೇಳಿದ್ದಾರೆ. ಇದಕ್ಕೆ ಅವರು,  ಒಳಗಿರುವವರಲ್ಲಿ ಅರ್ಧ ಜನ ಪುಕ್ಕಲು, ಇನ್ನರ್ಧ ಜನ ತಿಕ್ಕಲು. ಅವನಿಗೆ ಇವನು ಅಂದ್ರೆ ಆಗಲ್ಲ, ಇವನಿಗೆ ಅವನು ಅಂದ್ರೆ ಆಗಲ್ಲ. ಇವರು ಯಾರು ಉದ್ಧಾರ ಆಗಲ್ಲ ಸಾರ್‌ ಎಂದು ಉತ್ತರಿಸಿದ್ದಾರೆ.

ಆರೇಳು ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದೇನೆ.‌ ಅದರಲ್ಲಿ 4ರಲ್ಲಿ ರನ್ನರ್ ಅಪ್ ಆಗಿದ್ದೇನೆ. ನನಗೆ ನಿರೂಪಣೆ ಮಾಡುವುದು ಇಷ್ಟವೆಂದಿದ್ದಾರೆ. ಈ ಶೋ ಮೂಲಕ ನನಗೆ ಒಳ್ಳೆಯ ಅವಕಾಶಗಳು ಸಿಗುವ ನಿರೀಕ್ಷೆಯಿದೆ ಎಂದಿದ್ದಾರೆ.

ನಮ್ಮಿಂದ ಸಂಪೂರ್ಣವಾಗಿ ಮನರಂಜನೆ ಸಿಗುತ್ತದೆ. ನಿಮ್ಮೆಲ್ಲರ ಬೆಂಬಲ ನಮಗೆ ಬೇಕೆಂದು ರಜತ್, ಶೋಭಾ ಜನರಲ್ಲಿ ಕೇಳಿಕೊಂಡಿದ್ದಾರೆ.

ಎಲಿಮಿನೇಷನ್ ನಿಂದ ಪಾರಾದವರು ಯಾರೆಲ್ಲ:
ಧನರಾಜ್, ಮೋಕ್ಷಿತಾ, ಹನುಮಂತು ,ಮಂಜು, ಗೌತಮಿ, ಶಿಶಿರ್ ಅವರು ಸೇಫ್ ಆಗಿದ್ದಾರೆ. ಆ ಬಳಿಕ ಭವ್ಯ, ಧರ್ಮ ಹಾಗೂ ಅನುಷಾ ಅವರನ್ನು ಕೆಲ ಕಾಲ ಹೋಲ್ಡ್ ನಲ್ಲಿಟ್ಟು ಇವರ ಪೈಕಿ ಅನುಷಾ ಅವರನ್ನು ಎಲಿಮಿನೇಟ್ ಮಾಡಲಾಗಿದೆ.

ಗ್ರೀನ್ – ರೆಡ್ ಲೈಟ್ ಧರ್ಮ ಹಾಗೂ ಅನುಷಾ ಅವರ ಮೇಲೆ ಹಾಕುವ ಮೂಲಕ ಎಲಿಮಿನೇಷನ್ ‌ಪ್ರಕ್ರಿಯೆಯನ್ನು‌ ಮುಗಿಸಲಾಗಿದೆ.

ನನಗೆ ಗೆಲ್ಲಬೇಕೆನ್ನುವ ಹಠ ತುಂಬಾನೇ ಇದೆ. ನಾನು ಬದಲಾಗಬೇಕಿತ್ತು. ಆದರೆ ಇಲ್ಲಿನ ಕೆಲ ವಿಚಾರಗಳಿಂದ ಅದು ಸಾಧ್ಯವಾಗಿಲ್ಲವೆಂದು ಅನುಷಾ ಹೇಳಿದ್ದಾರೆ.

ಅನುಷಾ ಅವರನ್ನು ನೆನೆದು ಚೈತ್ರಾ ಅವರು ಬಿಕ್ಕಿ ಬಿಕ್ಮಿ ಅತ್ತಿದ್ದಾರೆ.‌ ಇನ್ನೊಂದೆಡೆ ಧರ್ಮ ಕೂಡ ತನ್ನ ಆಪ್ತ ಗೆಳತಿಯನ್ನು‌ ಮಿಸ್ ಮಾಡಿಕೊಂಡು ಕಣ್ಣೀರಿಟ್ಟಿದ್ದಾರೆ.

ಉಳಿದ ಸ್ಪರ್ಧಿಗಳು ನಾವು ಇನ್ಮುಂದೆ ಎಚ್ಚರದಿಂದ ಆಗಬೇಕೆಂದು ತಮ್ಮನ್ನು ತಾವೇ ಸಮಾಧಾನ ಪಟ್ಟುಕೊಂಡಿದ್ದಾರೆ.

ತುಂಬಾನೇ ಬೇಜಾರು ಆಗುತ್ತಾ ಇದೆ. ಇಷ್ಟು ಬೇಗ ಹೊರಗೆ ಬರುತ್ತೇನೆ ಅಂಥ ಅನ್ಕೊಂಡು ಇರಲಿಲ್ಲ. ಬಿಗ್ ಬಾಸ್ ಆಟವನ್ನು ಬಿಗ್ ಬಾಸ್ ಆಟದ ತರನೇ ಆಡಬೇಕಿತ್ತು. ಗೇಮ್ಸ್ ನಲ್ಲಿ ಇನ್ನು ತುಂಬಾ ಪ್ರಯತ್ನ ಮಾಡಬೇಕಿತ್ತು ಎಂದಿದ್ದಾರೆ.

ತ್ರಿವಿಕ್ರಮ್ ,ಧರ್ಮ, ಮಂಜು, ಭವ್ಯ, ಚೈತ್ರಾ ಅವರು ಟಾಪ್ 5 ಅಲ್ಲಿ ಬರಬೇಕು.ನನಗೆ ಚೈತ್ರಾ ಅವರು ಗೆಲ್ಲಬೇಕೆಂದು ಅನುಷಾ ಅವರು ವೇದಿಕೆಯಲ್ಲಿ ಹೇಳಿದ್ದಾರೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

NCB ನಿರಂತರ ಕಾರ್ಯಾಚರಣೆ: ಡ್ರಗ್ಸ್‌ ಜಾಲ ಮುರಿಯಲು ಆಪರೇಷನ್‌ ಸಾಗರ ಮಂಥನ

1-aaaaaaa

Karkala: ಕಾಂಗ್ರೆಸ್ ನಾಯಕ ಡಿ. ಅರ್.‌ರಾಜು ನಿಧನ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

Israel; ಪ್ರಧಾನಿ ನಿವಾಸಕ್ಕೆ ಬಾಂಬ್‌ ದಾಳಿ: 3 ಮಂದಿ ಸೆರೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಬಿಗ್‌ ಬಾಸ್‌ ಮನೆಗೆ ವೈಲ್ಡ್‌ ಕಾರ್ಡ್ ಸ್ಪರ್ಧಿ; ಅಬ್ಬರಿಸುತ್ತಲೇ ದೊಡ್ಮನೆಗೆ ಎಂಟ್ರಿ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ಹನುಮಂತು ಬಳಿಕ ಮತ್ತಿಬ್ಬರು ವೈಲ್ಡ್‌ ಕಾರ್ಡ್‌ ಸ್ಪರ್ಧಿಗಳು ಬಿಗ್‌ಬಾಸ್‌ ಮನೆಗೆ

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ನೇರ ನಡೆ, ನುಡಿಯಿಂದ ಗಮನ ಸೆಳೆದಿದ್ದ ಈ ಸ್ಪರ್ಧಿ; ಮನೆಯಿಂದ ಹೊರಕ್ಕೆ?

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಏರು ಧ್ವನಿಯಲ್ಲೇ ತರಾಟೆಗೆ ತೆಗೆದುಕೊಂಡ ಕಿಚ್ಚ.. ಚೈತ್ರಾ ಕುಂದಾಪುರ ಕಕ್ಕಾಬಿಕ್ಕಿ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

BBK11: ಬಿಗ್‌ ಬಾಸ್‌ ಮನೆಯಿಂದ ಹೊರಗಡೆ ಬರಲು ನಿರ್ಧರಿಸಿದ ಚೈತ್ರಾ ಕುಂದಾಪುರ

MUST WATCH

udayavani youtube

ಉಚ್ಚಿಲದ ರೆಸಾರ್ಟ್‌ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾ**ವು

udayavani youtube

ಇಂಗ್ಲೀಷ್ ಒಂದು ಭಾಷೆ ಅನ್ನೋದೇ ತಪ್ಪು -ಪ್ರಕಾಶ್ ಬೆಳವಾಡಿ

udayavani youtube

ಕಾರಿನ ಟಯರ್ ಒಳಗಿತ್ತು ಬರೋಬ್ಬರಿ 50 ಲಕ್ಷ

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

Udupi: ಗೀತಾರ್ಥ ಚಿಂತನೆ-97: ಮೋಹದ ಸ್ಥಾನದಲ್ಲಿ ಕರ್ತವ್ಯಪ್ರಜ್ಞೆಯ ಸ್ಥಾಪನೆ

1-chuii

ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಚಿತ್ತೂರು ಪ್ರಭಾಕರ ಆಚಾರ್ಯರಿಗೆ ಗೌರವಾರ್ಪಣೆ

Elephant

Belthangady: ಚಾರ್ಮಾಡಿ: ಪರ್ಲಾಣಿಯಲ್ಲಿ ಕಾಡಾನೆ

K-H-Muniyappa

BPL ಕಾರ್ಡು ರದ್ದಾಗಲ್ಲ: ಮುನಿಯಪ್ಪ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Jhansi hospital: ಹಲವು ಮಕ್ಕಳ ರಕ್ಷಿಸಿದವನ ಅವಳಿ ಮಕ್ಕಳು ಬೆಂಕಿಗಾಹುತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.