BBK11: ಚೈತ್ರಾ ಅಭಿನಯ ಕಂಡು ಮೂಕವಿಸ್ಮಿತರಾದ ಮನೆಮಂದಿ
Team Udayavani, Nov 29, 2024, 11:09 PM IST
ಬೆಂಗಳೂರು: ಮಹಾರಾಜ- ಯುವರಾಣಿ ಕಪಿಮುಷ್ಠಿಯಲ್ಲಿ ಈ ವಾರ ಬಿಗ್ ಮನೆಯ ಆಟ ಸಾಗಿದೆ.
ರಾಜ ಮನೆತನದ ವಿರುದ್ಧ ಸ್ಪರ್ಧಿಗಳು ರೊಚ್ಚಿಗೆದ್ದಿದ್ದಾರೆ. ನಾವೆಲ್ಲರೂ ಜತೆ ಸೇರಿ ನಮ್ಮದೇ ಸಾಮ್ರಾಜ್ಯವನ್ನು ಕಟ್ಟುವ ಎಂದು ಧ್ವನಿಗೂಡಿಸಿದ್ದಾರೆ.
ರಾಣಿ – ಮಹಾರಾಜರನ್ನು ಸರಪಳಿಯಲ್ಲಿ ಸುತ್ತಿ ಬಂಧನದಲ್ಲಿ ಇರಿಸಲಾಗಿದೆ. ಆಯಾ ಬಣದ ಪ್ರಜೆಗಳು ರಾಜ – ಯುವರಾಣಿಯನ್ನು ರಕ್ಷಣೆ ಮಾಡುವ ಟಾಸ್ಕ್ ವೊಂದನ್ನು ಮನೆ ಮಂದಿಗೆ ನೀಡಲಾಗಿದೆ. ಈ ಟಾಸ್ಕ್ ಗೆಲ್ಲುವ ತಂಡ ಕ್ಯಾಪ್ಟನ್ಸಿ ಆಟಕ್ಕೆ ಆಯ್ಕೆ ಆಗಲಿದೆ.
ಕಣ್ಣಿಗೆ ಬಟ್ಟೆ ಕಟ್ಟಿ, ನೀಲಾ ನಕ್ಷೆಯನ್ನು ಬಿಡಿಸಿಕೊಂಡು ಈ ಟಾಸ್ಕ್ ನ್ನು ಮಹಾರಾಜ ಮಂಜು ಅವರ ಬಣ ಗೆದ್ದುಕೊಂಡಿದೆ. ಗೆದ್ದ ಬಳಿಕ ಮಹಾರಾಜ ಮಂಜು ಅವರಿಗೆ ಪ್ರಜೆಗಳು ಜೈಕಾರ ಹಾಕಿದ್ದಾರೆ.
ಚೈತ್ರಾ ಅಭಿಮನ್ಯುಗಾಗಿ ಕೃಷ್ಣ(ಶಿಶಿರ್) ಅವರ ಮುಂದೆ ಉತ್ತರೆಯಾಗಿ ಮಾಡಿದ ಅಭಿನಯ ನೋಡಿ ಮನೆಮಂದಿ ಮೂಕವಿಸ್ಮಿತರಾಗಿದ್ದಾರೆ.
ವಾರದ ಕ್ಯಾಪ್ಟನ್ಸಿ ಟಾಸ್ಕ್ 6 ಅಭ್ಯರ್ಥಿಗಳ ನಡುವೆ ನಡೆದಿದೆ. ಒಂದು ಪಂಗಡ ಗೌತಮಿ ಹಾಗೂ ಮಂಜು ಅವರನ್ನು ಕ್ಯಾಪ್ಟನ್ಸಿ ಓಟದಿಂದ ಆಚೆ ಇಡಬೇಕೆಂದು ಸಂಚು ರೂಪಿಸಿದ್ದಾರೆ.
ಕ್ಯಾಪ್ಟನ್ಸಿ ಓಟದಿಂದ ಮೊದಲು ಗೌತಮಿ ಅವರು ಆಚೆ ಬಿದ್ದಿದ್ದಾರೆ. ಎರಡನೇ ಅವರಾಗಿ ಮಂಜು ಅವರು ಆಚೆ ಬಂದಿದ್ದಾರೆ. ಆ ಬಳಿಕ ಭವ್ಯ ಆಚೆ ಬಂದಿದ್ದಾರೆ.
ಐಶ್ವರ್ಯಾ, ಸುರೇಶ್ ಹಾಗೂ ಧನರಾಜ್ ಅವರ ಪೈಕಿ ಧನರಾಜ್ ಅವರು ಈ ವಾರ ಮನೆ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದಾರೆ.
ಮೊದಲ ಬಾರಿ ಕ್ಯಾಪ್ಟನ್ ಆದ ಧನರಾಜ್ ಅವರನ್ನು ತಲೆಯಮೇಲೆ ಹೊತ್ತು ಹನುಮಂತು ಸಂಭ್ರಮಿಸಿದ್ದಾರೆ.
ಇನ್ನೊಂದು ಕಡೆ ಸುರೇಶ್ ಅವರು ಎಲ್ಲರೂ ಟಾರ್ಗೆಟ್ ಮಾಡಿ ಆಡಿದ್ದಾರೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಳಪೆ ಪಟ್ಟಿಯಿಂದ ಜೈಲು: ಕಣ್ಣೀರಿಟ್ಟ ಶೋಭಾ:
ಶೋಭಾ ಶೆಟ್ಟಿ ಅವರಿಗೆ ಕಳಪೆ ಪಟ್ಟಿ ಸಿಕ್ಕಿದೆ. ಕ್ಯಾಪ್ಟನ್ ಧನರಾಜ್ ಅವರಿಗೆ ಈ ವಾರದ ಉತ್ತಮ ಹಾಗೂ ಕಳಪೆ ನೀಡುವ ಅಧಿಕಾರವನ್ನು ನೀಡಲಾಗಿದೆ. ಅದರಂತೆ ಧನರಾಜ್ ಅವರು ಶೋಭಾ ಅವರಿಗೆ ಕಳಪೆ ಪಟ್ಟವನ್ನು ನೀಡಿದ್ದಾರೆ.
ಈ ವಾರ ನಿಮ್ಮ ಆ್ಯಕ್ಟಿವಿಟಿ ಅಷ್ಟಾಗಿ ಕಂಡಿಲ್ಲವೆನ್ನುವ ಕಾರಣವನ್ನು ನೀಡಿದ್ದಾರೆ. ಇದಕ್ಕೆ ಶೋಭಾ ನೀವು ಯಾಕೆ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದೀರಿ. ಲೈಫ್ ಅಲ್ಲಿ ಏನೇನೂ ಫೇಸ್ ಮಾಡಿದ್ದೀನಿ 24 ಗಂಟ ಜೈಲು ಅಲ್ಲಿರೋದು ದೊಡ್ಡ ವಿಷ್ಯವಲ್ಲವೆಂದು ಕಣ್ಣೀರಿಡುತ್ತಲೇ ಜೈಲಿನೊಳಗೆ ಹೋಗಿದ್ದಾರೆ .
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kundapura: ಗ್ರಾಮ ಸಹಾಯಕಿಗೆ ಕಿರುಕುಳ; ಆರೋಪಿಗಳಿಗೆ ನಿರೀಕ್ಷಣ ಜಾಮೀನು
Fraud; ಯುವಕರು, ಸ್ತ್ರೀಯರನ್ನು ಗುರಿಯಾಗಿಸಿ ಹೂಡಿಕೆ ವಂಚನೆ: ಕೇಂದ್ರ ಎಚ್ಚರಿಕೆ
Horoscope: ಉದ್ಯೋಗ,ವ್ಯವಹಾರ ಎರಡರಲ್ಲೂ ಯಶಸ್ಸು,ಅನಾದರದ ಮಾತುಗಳಿಗೆ ಪ್ರತಿಕ್ರಿಯೆ ತೋರದಿರಿ
Kasaragod: ಯೂತ್ ಕಾಂಗ್ರೆಸ್ ಕಾರ್ಯಕರ್ತರಿಬ್ಬರ ಕೊಲೆ; ಇಂದು ಶಿಕ್ಷೆ ಪ್ರಮಾಣ ಘೋಷಣೆ
Karnataka Govt.,: ಹೊಸ ಗೋಶಾಲೆ ಇಲ್ಲ, ಇರುವುದಕ್ಕೆ ಬಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.