BBK11: ಮಂಜು – ಮೋಕ್ಷಿತಾಳ ಮುನಿಸಿಗೆ ಫುಲ್ ಸ್ಟಾಪ್ ಇಟ್ಟ ತನಿಷಾ
Team Udayavani, Dec 9, 2024, 11:01 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಫೇಕ್ ಎಲಿಮಿನೇಷನ್ ನಡೆದಿದೆ. ಕನ್ಫೆಷನ್ ರೂಮ್ ನಲ್ಲಿದ್ದ ಚೈತ್ರಾ ಅವರನ್ನು ಕೆಲ ಸಮಯದ ಬಳಿಕ ವಾಪಾಸ್ ದೊಡ್ಮನೆ ಕರೆಸಿಕೊಳ್ಳಲಾಗಿದೆ.
ಎರಡನೇ ಅವಕಾಶವನ್ನು ಸಮರ್ಪಕವಾಗಿ ಬಳಸಿಕೊಳ್ಳಿ ಎಂದು ಬಿಗ್ ಬಾಸ್ ಚೈತ್ರಾ ಅವರನ್ನು ಒಳಗೆ ಕರೆಸಿಕೊಳ್ಳಲಾಗಿದೆ.
ನನಗೆ ಗೊತ್ತಿತ್ತು. ಇದಕ್ಕೇನು ಸನ್ಮಾನ ಮಾಡಬೇಕಾ ಎಂದು ಮಂಜು ಅವರು ವ್ಯಂಗ್ಯವಾಗಿ ಮಾತನಾಡಿದ್ದಾರೆ. ಬಿಗ್ ಇವರನ್ನು ಕಳಿಸೋದು ಕಳಿಸಿದ್ದೀರಿ ಬಾಯಿಗೆ ಟೇಪ್ ಹಾಕಿಕೊಂಡು ಕಳುಹಿಸಬೇಕಿತ್ತು ಎಂದು ಭವ್ಯ ಚೈತ್ರಾ ಅವರ ಬಗ್ಗೆ ಹೇಳಿದ್ದಾರೆ.
ಫೈಯರ್ ಬ್ರ್ಯಾಂಡ್ ಇಸ್ ಬ್ಯಾಕ್ ಎಂದು ಚೈತ್ರಾ ಅವರು ಕುಣಿದಾಡುತ್ತಾ ಮನೆಯೊಳಗೆ ಬಂದಿದ್ದಾರೆ.
‘ಸಮಯದ ಸುಳಿ’ ಎನ್ನುವ ಟಾಸ್ಕ್ ನ್ನು ಮನೆಮಂದಿಗೆ ನೀಡಿದ್ದಾರೆ. ಇದರಂತೆ ಮನೆಮಂದಿಗೆ ವಿವಿಧ ಸನ್ನಿವೇಶಗಳನ್ನು ನೀಡಲಾಗಿದೆ. ಸ್ಪರ್ಧಿಗಳು ತಮಗೆ ಕೊಟ್ಟಿರುವ ಜವಾಬ್ದಾರಿಯನ್ನು ನೀಡಲಾಗಿದೆ.
ರಜತ್ ಅವರು ಐಶ್ವರ್ಯಾ ಅವರ ಮನಸ್ಸನ್ನು ಗೆಲ್ಲುವ ಪ್ರಯತ್ನವನ್ನು ಮಾಡಿದ್ದಾರೆ. ಆ ಮೂಲಕ ಶಿಶಿರ್ ಅವರ ಹೊಟ್ಟೆ ಉರಿಸಿದ್ದಾರೆ.
ಭವ್ಯ ಅವರು ತ್ರಿವಿಕ್ರಮ್ ಅವರ ಬೆನ್ಮಿಗೆ ಮಸಾಜ್ ಮಾಡಿದ್ದು, ಇದನ್ನು ನೋಡಿ ಐಶ್ವರ್ಯಾ ಶಾಕ್ ಆಗಿದ್ದಾರೆ.
ಮಂಜು ಅವರು ಮಲಗಿದ್ದು ಇದನ್ನು ನೋಡಿ ಮೋಕ್ಷಿತಾ ಕ್ಯಾಪ್ಟನ್ ಆದವರು ಎಲ್ಲರಿಗೂ ಒಂದು ನಿಯಮ ಇದೆ. ಆದರೆ ಇವರು ಹಣ್ಣು ತಂದು ಕೊಡುತ್ತಿದ್ದಾರೆ ಎಂದು ಚರ್ಚೆ ಮಾಡಿದ್ದಾರೆ. ಆ ಮೂಲಕ ತಮಗೆ ಕೊಟ್ಟ ಟಾಸ್ಕ್ ಜವಾಬ್ದಾರಿಯನ್ನು ನಿಭಾಯಿಸಿದ್ದಾರೆ.
ಬಿಗ್ ಬಾಸ್ ಮನೆಗೆ ಸೀಸನ್ 10 ಸ್ಪರ್ಧಿಗಳು ಎಂಟ್ರಿ:
ಬಿಗ್ ಬಾಸ್ ಮನೆಗೆ ಸೀಸನ್ 10ನಲ್ಲಿ ಜನಪ್ರಿಯರಾದ ಡ್ರೋನ್ ಪ್ರತಾಪ್, ತನಿಷಾ, ತುಕಾಲಿ ಸಂತು ಹಾಗೂ ವರ್ತೂರು ಸಂತೋಷ್ ಅವರು ಎಂಟ್ರಿ ಕೊಟ್ಟಿದ್ದಾರೆ.
ಕುಣಿದಾಡುತ್ತಲೇ ಪ್ರತಾಪ್ ಅವರು ದೊಡ್ಮನೆಯೊಳಗೆ ಬಂದಿದ್ದಾರೆ. ಕಳೆದ ಸೀಸನ್ ನಲ್ಲಿದ್ದ ನಾಮಿನೇಷನ್ ಟಾಸ್ಕ್ ಪ್ರತಾಪ್ ಅವರ ಮುಂದೆ ನಡೆದಿದೆ.
ತ್ರಿವಿಕ್ರಮ್, ರಜತ್ ಹಾಗೂ ಶಿಶಿರ್ ಅವರಿಗೆ ಈ ಟಾಸ್ಕ್ ನೀಡಲಾಗಿದೆ. ಬಲೂನ್ ಗಳನ್ನು ಒಡೆದು ನಾಮಿನೇಷನ್ ಪಾಸ್ ಹುಡುಕಬೇಕು.
ಮೊದಲೇ ನಾಮಿನೇಷನ್ ಪಾಸ್ ತ್ರಿವಿಕ್ರಮ್ ಅವರಿಗೆ ಸಿಕ್ಕಿದೆ. ಎರಡನೇ ನಾಮಿನೇಷನ್ ಪಾಸ್ ಕೂಡ ತ್ರಿವಿಕ್ರಮ್ ಅವರಿಗೆಯೇ ಸಿಕ್ಕಿದೆ. ಇದರಲ್ಲಿ ಒಂದು ಪಾಸ್ ನ್ನು ರಜತ್ ಅವರಿಗೆ ತ್ರಿವಿಕ್ರಮ್ ಅವರು ನೀಡಿದ್ದಾರೆ.
ಹನುಮಂತು ಅವರನ್ನು ರಜತ್ ಪಾಸ್ ಬಳಸಿ ನಾಮಿನೇಷನ್ ಮಾಡಿದ್ದಾರೆ. ಶಿಶಿರ್ ಅವರ ಹೆಸರನ್ನು ಸಹ ನಾಮಿನೇಷನ್ ಗೆ ಬಳಸಿದ್ದಾರೆ.
ತ್ರಿವಿಕ್ರಮ್ ಅವರು ಧನರಾಜ್ ಹಾಗೂ ಚೈತ್ರಾ ಅವರ ಹೆಸರನ್ನು ನಾಮಿನೇಷನ್ ಗೆ ತೆಗೆದುಕೊಂಡಿದ್ದಾರೆ.
ಕಳೆದ ಸೀಸನ್ ಫೈಯರ್ ಬ್ರ್ಯಾಂಡ್ ತನಿಷಾ ಅವರು ಆಗಮಿಸಿ ಉಳಿದಿ ನಾಮಿನೇಷನ್ ಪ್ರಕ್ರಿಯೆಯನ್ನು ಮಾಡಿಸಿದ್ದಾರೆ.
ಮಂಜು – ಮೋಕ್ಷಿತಾ ಅವರನ್ನು ಮನವೊಲಿಸಿ ಅವರಿಬ್ಬರನ್ನು ಒಂದು ಮಾಡಿಸುವ ಪ್ರಯತ್ನ ಮಾಡಿದ್ದಾರೆ. ಮಂಜು ಅವರು ಮೋಕ್ಷಿತಾ ಅಪ್ಪುಗೆ ನೀಡಿದ್ದಾರೆ.
ಮಂಜು ಅವರು ಧನರಾಜ್ ಹಾಗೂ ಶಿಶಿರ್ ಅವರನ್ನು ನಾಮಿನೇಟ್ ಮಾಡಿದ್ದಾರೆ.
ಶಿಶಿರ್ ಅವರು ನಾಮಿನೇಟ್ ವಿಚಾರಕ್ಕೆ ಮಂಜು ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.
ಮೋಕ್ಷಿತಾ ಅವರು ತ್ರಿವಿಕ್ರಮ್ ಹಾಗೂ ಭವ್ಯ ಅವರನ್ನು ನಾಮಿನೇಟ್ ಮಾಡಿದ್ದಾರೆ.
ತುಕಾಲಿ ಸಂತು ಅವರು ಉಳಿದ ನಾಮಿನೇಷನ್ ಪ್ರಕ್ರಿಯೆಯನ್ನು ಮುಂದುವರೆಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Naxal: ತನಿಖೆ ನಡೆಸಿ ಪ್ಯಾಕೇಜ್ ನೀಡಬೇಕು,ಇಲ್ಲದಿದ್ದರೇ ಪ್ಯಾಕೇಜ್ ನೀಡುವುದರಲ್ಲಿ ಅರ್ಥವಿಲ್ಲ
AAP MLA: ಗುಂಡೇಟಿನಿಂದ ಎಎಪಿ ಶಾಸಕ ಗುರುಪ್ರೀತ್ ಗೋಗಿ ಸಾ*ವು… ಕುಟುಂಬಸ್ಥರು ಹೇಳಿದ್ದೇನು?
Gangavati: ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಜಯಪ್ರಸಾದ್ ಅಮಾನತು
Udyavara: ಟ್ರಕ್ ಗೆ ಢಿಕ್ಕಿ ಹೊಡೆದು ಬೈಕ್ ಸವಾರ ಮೃತ್ಯು ; ಟ್ರಕ್ ಬೆಂಕಿಗೆ ಆಹುತಿ
Chikkamagaluru: ನಕ್ಸಲರ ಶರಣಾಗತಿ ಬೆನ್ನಲ್ಲೇ ಶಸ್ತ್ರಾಸ್ತ್ರ ವಶಪಡಿಸಿಕೊಂಡ ಪೊಲೀಸರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.