BBK11: ಎದ್ದು ಬಿದ್ದು ಟಾಸ್ಕ್ ಸೋತ ಹನುಮಂತು: ರಿಯಲ್ ಹುಲಿ ನೀವೇ ಎಂದ ಸಹಸ್ಪರ್ಧಿ
Team Udayavani, Nov 7, 2024, 11:05 PM IST
ಬೆಂಗಳೂರು: ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ಸಿಗಾಗಿ ಹೋರಾಟ ಶುರುವಾಗಿದೆ. ಈ ವಾರ ಮನೆಗೆ ಹೊಸ ಕ್ಯಾಪ್ಟನ್ ಸಿಕ್ಕಿದ್ದಾರೆ.
ಇಲ್ಲಿ ನಡೆಯುತ್ತಿದೆ ಅದಕ್ಕೆ ನೀವೇ ಕಾರಣ. ನೀವು ಹೀಗೆ ಮಾಡಿಯೇ ನಮ್ಮನ್ನು ಆಚೆ ಕಳುಹಿಸಬೇಕು ಅನ್ಕೊಂಡಿದ್ದೀರಿ. ನಿಮಗೆ ಬೇಜಾರ್ ಆದ್ರು ಪರವಾಗಿಲ್ಲ ಎಂದು ಮೋಕ್ಷಿತಾ ಮಂಜುಗೆ ಹೇಳಿದ್ದಾರೆ.
ನಾನಂತೂ ಬರಲ್ಲ ಮಂಜಣ್ಣ, ಅಲ್ಲಿ ಕೂತ್ಕುಂಡು ಮಾತನಾಡೋಕೆ ಬರಲ್ಲ ಅಷ್ಟೇ. ಇನ್ಮುಂದೆ ನನ್ನ ನಿರ್ಧಾರವೇ ಬೇರೆ ಆಗಿದೆ. ನಮ್ಮ ನಡುವೆ ಇರುವ ಅಣ್ಣ – ತಂಗಿ ಬಾಂಡ್ ಇರುವಷ್ಟು ನಮ್ಮ ನಿರೀಕ್ಷೆಗಳು ಬೇರೇ ಥರ ಇರುತ್ತದೆ. ಅದೆಲ್ಲದಕ್ಕೂ ಫುಲ್ ಸ್ಟಾಪ್ ಅಷ್ಟೇ. ಇದೆಲ್ಲ ಇವತ್ತೇ ಮುಗೀತು. ಗೊತ್ತಿಲ್ಲ ಈ ವಾರ ಏನು ಆಗುತ್ತದೆ ಅಂಥ. ನಾವು ಫ್ಲೆಶ್ ಔಟ್ ಆಗುತ್ತೇವೆ ಅಂಥ ಮಾತು ಬಂದದ್ದೇ ನಿಮ್ಮಿಂದ. ಇದೆಲ್ಲ ನನಗೆ ನಿಮ್ಮ ಬಳುವಳಿ ಅಷ್ಟೇ ಎಂದು ಮೋಕ್ಷಿತಾ ಮಂಜು ಅವರ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಆದರೆ ಆ ಬಳಿಕ ಮೂವರು ಗೇಮ್ ಬಗ್ಗೆ ಮಾತನಾಡಿದ್ದಾರೆ. ಗೇಮ್ ವಿಚಾರದಲ್ಲಷ್ಟೇ ಈ ರೀತಿ ಆಯಿತು ಎಂದು ಮಂಜು ಹೇಳಿದ್ದು, ಮೋಕ್ಷಿತಾ ಅವರಿಗೆ ಗೌತಮಿ ಸಮಜಾಯಿಷಿ ನೀಡಿದ್ದಾರೆ.
ಕ್ಯಾಪ್ಟನ್ಸಿ ಓಟದಿಂದ ಹೊರಗಿಡುವ ಕುರಿತು ವೋಟ್ ನಡೆದಿದೆ. ಇಬ್ಬರಿಗೆ ಕ್ಯಾಪ್ಟನ್ ಆಗಲು ಅರ್ಹತೆ ಇಲ್ಲವೆಂದು ಸ್ಪರ್ಧಿಗಳು ಫೋಟೋ ಆಯ್ಕೆ ಮಾಡಿ ಕಾರಣ ಕೊಟ್ಟಿದ್ದಾರೆ.
ಧನರಾಜ್ ಅವರು ಅನುಷಾ ಅವರ ಹೆಸರು ಹೇಳಿದ್ದು, ಅನುಷಾ ನಿಮ್ಮಗಿಂತ ಜಾಸ್ತಿ ಅರ್ಹತೆ ನನಗಿದೆ ಎಂದಿದ್ದಾರೆ.
ಧನರಾಜ್ ರೂಲ್ಸ್ ಕಾರಣ ಕೊಟ್ಟು ಮೋಕ್ಷಿತಾ ಅವರ ಹೆಸರನ್ನು ಹೇಳಿದ್ದಾರೆ. ಇದಕ್ಕೆ ಗರಂ ಆದ ಮೋಕ್ಷಿತಾ ನೆಟ್ಟಗೆ ಒಂದು ನಿರ್ಧಾರ ತೆಗೆದುಕೊಳ್ಳೋಕೆ ಬರಲ್ಲ. ಏನಾದರೂ ಸೆನ್ಸ್ ಇದೆಯಾ ತಲೆಯಲ್ಲಿ. ಮತ್ತೆ ನೀವು ಕ್ಯಾಪ್ಟನ್, ನಿಮ್ಮಂಥವರು ಕ್ಯಾಪ್ಟನ್ ಎಂದಿದ್ದಾರೆ.
ಇನ್ನುಳಿದವರಲ್ಲಿ ಮಂಜು, ಗೌತಮಿ,ತಿವಿಕ್ರಮ್, ಮೋಕ್ಷಿತಾ ಧನರಾಜ್ ಅವರ ಹೆಸರು ಹೇಳಿದ್ದಾರೆ.
ಇನ್ನುಳಿವರಲ್ಲಿ ಹೆಚ್ಚಿನವರು ಧರ್ಮ ಅವರ ಹೆಸರು ಹೇಳಿ ಅವರು ಕ್ಯಾಪ್ಟನ್ ಆಗಲು ಅರ್ಹತೆಯಿಲ್ಲ ಎಂದು ಕಾರಣ ಕೊಟ್ಟು ಅಭಿಪ್ರಾಯ ಪಟ್ಟಿದ್ದಾರೆ.
ಚೈತ್ರಾ ಅವರು ಮಂಜು ಅವರಿಗೆ ಕಿಕ್ ಔಟ್ ಕಾರ್ಡ್ ಬಳಸಿದ ರೀತಿಗೆ ನಿಮ್ಮ ದುರಾಲೋಚನೆ ಎಂದಿದ್ದಾರೆ. ಇದಕ್ಕೆ ಮಂಜು ದುರಾಲೋಚನೆ ಎಲ್ಲರಲ್ಲೂ ಇದೆ. ನೀವು ಆಡಿ ಗೆದ್ದು ತೋರಿಸಿ ಸವಾಲು ಎಸೆದಂತೆ ಹೇಳಿದ್ದಾರೆ.
ನಾನಿಷ್ಟ ನಾನು ಆಡಿದೆ ಗೆದ್ದೆ. ನೀನ್ಯಾರು ಕೇಳೋಕೆ. ಫಿಸಿಕಲ್ ಟಾಸ್ಕ್ ಬಿಟ್ಟು ಬೇರೆ ಎಲ್ಲರಲ್ಲಿ ನೀನು ದಡ್ಡ ಎಂದು ತ್ರಿವಿಕ್ರಮ್ ಅವರಿಗೆ ಮಂಜು ಹೇಳಿದ್ದಾರೆ.
ಅಂತಿಮವಾಗಿ ಧರ್ಮ, ಮೋಕ್ಷಿತಾ ಅವರ ಫೋಟೋ ಉಳಿದಿದೆ.
ಧರ್ಮ ಆರು ವಾರ ಆಯಿತು. ಇನ್ನು ನೀವು ಒಳ್ಳೆಯವರಾಗಿ ಇರಬೇಡಿ. ಹೀಗೆ ಇದ್ರೆ ಕಿತ್ತುಕೊಂಡು ತಿನ್ನಿತ್ತಾರೆ ಎಂದು ಸಹ ಸ್ಪರ್ಧಿಗಳು ಧರ್ಮ ಅವರಿಗೆ ಹೇಳಿದ್ದಾರೆ.
ಕ್ಯಾಪ್ಟನ್ಸಿ ಟಾಸ್ಕ್ ಗಾಗಿ 7 ಮಂದಿ ಸೆಣಸಾಟ ನಡೆಸಿದ್ದಾರೆ. ಸುರೇಶ್ ಅವರ ಪರವಾಗಿ ಹನುಮಂತು ಆಡಿದ್ದಾರೆ. ಮೊದಲ ಸುತ್ತಿನಲ್ಲಿ ಮಂಜು ಅವರು ಹೊರಬಿದ್ದಿದ್ದಾರೆ. ಆ ಬಳಿಕ ಶಿಶಿರ್, ಅನುಷಾ, ಧನರಾಜ್ ಹಾಗೂ ಹನುಮಂತು ಹೊರಬಿದ್ದಿದ್ದಾರೆ.
ಹನುಮಂತು ಇತರೆ ಸ್ಪರ್ಧಿಗಳ ದಿಕ್ಕು ತಪ್ಪಿಸಿ ಸ್ಟಾಟ್ರಜಿ ಬಳಸಿ ಗೇಮ್ ಆಡಿದ್ದಾರೆ. ಕೊನೆಯ ಕ್ಷಣದಲ ಎಡವಿ ಬಿದ್ದಿದ್ದಾರೆ.
ಸುರೇಶ್ ಅವರ ಪರವಾಗಿ ಕ್ಯಾಪ್ಟನ್ಸಿ ಟಾಸ್ಕ್ ಆಡಿದ ಹನುಮಂತು ಅವರಿಗೆ ಮನೆಯವರಿಂದ ಪ್ರಶಂಸೆ ವ್ಯಕ್ತವಾಗಿದೆ. ಎಲ್ಲರಿ ಈ ರೀತಿ ಆಗಲ್ಲ ನಿನ್ನದು ನಿಷ್ಕಲಶ ಮನಸ್ಸು ಎಂದು ಮಂಜು ಹನುಮಂತುಗೆ ಹೇಳಿದ್ದಾರೆ.
ಕೆಲವರು ಹನುಮಂತು ಅವರದ್ದು ರಿಯಲ್ ಗೇಮ್ ಎಂದಿದ್ದಾರೆ. ಧನರಾಜ್ ಹನುಮಂತು ಅವರನ್ನು ನಿಜವಾದ ಹುಲಿ ನೀವೇ ಎಂದಿದ್ದಾರೆ.
ನಾಮಿನೇಟ್ ಅದವರು ಯಾರೆಲ್ಲ..
ಭವ್ಯ, ಚೈತ್ರಾ, ಧರ್ಮ, ತ್ರಿವಿಕ್ರಮ್ ,ಮೋಕ್ಷಿತಾ, ಸುರೇಶ್, ಧನರಾಜ್ ಅವರು ಈ ವಾರ ನಾಮಿನೇಟ್ ಆಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gurunandan: ಡಿ.27ಕ್ಕೆ ತೆರೆಗೆ ಬರುತ್ತಿಲ್ಲ ʼರಾಜು ಜೇಮ್ಸ್ ಬಾಂಡ್’ ಚಿತ್ರ
Nodidavaru Enanthare Movie: ನವೀನ್ ಶಂಕರ್ ಚಿತ್ರದ ಟೀಸರ್ ಬಂತು
BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ
Dhruva-Prem: ಡಿ.24ಕ್ಕೆ ʼಕೆಡಿʼ ಶಿವ ಶಿವ ಹಾಡು ರಿಲೀಸ್
Dhruva Sarja: ಪ್ರತಿ ಸಿನಿಮಾವೂ ನನಗೆ ಹೊಸ ಪಾಠ…: ಧ್ರುವ ಹೇಳಿದ್ದೇನು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Harapanahalli: ಪ್ರತಿಷ್ಠೆಯ ಕಣವಾದ ಬಿ90 ಸೊಸೈಟಿ ಚುನಾವಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.