ಬಿಳಿಗೆರೆ ಗ್ರಾಮವನ್ನು ಅಗ್ರಿಟೂರಿಸಂ ಯೋಜನೆಯಡಿ ಪ್ರವಾಸಿ ಕೇಂದ್ರ ಮಾಡಿ
Team Udayavani, Sep 10, 2020, 10:44 AM IST
ತಿಪಟೂರು: ಗ್ರಾಮ ಭಾರತದಲ್ಲೊಂದು ಮಾದರಿ ಗ್ರಾಮವಾಗಿರುವ ತಾಲೂಕಿನ ಬಿಳಿಗೆರೆ ಗ್ರಾಮ ಬಿಳಿಗೆರೆಯನ್ನು ಅಗ್ರಿಟೂರಿಸಂ ಯೋಜನೆಯಡಿ ಪ್ರವಾಸಿ ಕೇಂದ್ರವೆಂದು ಘೋಷಿಸಿ ಅಭಿವೃದ್ಧಿಪಡಿಸಬೇಕೆಂದು ತಾಲೂಕು ಕೃಷಿಕ ಸಮಾಜ¨ ಜಿಲ್ಲಾ ಪ್ರತಿನಿಧಿ ಕೆ.ಎಸ್.ಸದಾಶಿವಯ್ಯ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಪುರ ಯೋಜನೆ ಮಾಜಿ ರಾಷ್ಟ್ರಪತಿ ಎಪಿಜೆ ಅಬ್ದುಲ್ ಕಲಾಂ ಅವರ ಗ್ರಾಮೀಣಾಭಿವೃದ್ಧಿಯ ಅಮೋಘ ಪರಿಕಲ್ಪನೆಯಾಗಿದ್ದು, ನಗರ ಪ್ರದೇಶಗಳಿಗೆ ನೀಡುವ ಎಲ್ಲಾ ರೀತಿಯ ಮೂಲಭೂತ ಸೌಕ ರ್ಯಗಳ ನ್ನು ಗ್ರಾಮೀಣ ಪ್ರದೇಶಗಳ ಜೊತೆಗೆ ಒದಗಿಸುವ ಕಲಾಂರ ಮಹತ್ವಾಕಾಂಕ್ಷೆಯ ಚಿಂತನೆ ತಾಲೂಕಿನ ಬಿಳಿಗೆರೆ ಗ್ರಾಮದಲ್ಲಿ ಸಾಕಾರಗೊಂಡಿದೆ.
ಗ್ರಾಮದಲ್ಲಿ ಅಂಗನವಾಡಿ ಕೇಂದ್ರದಿಂದ ಹಿಡಿದು ಸರ್ಕಾರಿ ಪ್ರಾಥಮಿಕಶಾಲೆ,ಪ್ರೌಢಶಾಲೆ,ಬಿ.ಸಿ.ಎಂ ಹಾಸ್ಟೆಲ್ ಹಾಗೂ ಜೂನಿಯರ್ ಕಾಲೇಜ್‌ವರಗೆ ಶೈಕ್ಷಣಿಕ ಸೌಲಭ್ಯವಿದೆ. ಸರ್ಕಾರಿ ಗ್ರಂಥಾಲಯ, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ , ಪಶು ಆಸ್ಪತ್ರೆ, ಬ್ಯಾಂಕ್, ವಿದ್ಯುತ್ ಶಕ್ತಿ ಸೆಕ್ಷನ್ ಆಫೀಸ್, ಅಂಚೆ ಕಚೇರಿ, ರೈತ ಸಂಪರ್ಕ ಕೇಂದ್ರ, ರೈತೋಪಕರಣಗಳ ಬಾಡಿಗೆ ಕೇಂದ್ರ , ಗ್ರಾಮೀಣ ಕುಡಿಯುವ ನೀರಿನ ಘಟಕ, ಪ್ರಾಥಮಿಕ ಕೃಷಿ ಸಹಕಾರ ಸಂಘ, ಹಾಲು ಉತ್ಪಾದಕರ ಸಹಾಕಾರ ಸಂಘ, ಬಯಲು ರಂಗ ಮಂದಿರ, ಸಾರ್ವಜನಿಕ ವಿದ್ಯಾರ್ಥಿ ನಿಲಯ, ಗ್ರಾಮೀಣ ಅನಿಲ ವಿತರಣಾ ಕೇಂದ್ರ, ಗ್ರಾಪಂ ಕಾರ್ಯಾಲಯ ಸೇರಿದಂತೆ ಗ್ರಾಮಸೌಧದ ಸೌಲಭ್ಯಗಳಿವೆ.
ರಾಜ್ಯದಲ್ಲಿ ಕೃಷಿ ಹಾಗೂ ಗ್ರಾಮೀಣಾ ಭಿವೃದ್ಧಿಗೆ ಪ್ರವಾಸೋದ್ಯಮ ಸ್ಪರ್ಶ ನೀಡಲು ಅಗ್ರಿ ಟೂರಿಸಂ ಯೋಜನೆ ರೂಪಿಸಲು ರಾಜ್ಯ ಸರ್ಕಾರ ಚಿಂತಿಸುತ್ತಿದ್ದು, ಮುಖ್ಯಮಂತ್ರಿಗ ಳು ಬಿಳಿಗೆರೆಯನ್ನು ಪ್ರವಾಸಿ ಕೇಂದ್ರವೆಂದು ಘೋಷಿಸಿ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕೆಂದು ಕೆ.ಎಸ್.ಸದಾಶಿವಯ್ಯ ಮನವಿ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress: ಸರಕಾರ ಕನ್ನಡದ ಅಭಿವೃದ್ಧಿಯನ್ನೂ ಶೂನ್ಯವಾಗಿಸಲು ಹೊರಟಿದೆ: ಬಿ.ವೈ.ವಿಜಯೇಂದ್ರ
Mandya: ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ಗಲಾಟೆ: ಪೊಲೀಸರೊಂದಿಗೆ ಮಾತಿನ ಚಕಮಕಿ!
Jayadeva Hospital ಉದ್ಘಾಟನಾ ಸಮಾರಂಭದಿಂದ ದೂರ ಉಳಿದ ಸಚಿವ ಪ್ರಿಯಾಂಕ್ ಖರ್ಗೆ
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Remark Case: ನನ್ನ ಬಂಧನ ಪ್ರಕರಣ ನ್ಯಾಯಾಂಗ ತನಿಖೆಯಾಗಲಿ: ಎಂಎಲ್‌ಸಿ ಸಿ.ಟಿ.ರವಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.