ಬಯೋತೆರಪ್ಯುಟಿಕ್ಸ್ ಕ್ಷೇತ್ರಕ್ಕೀಗ ಆದ್ಯತೆ: ಬಗಾರಿಯಾ
ಮಣಿಪಾಲದ ಎಂಸಿಬಿಆರ್ ಉದ್ಘಾಟನೆ
Team Udayavani, Oct 17, 2021, 5:23 AM IST
ಉಡುಪಿ: ಕಳೆದ 40 ವರ್ಷಗಳಲ್ಲಿ ಬಯೋತೆರಪ್ಯುಟಿಕ್ಸ್ ಪ್ರಮುಖ ಕ್ಷೇತ್ರವಾಗಿ ಹೊರ ಹೊಮ್ಮುತ್ತಿದೆ ಎಂದು ಬೆಂಗಳೂರಿನ ಕೆಮ್‌ವೆಲ್ ಬಯೋಫಾರ್ಮ ಅಧ್ಯಕ್ಷ, ಸಿಇಒ ಅನುರಾಗ ಬಗಾರಿಯಾ ಹೇಳಿದರು.
ಶುಕ್ರವಾರ ಮಣಿಪಾಲ ಮಾಹೆಯ ಮಣಿಪಾಲ್ ಸೆಂಟರ್ ಫಾರ್ ಬಯೋತೆರಪ್ಯುಟಿಕ್ಸ್ ರಿಸರ್ಚ್ (ಎಂಸಿಬಿಆರ್) ಉದ್ಘಾಟಿಸಿ ಅವರು ಮಾತನಾಡಿದರು.
ಅಭಿವೃದ್ಧಿ ಹೊಂದಿದ ದೇಶಗಳ ಲ್ಲಿರುವ ವಿ.ವಿ.ಗಳು ಮಾಡುತ್ತಿರುವ ಬಯೋತೆರಪ್ಯುಟಿಕ್ಸ್ ಸಂಶೋಧನೆಗೆ ಮಾಹೆ ಕಾಲಿಟ್ಟಿರುವುದು ಸಂತೋಷ ತರುತ್ತಿದೆ. ಜಗತ್ತಿನ ಮುಂಚೂಣಿ ಕೇಂದ್ರವಾಗಿ ಈ ಕೇಂದ್ರ ಮೂಡಿ ಬರಲಿದೆ ಎಂಬ ವಿಶ್ವಾಸವಿದೆ ಎಂದು ಬಗಾರಿಯಾ ಹೇಳಿದರು.
ಸೆಲ್ ತೆರಪಿ, ಜೀನ್ ತೆರಪಿ, ಪ್ರೊಟೀನ್ ತೆರಪಿ, ಬಯೋಮೆಟೀರಿ ಯಲ್ಸ್ ಇತ್ಯಾದಿ ಕ್ಷೇತ್ರಗಳ ಮೇಲೆ ಆಧುನಿಕ ವೈದ್ಯ ವಿಜ್ಞಾನ ಗಮನ ಹರಿಸುತ್ತಿದೆ. ಬಯೋತೆರಪ್ಯುಟಿಕ್ಸ್ ಸಂಶೋಧನೆಗೆ ದೀರ್ಘ ಇತಿಹಾಸವಿದೆ. ಸೆಲ್ ಮತ್ತು ಜೀನ್ ತೆರಪಿ ಮೂಲಕ ಬಯೋತೆರಪ್ಯುಟಿಕ್ಸ್ ಸಂಶೋಧನೆಯಲ್ಲಿ ಕೆಲವು ಕಾಯಿಲೆಗಳನ್ನು ವಾಸಿ ಮಾಡಬಹುದಾಗಿದೆ. ಶೈಕ್ಷಣಿಕ ಮತ್ತು ಕೈಗಾರಿಕಾ ಸಹಭಾಗಿತ್ವವಿಲ್ಲದೆ ಇದಾವುದೂ ಸಾಧ್ಯವಿಲ್ಲ ಎಂದರು.
ಫಾರ್ಮ ಕೈಗಾರಿಕೆಯಲ್ಲಿ ಬಯೋತೆರಪ್ಯುಟಿಕ್ಸ್ ಕ್ಷೇತ್ರ ವೇಗವಾಗಿ ಬೆಳೆ ಯುತ್ತಿದೆ. ಇದಕ್ಕೆ ಸೆಲ್ ತೆರಪಿಗಳಲ್ಲಿ ಆಳವಾದ ಅಧ್ಯಯನ ಸಾಗಬೇಕು ಎಂದು ಎಂಇಎಂಜಿ ಅಧ್ಯಕ್ಷ ಡಾ| ರಂಜನ್ ಆರ್. ಪೈ ಹೇಳಿದರು.
ಮಾಹೆ ಟ್ರಸ್ಟ್ ಟ್ರಸ್ಟಿ ವಸಂತಿ ಆರ್. ಪೈ ವೆಬ್‌ಪೇಜ್ ಬಿಡುಗಡೆಗೊಳಿಸಿದರು. ಅತ್ಯಾಧುನಿಕ ಸೌಕರ್ಯದೊಂದಿಗೆ ಬಯೋ ತೆರಪ್ಯುಟಿಕ್ಸ್ ಸುಧಾರಿತ ಸಂಶೋಧನೆ ನಡೆಯಲಿದೆ ಎಂದು ಮಾಹೆ ಸಹಕುಲಾಧಿಪತಿ ಡಾ| ಎಚ್.ಎಸ್. ಬಲ್ಲಾಳ್ ಹೇಳಿದರು.
ಇದನ್ನೂ ಓದಿ: ಅಪರಾಧಿಯನ್ನು ಸಾರ್ವಜನಿಕವಾಗಿ ನೇಣಿಗೇರಿಸುವುದಿಲ್ಲ: ತಾಲಿಬಾನ್
ಎಂಸಿಬಿಆರ್ ಸಂಶೋಧನೆ ಮೂಲಕ ಡಾಕ್ಟರಲ್ ಮತ್ತು ಪೋಸ್ಟ್ ಡಾಕ್ಟರಲ್ ಕೋರ್ಸ್‌ಗಳನ್ನು ಆರಂಭಿಸಲಿದೆ. ಬಯೋ ತೆರಪ್ಯುಟಿಕ್ಸ್ ಉತ್ಪನ್ನಗಳನ್ನು ಉತ್ಪಾದಿಸುವ ಗುರಿ ಇದೆ ಎಂದು ಕುಲಪತಿ ಲೆ|ಜ|ಡಾ| ಎಂ.ಡಿ. ವೆಂಕಟೇಶ್ ಹೇಳಿದರು.
ನಾವು ಬಯೋಫಾರ್ಮ ಕಂಪೆನಿಗಳ ಪಾಲುದಾರಿಕೆಯಲ್ಲಿ ಅತಿ ಕಡಿಮೆ ದರದಲ್ಲಿ ಉತ್ಪನ್ನಗಳನ್ನು ಉತ್ಪಾದಿಸಬಹುದು ಎಂದು ಮಾಹೆ ಕಾರ್ಪೊರೆಟ್ ರಿಲೇಶನ್ಸ್ ನಿರ್ದೇಶಕ, ಎಂಸಿಬಿಆರ್ ಸಮನ್ವಯಕಾರ ಡಾ| ರವಿರಾಜ ಎನ್.ಎಸ್. ಹೇಳಿದರು.
ಡಿಬಿಟಿ ವೆಲ್‌ಕಂ ಟ್ರಸ್ಟ್ ಇಂಡಿಯ ಅಲಯನ್ಸ್ ಸಿಇಒ ಡಾ| ವಾಸನ್ ಸಂಬಂಧಮೂರ್ತಿ, ಸಿಪ್ಲಾ ಲಿ. ಉಪಾಧ್ಯಕ್ಷ, ಆರ್ ಆ್ಯಂಡ್ ಡಿ ಕ್ಲಿನಿಕಲ್ ಹೆಡ್ ಡಾ| ಮುಖೇಶ್ ಕುಮಾರ್, ಸ್ಟೆಂಪ್ಯುಟಿಕ್ಸ್ ರಿಸರ್ಚ್ ಪ್ರೈ.ಲಿ. ಎಂಡಿ ಮತ್ತು ಸಿಇಒ ಮನೋಹರ್ ಬಿ.ಎನ್. ಆರ್‌ಸಿಆರ್‌ಐ ಸಹಸ್ಥಾಪಕ ಡಾ| ಸಾಯಿರಾಮ್ ಅತ್ಲುರಿ, ಸ್ವಿಜರ್‌ಲ್ಯಾಂಡ್‌ನ ಕ್ಯೂರಿಯೋ ಬಯೋಟೆಕ್ ಲ್ಯಾಬ್ ಹೆಡ್ ಡಾ| ರೋಬರ್ಟೊ ಸಾಲ್ವಿ ಶುಭ ಕೋರಿದರು. ಎಂಸಿಬಿಆರ್ ಪ್ರಾಧ್ಯಾಪಕ ಡಾ| ಸಚಿನ್ ಕದಂ ಕಾರ್ಯಕ್ರಮ ನಿರ್ವಹಿಸಿ ಡಾ| ಮಂಜುನಾಥ ವಂದಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.