2024ಕ್ಕೆ BJP ಧೂಳೀಪಟ ಶತಃಸಿದ್ಧ: ನಿತೀಶ್
* ಪ್ರತಿಪಕ್ಷಗಳ ಒಕ್ಕೂಟಕ್ಕೆ ಕೇಂದ್ರ ಬೆದರಿದೆ ಎಂದ ಬಿಹಾರ ಸಿಎಂ ನಿತೀಶ್
Team Udayavani, Aug 12, 2023, 5:13 AM IST
ಪಾಟ್ನಾ: ಪ್ರತಿಪಕ್ಷಗಳ ಒಕ್ಕೂಟ ಐಎನ್‌ಡಿಐಎ (ಇಂಡಿಯಾ) ರಚನೆಯಾದಾಗಿನಿಂದ ಬಿಜೆಪಿ ಭಯದಲ್ಲೇ ಇದೆ. ಈ ಭಯ ನಿಜವಾಗಲಿದ್ದು, 2024ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಹಾರದಲ್ಲಿ ಬಿಜೆಪಿ ಧೂಳೀಪಟವಾಗಲಿದೆ ಎಂದು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿತ್ತಿದ್ದ ವೇಳೆ ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸೋಲಬಹುದೆಂದು ನೀವು ಏನಾದರೂ ಊಹಿಸಿದ್ದೀರಾ ಎಂದು ಪ್ರಶ್ನಿಸಲಾಗಿದೆ. ಈ ವೇಳೆ ಪ್ರತಿಕ್ರಿಯಿಸಿ ನಿತೀಶ್, ಖಂಡಿತವಾಗಿಯೂ ಹೌದು! ನಾವೆಲ್ಲರೂ ದೇಶದ ಒಳಿತಿಗಾಗಿ ಕೈಜೋಡಿಸಿ ಒಕ್ಕೂಟ ಕಟ್ಟಿದ್ದೇವೆ. ಆದರೆ, ಬಿಜೆಪಿಯ ಜತೆಗೆ ಈಗಿರುವ ಕೆಲ ಪಕ್ಷಗಳು ಭಯದಿಂದ ಮಾತ್ರವೇ ಅವರೊಟ್ಟಿಗಿವೆ. ಒಂದು ಬಾರಿ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆ ಪಕ್ಷಗಳೂ ಈ ಕಡೆಗೆ ಬರಲಿವೆ ಎಂಬುದು ಬಿಜೆಪಿಗೆ ತಿಳಿದಿಲ್ಲ ಎಂದಿದ್ದಾರೆ.
ಅಲ್ಲದೇ, ಮಣಿಪುರ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸುವ ಮೂಲಕ ಕೇಂದ್ರಸರ್ಕಾರದ ವೈಫಲ್ಯವನ್ನು ಎತ್ತಿತೋರಿಸುವ ಕೆಲಸವನ್ನು ಪ್ರತಿಪಕ್ಷಗಳು ಮಾಡಿವೆ. ಬಿಜೆಪಿ ಕೇವಲ ಪ್ರಚಾರದ ಬಗ್ಗೆ ಗಮನಹೊಂದಿದೆಯೇ ಹೊರತು ದೇಶದ ಅಭಿವೃದ್ಧಿಯ ಬಗ್ಗೆ ಅಲ್ಲ ಎಂಬುದು ದೇಶದ ಜನರಿಗೆ ತಿಳಿದಿದೆ ಎಂದೂ ನಿತೀಶ್ ಹೇಳಿದ್ದಾರೆ.
ರಾಗಾಗೆ ಯುವತಿಯರ ಕೊರತೆ ಇಲ್ಲ
ಸಂಸತ್‌ನಲ್ಲಿ ರಾಹುಲ್ ಫ್ಲೈಯಿಂಗ್ ಕಿಸ್ ನೀಡಿದ್ದರೆಂದು ಸಚಿವೆ ಸ್ಮತಿ ಇರಾನಿ ಆರೋಪಿಸಿ, ಈ ವಿಚಾರ ವಿವಾದಕ್ಕೆ ಗುರಿಯಾಗಿರುವ ನಡುವೆಯೇ, ಬಿಹಾರದ ಶಾಸಕಿಯೊಬ್ಬರು ರಾಹುಲ್ ಅವರನ್ನು ಸಮರ್ಥಿಸಿ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿದ್ದಾರೆ. ಶಾಸಕಿ ನೀತು ಸಿಂಗ್, ವಿಡಿಯೊ ಒಂದರಲ್ಲಿ ರಾಹುಲ್ ಗಾಂಧಿ ಅವರಿಗೆ ಯುವತಿಯರಿಗೆ ಬರವಿಲ್ಲ, ಫ್ಲೈಯಿಂಗ್ ಕಿಸ್ ನೀಡುವುದಾದರೂ ಯುವತಿಯರಿಗೆ ನೀಡುತ್ತಿದ್ದರು. ಆ 50 ವರ್ಷದ ಹೆಂಗಸಿಗಲ್ಲ, ಇದೆಲ್ಲವೂ ಆಧಾರವಿಲ್ಲದ ಆರೋಪ ಎಂದಿದ್ದಾರೆ. ಈ ಬಗ್ಗೆ ಬಿಜೆಪಿಗರು ಕಿಡಿ ಕಾರಿ, ರಾಹುಲ್ ದುಷ್ಕೃತ್ಯವನ್ನೂ ಸ್ವತಃ ಪಕ್ಷದ ಮಹಿಳೆಯರೇ ಸಮರ್ಥಿಸಿಕೊಳ್ಳುತ್ತಾರೆ ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ನನ್ನ ಮಾರ್ಗದರ್ಶಕರನ್ನು ಕಳೆದುಕೊಂಡಿದ್ದೇನೆ… ಮಾಜಿ ಪ್ರಧಾನಿ ನಿಧನಕ್ಕೆ ರಾಹುಲ್ ಸಂತಾಪ
Patna: “ರಘುಪತಿ ರಾಘವ’ ಭಜನೆ ಹಾಡಿದ ಗಾಯಕಿ ವಿರುದ್ಧ ಪ್ರತಿಭಟನೆ: ಹಾಡುಗಾರ್ತಿ ಕ್ಷಮೆ
Canada: ಮಾನವ ಕಳ್ಳಸಾಗಣೆಯಲ್ಲಿ ಕೆನಡಾದ 260 ಕಾಲೇಜು! ವಿದ್ಯಾರ್ಥಿ ವೀಸಾ ಮೂಲಕ ಆಮಿಷ
Accidental Prime Minister: ದ ಮೇಕಿಂಗ್ ಆ್ಯಂಡ್ ಅನ್‌ಮೇಕಿಂಗ್ ಆಫ್ ಡಾ.ಸಿಂಗ್
Tribute Dr.Singh: ಡಾ.ಸಿಂಗ್ ಅವಧಿಯಲ್ಲಿ ಭಾರತ-ಅಮೆರಿಕ ನಡುವೆ ಅಣ್ವಸ್ತ್ರ ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಆನಂದಪುರ: ಬೆಳ್ಳಂಬೆಳಗ್ಗೆ ತೋಟಕ್ಕೆ ಕಾಡಾನೆಗಳ ಲಗ್ಗೆ… ಗ್ರಾಮಸ್ಥರಲ್ಲಿ ಆತಂಕ
ಕೋಳಿ ಅಂಕಕ್ಕೆ ಪೊಲೀಸ್ ದಾಳಿ: ಗುರಿಕಾರರಿಂದ ವ್ಯಾಘ್ರ ಚಾಮುಂಡಿ ದೈವಕ್ಕೆ ಮೊರೆ
National Mourning: ಮಂಗಳೂರಿನ ಬೀಚ್ ಉತ್ಸವ ಮುಂದೂಡಿಕೆ
Clown Kohli: ವಿರಾಟ್ ಕೊಹ್ಲಿಗೆ ಅವಮಾನ ಮಾಡಿದ ಆಸೀಸ್ ಮಾಧ್ಯಮಗಳು!
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: 16 ವರ್ಷದ ಬಾಲಕ ಮೃತ್ಯು, ಮೃತರ ಸಂಖ್ಯೆ 3ಕ್ಕೆ ಏರಿಕೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.