8 ತಿಂಗಳಲ್ಲಿ ಬಿಜೆಪಿ ಸರ್ಕಾರ ಬೀಳುತ್ತೆ : ತಂಗಡಗಿ
Team Udayavani, Aug 20, 2019, 5:28 PM IST
- ವಿಷ ಕುಡಿದು ಬಿಜೆಪಿ ಅಧಿಕಾರ ಹಿಡಿದಿದೆ
- ಹೈಕ ಭಾಗಕ್ಕೆ ಕೇವಲ ಒಂದೇ ಸಚಿವ ಸ್ಥಾನ
- ಆಪರೇಷನ್ ಕಮಲ ಸಿಬಿಐ ತನಿಖೆಯಾಗಲಿ
ಕೊಪ್ಪಳ: ರಾಜ್ಯದಲ್ಲಿ ಅಧಿಕಾರ ಹಿಡಿದಿರುವ ಬಿಜೆಪಿ ಸರ್ಕಾರಕ್ಕೆ ಆಯುಸ್ಸು ತುಂಬ ಕಡಿಮೆಯಿದೆ. ಇನ್ನೂ 6-8 ತಿಂಗಳಲ್ಲಿ ಬೀಳಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಅವರು ಭವಿಷ್ಯ ನುಡಿದಿದ್ದಾರೆ.
ಕೊಪ್ಪಳದಲ್ಲಿ ಸುದ್ದಿಗೋಷ್ಠಿ ನಡೆಸಿ ಅವರು ಮಾತನಾಡಿ, ಬಿಜೆಪಿ ಸರ್ಕಾರ ಅಧಿಕಾರಕ್ಕೇರಲು ಬೆಳಗಾವಿ ಜಾರಕಿಹೊಳಿ ಅವರು ಕಾರಣಿಕರ್ತರು. ಆದರೆ, ಬಿಎಸ್‌ವೈ ಅವರು ಜಾರಕಿಹೊಳಿ ಕುಟುಂಬಕ್ಕೂ ಮಂತ್ರಿಗಿರಿ ಕೊಟ್ಟಿಲ್ಲ. ಬೆಳಗಾವಿ ಸಹಯೋದರರು ನೆರೆ ಸಂದರ್ಭದಲ್ಲಿ ಬಿಜೆಪಿಗೆ ಎಚ್ಚರಿಕೆ ನೀಡಿದ್ದಾರೆ. ಬೆಳಗಾವಿಯಿಂದಲೇ ಸರ್ಕಾರ ಬಿದ್ದಿದೆ. ಬಿಜೆಪಿ ವಿಷವನ್ನುಂಡು ಸರ್ಕಾರ ರಚನೆ ಮಾಡಿದೆ. ಇನ್ನೂ 6-8 ತಿಂಗಳಲಲ್ಲಿ ಪತನವಾಗಲಿದೆ ಎಂದರು.
ಬಿಎಸ್‌ವೈ ಅವರು ಸಚಿವ ಸಂಪುಟ ರಚನೆ ವೇಳೆ ಹೈಕ ಭಾಗ ಸಂಪೂರ್ಣ ನಿರ್ಲಕ್ಷಿಸಿದ್ದಾರೆ. ಹೈಕ ನಾಯಕರನ್ನೇ ಮರೆತಿದ್ದಾರೆ. ಆರು ಜಿಲ್ಲೆಗಳ ಪೈಕಿ ಒಬ್ಬರನ್ನೇ ಮಂತ್ರಿ ಮಾಡಿದ್ದು ನಾಚಿಕೆಗೇಡಿನ ಸಂಗತಿ. ಹೈಕದಲ್ಲಿ 41 ಕ್ಷೇತ್ರದಲ್ಲಿ 17 ಬಿಜೆಪಿ ಶಾಸಕರಿದ್ದರೂ ಒಂದೇ ಮಂತ್ರಿ ಕೊಟ್ಟಿದ್ದಾರೆ. ಈ ಭಾಗದ ಜನರು ಇದನ್ನು ಗಮನಿಸಬೇಕು. ಇನ್ನೂ ಶ್ರೀರಾಮುಲು ಅವರನ್ನು ಡಿಸಿಎಂ ಮಾಡ್ತಿನಿ ಅಂದಿದ್ದರು. ಅದನ್ನು ಮಾಡಲಿಲ್ಲ. ಇನ್ನು ನಾಯಕ ಸಮಾಜಕ್ಕೂ ಅನ್ಯಾಯ ಮಾಡಿದ್ದಾರೆ.
ಹೈಕ ಭಾಗದಲ್ಲಿ ಲಿಂಗಾಯತ ಸಮುದಾಯದ ಶಾಸಕರೂ ಗೆದ್ದಿದ್ದಾರೆ. ಅವರಿಗೂ ಅನ್ಯಾಯ ಮಾಡಿದ್ದಾರೆ. ದಲಿತರು ಸೇರಿದಂತೆ ಭೋವಿ ಸಮುದಾಯಕ್ಕೂ ಮಂತ್ರಿಗಿರಿ ಕೊಡದೇ ಮರೆದಿದ್ದಾರೆ. ಹೈಕ ಭಾಗಕ್ಕೆ ಬಿಜೆಪಿ ಏನು ಕೊಟ್ಟಿದೆ ಎನ್ನುವುದನ್ನು ಮೋದಿ ಮೋದಿ ಎಂದು ಕೂಗುವ ಭಕ್ತರು ನೋಡಬೇಕಿದೆ. ಓಟಿನ ರಾಜಕಾರಣಕ್ಕಾಗಿ ಹೈಕ ಭಾಗ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇನ್ನಾದರೂ ಹೈಕ ಜನತೆ ಎಚ್ಚೆತ್ತು ಬಿಜೆಪಿಗೆ ತಕ್ಕ ಪಾಠ ಕಲಿಸಬೇಕು ಎಂದರು.
ಛಲವಾದಿ, ಗಂಗಾಮತ, ಕುರುಬರು, ವಾಲ್ಮೀಕಿ, ಉಪ್ಪಾರ, ಭೋವಿ, ಮಾದಿಗ ಸಮುದಾಯ ಸೇರಿ ಹಲವು ಸಮುದಾಯ ಹೈಕ ಭಾಗದಲ್ಲಿ ಹೆಚ್ಚಿವೆ. ಬಿಜೆಪಿಗೆ ಸಣ್ಣಪುಟ್ಟ ಸಮಾಜಗಳು ಕಾಣಲಿಲ್ಲವೇ ? ಕಾಂಗ್ರೆಸ್ ಸರ್ಕಾರದಲ್ಲಿ ಸಣ್ಣ ಸಣ್ಣ ಸಮಾಜದ ಶಾಸಕರಿಗೂ ಮಂತ್ರಿಗಿರಿ ಕೊಟ್ಟಿದೆ.
ಅನರ್ಹ ಶಾಸಕರನ್ನು ಬಿಜೆಪಿ ಬೀದಿಗೆ ನಿಲ್ಲಿಸಿದೆ. ಅವರು ಮನೆ ಮಠ ತೊರೆದು ಸುಪ್ರೀಂ ಕೋರ್ಟ್‌ಗೆ ಅಲೆಯುವಂತಾಗಿದೆ. ಪೋನ್ ಕದ್ದಾಲಿಕೆಯೀಗ ಜೋರಾಗಿ ಚರ್ಚೆ ನಡೆದಿದೆ.
ಸಿಎಂ ಕದ್ದಾಲಿಕೆ ಪ್ರಕರಣವನ್ನು ಸಿಬಿಐಗೆ ವಹಿಸಿದೆ. ಆಪರೇಷನ್ ಕಮಲ ಮಾಡಿದ 17 ಅನರ್ಹ ಶಾಸಕರ ಪ್ರಕರಣವನ್ನು ಸಿಬಿಐಗೆ ನೀಡಬೇಕು. ಅವರು ಏಕೆ ರಾಜಿನಾಮೆ ಕೊಟ್ಟರು ? ಅದರ ಹಿಂದೆ ಏನು ಉದ್ದೇಶವಿತ್ತು. ಯಾರಿಗೆ ಏಷ್ಟೆಷ್ಟು ಕೊಟ್ಟಿದ್ದಾರೆ ? ಏನೇನು ಆಮಿಷ ಒಡ್ಡಿದ್ದಾರೆ ? ಫ್ಲೈಟ್ ಮಾಡಿದ್ಯಾರು ? ಎನ್ನುವುದು ತನಿಖೆಯಾಗಲಿ ಎಂದು ಒತ್ತಾಯ ಮಾಡಿದರು.
ಉದ್ಯಮಿಗಳಿಗೆ ಕುತ್ತು :
ಸಿಬಿಐ, ಈಡಿ, ಐಟಿ ಮೂಲಕ ದೊಡ್ಡ ದೊಡ್ಡ ಉದ್ಯಮಿಗಳಿಗೆ ಕುತ್ತು ತರುತ್ತಿದ್ದಾರೆ. ಸಿದ್ಧಾರ್ಥ ಸಾವಿಗೂ ಇದೇ ಕಾರಣ. ಇದರಿಂದ ಉದ್ಯಮಿಗಳು ಆತಂಕದಲ್ಲಿದ್ದಾರೆ. ಭಾರತದ ಆರ್ಥಿಕ ಸ್ಥಿತಿ ತುಂಬ ಕೆಟ್ಟದ್ದಾಗಿದೆ. ಆರ್ಥಿಕ ತಜ್ಞರೇ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಇನ್ನೂ ನೆರೆಸಂತ್ರಸ್ಥರಿಗೆ ಬಿಜೆಪಿ ನಯಾಪೈಸೆ ಬಿಡುಗಡೆ ಮಾಡಿಲ್ಲ. ಇಷ್ಟೆಲ್ಲ ಅನ್ಯಾಯ ನಡೆದರೂ ಮೋದಿ ಭಕ್ತರು ಏಲ್ಲಿದ್ದಾರೋ ಕಾಣುತ್ತಿಲ್ಲ. ನೆರೆ ವೀಕ್ಷಣೆಗೆ ಅಮಿತ್ ಶಾ, ನಿರ್ಮಲಾ ಸೀತಾರಾಮನ್ ಬಂದು ನೋಡಿದರೂ ನಯಾ ಪೈಸೆ ಘೋಷಣೆ ಮಾಡಿಲ್ಲ. ಗುಜರಾತ್‌ಗೆ ಏನಾದ್ರು ಆದ್ರೆ ಮೋದಿ ಹಣ ಬಿಡುಗಡೆ ಮಾಡ್ತಾರೆ. ಆದರೆ ನಮಗೆ ಬಿಡುಗಡೆ ಮಾಡುತ್ತಿಲ್ಲ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಪಂ ಅಧ್ಯಕ್ಷ ವಿಶ್ವನಾಥರಡ್ಡಿ, ಶಾಸಕ ರಾಘವೇಂದ್ರ ಹಿಟ್ನಾಳ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
Bengaluru; ಮೊಬೈಲ್‌ಗಾಗಿ ಜಗಳ ಮಾಡಿದ ಮಗನ ಹೊಡೆದು ಕೊಂ*ದ ಅಪ್ಪ !
Covid Scam: ನ್ಯಾ.ಕುನ್ಹಾ ವರದಿಯಲ್ಲಿ ಕೋವಿಡ್ ಅವ್ಯವಹಾರ ಉಲ್ಲೇಖ: ದಿನೇಶ್ ಗುಂಡೂರಾವ್
Farmers; ಶೂನ್ಯ ಬಡ್ಡಿಯ ಕೃಷಿ ಸಾಲಕ್ಕೆ ಬಡ್ಡಿ ಕಟ್ಟಲು ಸೂಚನೆ
MUST WATCH
ಹೊಸ ಸೇರ್ಪಡೆ
ಗಂಭೀರ್ ಅವರ ಯಾತನೆಯ ತರಬೇತಿ ಶೈಲಿ ಭಾರತಕ್ಕೆ ಹೊಂದಲ್ಲ: ಟಿಮ್ ಪೇನ್
Udupi: ಕಸ್ತೂರಿ ರಂಗನ್ ವರದಿ ಬಗ್ಗೆ ಯಾರೂ ಆತಂಕಪಡಬೇಕಿಲ್ಲ: ಕೋಟ ಶ್ರೀನಿವಾಸ ಪೂಜಾರಿ
Congress ಗ್ಯಾರಂಟಿ ಸುಳ್ಳು ಎಂದು ಸಾಬೀತು ಮಾಡಿ: ಮೋದಿಗೆ ಸಿದ್ದರಾಮಯ್ಯ ಸವಾಲು
BJP; ಈ ವಾರವೇ ವಕ್ಫ್ ಹೋರಾಟ: ಅಧಿವೇಶನಕ್ಕೂ ಬಿಸಿ…ಹೇಗಿರಲಿದೆ ಪ್ರತಿಭಟನೆ?
America; ಭಾರತಕ್ಕೆ 84.40 ಕೋ.ರೂ. ಮೌಲ್ಯದ 1,400 ಕಲಾಕೃತಿ ವಾಪಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.